LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಾಜ್ಯಕ್ಕೆ ₹15 ಸಾವಿರ ಕೋಟಿ ಬಂಡವಾಳ ಹರಿವು ನಿಚ್ಚಳ: ಎಂ ಬಿ ಪಾಟೀಲ

ಬೆಂಗಳೂರು: ದೆಹಲಿಯಲ್ಲಿ ನಡೆದ ಸೆಮಿಕಾನ್ ಇಂಡಿಯಾ-2026 ಸಮಾವೇಶದಲ್ಲಿ 20ಕ್ಕೂ ಹೆಚ್ಚು ಕಂಪನಿಗಳ ಜತೆ ಮಾತುಕತೆ ನಡೆಸಿದ್ದು, ರಾಜ್ಯಕ್ಕೆ ₹15 ಸಾವಿರ ಕೋಟಿಗೂ ಹೆಚ್ಚಿನ ಬಂಡವಾಳ ಹರಿದು ಬರುವ ಸಾಧ್ಯತೆ ನಿಚ್ಚಳವಾಗಿದೆ. ಈ ಅವಕಾಶವನ್ನು ನಮ್ಮದಾಗಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನೂ ತ್ವರಿತವಾಗಿ ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.news_1789839795_0_648.webp

ಎರಡು ದಿನಗಳ ಸೆಮಿಕಾನ್ ಇಂಡಿಯಾ ಸಮಾವೇಶಕ್ಕೆ ಉನ್ನತ ಮಟ್ಟದ ನಿಯೋಗದೊಂದಿಗೆ ತೆರಳಿದ್ದ ಅವರು, ದೆಹಲಿಯಿಂದ ವಾಪಸ್ ಆದ ಬಳಿಕ ಶನಿವಾರ ಈ ವಿವರ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ಸೆಮಿಕಾನ್ ಇಂಡಿಯಾ ಸಮಾವೇಶದಲ್ಲಿ ಲ್ಯಾಮ್ ರೀಸರ್ಚ್ ಕಂಪನಿಯು ರಾಜ್ಯದಲ್ಲಿ ₹9,298 ಕೋಟಿ ಮತ್ತು ಅಪ್ಲೈಡ್ ಮೆಟೀರಿಯಲ್ಸ್ ಮುಂದಿನ 10 ವರ್ಷಗಳಲ್ಲಿ ಮೊದಲ ಹಂತದಲ್ಲಿ ₹3,600 ಕೋಟಿ ಬಂಡವಾಳ ಹೂಡುವುದಾಗಿ ಘೋಷಿಸಿವೆ. ಈ ಎರಡೂ ಯೋಜನೆಗಳಿಂದ ರಾಜ್ಯದ ಸೆಮಿಕಂಡಕ್ಟರ್ ಪೂರೈಕೆ ಸರಪಳಿ, ಚಿಪ್ ವಿನ್ಯಾಸ ಮತ್ತು ಈ ಕ್ಷೇತ್ರದ ಸಾಧನಗಳ ತಯಾರಿಕೆ, ಪ್ರಿಸಿಷನ್ ಎಂಜಿನಿಯರಿಂಗ್, ಸಂಶೋಧನೆ ಮತ್ತು ಅಭಿವೃದ್ಧಿ ಇವುಗಳ ಚಿತ್ರಣವೇ ಬದಲಾಗಲಿದೆ ಎಂದಿದ್ದಾರೆ.

