LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪದ್ಮನಾಭನಗರ ಕ್ಷೇತ್ರದಲ್ಲಿ ಕಸದ ಸಮಸ್ಯೆ ನಿವಾರಣೆಗೆ ಕ್ರಮ : ರಮೇಶ್

ಬೆಂಗಳೂರು : ಪದ್ಮನಾಭನಗರ ಕ್ಷೇತ್ರದಲ್ಲಿ ಕಸದ ಸಮಸ್ಯೆ ನಿವಾರಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ತಿಳಿಸಿದರು.news_1780510554_0_770.webp

ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರ್. ಅಶೋಕ್ ರವರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಕುರಿತು ಪಾಲಿಕೆಯ ಆಯುಕ್ತರಾದ ಕೆ ಎನ್ ರಮೇಶ್, BSWML ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಕಸ ಸಂಗ್ರಹಣ ಆಟೋಗಳ ಚಾಲಕರು ಹಾಗೂ ಸಾರ್ವಜನಿಕರೊಂದಿಗೆ ಪದ್ಮನಾಭನಗರ ಆಟದ ಮೈದಾನದಲ್ಲಿ ಇಂದು ಮಹತ್ವದ ಸಭೆಯನ್ನು ಹಮ್ಮಿಕೊಂಡಿದ್ದರು.

ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಗೊಳಪಡುವ ಪದ್ಮನಾಭನಗರ ಕ್ಷೇತ್ರದ ವಾರ್ಡ್‌ಗಳಾದ ಕುಮಾರಸ್ವಾಮಿ ಲೇಔಟ್, ಪದ್ಮನಾಭನಗರ, ಬನಶಂಕರಿ ವಾರ್ಡ್ ಸೇರಿದಂತೆ, ಪಶ್ಚಿಮ ನಗರ ಪಾಲಿಕೆಯ ವ್ಯಾಪ್ತಿಯ ವಾರ್ಡ್ ಗಳಲ್ಲಿನ ಸಾರ್ವಜನಿಕರು ತಮ್ಮ ಮನೆಗಳಿಂದ ಅಸಮರ್ಪಕವಾಗಿ ಕಸ ಸಂಗ್ರಹಿಸುತ್ತಿದ್ದು ಇದರಿಂದ ವಾರ್ಡ್ ಗಳಲ್ಲಿ ಬ್ಲಾಕ್ ಸ್ಪಾಟ್ ಹೆಚ್ಚಾಗಿರುತ್ತವೆ. ಆಟೋ ಕಸ ಸಂಗ್ರಹಣೆ ಸರಿಯಾದ ವೇಳೆ ಇರುವುದಿಲ್ಲ ಹಾಗೂ ನಿಗದಿ ಪಡಿಸಿರುವ ಆಟೋಗಳಿಗಿಂತ ಕಡಿಮೆ ಆಟೋಗಳು ಕಾರ್ಯನಿರ್ವಹಿಸುತ್ತಿರುವ ಅಹವಾಲುಗಳನ್ನು ಶಾಸಕರು ಹಾಗೂ ಆಯುಕ್ತರಿಗೆ ನೀಡಿದರು.

ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಶಾಸಕರು ಹಾಗೂ ಪಾಲಿಕೆ ಆಯುಕ್ತರು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.

*ಪ್ರತಿ ವಾರ್ಡ್‌ಗೂ ಕಡ್ಡಾಯವಾಗಿ ಆಟೋ ನೇಮಕ; ಮನೆ ಮುಂದೆ ಹಾಜರಾತಿ ಕಡ್ಡಾಯ:*news_1780510555_2_746.webp

