ಬೆಂಗಳೂರು: ಕರ್ನಾಟಕ ಪಿಲಾಟಲಿ ಪಾಸ್ ಪೋರ್ಟ್ ಗಳ ಮಾರಾಟವನ್ನು ಅಕ್ಟೋಬರ್ 10 ಮತ್ತು 11ರಂದು ಕರ್ನಾಟಕ ಪ್ರಧಾನ ಅಂಚೆ ಋಥದಲ್ಲಿ ಮಾಡಲಾಗುತ್ತದೆ ಎಂದು ಕರ್ನಾಟಕ ವೃತ್ತದ ಸಿಪಿಎಂಜಿ ಸ್ವಾತಿಪಾಂಡೆ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದವರು, ರಾಜ್ಯದಾದ್ಯಂತ ಪರಂಪರೆಯ ಬಗ್ಗೆ ಆಸಕ್ತಿ ಹೊಂದಿರುವವರು ಪ್ರವಾಸಿಗರು ಅಂಚೆ ಚೀಟಿ ಸಂಗ್ರಹಕರಿಂದ ದೊರೆತ ಸ್ಪಂದನೆಯ ಹಿನ್ನೆಲೆ ಭಾರತೀಯ ಅಂಚೆ ಇಲಾಖೆಯ ಕರ್ನಾಟಕ ಅಂಚೆ ಋತವು ವಿಶಿಷ್ಟ ಕರ್ನಾಟಕ ಪಿಲಾಟಲಿ ಪಾಸ್ಪೋರ್ಟ್ ನೇರ ಮಾರಾಟವನ್ನು ಆಯೋಜಿಸಲಾಗಿದೆ.
ಫಿಲಾತ್ಲಿ ಪಾಸ್ಪೋರ್ಟ್ ಪರಂಪರೆ ಪ್ರವಾಸೋದ್ಯಮವನ್ನು ಉತ್ತೇಜಿಸಲು ರೂಪಿಸಲಾದ ಪ್ರವಾಸ ದಿನಚರಿಯ ಮಾದರಿಯ ಉತ್ಕೃಷ್ಟ ಸಂಗ್ರಹಣ ವಸ್ತುವಾಗಿದೆ ಪ್ರವಾಸಿಗರು ಕರ್ನಾಟಕದ ಪ್ರಮುಖ ಪಾರಂಪರಿಕ ತಾಣಗಳಿಗೆ ಭೇಟಿ ನೀಡಿ ಸ್ಥಳೀಯ ಅಂಚೆ ಚೀಟಿಗಳನ್ನು ಖರೀದಿಸಿ ನಿಗದಿತ ಅಂಚೆ ಕಚೇರಿಗಳಲ್ಲಿ ವಿಶಿಷ್ಟ ಶಾಶ್ವತ ಚಿತ್ರಾತ್ಮಕ ಅಂಚೆ ಮೋಹರುಗಳನ್ನು ಸಂಗ್ರಹಿಸಲು ಇಂತಹ ಒಂದು ಅವಕಾಶ ಕಲ್ಪಿಸಲಾಗಿದೆ ಅವರ ಪಾಸ್ಪೋರ್ಟ್ ವೈಯಕ್ತಿಕ ಅನುಭವಗಳನ್ನು ದಾಖಲಿಸುವ ಜೀವನ ಪರಿಯಂತ ಉಳಿಸಿಕೊಳ್ಳಬಹುದಾದ ಅವಿಸ್ಮರಣೀಯವಾಗಿ ರೂಪಗೊಳ್ಳುತ್ತದೆ ಎಂದು ಇದೇ ವೇಳೆ ಅವರು ತಿಳಿಸಿದರು.