ಲ್ಯಾಮ್ ರೀಸರ್ಚ್ ಕಂಪನಿಗೆ ದೊಡ್ಡಬಳ್ಳಾಪುರ ತಾಲ್ಲೂಕಿನ ಆದಿನಾರಾಯಣ ಹೊಸಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 73 ಎಕರೆ ಭೂಮಿ ನೀಡಲಾಗಿದೆ. ಇಲ್ಲಿ ದೇಶದ ಪ್ರಪ್ರಥಮ ಸಿಲಿಕಾನ್ ಬಿಡಿಭಾಗಗಳ ತಯಾರಿಕಾ ಸ್ಥಾವರ ಬರಲಿದ್ದು, 1,000ಕ್ಕೂ ಹೆಚ್ಚು ನೇರ ಹೈಟೆಕ್ ಉದ್ಯೋಗಗಳು ಸೃಷ್ಟಿಯಾಗಲಿವೆ. ಜತೆಗೆ ರಾಜ್ಯದಲ್ಲಿ ಇದರಿಂದ ಉನ್ನತ ಮಟ್ಟದ ಸೆಮಿಕಂಡಕ್ಟರ್ ಮೆಟೀರಿಯಲ್ಸ್ ಮತ್ತು ಬಿಡಿಭಾಗಗಳ ತಯಾರಿಕೆ ಕೂಡ ಆರಂಭವಾಗಲಿದೆ. ಈ ಘಟಕ ನಿರ್ಮಾಣಕ್ಕೆ ಸದ್ಯದಲ್ಲೇ ಶಂಕುಸ್ಥಾಪನೆ ನೆರವೇರಿಸಲಾಗುವುದು. ಒಂದೂವರೆ ವರ್ಷದಲ್ಲಿ ಅದು ಕಾರ್ಯಾರಂಭ ಮಾಡುವ ವಿಶ್ವಾಸ ಕೂಡ ಇದೆ ಎಂದು ಅವರು ತಿಳಿಸಿದ್ದಾರೆ.

ಇದೇ ರೀತಿಯಲ್ಲಿ ಸೆಮಿಕಂಡಕ್ಟರ್ ಮೆಟೀರಿಯಲ್ಸ್ ಎಂಜಿನಿಯರಿಂಗ್ ಮತ್ತು ಈ ಕ್ಷೇತಕ್ಕೆ ಅಗತ್ಯವಿರುವ ಸಾಧನಗಳ ತಯಾರಿಕೆಗೆ ಹೆಸರಾಗಿರುವ ಅಮೆರಿಕದ ಅಪ್ಲೈಡ್ ಮೆಟೀರಿಯಲ್ಸ್ ಕಂಪನಿಯು 2035ರ ವೇಳೆಗೆ ಭಾರತದಲ್ಲಿ 5 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ. ಕಂಪನಿಯು ತನ್ನ ದೀರ್ಘಾವಧಿ ಚಟುವಟಿಕೆಗಳ ವಿಸ್ತರಣೆಗೆ ಬೆಂಗಳೂರನ್ನು ಆಯ್ಕೆ ಮಾಡಿಕೊಂಡಿದೆ. ಇದರಂತೆ, ಇನ್ನು 10 ವರ್ಷಗಳಲ್ಲಿ ಅದು ರಾಜ್ಯದಲ್ಲಿ 3,600 ಕೋಟಿ ರೂ. ಬಂಡವಾಳ ಹೂಡಲಿದೆ. ಇದಕ್ಕಾಗಿ ಬೆಂಗಳೂರು ಸಿಗ್ನೇಚರ್ ಬಿಝಿನೆಸ್ ಪಾರ್ಕ್ ಪ್ರದೇಶದಲ್ಲಿ ಕಂಪನಿಗೆ 140 ಎಕರೆ ಭೂಮಿ ನೀಡಲಾಗುತ್ತಿದೆ. ಇದರಿಂದಲೂ 1,000ಕ್ಕೂ ಹೆಚ್ಚು ಗುಣಮಟ್ಟದ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಪಾಟೀಲ ನುಡಿದಿದ್ದಾರೆ.

