LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೆ.ಎಸ್.ಡಿ.ಎಲ್.ಗೆ ಪ್ರತಿಷ್ಠಿತ ಝೆಪ್ಟೋ ಉತ್ಕೃಷ್ಟತಾ ಪುರಸ್ಕಾರ: ಎಂ ಬಿ ಪಾಟೀಲ

ಕೆ.ಎಸ್.ಡಿ.ಎಲ್.ಗೆ ಪ್ರತಿಷ್ಠಿತ ಝೆಪ್ಟೋ ಉತ್ಕೃಷ್ಟತಾ ಪುರಸ್ಕಾರ, ತ್ವರಿತ ವಹಿವಾಟು, ಇ-ಕಾಮರ್ಸ್ ವಿಭಾಗದಲ್ಲಿ ಹೆಮ್ಮೆಯ ಸಾಧನೆ, 3 ವರ್ಷಗಳ ಹಿಂದೆ ಕೆ.ಎಸ್.ಡಿ.ಎಲ್ ಸಂಸ್ಥೆಯ ಇ-ಕಾಮರ್ಸ್ ವಹಿವಾಟು ಕೇವಲ 28 ಕೋಟಿ ರೂಪಾಯಿ ಇತ್ತು. ನಾನು ಸಚಿವನಾದ ಮೇಲೆ  ಮಾರುಕಟ್ಟೆ ವಿಸ್ತರಣೆ ನಿರ್ಧಾರದ ಫಲವಾಗಿ ಈಗ 122 ಕೋಟಿ ರೂಪಾಯಿ ತಲುಪಿದೆ.ಕೆ.ಎಸ್.ಡಿ.ಎಲ್ ಸಂಸ್ಥೆ ತನ್ನ ಪರಂಪರೆ ಮತ್ತು ನಂಬಿಕೆಗಳನ್ನು ಬಿಟ್ಟುಕೊಡದೆ, ಇ-ಕಾಮರ್ಸ್ ಮತ್ತು ಕ್ವಿಕ್ ಕಾಮರ್ಸ್ ವಹಿವಾಟು ಮಾಡುತ್ತದೆ

ಬೆಂಗಳೂರು: ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆ.ಎಸ್.ಡಿ.ಎಲ್) ಸಂಸ್ಥೆಯು ತನ್ನ ಪಾರಂಪರಿಕ ಉತ್ಪನ್ನವಾಗಿರುವ ಮೈಸೂರು ಸ್ಯಾಂಡಲ್ ಸೋಪ್ ವಹಿವಾಟು ಉಪಕ್ರಮಕ್ಕಾಗಿ ತ್ವರಿತ ವಾಣಿಜ್ಯ ವಹಿವಾಟು (ಕ್ವಿಕ್ ಕಾಮರ್ಸ್) ವಿಭಾಗದಲ್ಲಿ ಪ್ರತಿಷ್ಠಿತ ಝೆಪ್ಟೋ ಕಂಪನಿಯ "ಪೂರೈಕೆ ಸರಪಳಿ ಉತ್ಕೃಷ್ಟತಾ ಪುರಸ್ಕಾರ'ಕ್ಕೆ (ಸಪ್ಲೈ ಚೈನ್ ಎಕ್ಸಲೆನ್ಸ್ ಅವಾರ್ಡ್) ಪಾತ್ರವಾಗಿದೆ.news_1779202647_0_255.webp

