LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಭ್ರಷ್ಟಾಚಾರ ನಿರ್ಮೂಲನೆಗೆ ಸಮಾಜದಲ್ಲಿ ಜನರು ಜಾಗರೂಕರಾಗಬೇಕು: ವೀರಪ್ಪ

ಬೆಂಗಳೂರು: ರಾಜ್ಯದಲ್ಲಿ ಸಾರ್ವಜನಿಕರು ಎಂದು ಪ್ರಜ್ಞಾವಂತರಾಗುತ್ತಾರೊ ಅಂದು ಭ್ರಷ್ಟಾಚಾರವನ್ನು ಬುಡಸಮೇತ ತೊಲಗಿಸಲಾಗುತ್ತದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎಸ್ ವೀರಯ್ಯ ಅಭಿಪ್ರಾಯಪಟ್ಟರು.


ಬೆಂಗಳೂರಿನ ಬಸವನಗುಡಿ ವಿಧಾನಸಭಾ ಕ್ಷೇತ್ರದ ಗಿರಿನಗರದ ಸ್ವಾಮಿ ವಿವೇಕಾನಂದರ ಗೆಳೆಯರ ಬಳಗದ ವತಿಯಿಂದ 11ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ, ಕರ್ನಾಟಕ ರಾಜ್ಯ,ಕನ್ನಡ ಭಾಷೆಗೆ ಇತಿಹಾಸವಿದೆ, ಇದೊಂದು ಶಾಸ್ತ್ರೀಯ ಭಾಷೆಯಾಗಿ ರಾಷ್ಟ್ರ ,ಅ


ವಿಶ್ವಮಟ್ಟದಲ್ಲಿ ಸಾಕಷ್ಟು ಮಾನ್ಯತೆ ದೊರೆತಿದೆ, ಭಾರತ ಸರ್ಕಾರದಿಂದ ಸಾಕಷ್ಟು ಅನುದಾನಗಳು ಬರುತ್ತಿವೆ, ಆದರೆ ರಾಜ್ಯ ಸರ್ಕಾರ ಹಾಗು ಕನ್ನಡ ಅಭಿವೃದ್ದಿ ಪ್ರಾಧಿಕಾರ ಏನು ಮಾಡುತ್ತಿದೆಯೋ ದೇವರಿಗೆ ಗೊತ್ತು  ಎಂದು ಅಸಹಾಯಕತೆ ವ್ಯಕ್ತಪಡಿಸಿದರು.


ಸಮಾಜದಲ್ಲಿ ಮಕ್ಕಳನ್ನು ಉತ್ತಮ ಪ್ರಜೆಯಾಗಿ ಬೆಳೆಸಿ, ಯಾರ ಮನೆಯಲ್ಲಿಯೂ ಮಕ್ಕಳಿಗೆ ಓದಿನ ಮೇಲೆ ಒತ್ತಡ ಹಾಕಬೇಡಿ, ಬೇರೆ ಮಕ್ಕಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಹೋಗಬೇಡಿ, ಸಮಾಜದಲ್ಲಿ ಆದರ್ಶ ವ್ಯಕ್ತಿಯನ್ನಾಗಿ ಮಾಡಿ,ಎಲ್ಲರಿಗೂ ಗೌರವ ಕೊಡುವ ಮನುಷ್ಯನಾಗಿ ಸಮಾಜದಲ್ಲಿ ಬಾಳಲಿ ಎಂದರು. ತದನಂತರ ಅಧಿಕಾರ,ಅಂತಸ್ತು, ಎಲ್ಲವೂ ಸಿಗುತ್ತದೆ. ಸನ್ಮಾರ್ಗದಲ್ಲಿ ಯಾರು ಹೋಗುವುದಿಲ್ಲವೋ ಅಲ್ಲಿ ಸಮಾಜಕ್ಕೆ, ಮನೆಯಲ್ಲಿ ಒಳ್ಳೆಯವನಾಗಲು ಸಾಧ್ಯವಿಲ್ಲ ಅದಕ್ಕೆ ತಂದೆ ತಾಯಿಯನ್ನು ಗೌರವಿಸಬೇಕು ಎಂದು ಕಿವಿ ಮಾತು ಹೇಳಿದರು.


