ಬೆಂಗಳೂರು: ಭಾರತ ಕಲಾ ಗ್ರಾಮ ಸಂಸ್ಥೆಯಿಂದ ಬೆಂಗಳೂರಿನ ನಯನ ರಂಗ ಮಂದಿರದಲ್ಲಿ ನೃತ್ಯ ವಸಂತಂ ಎಂಬ ವಿನೂತನ ಗುರು ಸಮರ್ಪಣದ ನೃತ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಭಾರತ ಕಲಾ ಗ್ರಾಮದ ಸಂಸ್ಥೆಯ ಅಧ್ಯಕ್ಷರಾದ ಡಾ. ವಸಂತ ಕಿರಣ್, ಅವರು ಮಾತನಾಡಿ, ಗುರುಗಳಿಗೆ ಸಮರ್ಪಣೆ ಮಾಡುವ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿಂದ ಸುಮಾರು 250 ಕ್ಕಿಂತ ಹೆಚ್ಚು ನೃತ್ಯ ಕಲಾವಿದರು ಭಾಗವಹಿಸಿ ಗುರುಗಳಿಗೆ ವಿಶೇಷವಾದಂತಹ ಸಮರ್ಪಣೆ ಮಾಡಿದರು.
ಎರಡು ದಿನಗಳ ಕಾಲ ನಡೆಯುತ್ತಿರುವ ಗುರು ಸಮರ್ಪಣ ಕಾರ್ಯಕ್ರಮದಲ್ಲಿ ಪುಟಾಣಿಗಳು ಮಕ್ಕಳು ವಯಸ್ಕರ ಹಿರಿಯರು ಸೇರಿದಂತೆ ಅನೇಕರು ಭಾಗವಹಿಸಿ ವೇದಿಕೆ ಮೇಲೆ ತರಹೆವಾರಿ ನೃತ್ಯ ಪ್ರದರ್ಶನವನ್ನು ಮಾಡಿದರು.
ಇನ್ನು ಗುರು ಸಮರ್ಪಣ ಕಾರ್ಯಕ್ರಮದಲ್ಲಿ ನೃತ್ಯ ಮಾಡಿದ ಕಲಾವಿದರಿಗೆ ಭಾರತ ಕಲಾ ಗ್ರಾಮ ಸಂಸ್ಥೆಯಿಂದ ಪ್ರಶಸ್ತಿ ಪ್ರಧಾನವನ್ನು ಸಹ ಮಾಡಿ ಗೌರವಿಸಲಾಯಿತು.
ಪ್ರತಿವರ್ಷವೂ ಸಹ ಬೆಂಗಳೂರಿನಲ್ಲಿ ಭಾರತ ಕಲಾ ಗ್ರಾಮ ಸಂಸ್ಥೆಯಿಂದ ಗುರು ಸಮರ್ಪಣ ಕಾರ್ಯಕ್ರಮ ನಡೆಸಲಾಗುತ್ತದೆ ಪ್ರತಿ ವರ್ಷವೂ ಸಹ ಕಲಾವಿದರ ಸಂಖ್ಯೆ ಹೆಚ್ಚುತ್ತಿದ್ದು ಈ ಬಾರಿ 250 ಜನ ಕಲಾವಿದರು ಸೇರಿದರೆ ಮುಂದಿನ ವರ್ಷ 300 ಕ್ಕಿಂತ ಹೆಚ್ಚು ಕಲಾವಿದರು ಸೇರುವ ನಿರೀಕ್ಷೆ ಇದೆ ಎಂದು ಇದೇ ವೇಳೆ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಅವರ ಕಲೆಯನ್ನು ಗುರುತಿಸಿ ಹಿರಿಯರಿಗೆ ಪದ್ಮಶ್ರೀಯನ್ನು ಪಡೆದವರಿಗೆ ಗುರು ಸಮರ್ಪಣೆ ಮಾಡಲಾಗುವುದು ಎಂದು ಡಾ. ವಸಂತ ಕಿರಣ್ ಅವರು ತಿಳಿಸಿದರು.
ನಮ್ಮ ದೇಶದಲ್ಲಿ ಗುರು ಪರಂಪರೆ ಹಾಗೂ, ಕುಚುಪುಡಿ ಭರತನಾಟ್ಯದಂತಹ ಮೇರು ಕಲೆಗಳು ಇಂದಿಗೂ ಉಳಿದುಕೊಂಡಿದ್ದವೆಂದರೆ ಇಂತಹ ಮಹಾನ್ ಕಲಾವಿದರ ತಪಸ್ಸು ಹಾಗೂ ಪರಿಶ್ರಮದ ಫಲವಾಗಿ ಇಂದಿಗೂ ಸಹ ರಾಜ್ಯದ ಸಂಸ್ಕೃತಿ ಮತ್ತಷ್ಟು ಗಣನೀಯವಾಗಿ ಹೆಚ್ಚಾಗಿದೆ ಎಂದರು.