ಕೊಡಗು: ದುಬಾರೆ ಆನೆ ಶಿಬಿರದಲ್ಲಿ ಕಂಜನ್ ಆನೆ ಬೀಕರ ದಾಳಿಗೆ ಮಾರ್ತಾಂಡ ಆನೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.
ನಿನ್ನೆ ಕೊಡಗಿನ ದುಬಾರಿ ಆನೆ ಶಿಬಿರದಲ್ಲಿ ಆನೆಗಳನ್ನು ಪಳಗಿಸುವ ಕಾರ್ಯ ನಡೆಯುತಿತ್ತು. ಈ ವೇಳೆ ನೀರಿನಲ್ಲಿ ಆನರಯ ಮೈ ತೊಳೆಯುವ ಕಾರ್ಯ ನಡೆಸಲಾಗುತಿತ್ತು. ಇದ್ದಕಿದ್ದಂತೆ ಎರಡು ಆನೆಗಳು ಕಾಳಗಕ್ಕೆ ಇಳಿದು ಕಂಜಾನ್ ಆನೆ ದಾಳಿಯಿಂದ ತೀವ್ರ ಗಾಯಗೊಂಡಿದ್ದ ಮಾರ್ತಾಂಡ ಆನೆ ಇಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ ಎಂದು ಅರಣ್ಯ ಇಲಾಖ ಅಧಿಕಾರಿ ಅಭಿಷೇಕ್ ತಿಳಿಸಿದರು.
ಆನೆ ಶಿಬಿರದಲ್ಲಿ ಮಾರ್ತಾಂಡ ಆನೆಗೆ ನಿನ್ನೆಯಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಕಂಜನ್ ಆನೆ ದಂತದಲ್ಲಿ ಭೀಕರವಾಗಿ ತಿವಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿತ್ತು. ಆನೆ ಬದುಕಿಸಲು ಪಶು ವೈದ್ಯರು ಎಷ್ಟೆ ಪ್ರಯತ್ನ ಮಾಡಿದರು ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ.
ಎರಡು ಆನೆ ಕಾಳಗದಲ್ಲಿ ಸಿಲುಕಿಕೊಂಡು ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಇಂದು ಗಾಯಗೊಂಡ ಮಾರ್ತಾಂಡ ಆನೆ ದುರಂತ ಅಂತ್ಯ ಕಂಡಿರುವುದು ಇದೇ ಮೊದಲು ಎಂದು ಅರಣ್ಯಾಧಿಕಾರಿಗಳ ಮಾತಾಗಿದೆ.