LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಿಹಾಬ್ ಕೇಂದ್ರದ ರೋಗಿಗಳನ್ನು ಮತದಾನದಿಂದ ವಂಚಿತರನ್ನಾಗಿಸದೆ ಎಸ್ ಐಆರ್ ಪ್ರಕ್ರಿಯೆಯಲ್ಲಿ ಸೇರಿಸಿ

ಬೆಂಗಳೂರು:, ಮದ್ಯವ್ಯಸನ ಚಿಕಿತ್ಸಾ/ಪುನರ್ವಸತಿ ಕೇಂದ್ರಗಳಲ್ಲಿ (De-addiction & Rehabilitation Centres) ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳನ್ನು ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸೇರಿಸಿ ಸಂವಿಧಾನ ಬದ್ಧ ಮತದಾನದ ಹಕ್ಕಿನಿಂದ ವಂಚಿತರನ್ನಾಗಿಸದಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪನವರು ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದಾರೆ!

ಭಾರತೀಯ ಸಂವಿಧಾನವು ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಪ್ರಜಾಪ್ರಭುತ್ವದಲ್ಲಿ ಭಾಗವಹಿಸುವ ಅವಕಾಶವನ್ನು ಒದಗಿಸಿದ್ದು ಮತದಾನದ ಹಕ್ಕು ಪ್ರಜಾಪ್ರಭುತ್ವದ ಪ್ರಮುಖ ಆಧಾರ ಸ್ಥಂಭವಾಗಿದ್ದು ಅರ್ಹ ಮತದಾರರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸುವುದು ಚುನಾವಣಾ ವ್ಯವಸ್ಥೆಯ ಪ್ರಮುಖ ಜವಾಬ್ದಾರಿಯಾಗಿರುತ್ತದೆ, ಪ್ರಸ್ತುತ ರಾಜ್ಯದ ವಿವಿಧ ಮದ್ಯವ್ಯಸನ ಚಿಕಿತ್ಸಾ ಹಾಗೂ ಪುನರ್ವಸತಿ ಕೇಂದ್ರಗಳಲ್ಲಿ ಅನೇಕ ಅರ್ಹ ಮತದಾರರು ಚಿಕಿತ್ಸೆ ಪಡೆಯುತ್ತಿದ್ದು ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯ ಸಂದರ್ಭದಲ್ಲಿ ಅವರು ತಮ್ಮ ಶಾಶ್ವತ ನಿವಾಸದಲ್ಲಿ ಲಭ್ಯವಿರದ ಕಾರಣ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವುದು, ತಿದ್ದುಪಡಿ ಮಾಡಿಸುವುದು ಅಥವಾ ಪರಿಶೀಲನೆ ಪ್ರಕ್ರಿಯೆಯಲ್ಲಿ ಭಾಗವಹಿಸುವುದ್ದರಿಂದ ವಂಚಿರಾಗುವ ಸಾಧ್ಯತೆಯಿದ್ದು ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳು ಸಮಾಜದ ಮುಖ್ಯವಾಹಿನಿಯಿಂದ ಹೊರಗುಳಿಯಬಾರದು

 ಹಾಗೂ ಅವರ ಸಂವಿಧಾನ ಬದ್ಧ ಹಕ್ಕುಗಳಿಗೆ ಯಾವುದೇ ಧಕ್ಕೆಯಾಗಬಾರದು ಎಂಬುದು ಅತ್ಯಂತ ಮುಖ್ಯವಾಗಿದೆ, ಚುನಾವಣಾ ಆಯೋಗವು ಈ ವರ್ಗದ ವ್ಯಕ್ತಿಗಳಿಗಾಗಿ ವಿಶೇಷ ವ್ಯವಸ್ಥೆ ರೂಪಿಸಿ ಸಂಬಂದಿತ ಚಿಕಿತ್ಸಾ ಕೇಂದ್ರಗಳ ಸಹಯೋಗದೊಂದಿಗೆ ಮತದಾರರ ನೋಂದಣಿ, ತಿದ್ದುಪಡಿ ಮತ್ತು ಪರಿಶೀಲನೆ ಪ್ರಕ್ರಿಯೆ ನಡೆಸುವುದು ಅಗತ್ಯವಾಗಿರುವುದ್ದರಿಂದ ರಾಜ್ಯದ ಎಲ್ಲಾ ಮದ್ಯವ್ಯಸನ ಚಿಕಿತ್ಸಾ ಹಾಗೂ ಪುನರ್ವಸತಿ ಕೇಂದ್ರಗಳ ಪಟ್ಟಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳ ಮೂಲಕ ಸಂಗ್ರಹಿಸಿ, ರಾಜ್ಯದ ಎಲ್ಲಾ ಮದ್ಯವ್ಯಸನ ಚಿಕಿತ್ಸಾ ಹಾಗೂ ಪುನರ್ವಸತಿ ಕೇಂದ್ರಗಳ ಪಟ್ಟಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳ ಮೂಲಕ ಸಂಗ್ರಹಿಸಬೇಕು ಹಾಗೂ ವಿಶೇಷ ಸಮಗ್ರ ಪರಿಷ್ಕರಣೆ ಅವಧಿಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಅಥವಾ ವಿಶೇಷ ನೋಂದಣಿ ತಂಡಗಳನ್ನು ಕೇಂದ್ರಗಳಿಗೆ ಕಳುಹಿಸಿ ಅರ್ಹ ಮತದಾರರ ನೋಂದಣಿ ಮತ್ತು ಪರಿಶೀಲನೆ ನಡೆಸಿ, ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅನಗತ್ಯವಾಗಿ ತೆಗೆದುಹಾಕದಂತೆ ಸ್ಪಷ್ಟ ನಿರ್ದೇಶನ ಹೊರಡಿಸಿ ಅಗತ್ಯ ದಾಖಲೆಗಳ ಕೊರೆತೆಯಿದ್ದಲ್ಲಿ ಚುನಾವಣಾ ಆಯೋಗದ ನಿಯಮಾನುಸಾರ ಪರ್ಯಾಯ ಪರಿಶೀಲನಾ ವಿಧಾನಗಳನ್ನು ಅನುಸರಿಸಬೇಕು,