ಪ್ರತಿ ವಾರ್ಡ್‌ಗೂ ಕಡ್ಡಾಯವಾಗಿ ಕಸದ ಆಟೋಗಳನ್ನು ನೇಮಿಸಬೇಕು. ಪ್ರತಿ ದಿನ ಬೆಳಗ್ಗೆ 6 ರಿಂದ 9 ಗಂಟೆ ಒಳಗೆ ಕಸ ತೆಗೆಯಬೇಕು. ಆಟೋಗಳು ಪ್ರತಿದಿನ ಸಾರ್ವಜನಿಕರ ಮನೆ ಮನೆ ಮುಂದೆ ಹೋಗಿ ಕಸ ಸಂಗ್ರಹಿಸಬೇಕು ಮತ್ತು ಮನೆಗಳ ಮುಂದೆ ಹಾಜರಾತಿ ಹಾಕಬೇಕು. ಒಂದು ವೇಳೆ ಆಟೋ ಬರದಿದ್ದರೆ ಸಾರ್ವಜನಿಕರು ನೇರವಾಗಿ ಕಂಟ್ರಾಕ್ಟರ್‌ಗೆ ಫೋನ್ ಮಾಡಬಹುದು. ಇದಕ್ಕಾಗಿ ಆಟೋಗಳ ಮೇಲೆ ಕಡ್ಡಾಯವಾಗಿ ಆಟೋ ಟೆಲಿಫೋನ್ ನಂಬರ್ ಹಾಗೂ ಕಂಟ್ರಾಕ್ಟರ್ ನಂಬರ್ ಹಾಕಬೇಕು ಎಂದು ಶಾಸಕರು ತಿಳಿಸಿದರು.

*ವ್ಯಾಲೆಂಟಯರ್ ಗಳ ನಿಯೋಜನೆ*
ಸಾರ್ವಜನಿಕರ ಅಹವಾಲು ಆಲಿಸಿದ ಶಾಸಕರು ಆಟೋಗಳ ಸಂಚಾರದ ಮೇಲೆ ನಿಗಾ ಇಡಲು ಸಾರ್ವಜನಿಕರುಗಳ ಕಡೆಯಿಂದ ವಾಲೆಂಟಿಯರ್‌ಗಳನ್ನು ನಿಯೋಜನೆ ಮಾಡಲಾಗುತ್ತಿದ್ದು, ಆಟೋಗಳ ಹಾಜರಾತಿಯನ್ನು ಪ್ರತಿನಿತ್ಯ ಶಾಸಕರ ಕಚೇರಿಗೆ ಪಡೆದು ಪರಿಶೀಲಿಸಲಾಗುವುದು ಎಂದು ತಿಳಿಸಿದರು.

*ನಿಗದಿಗಿಂತ ಕಡಿಮೆ ಆಟೋ ನಿಯೋಜಿಸುವ ಗುತ್ತಿಗೆದಾರರ ಬಿಲ್ ಕಡಿತಗೊಳಿಸಿ*
ಘನತ್ಯಾಜ್ಯ ನಿರ್ವಹಣಾ ಗುತ್ತಿಗೆದಾರರು ಗುತ್ತಿಗೆ ಪಡೆದಿರುವಂತಹ ವಾರ್ಡ್ಗಳಲ್ಲಿ  ನಿಗದಿಪಡಿಸಿರುವ ಆಟೋಗಳನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ವಾರ್ಡ್ಗಳಲ್ಲಿ ನಿಯೋಜಿಸಬೇಕು. ನಿಗದಿಗಿಂತ ಕಡಿಮೆ ಆಟೋಗಳು ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಲ್ಲಿ ಅವರುಗಳ ಬಿಲ್ ಕಟಾವುಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. 