ಇದಕ್ಕಾಗಿ ಬೃಹತ್ ಮತ್ತು ಮಧ್ಯಮ‌ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಸಂಸ್ಥೆಯ ಅಧ್ಯಕ್ಷ ಸಿ ಎಸ್ ಅಪ್ಪಾಜಿ ನಾಡಗೌಡ, ವ್ಯವಸ್ಥಾಪಕ ನಿರ್ದೇಶಕ ಪಿ ಕೆ ಎಂ ಪ್ರಶಾಂತ್ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗವನ್ನು ಅಭಿನಂದಿಸಿದ್ದಾರೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸಚಿವರು, ಮೂರು ವರ್ಷಗಳ ಹಿಂದೆ ಕೆ.ಎಸ್.ಡಿ.ಎಲ್ ಸಂಸ್ಥೆಯ ಇ-ಕಾಮರ್ಸ್ ವಹಿವಾಟು ಕೇವಲ 28 ಕೋಟಿ ರೂಪಾಯಿ ಇತ್ತು. ನಾನು ಸಚಿವನಾದ ಮೇಲೆ ತೆಗೆದುಕೊಂಡ ದಿಟ್ಟ ಮಾರುಕಟ್ಟೆ ವಿಸ್ತರಣೆ ನಿರ್ಧಾರದ ಫಲವಾಗಿ ಇದು ಈಗ 122 ಕೋಟಿ ರೂಪಾಯಿ ತಲುಪಿದೆ. ಇದೇ ರೀತಿ ಝೆಪ್ಟೋ ತ್ವರಿತ ವಹಿವಾಟು ವೇದಿಕೆಗಳಲ್ಲಿ ಎರಡು ವರ್ಷಗಳ ಹಿಂದೆ ತಿಂಗಳಿಗೆ ಕೇವಲ 10 ಲಕ್ಷ ರೂಪಾಯಿ ಮೌಲ್ಯದ ಮೈಸೂರು ಸ್ಯಾಂಡಲ್ ಸೋಪ್ ಮಾರಾಟವಾಗುತ್ತಿತ್ತು. ಈಗ ಇದು 2 ಕೋಟಿ ರೂಪಾಯಿ ತಲುಪಿದೆ. ಕ್ವಿಕ್ ಕಾಮರ್ಸ್ ವೇದಿಕೆಗಳಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಈಗ ಪ್ರಥಮ ಸ್ಥಾನದಲ್ಲಿದೆ ಎಂದಿದ್ದಾರೆ.

ಕೆ.ಎಸ್.ಡಿ.ಎಲ್ ಸಂಸ್ಥೆಯು ತನ್ನ ಪರಂಪರೆ ಮತ್ತು ನಂಬಿಕೆಗಳನ್ನು ಬಿಟ್ಟುಕೊಡದೆ, ಇ-ಕಾಮರ್ಸ್ ಮತ್ತು ಕ್ವಿಕ್ ಕಾಮರ್ಸ್ ವಹಿವಾಟು ವ್ಯವಸ್ಥೆಗಳನ್ನು ಅಳವಡಿಸಿಕೊಂಡು ಅದರಲ್ಲಿ ಯಶಸ್ಸು ಸಾಧಿಸಿರುವುದನ್ನು ಈ ಪ್ರಶಸ್ತಿಯು ಪ್ರತಿಫಲಿಸುತ್ತಿದೆ. ಡಿಜಿಟಲ್ ವಹಿವಾಟು ವೇದಿಕೆಗಳಲ್ಲಿ ಕೆ.ಎಸ್ ಡಿ.ಎಲ್ ಉತ್ಪನ್ನಗಳು ಅಗ್ರಗಣ್ಯ ಬ್ರ್ಯಾಂಡ್ ಆಗಿದ್ದು, ಈ ಮೂಲಕ ಎಫ್ಎಂಸಿಜಿ ವಿಭಾಗದಲ್ಲಿ ಮುಂಚೂಣಿಯಲ್ಲಿವೆ. ಇದಕ್ಕೆ ನಾವು ತಂದಿರುವ ಸುಧಾರಣೆಗಳು, ನಿರ್ದಿಷ್ಟ ಉತ್ಪಾದನಾ ವಿಧಾನ, ತಂತ್ರಜ್ಞಾನ ಆಧಾರಿತ ಪೂರೈಕೆ ವ್ಯವಸ್ಥೆ ಮತ್ತು ಝೆಪ್ಟೋ ಮುಂತಾದ ಕಂಪನಿಗಳ ಜತೆ ಹೊಂದಿರುವ ಸಹಭಾಗಿತ್ವ ಮುಂತಾದ ಉಪಕ್ರಮಗಳು ಕಾರಣವಾಗಿವೆ. ಇ-ಕಾಮರ್ಸ್ ವಹಿವಾಟಿಗೆಂದೇ ಕಳೆದ ಮೂರು ವರ್ಷಗಳಲ್ಲಿ ಸಂಸ್ಥೆಯು ಪ್ರತ್ಯೇಕ ಪೂರೈಕೆದಾರರನ್ನು ನೇಮಿಸಿಕೊಂಡಿದೆ ಎಂದು ಪಾಟೀಲ ತಿಳಿಸಿದ್ದಾರೆ.

