LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸರ್ಕಾರಕ್ಕೆ 143 ಕೋಟಿ ರೂ. ಲಾಭಾಂಶ ಕೊಟ್ಟ ಕೆಎಸ್ಐಐಡಿಸಿ: ಎಂ ಬಿ ಪಾಟೀಲ

ಬೆಂಗಳೂರು: 2024-25ನೇ ಸಾಲಿನಲ್ಲಿ ಕರ್ನಾಟಕ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮವು (ಕೆಎಸ್ಐಐಡಿಸಿ) ಗಳಿಸಿದ ನಿವ್ವಳ ಲಾಭದಲ್ಲಿ 143.12 ಕೋಟಿ ರೂ.ಗಳ ಲಾಭಾಂಶವನ್ನು (ಡಿವಿಡೆಂಡ್) ಬೃಹತ್ ಕೈಗಾರಿಕೆ ಮತ್ತು ಮೂಲಸೌಕರ್ಯ ಸಚಿವ ಎಂ ಬಿ ಪಾಟೀಲ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸೋಮವಾರ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ 3 ಕೋಟಿ ರೂ.ಗಳ ಚೆಕ್ ಅನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ನಿಗಮವು 2024-25ರಲ್ಲಿ ಒಟ್ಟು ತೆರಿಗೆ ಕಡಿತದ ಬಳಿಕ 188.41 ಕೋಟಿ ರೂ. ಲಾಭ ಗಳಿಸಿತ್ತು. ಜತೆಗೆ 2025-26ನೇ ಸಾಲಿನಲ್ಲಿ ಸಂಸ್ಥೆಗೆ 19.34 ಕೋಟಿ ರೂ.ಗಳಷ್ಟು ಹಣವು ವಿಶೇಷ ಡಿವಿಡೆಂಡ್ ಲಾಭದಲ್ಲಿ ಬಂದಿತ್ತು. ನಿಯಮಾನುಸಾರವಾಗಿ ಲಾಭಾಂಶದ ಪೈಕಿ ಶೇ.30ರಷ್ಟನ್ನು ಈಗ ಸರಕಾರಕ್ಕೆ ಹಸ್ತಾಂತರಿಸಲಾಗಿದೆ ಎಂದಿದ್ದಾರೆ.

ಕೆಎಸ್ಐಐಡಿಸಿ ಸಂಸ್ಥೆಗೆ ಕ್ಯಾಮ್ಕೊ, ಕ್ಯಾಟ್ಕೊ, ಎಂಎಸ್ಐಎಲ್, ಎಚ್.ಜಿ.ಎಂ.ಎಲ್ ಮುಂತಾದ ಉದ್ದಿಮೆಗಳಿಂದ ಈ ಆದಾಯ ಬಂದಿದೆ. ಸಾರ್ವಜನಿಕ ಉದ್ದಿಮೆಗಳು ಲಾಭದ ಹಳಿಗೆ ಮರಳುತ್ತಿರುವುದು ಮತ್ತು ಕಳೆದ ಮೂರು ವರ್ಷಗಳಿಂದ ಇದು ಸಾರ್ವಕಾಲಿಕ ದಾಖಲೆಯ ಪ್ರಮಾಣದಲ್ಲಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಅವರು ನುಡಿದಿದ್ದಾರೆ.

ವಿಧಾನಸೌಧದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಖುಷ್ಬೂ ಗೋಯಲ್, ಕಾರ್ಯನಿರ್ವಾಹಕ ನಿರ್ದೇಶಕ ಚಿದಾನಂದ್ ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
 ಖೋಪೋಲಿಯಲ್ಲಿ ಅಕ್ಟೋಬರ್ 30 ರಿಂದ ಭಾರತೀಯ ಶಾಲೆಗಳ ಶಿಕ್ಷಣ ಶೃಂಗಸಭೆಹಿಲ್ಟನ್ ಗಾರ್ಡನ್ ಇನ್ ಬೆಂಗಳೂರು ಎಂಬಸಿ ಟೆಕ್‌ವಿಲ್ಲಾದಿಂದ ದೇಸಿ ಕ್ವೋಶೆಂಟ್‌ಗೆ ಚಾಲನೆಏಸರ್‌ನಿಂದ CSR ನ ಅಡಿಯಲ್ಲಿ  ನೇತ್ರದೀಪ್ ಕಣ್ಣಿನ ಆರೈಕೆ ಕೇಂದ್ರ ಆರಂಭಕಲೀಲಾ ಚಿತ್ರದ ಮುಹೂರ್ತ ಪಂಚಮುಖಿ ಗಣೇಶ ದೇವಾಲಯದಲ್ಲಿ ಚಾಲನೆವಿದ್ಯಾರ್ಥಿಗಳು ವೃತ್ತಿ ಜೊತೆಗೆ ಪ್ರವೃತ್ತಿಯಲ್ಲೂ ಹೆಚ್ಚು ಗಮನ ಹರಿಸಬೇಕು: ಡಾ. ಚಂದ್ರ ಮೌಳಿ ಗಡ್ಡ ಮನಗೂನಗರದ ರಸ್ತೆ ಸಮಸ್ಯೆಗಳ ಪತ್ತೆಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನ ಬಳಕೆ : ಆಯುಕ್ತ ಕೆ. ಎನ್. ರಮೇಶ್ಪ್ರತಿ 10 ಭಾರತೀಯ ಮಕ್ಕಳಲ್ಲಿ ಕೇವಲ ಮೂವರಿಗೆ ಮಾತ್ರ ಹೊಂದಾಣಿಕೆಯಾಗುವ ಮೂಳೆ ಮಜ್ಜೆ ದಾನಿ ಲಭ್ಯಕುಮಾರಣ್ಣ ಬಾಂಬು ಹಾಕುವ ಟೈಮು ಬಂದೇಬಿಡ್ತಾ?ಶಿಕ್ಷಕರಿಂದಾಗಿಯೇ ರಾಜ್ಯದ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ: ಸಚಿವ ಮಧು ಬಂಗಾರಪ್ಪ ಬಣ್ಣನೆಕಳಂಕಿತ ಪಶುವೈದ್ಯಾಧಿಕಾರಿ ಮೇಲೆ ಕ್ರಮ ಕೈಕೊಂಡು,ಅಕಳಂಕಿತರಿಗೆ ನ್ಯಾಯ ನೀಡಿ: ಡಾ.ಹನುಮಂತಪ್ಪ