ಕಾರ್ಯಕ್ರಮದ ವಿವರಗಳು ಮತ್ತು ಮಾರಾಟ ಸ್ಥಳಗಳು
1.ಮಾರಾಟದ ದಿನಾಂಕಗಳು: 2026ರ ಅಕ್ಟೋಬರ್ 10 ಮತ್ತು 11 (ಶನಿವಾರ ಮತ್ತು ಭಾನುವಾರ)
2.ಮಾರಾಟದ ಬೆಲೆ: ಪ್ರತಿ ಪಾಸ್‌ಪೋರ್ಟ್ ₹600/-
3.ಮಾರಾಟದ ವಿಧಾನ: ಕೌಂಟರ್‌ಗಳ ಸರತಿ ಸಾಲಿನಲ್ಲಿ ನೀಡಲಾಗುವ ಟೋಕನ್‌ಗಳ ಮೂಲಕ, ಮೊದಲು ಬಂದವರಿಗೆ ಮೊದಲ ಆದ್ಯತೆಯ ಆಧಾರದಲ್ಲಿ ನೇರ ಮಾರಾಟ ನಡೆಯಲಿದೆ. (ಆನ್‌ಲೈನ್ ಮಾರಾಟ ಅಥವಾ ಮುಂಗಡ ಕಾಯ್ದಿರಿಸುವ ಸೌಲಭ್ಯ: ಇರುವುದಿಲ್ಲ.)
4.ಮಾರಾಟ ನಡೆಯುವ ಸ್ಥಳಗಳು ಮತ್ತು ಉದ್ದೇಶಿತ ಒಟ್ಟು ದಾಸ್ತಾನು (8,000 ಪ್ರತಿಗಳು):
5.ಬೆಂಗಳೂರು ಪ್ರಧಾನ ಅಂಚೆ ಕಚೇರಿ (ಜಿಪಿಒ): 3,500 ಪಾಸ್‌ಪೋರ್ಟ್‌ಗಳು (1,500 ಮತ-ಭಾನುವಾರ 2,000)
6.ಮೈಸೂರು ಮುಖ್ಯ ಅಂಚೆ ಕಚೇರಿ: 1,500 ಪಾಸ್‌ಪೋರ್ಟ್‌ಗಳು (ಶನಿವಾರ 500 ಮತ್ತು ಭಾನುವಾರ 1,000)
7.ಮಂಗಳೂರು ಮುಖ್ಯ ಅಂಚೆ ಕಚೇರಿ: 1,500 ಪಾಸ್‌ಪೋರ್ಟ್‌ಗಳು (ಶನಿವಾರ 500 ಮ ಭಾನುವಾರ 1,000)
8.ಬೆಳಗಾವಿ ಮುಖ್ಯ ಅಂಚೆ ಕಚೇರಿ: 1,500 ಪಾಸ್‌ಪೋರ್ಟ್‌ಗಳು (ಶನಿವಾರ 500 ಮತ ថ 1,000)
ವಿಶೇಷ ಆಕರ್ಷಣೆಗಳು ಮತ್ತು ಕಾರ್ಯಕ್ರಮದ ಅನುಭವ (ಬೆಂಗಳೂರು ಜಿಪಿಒ)
ಈ ಬಿಡುಗಡೆಯನ್ನು ಉತ್ಸಾಹಭರಿತ ಸಾಂಸ್ಕೃತಿಕ ಸಂಭ್ರಮವಾಗಿ ಆಚರಿಸಲು, ಬೆಂಗಳೂರು ಜಿಪಿಒದಲ್ಲಿ ಸಂದರ್ಶಕರು ಸಕ್ರಿಯವಾಗಿ ಭಾಗವಹಿಸಬಹುದಾದ ವಿವಿಧ ವಲಯಗಳು ಹಾಗೂ ಗ್ರಾಹಕರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ವಿಶೇಷ ಚಟುವಟಿಕೆಗಳನ್ನು ಆಯೋಜಿಸಲಾಗುವುದು:
1.'ಡಿಜಿಟಲ್ ಡಿಟಾಕ್ಸ್ ವಲಯ ಮತ್ತು ಪತ್ರ ಬರವಣಿಗೆ: ಸಂದರ್ಶಕರು ಡಿಜಿಟಲ್ ಪರದೆಗಳಿಂದ ವಿರಾಮ ಪಡೆದು, ಸಾಂಪ್ರದಾಯಿಕ ಪತ್ರ ಬರವಣಿಗೆಯಲ್ಲಿ ಭಾಗವಹಿಸಬಹುದು. ಆತ್ಮೀಯರಿಗೆ ಪತ್ರ ಬರೆದು ಅಂಚೆಯ ಮೂಲಕ ಕಳುಹಿಸಲು ಉಚಿತ ಚಿತ್ರ ಅಂಚೆಕಾರ್ಡ್‌ಗಳು ಮತ್ತು ಬರವಣಿಗೆ ಸಾಮಗ್ರಿಗಳನ್ನು ಒದಗಿಸಲಾಗುವುದು.