ಸಂಸ್ಥೆಯು ಡಿಜಿಟಲ್ ಮಾರುಕಟ್ಟೆ ಬಲವರ್ಧನೆಗೆಂದೇ ಕೀವರ್ಡ್ ಜಾಹೀರಾತು, ಆನ್ಲೈನ್ ಪ್ರಚಾರ, ಬ್ಯಾನರ್ ಆಂದೋಲನ, ಬ್ರ್ಯಾಂಡ್ ವಿಸಿಬಲಿಟಿ ಮತ್ತು ಗ್ರಾಹಕ ಸಂಶೋಧನೆ ಮುಂತಾದ ಹೆಜ್ಜೆಗಳನ್ನು ಇಟ್ಟಿದೆ ಎಂದು ಅವರು‌ ನುಡಿದಿದ್ದಾರೆ.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೈತರ ಆತ್ಮಹತ್ಯೆ ಪ್ರಕರಣಗಳನ್ನು ಜಾಣ್ಮೆಯಿಂದ ಮುಚ್ಚಿಟ್ಟ ರಾಜ್ಯ ಕಾಂಗ್ರೆಸ್ ಸರಕಾರ!ಲೆಟರ್ ಹೆಡ್, ವಿಸಿಟಿಂಗ್ ಕಾರ್ಡ್ ಜಿಲ್ಲಾಧ್ಯಕ್ಷರುಗಳು ಬೇಕಾಗಿಲ್ಲ: ಹೆಚ್.ಡಿ. ಕುಮಾರಸ್ವಾಮಿಪೌರಕಾರ್ಮಿಕರಿಗೆ ಆರೋಗ್ಯ ಕಾಳಜಿ ತಿಳುವಳಿಕೆ, ಕೂಲಿಂಗ್ ಕಿಟ್ ವಿತರಣೆಮಳೆಗಾಲಕ್ಕೂ ಮುಂಜಾಗ್ರತವಾಗಿ ಅಧಿಕಾರಿಗಳಿಗೆ ಕಾಮಗಾರಿ ಮುಗಿಸಲು ಸೂಚನೆಕೆ.ಎಸ್.ಡಿ.ಎಲ್.ಗೆ ಪ್ರತಿಷ್ಠಿತ ಝೆಪ್ಟೋ ಉತ್ಕೃಷ್ಟತಾ ಪುರಸ್ಕಾರ: ಎಂ ಬಿ ಪಾಟೀಲಕೆನಡಾದ ಹೈ ಕಮೀಷನರ್ ಕ್ರಿಸ್ ಕೂಟರ್ ನಿಯೋಗ ಮುಖ್ಯಮಂತ್ರಿ ಭೇಟಿಉಳಿದ ಎರಡು ವರ್ಷಗಳಲ್ಲಿ ಬಾಕಿ ಭರವಸೆಗಳನ್ನೂ ಈಡೇರಿಸಲಾಗುವುದು: ಸಿಎಂ ಭರವಸೆದುಬಾರಿ ಆನೆ ಶಿಬಿರದಲ್ಲಿ ಗಾಯಗೊಂಡೊದ್ದ ಮಾರ್ತಾಂಡ ಆನೆ ಸಾವುಗೋಪಾಲನ್ ಗ್ರಾಂಡ್ ಮಾಲ್ ನಲ್ಲಿ ಲುಲು ಹೈಪರ್ಮಾರ್ಕೆಟ್ ಆರಂಭಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ? ಸಾರಿಗೆ ಇಲಾಖೆ ದಿವಾಳಿ, ಬೆಂಗಳೂರು ಗಾರ್ಬೇಜ್ ಸಿಟಿ ಆಗಿದೆ: ನಿಖಿಲ್ ವಾಗ್ದಾಳೆ