*ಕಸ ಸಂಗ್ರಹಿಸದ ಗುತ್ತಿಗೆದಾರರು ಬ್ಲ್ಯಾಕ್‌ಲಿಸ್ಟ್‌ಗೆ*
ಘನತ್ಯಾಜ್ಯ ನಿರ್ವಹಣಾ ಗುತ್ತಿಗೆದಾರರಿಗೆ ಒಂದು ವಾರದ ಗಡುವು ನೀಡುತ್ತಿದ್ದು, ಈ ಅವಧಿಯಲ್ಲಿ ವಾರ್ಡ್ಗಳಲ್ಲಿನ ಕಸದ ಸಮಸ್ಯೆ ಸಂಪೂರ್ಣವಾಗಿ ಪರಿಹಾರ ಆಗತಕ್ಕದ್ದು. ಒಂದು ವಾರದ ನಂತರವೂ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಲ್ಲಿ ಅಂತಹ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಲಾಗುವುದು ಎಂದು ಆಯುಕ್ತರು ಸಾರ್ವಜನಿಕರಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅಭಿಯಂತರರಾದ  ಬಸವರಾಜ್ ಕಬಾಡೆ, ಡಿಜಿಎಂ ತನುಜಾ, ಸ್ಥಳೀಯ ಮುಖಂಡರುಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆಗಸ್ಟ್ 15 ರಿಂದ ಸೆಪ್ಟೆಂಬರ್ 15 ರವರೆಗೆ "ಬೆಂಗಳೂರು ಹಸಿರೂರು ಅಭಿಯಾನಫಿಫಾ ವಿಶ್ವ ಕಪ್: ಅರ್ಜೆಂಟೇನ ಮಣಿಸಿದ ಸ್ಟೇನ್ಚೆನ್ನಮ್ಮ ಮಾತೃಶಕ್ತಿಯ ಸಂಕೇತವಾಗಿದ್ದರು: ಎಂ ಬಿ ಪಾಟೀಲ ಕಂಬನಿಕ್ವಿನ್ ಸಿಟಿಯಲ್ಲಿ ಲಕ್ಸಂಬರ್ಗ್ ಸಹಭಾಗಿತ್ವಕ್ಕೆ ಆಹ್ವಾನ, ಜಪಾನ್‌ನಲ್ಲಿ ಹೂಡಿಕೆ ಆಕರ್ಷಣೆ: ಸಚಿವ ಎಂ ಬಿ ಪಾಟೀಲಮಹಾರಾಣಿ ಟ್ರೋಫಿ ಟಿ20 2ನೇ ಸೀಸನ್ ಗೆ ಮೈಸೂರು ವಾರಿಯರ್ಸ್ ಮಹಿಳಾ ತಂಡ ಪ್ರಕಟ, ಶುಭಾ ಸತೀಶ್‌ ಗೆ ನಾಯಕತ್ವ ಫೀನಿಕ್ಸ್ ಮಾರ್ಕೆಟ್ಸಿಟಿಯಲ್ಲಿ  ಅಜೋರ್ಟ್ ಹೊಸ ಮಳಿಗೆ ಆರಂಭಜೋಹಾನ್ ಜಾಬ್ NEET UG 2026 ರಲ್ಲಿ AIR 69 ರೊಂದಿಗೆ ಬೆಂಗಳೂರಿಗೆ ಟಾಪರ್ಹಣಕಾಸು ವೃತ್ತಿಜೀವನದ ಭವಿಷ್ಯ AI ರೂಪಿಸುವ ಬಗ್ಗೆ ಹಣಕಾಸು ನಾಯಕರಿಂದ ಬಹಿರಂಗನದಿ,ಹಳ್ಳದಲ್ಲಿ ಮುಖ ತೊಳೆಯೋ ಮುನ್ನ ಹುಷಾರ್..ಮೊಸಳೆಗಳ ಬಗ್ಗೆ "ಬೀ" ಅಲರ್ಟ್..??ಬಿಎಂಟಿಸಿ ಬಸ್ ಪ್ರಯಾಣಿಕರೇ ಹುಷಾರ್..ಕಂಡಕ್ಟರ್ ಬ್ಯಾಗ್ ಅನ್ನೇ ಎಗರಿಸಿದ ಮಹಿಳೆ..?ವಿಡಿಯೋ ವೈರಲ್..!!!