ಬೆಂಗಳೂರು :ಸುಮಾರು 23 ವರ್ಷಗಳ ಬಳಿಕ ಮುಖಾಮುಖಿಯಾದ ‘ಕರವೇ' ರಾಜ್ಯಾಧ್ಯಕ್ಷರಾದ ಟಿ. ಎ ನಾರಾಯಣಗೌಡರು ಹಾಗೂ 'ಕರವೇ' ಸಂಸ್ಥಾಪಕ ಅಧ್ಯಕ್ಷರಾದ ಜಾಣಗೆರೆ ವೆಂಕಟರಾಮಯ್ಯ.
ಕನ್ನಡ ಕಟ್ಟಿ ಬೆಳೆಸಿದವರಲ್ಲಿ ಕರವೇ ಸಂಸ್ಥಾಪಕರಲ್ಲಿ ಜಾಣಗೆರೆ ವೆಂಕಟರಾಮಯ್ಯ ಅವರು ಒಬ್ಬರು, ಕನ್ನಡ ನಾಡು ನುಡಿ ಜಲ ಭಾಷೆ ಸಂಸ್ಕೃತಿ ವಿಚಾರವಾಗಿ ಕಳೆದ 23 ವರ್ಷಗಳಿಂದ ಒಬ್ಬರಿಗೊಬ್ಬರು ದೂರ ಇದ್ದರು, ಅವೆಲ್ಲದಕ್ಕೂ ತೆರೆ ಎಳೆದು ಮನಸ್ತಾಪಗಳಿಗೆ ಗೆರೆ ಎಳೆದು ಇದೀಗ ಇಬ್ಬರು ಸಹ ಒಂದಾಗಿ ಕನ್ನಡ ನಾಡು ಕಟ್ಟುವಲ್ಲಿ ಒಂದಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.
ಕನ್ನಡ–ಕನ್ನಡಿಗ–ಕರ್ನಾಟಕದ ಅಸ್ಮಿತೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಹಿತ ಕುರಿತು ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಪರಸ್ಪರ ನಾಡು-ನುಡಿಯ ವಿಚಾರ-ವಿನಿಮಯ ಮಾಡಿಕೊಳ್ಳುತ್ತಿರುವುದು.
ಮುಂಬರುವ ಕರ್ನಾಟಕ ಸಾಹಿತ್ಯ ಪರಿಷತ್ ರಾಜ್ಯ ಅಧ್ಯಕ್ಷರ ಚುನಾವಣೆ ಬರಲಿದ್ದು ಹೀಗಾಗಿ ಅಧ್ಯಕ್ಷ ಗಾದಿಗಾಗಿ ದಾವಣಗೆರೆ ಸ್ಪರ್ಧೆಯನ್ನು ಮಾಡಿದ್ದಾರೆ ಹೀಗಾಗಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸಲುವಾಗಿ ರಾಜ್ಯದ ಉದ್ದಗಲಕ್ಕೂ ತಮ್ಮ ಕೆಲಸ ಕಾರ್ಯಗಳ ಬಗ್ಗೆ ಹಾಗೂ ಕನ್ನಡದ ಚಿಂತನೆ ಬಗ್ಗೆ ಎಲ್ಲೆಡೆ ತಿಳಿಸುವ ಹಾಗೂ ಮುಂದಿನ ಪರಿಷತ್ನ ಬೆಳವಣಿಗೆ ಮಾಡುವ ಬಗ್ಗೆ ಆಲೋಚನೆಗಳನ್ನು ಇಟ್ಟುಕೊಂಡು ಸಾಹಿತ್ಯ ಆಸಕ್ತರಿಗೆ ಗುಣಪಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಪರಿಷತ್ ಚುನಾವಣೆಯಿಂದಲೇ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದೇನೆ ಹೀಗಾಗಿ ನಿಮ್ಮಗಳ ಸಹಕಾರ ಪ್ರಸ್ತುತ ಅಗತ್ಯವಾಗಿದೆ ಹೀಗಾಗಿ ಪರಿಷತ್ನ ಅಭಿವೃದ್ಧಿ ದುರ ದೃಷ್ಟಿ ಎಲ್ಲವನ್ನು ಸಹ ಇಟ್ಟುಕೊಂಡು ಸ್ಪರ್ಧೆಗೆ ಇಳಿದಿದ್ದೇನೆ ತಾವು ಒಮ್ಮೆ ಅವಕಾಶ ಕೊಟ್ಟು ಗೆಲ್ಲಿಸಿ ಕೊಡಿ ಎನ್ನುವ ನಿಟ್ಟಿನಲ್ಲಿ ನಾರಾಯಣ ಗೌಡರ ಬಳಿ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.