ಕರ್ನಾಟಕ ಸಂಪದ್ ಭರಿತ ರಾಜ್ಯ,ಯಾವುದಕ್ಕೂ ಕೊರತೆ,ಕಡಿಮೆಯಿಲ್ಲ, ಆದರೆ ಅಧಿಕಾರ ,ದರ್ಪ,ಭ್ರಷ್ಟಾಚಾರ, ದುರಹಂಕಾರ ಸಮಾಜದಲ್ಲಿ ತಾಂಡವವಾಡುತ್ತಿದೆ. ಇದರಿಂದ ಸಮಾಜ,ರಾಜ್ಯ ದೇಶ ಉದ್ದಾರವಾಗಲ್ಲ, ಕರ್ನಾಟಕ


 ಭ್ರಷ್ಟಾಚಾರದಲ್ಲಿ 4ನೇ ಸ್ಥಾನದಲ್ಲಿದೆ. ಎಲ್ಲಿ ನೋಡಿದರೂ ಲಂಚತಾಂಡವವಾಡುತ್ತಿದೆ. ಅದಕ್ಕೆ ಕಡಿವಾಣ ಹಾಕಲು ಇರುವ ಒಂದೇ ಒಂದು ಮಾರ್ಗ ಅದು ಸಮಾಜದ ಜನ ಎಚ್ಚತ್ತುಕೊಂಡಾಗ ಮಾತ್ರ ನಿರ್ಮೂಲನೆ ಮಾಡಲು ಸಾಧ್ಯ ಎಂದರು.


ಇಂಗ್ಲೀಷ್ ಬಿಟ್ಟು ಕನ್ನಡದಲ್ಲಿ ಮಾತನಾಡಲಿ:


ಹೈಕೋರ್ಟ್ನ ಹಿರಿಯ ವಕೀಲ ರವಿ ಮಾತನಾಡಿ, ಮಕ್ಕಳಿಗೆ ಮನೆಯಲ್ಲಿ ಇಂಗ್ಲೀಷ್ ಬಿಟ್ಟು ಮೊದಲು ಕನ್ನಡದಲ್ಲಿ ಮಾತನಾಡುವುದನ್ನು ಕಲಿಸಲಿ. ಆಗ ಕನ್ನಡ ಭಾಷೆಗೆ ಶ್ರೀಮಂತಿಕೆ ಬರುತ್ತದೆ. ಅದನ್ನು ಬಿಟ್ಟು ಅನ್ಯ ಭಾಷೆಗಳ ಕಡೆ ಹೆಚ್ಚು ಗಮನ ನೀಡಿ ಮಾತ್ರು ಭಾಷೆಗೆ ಅನ್ಯಾಯ ಮಾಡಿ ಕಡೆಗಣಿಸುವ ಕೆಲಸ ನಮ್ಮಲ್ಲಿಯೇ ಹೆಚ್ಚಾಗುತ್ತುರುವುದು ದುರಂತದ ಸಂಗತಿ ಎಂದರು.


