ಬೆಂಗಳೂರು: ನಗರದ ಪ್ರತಿಷ್ಠಿತ ಆಚಾರ್ಯ ಪಾಠಶಾಲಾ ಕಲೆ ಮತ್ತು ವಿಜ್ಞಾನ ಕಾಲೇಜಿನ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ವತಿಯಿಂದ ಐಕ್ಯೂಎಸಿ ಸಹಯೋಗದಲ್ಲಿ “ಸುಸ್ಥಿರ ಅಭಿವೃದ್ಧಿ ಮತ್ತು ಸಂಶೋಧನೆಯಲ್ಲಿ ಗ್ರಂಥಾಲಯಗಳ ಪಾತ್ರ” ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಯಿತು.
ಎಪಿಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸಿ ಎ ಡಾ. ವಿಷ್ಣು ಭರತ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಂಥಾಲಯಗಳು ಇವತ್ತಿನ ಪೀಳಿಗೆಗೆ ಹೆಚ್ಚು ಅವಶ್ಯಕತೆ ಇದೆ, AI ವಿಜ್ಙಾನ ತಂತ್ರಜ್ಙಾನ ಇರುವ ಕಾಲ ಘಟ್ಟದಲ್ಲಿ ಎಲ್ಲರಿಗೂ ಜ್ಞಾನ ಸಂಪಾದನೆಗೆ ಗ್ರಂಥಾಲಯಗಳ ಪಾತ್ರ ಮಹತ್ವದ್ದಾಗಿದೆ ಎಂದರು.
ಅದರ ಮುಂದು ವರೆದ ಭಾಗವಾಗಿ ಗ್ರಂಥಾಲಯಗಳನ್ನು ಸಂಶೋಧನೆಗೆ ಒಳಪಡಿಸಿದಾಗ ಸಾಕಷ್ಟು ಮಾಹಿತಿ ತಂತ್ರಜ್ಞಾನ ಅಡಕವಾಗಿರುವುದು ತಿಳಿದುಬರುತ್ತದೆ.
ಗ್ರಂಥಾಲಯಗಳು ಎಲ್ಲರ ಬದುಕಿನಲ್ಲಿ ಜೀವನಾಧಾರವಾಗಿದೆ. ಮಾಹಿತಿ ಕಳೆಹಾಕಲು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು, ಓದಲು, ಮಾಹಿತಿ ತಿಳಿಯಲು, ಆನ್ ಲೈನ್ ಗ್ರಂಥಾಲಯ(ಇ-ಗ್ರಂಥಾಲಯ) ಹೆಚ್ಚು ಉಪ ಯೋಗವಾಗುತ್ತಿರುವುದನ್ನು ನೋಡಬಹುದು.
ಮಕ್ಕಳು ಚಿಕ್ಕವರಾಗಿದ್ದಾಗಲೇ ಗ್ರಂಥಾಲಯಗಳ ಬಗ್ಗೆ ಹೆಚ್ಚು ಮಾಹಿತಿ ಪಡೆಯುವ ಮೂಲಕ ತಿಳಿಯಬೇಕು. ಅದರ ಪಾತ್ರ ಹೆಚ್ಚು ಮಹತ್ವಪಡೆದುಕೊಂಡಿದೆ. ಎಲ್ಲಾ ಸರ್ಕಾರಿ, ಖಾಸಗಿಯವರಿಗೂ ಕೆಲಸ ಗಿಟ್ಟಿಸಿಕೊಳ್ಳಬೇಕಾದರೆ ಮಾಹಿತಿ ಕ್ರೀಡಿಕರಣ ಬಹಳ ಮುಖ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಟ್ರಸ್ಟಿ ಹಾಗೂ ಮುಖ್ಯ ಅತಿಥಿಗಳಾದ ಮೋಹನ್ ದೇವ್ ಆಳ್ವ ಉದ್ಘಾಟಿಸಿದರು. ಪ್ರದಾನ ಕಾರ್ಯದರ್ಶಿಗಳಾದ ಪ್ರೊ. ಎ ಪ್ರಕಾಶ್, ಜಂಟಿ ಕಾರ್ಯದರ್ಶಿಗಳಾದ ಪಿ.ಕೃಷ್ಣಸ್ವಾಮಿ ಹಾಗೂ ಟ್ರಸ್ಟಿಗಳಾದ ಕೆ. ಪಿ ನರಸಿಂಹ ಮೂರ್ತಿ , ಪ್ರಾಂಶುಪಾಲರಾದ ಡಾ. ಕೆ ಎಂ ವೆಂಕಟೇಶಯ್ಯ ಹಾಗೂ ಸಂಚಾಲಕರಾದ ವರಲಕ್ಷ್ಮಿ ಉಪಸ್ಥಿತರಿದ್ದು, ಅಧ್ಯಾಪಕರು, ಗ್ರಂಥಪಾಲಕರು ಹಾಗೂ ಸಂಶೋಧಕರು ಭಾಗವಹಿಸಿದ್ದರು.