ಈ ಕುರಿತು ರಾಜ್ಯದ ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಚುನಾವಣಾ ನೋಂದಣಿ ಅಧಿಕಾರಿಗಳಿಗೆ ವಿಶೇಷ ಸುತ್ತೋಲೆ ಹೊರಡಿಸಬೇಕು ಹಾಗೂ ಭಾರತೀಯ ಸಂವಿಧಾನದ ಸಮಾನತೆ, ಘನತೆ ಮತ್ತು ಪ್ರಜಾಪ್ರಭುತ್ವದ ತತ್ವಗಳಿಗೆ ಅನುಗುಣವಾಗಿರುವುದ್ದರಿಂದ ಚಿಕಿತ್ಸಾ ಕೇಂದ್ರದಲ್ಲಿರುವ ಕಾರಣಕ್ಕೆ ಯಾವುದೇ ಅರ್ಹ ನಾಗರಿಕನು ತನ್ನ ಮತದಾನದ ಹಕ್ಕಿನಿಂದ ವಂಚಿತರನ್ನಾಗಿಸದಂತೆ ಸಾರ್ವಜನಿಕ ಹಿತದೃಷ್ಟಿಯಿಂದ ತ್ವರಿತವಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದಾರೆ!

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹೊರ ವರ್ತುಲ ರಸ್ತೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಚಿವರ ಚರ್ಚೆಹಗರಿಬೊಮ್ಮನಹಳ್ಳಿಯಲ್ಲಿ ಲಾಕಪ್‌ಡೆತ್, ಪೊಲೀಸ್ ದೂರುಗಳ ಪ್ರಾಧಿಕಾರದಿಂದ ಸುಮೊಟೋ, ಎಸ್ಪಿಗೆ ನೋಟೀಸ್ರಿಹಾಬ್ ಕೇಂದ್ರದ ರೋಗಿಗಳನ್ನು ಮತದಾನದಿಂದ ವಂಚಿತರನ್ನಾಗಿಸದೆ ಎಸ್ ಐಆರ್ ಪ್ರಕ್ರಿಯೆಯಲ್ಲಿ ಸೇರಿಸಿಸಂಕಷ್ಟ ಸೂತ್ರ ರೂಪಿಸುವುದಕ್ಕೆ ನಿಮ್ಮ ಪ್ರಯತ್ನವೇನು ಎಂದು ಪ್ರಶ್ನಿಸಿದ ಕುಮಾರಸ್ವಾಮಿಜುಲೈ 1ರಿಂದ ಆಗಸ್ಟ್ 13ರವರೆಗೆ ಒಟ್ಟು 212.75 ಕಿ.ಮೀ. ಪಾದಚಾರಿ ಮಾರ್ಗ ಅತಿಕ್ರಮಣ ಮುಕ್ತ ಪಾಕಿಸ್ತಾನ,ಚೀನಾ ನಮಗೆ ಶತ್ರು ರಾಷ್ಟ್ರವಲ್ಲ ಪಾಕಿಸ್ತಾನವನ್ನು ದೀರ್ಘಕಾಲ ದ್ವೇಷಿಸಬಾರದು : ಮೋಹನ್ ಭಾಗವತ್ಜಲಮಂಡಳಿ ನೌಕರರ ವಿಶೇಷ ಸ್ಥಳೀಯ ಭತ್ಯೆ ಪರಿಷ್ಕರಣೆಗೆ ಸರ್ಕಾರಕ್ಕೆ ಪ್ರಸ್ತಾವನೆಕಲ್ಯಾಣ ಕರ್ನಾಟಕ ಭದ್ರತೆ,ಅಭಿವೃದ್ಧಿ, ಉದ್ಯೋಗಕ್ಕಾಗಿ ನೂತನ ಕೈಗಾರಿಕಾ ಭದ್ರತೆ ಪಡೆ ಸೃಜನೆಗೆ ಪತ್ರ10ಲಕ್ಷ ಹಣ ಪಾಪದಿಂದ ಗಳಿಸಿ, 1ಲಕ್ಷ ದಾನ ಮಾಡಿದರೆ ಪುಣ್ಯ ಬರವುದಿಲ್ಲ, ದೇವರೆ ಎಲ್ಲರಿಗೂ ಗಾಡ್ ಫಾದರ್-ನ್ಯಾಯಮೂರ್ತಿ ಶ್ರೀಶಾನಂದಕಲಾಮಂದಿರ್ ಬೆಂಗಳೂರಿನ ಬನಶಂಕರಿ (ಕತ್ರಿಗುಪ್ಪೆ ಸಿಗ್ನಲ್) ನಲ್ಲಿ 8ನೇ ಶೋರೂಮ್ ಪ್ರಾರಂಭ