ಈ ಹೂಡಿಕೆಯಿಂದ ಭಾರತೀಯ ಪೂರೈಕೆದಾರರು, ಎಂಜಿನಿಯರಿಂಗ್ ಕಂಪನಿಗಳು, ತಾಂತ್ರಿಕ ಸಹಭಾಗಿಗಳು, ಸಂಶೋಧನಾ ಸಂಸ್ಥೆಗಳು ಮತ್ತು ಸೆಮಿಕಂಡಕ್ಟರ್ ಪ್ರತಿಭೆಗಳಿಗೆ ಅನುಕೂಲವಾಗಲಿದೆ. ಅಪ್ಲೈಡ್ ಮೆಟೀರಿಯಲ್ಸ್ ತಯಾರಿಕಾ ಘಟಕಕ್ಕೂ ಇನ್ನು ಕೆಲವೇ ತಿಂಗಳುಗಳಲ್ಲಿ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಎರಡು ದಿನಗಳ ಸೆಮಿಕಾನ್ ಇಂಡಿಯಾ ಸಮಾವೇಶದಲ್ಲಿ ತಾವು ನೆದರ್ಲೆಂಡ್ಸ್ ದೇಶದ ನೆಕ್ಸ್ಪೀರಿಯಾ, ಜಪಾನಿನ ಟೋಕಿಯೋ ಎಲೆಕ್ಟ್ರಾನಿಕ್ಸ್ ಮತ್ತು ಫ್ಯೂಜಿ ಫಿಲಂ, ಸಿಮ್ರಾ ಎಸ್.ಜಿ.ಎಸ್, ಎಟಿ ಅಂಡ್ ಎಸ್, ಸಿ.ಜಿ.ಸೆಮಿ, ಎರಿಕ್ಸನ್ ಮುಂತಾದ ಕಂಪನಿಗಳೊಂದಿಗೂ ರಾಜ್ಯದಲ್ಲಿ ಬಂಡವಾಳ ಹೂಡುವಂತೆ ಮತ್ತು ತಯಾರಿಕಾ ಚಟುವಟಿಕೆ ಆರಂಭಿಸುವಂತೆ ಕೋರಿರುವುದಾಗಿ ಸಚಿವರು ಹೇಳಿದ್ದಾರೆ.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾರ್ಮಿಕರು, ರೈತರು ರಾಷ್ಟ್ರ ಸೇವೆ, ಅಭಿವೃದ್ಧಿಗೆ ಕಾರ್ಮಿಕರ ಕೊಡುಗೆ ಅಪಾರ: ಬಿಕೆ ಹರಿಪ್ರಸಾದ್ಪಿ.ಜಿ.ಆರ್. ಸಿಂಧ್ಯಾ ಯಾವುದೇ ಇಲಾಖೆ ನೀಡಿದರೂ ಸಮರ್ಥವಾಗಿ ನಿಭಾಯಿಸಿದ ಹಾರ್ಡ್ ವರ್ಕರ್‌ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ‘ನಂಬಿಕೆ ನಕ್ಷೆ 2.0’ ವ್ಯವಸ್ಥೆ ಲೋಕಾರ್ಪಣೆBWSSBಯಿಂದ ಸೆ.22ರಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ 1.5 ತಿಂಗಳಲ್ಲಿ 94 ಸಿ ಅರ್ಜಿದಾರರಿಗೆ ಹಕ್ಕುಪತ್ರ ವಿತರಿಸಿ: ಅಧಿಕಾರಿಗಳಿಗೆ ಕೆ. ಎಂ. ಶಿವಲಿಂಗೇಗೌಡ ಕಟ್ಟುನಿಟ್ಟಿನ ಸೂಚನೆರಾಜ್ಯಕ್ಕೆ ₹15 ಸಾವಿರ ಕೋಟಿ ಬಂಡವಾಳ ಹರಿವು ನಿಚ್ಚಳ: ಎಂ ಬಿ ಪಾಟೀಲಕಸ್ತೂರಿ ರಂಗನ್‌ ವರದಿಯ ಆತಂಕಕ್ಕೆ ಕೇಂದ್ರ ಸರ್ಕಾರವೇ ಕಾರಣ: ಸಚಿವ ಮಧು ಬಂಗಾರಪ್ಪ ವಾಗ್ದಾಳಿಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷರಾಗಿ ಶಿವಮೊಗ್ಗದ ಶಾಂತವೀರ ನಾಯ್ಕ ನೇಮಕUPI ಡಿಜಿಟಲ್  ಮೇಲಿನ ಹೆಚ್ಚುವರಿ ಶುಲ್ಕದ ಪ್ರಸ್ತಾವನೆಯನ್ನು ಹಿಂಪಡೆಯಬೇಕು: ಮನೋಹರ್ಶೀಘ್ರದಲ್ಲೇ ಅರಸೀಕೆರೆ ಮಂದಿ ಎತ್ತಿನಹೊಳೆ ನೀರು ನೋಡಲಿದ್ದಾರೆ: ಕೆ.ಎಂ. ಶಿವಲಿಂಗೇಗೌಡ ಆಶಾಭಾವ