LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಭಾರತೀಯತೆಯ ಬೆಸುಗೆಗೆ ಬೂಕರ್ ಮನ್ನಣೆ: ಭಾನು ಮುಷ್ತಾಕ್ ನಮ್ಮ ನೆಲದ ಹೆಮ್ಮೆ: ಕೆ.ವಿ.ಪ್ರಭಾಕರ್ ಸಂತಸ

ಬೆಂಗಳೂರು : ಬೂಕರ್ ವೇದಿಕೆಯಲ್ಲಿ ಕನ್ನಡದ ಸಾಹಿತ್ಯದ ಹಿರಿಮೆಯನ್ನು ಎತ್ತಿ ಹಿಡಿದ ಲೇಖಕಿ, ಪತ್ರಕರ್ತೆ, ಕತೆಗಾರ್ತಿ ಭಾನು ಮುಷ್ತಾಕ್ ಅವರಿಗೆ ಅಂತಾರಾಷ್ಟ್ರೀಯ ಭೂಕರ್ ಪ್ರಶಸ್ತಿ ಲಭಿಸಿರುವುದು ಅವರ ಕತೆಗಳಲ್ಲಿ ಬೆಸೆದಿರುವ ಭಾರತೀಯತೆಯ ಬೆಸುಗೆಗೆ ಸಿಕ್ಕಿರುವ ಅಂತಾರಾಷ್ಟ್ರೀಯ ಮನ್ನಣೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಸಂತಸ ವ್ಯಕ್ತಪಡಿಸಿದ್ದಾರೆ.

ತಮ್ಮ ಲೇಖನ, ಭಾಷಣ ಮತ್ತು ಕತೆಗಳಲ್ಲಿ ನಮ್ಮ‌ ನೆಲದ ಮೂಲ ಸತ್ವ ಮತ್ತು ಮೂಲ ತತ್ವ ಆಗಿರುವ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ಮೌಲ್ಯವನ್ನು ಮತ್ತು ಜಾತ್ಯತೀತತೆಯನ್ನು ಬೆಸೆಯುವ ಕಾರ್ಯ ಮಾಡುತ್ತಲೇ ಬರುತ್ತಿದ್ದಾರೆ. ಇವರಿಗೆ ಬೂಕರ್ ಪ್ರಶಸ್ತಿ ಬಂದಿರುವುದು ಕನ್ನಡ ಸಾಹಿತ್ಯ ಮತ್ತು ಕನ್ನಡತನದ ಹಿರಿಮೆಯನ್ನು ಹೆಚ್ಚಿಸಿದ್ದು ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆ ಪಡಬೇಕಾದ ಸಂದರ್ಭ ಇದಾಗಿದೆ.

ವಿಶ್ವ ಮಾನವತೆಯ ಸದಾಶಯವನ್ನು ಎತ್ತಿ ಹಿಡಿಯುವ ಭಾನು ಮುಷ್ತಾಕ್ ಅವರ ಕತೆಗಳು ವಿಶ್ವದ ಎಲ್ಲಾ ಭಾಷೆಗಳಿಗೂ ಅನುವಾದಗೊಳ್ಳಬೇಕು ಎನ್ನುವುದು ನನ್ನ ಆಶಯ.

ಭಾನು ಮುಷ್ತಾಕ್ ಅವರ ಹಸೀನಾ ಮತ್ತು ಇತರ ಕೃತೆಗಳು ನನಗೆ ಬಹಳ ಇಷ್ಟವಾದ ಸಂಕಲನ. ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
 ಜನಕಲ್ಯಾಣ ಯೋಜನೆಗಳ ಬಗ್ಗೆ ಬಿಜೆಪಿಯವರ ಸುಳ್ಳು ವದಂತಿ ಅಂಕಿ ಅಂಶಗಳ ಸತ್ಯವೇ ಬೇರೆ: ಸುರ್ಜೆವಾಲಬೆಂಗಳೂರು ರಿಯಲ್ ಎಸ್ಟೇಟ್ ಗೆ  ‘ಡೀಲ್‌ಕ್ಲೇವ್’ ನಾಯಕತ್ವ ವೇದಿಕೆ: ಪ್ರಥಮ ಆವೃತ್ತಿ ಯಶಸ್ವಿಶ್ರೀಲ ಪ್ರಭುಪಾದರ ಆಧ್ಯಾತ್ಮಿಕ ಪರಂಪರೆ ಎಂದೆಂದಿಗೂ ಶಾಶ್ವತ: ಕರಜಗಿಬೆಂಗಳೂರು ಉಳಿಸಿ" – ಹಸಿರು, ಸ್ವಚ್ಛ ಮತ್ತು ವಾಸಯೋಗ್ಯ ಬೆಂಗಳೂರಿಗಾಗಿ ಎಎಪಿ ಹಸಿರು ಕಾರ್ಯಸೂಚಿ  ಪ್ರಣಾಳಿಕೆ ಬಿಡುಗಡೆಖ್ಯಾತ ಸಿನಿತಾರೆ ಕರಣ್ ಕುಂದ್ರಾ ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಫೀನಿಕ್ಸ್ ಶಾಪಿಂಗ್ ಫೆಸ್ಟಿವಲ್ ಅದ್ಧೂರಿ ಚಾಲನೆಶಬರಿಮಲೆ ಯಾತ್ರೆ ಕೈಗೊಂಡ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಪದ್ಮನಾಭನಗರದಲ್ಲಿ ಗುರುಪಾದ ಪೂಜೆ, ಭಜನೆ ಹಾಗೂ ಧಾರ್ಮಿಕ ಜಾಗೃತಿ ಮೆರವಣಿಗೆ ತಾಲ್ಲೂಕು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಪದಾಧಿಕಾರಿಗಳ ಅವಿರೋಧ ಆಯ್ಕೆ : BO, ಎ.ಜೆ.ಕೃಷ್ಣೇಗೌಡ ಅಭಿನಂದನೆಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ತಾಲ್ಲೂಕು ಘಟಕದಿಂದ 41ನೇ ಮಾಸಿಕ ಸಾಹಿತ್ಯ ಪಯಣ ಹೆಜ್ಜೆಸಮಾನತೆ, ಸಾಮಾಜಿಕ ನ್ಯಾಯದ ಜಪ ಮಾಡುವ ಕಾಂಗ್ರೆಸ್ ಸರ್ಕಾರದ ದ್ವಂದ್ವ ನೀತಿಗೊಂದು ಜ್ವಲಂತ ಸಾಕ್ಷಿ ಇಲ್ಲಿದೆ!