2.ವಿಶೇಷ ಉಚಿತ ಉಡುಗೊರೆಗಳು ಮತ್ತು ಮಾರಾಟದ ವಸ್ತುಗಳು: ಪ್ರತಿಯೊಂದು ಫಿಲಾಟಲಿ ಪಾಸ್‌ಪೋರ್ಟ್ ಖರೀದಿಯೊಂದಿಗೆ ಅಂಚೆಪೆಟ್ಟಿಗೆಯ ವಿನ್ಯಾಸದ ಪುಸ್ತಕ ಗುರುತು (ಬುಕ್ ಮಾರ್ಕ್) ಹಾಗೂ ವಿಶೇಷವಾಗಿ ವಿನ್ಯಾಸಗೊಳಿಸಿದ ಕಾಗದದ ಚೀಲವನ್ನು ಉಚಿತವಾಗಿ ನೀಡಲಾಗುವುದು. ಚನ್ನಪಟ್ಟಣದ ಆಟಿಕೆ ಶೈಲಿಯ ಪೆನ್‌ಸ್ಯಾಂಡ್‌ಗಳು ಮತ್ತು ಅಂಚೆಪೆಟ್ಟಿಗೆ ವಿನ್ಯಾಸದ ಕೀಚೈನ್‌ಗಳು ಸೇರಿದಂತೆ ಸ್ಥಳೀಯ ಅಂಚೆ ಚೀಟಿ ಸಂಗ್ರಹಣೆಗೆ ಸಂಬಂಧಿಸಿದ ಪೂರಕ ವಸ್ತುಗಳು ಸಾರ್ವಜನಿಕರ ಖರೀದಿಗೆ ಲಭ್ಯವಿರುತ್ತವೆ.
3.ಪಾಸ್‌ಪೋರ್ಟ್ ಪೂರ್ಣಗೊಳಿಸಿದ ಸಂಗ್ರಾಹಕರಿಗೆ ಸನ್ಮಾನ: ಪಾಸ್‌ಪೋರ್ಟ್‌ನಲ್ಲಿ ಪಟ್ಟಿಮಾಡಿರುವ ಕರ್ನಾಟಕದ ಎಲ್ಲ ಪಾರಂಪರಿಕ ಅಂಚೆ ಕಚೇರಿಗಳಿಗೆ ಭೇಟಿ ನೀಡಿ, ತಮ್ಮ ಪಾಸ್‌ಪೋರ್ಟ್‌ಗಳನ್ನು ಪೂರ್ಣಗೊಳಿಸಿರುವ ಸಂಗ್ರಾಹಕರನ್ನು ಉಡುಗೊರೆಗಳ ಕಿಟ್ ನೀಡಿ ಸನ್ಮಾನಿಸಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ DPS, SK ಅಖಿಲ್ ನಾಯರ್, DPS ( HQ ) ಸಂದೇಶ್ ಮಹದೇವಪ್ಪ, ಬೆಂಗಳೂರು ಪ್ರದಾನ ವಲಯ DPS ವಿ ತಾರಾ ಸೇರಿದಂತೆ ಅಂಚೆ ಇಲಾಖೆಯ ಅಧಿಕಾರಿಗಳು ಹಾಗೂ ಅಂಚೆದಾರರು ದ್ಯೋಗಿಗಳು ಇದೇ ವೇಳೆ ಉಪಸ್ಥಿತರಿದ್ದರು.