ಬೆಂಗಳೂರು: ಕಳಂಕಿತ ಪಶುವೈದ್ಯಾಧಿಕಾರಿ ಮೇಲೆ ಕ್ರಮ ಕೈಗೊಂಡು ಪರೀಕ್ಷೆ ಬರೆದು ಪ್ರಾಮಾಣಿಕವಾಗಿ ಆಯ್ಕೆಯಾದವರಿಗೆ ನೇಮಕಾತಿ ಆದೇಶಕ್ಕೆ ನೀಡಿ ಎಂದು ಪಶುವೈದ್ಯಾಧಿಕಾರಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ಸಮಿತಿ ಡಾ.ಹನುಂತಪ್ಪ ಕಳಾಸಪುರ ಅವರು ಸರ್ಕಾರಕ್ಕೆ ಮನವಿ ಮಾಡಿದರು.
ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಮಾತನಾಡಿದ ಅವರು, ರಾಜ್ಯ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಇಲಾಖೆ ಸೇವೆಗಳು ಅತ್ಯಂತ ಅಗತ್ಯ ಸೇವೆಗಳು ಆಗಿದೆ. ಇತ್ತಿಚೇಗೆ 329 ಪಶುವೈದ್ಯಾಧಿಕಾರಿ ಪೈಕಿ 29ಪಶುವೈದ್ಯಾಧಿಕಾರಿ ಮೇಲೆ ಪರೀಕ್ಷೆಯಲ್ಲಿ ವಂಚನೆ, ಕಾಪಿ ಮಾಡಿ ಆಯ್ಕೆಯಾಗಿದ್ದಾರೆ ಎಂದು ಸಿಐಡಿ ಎಫ್.ಐ.ಆರ್.ದಾಖಲಿಸಿದ್ದಾರೆ.
ಸುಪ್ರಿಂಕೋರ್ಟ್ ನಲ್ಲಿ ಹಲವಾರು ಪ್ರಕರಣದಲ್ಲಿ ಕಳಂಕಿತರ ಮೇಲೆ ಕ್ರಮ ಮತ್ತು ಪ್ರಾಮಾಣಿಕವಾಗಿ ಪಾಸಾದ ಅಭ್ಯರ್ಥಿಗಳಿಗೆ ನೇಮಕಾತಿ ಮಾಡಿ ಎಂದು ತೀರ್ಪು ನೀಡಿದ್ದಾರೆ, ಅದೇ ಮಾದರಿಯಲ್ಲಿ ಇಲ್ಲಿ ಕ್ರಮ ಕೈಗೊಳ್ಳಿ ಕಳಂಕಿತರ ಮೇಲೆ ಕ್ರಮವಹಿಸಿ ಅಕ್ರಮದಲ್ಲಿ ಬಾಗಿಯಾಗದಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ನೀಡಿ ಎಂದರು, ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ವಿಚಾರಣೆಗೆ ನಮ್ಮನ್ನ ಕರೆದರೆ ಹೋಗುತ್ತೇವೆ ನಮಗೆ ಯಾವುದೇ ಆಳುಕಿಲ್ಲ, ಭಯವಿಲ್ಲ ಎಂದು ತನಿಕಾ ಸಂಸ್ಥೆಗೆ ಮನವಿ ಮಾಡಿದರು.
ನಾವು ತನಿಖೆಯನ್ನ ವಿರೋಧಿಸುವುದಿಲ್ಲ. ವಿನಾಕಾರಣ ಪ್ರಾಮಾಣಿಕವಾಗಿ ನೇಮಕರಾದ ಪಶುವೈದ್ಯಾಧಿಕಾರಿಗಳ ಮೇಲೆ ಕಿರುಕುಳ ನೀಡಬೇಡಿ, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಿ ನಮ್ಮದು ನ್ಯಾಯಯುತ ಮನವಿ ಹಾಗೂ ಒಂದು ತಿಂಗಳ ಒಳಗೆ ತನಿಖೆ ಮಾಡಿ ಪ್ರಾಮಾಣಿಕರಿಗೆ ಮನ್ನಣೆ ನೀಡಿ ಎಂದು ಹೇಳಿದರು.
10 ವರ್ಷಗಳ ನಂತರ ಹುದ್ದೆಗಳು ಕರೆಯಲಾಗಿದ್ದು, ಇಂತಹ ಅವಾಂತರಗಳು ನಡೆದರೆ ಪ್ರಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆಯಾದವರ ಸ್ಥಿತಿ ಹೇಗಿರಬೇಕು. ಅಕ್ರಮದಲ್ಲಿ ಭಾಗಿಯಾದವರಿಗೆ ಯಾವ ಸಂದೇಶವಿಲ್ಲದ ಕ್ರೂರ ಶಿಕ್ಷೆಗೆ ಗುರಿ ಪಡಿಸಿ ಮುಂದೆ ಯಾರು ಇಂತಹ ತಪ್ಪು ಎಸಗಬಾರದು ಎನ್ನುವ ನಿಟ್ಟಿನಲ್ಲಿ ಉಗ್ರ ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಡಾ.ಹನುಂತಪ್ಪ ಕಳಾಸಪುರ, ಡಾ.ಗುರುಬಸವರಾಜ್, ಡಾ.ಪೂಜ್.ಹೆಚ್., ಡಾ.ಅವಿನಾಶ್ ಬಿರಡಿ, ಡಾ.ಸುನೀಲ್,ಡಾ.ಚಾಂದಿನಿ.ಎನ್.ಡಾ.ಶ್ರೀಶೈಲ್, ಡಾ.ತನ್ವಿತ್, ಡಾ.ಪ್ರಿಯಾಂಕ, ಡಾ.ವಿಕಾಸ್ ರವರು ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿದ್ದರು.