ನಾವು ಮೊದಲು ಅನ್ಯ ಭಾಷಿಕರಿಗೆ ಕನ್ನಡ ಕಲಿಸುವ ಕೆಲಸ ಮಾಡಬೇಕು. ಅಳಿವಿನ ಅಂಚಿನ ಕಡೆಗೆ ಕನ್ನಡ ಭಾಷೆ ಜಾರುತ್ತಿರುವ ಬಗ್ಗೆ ಯಾರಿಗಾದರು ಅರಿವಿದೆಯೇ? ಕನ್ನಡ ಭಾಷೆಗೆ ಶ್ರಿಮಂತಿಕೆ ಇದೆ, ಆದರೆ ಆದ ಗಡುಸು ಇದೆ. ಅದನ್ನು ಕಾಪಾಡಿಕೊಂಡು ಹೋಗಬೇಕು. ರಾಷ್ಟ್ರ ಮಟ್ಟದಲ್ಲಿ 11 ಭಾಷೆಗಳಿಗೆ ಶಾಸ್ತ್ರಿಯ ಸ್ಥಾನಮಾನ ಇದ್ದು, ಅದರಲ್ಲಿ 4 ಭಾಷೆಗಳು ಈಗಾಗಲೆ ಸತ್ತು ಹೋಗಿವೆ. ಕನ್ನಡ ಭಾಷೆಗೂ ಅಂತಹ ಸ್ಥಿತಿ ಬರುವ ಕಾಲ ಬಹಳ ದೂರವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.


ಇದೇ ವೇಳೆ ಉದ್ಯಮಿ,ಸಮಾಜಸೇವಕ ವೇಣು ಅವರಿಗೆ ಈ ಭಾರಿ ಗೌರವ ಸನ್ಮಾನ ಮಾಡಲಾಯಿತು. ಬೆಳಿಗ್ಗೆ ಧ್ವಜಾರೊಹಣ ಮಾಡಲಾಯಿತು, ಇಡೀ ದಿನ ಬೆಳಿಗ್ಗೆಯಿಂದ ಸಂಜೆ ತನಕ ಕ್ರೀಡಾ ಸ್ಪರ್ಧೆ,ಆರೊಗ್ಯ ತಪಾಸಣೆ, ಕಣ್ಣಿನ ತಪಾಸಣೆ, ತಾಯಿ ಭುವನೇಶ್ವರಿ ಮೆರವಣಿಗೆ,ಜಾನಪದ ಕಲಾತಂಡಗಳಿಂದ ತರಹೇವಾರಿ ನೃತ್ಯ. ವೇದಿಕೆ ಮೇಲೆ ಕಾಡಿಮಿ ಕಿಲಾಡಿಗಳಿಂದ ನಗೆ ಹಬ್ಬ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. 


 11ನೇ ವರ್ಷದ ಕನ್ನಡ ರಾಜ್ಯೊತ್ಸವ ಕಾರ್ಯಕ್ರಮವನ್ನು ಅಧ್ಯಕ್ಷರಲರೂ ಹಾಗು ಹೈ ಕೋರ್ಟ್ ವಕೀಲ ಮಾಯಣ್ಣ ಗೌಡ ಎನ್ ಆರ್ ಅಚ್ಚುಕಟ್ಟಾಗಿ ನಡೆಸಿಕೊಟ್ಟರು.


ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಮಾಯಣ್ಣ, ಮುಖ್ಯ ಅತಿಥಿ ಕುವೆಂಪು ಸಾಹಿತ್ಯ ವೇದಿಕೆ ಅಧ್ಯಕ್ಷ ಹನುಮಂತೇಗೌಡ,ಬಳಗದ ಗೌರವಾಧ್ಯಕ್ಷ ಮಂಜೇಗೌಡ,ಮಾಜಿ ಅಧ್ಯಕ್ಷ ನಾಗಣ್ಣ,ಬಳಗದ ಮಾಜಿ ಅಧ್ಯಕ್ಷರುಗಳು,ಉಪಾಧ್ಯಕ್ಷ ನಂಜುಂಡೇಗೌಡ,ಪ್ರಧಾನ ಕಾರ್ಯದರ್ಶಿ ಡಾ.ಶ್ರೀನಿವಾಸ್,ಖಜಾಂಚಿ ಶ್ರೀನಿವಾಸ್,ಜಂಟಿ ಕಾರ್ಯದರ್ಶಿ ಅಪಣ್ಣ,ಸಂಘಟನಾ ಕಾರ್ಯರ್ದರ್ಶಿ ದಯಾಶಂಕರ್ ಸೇರಿ ಗಣ್ಯರು ಉಪಸ್ಥಿತಿ.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