LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶೀಘ್ರದಲ್ಲೇ ಅರಸೀಕೆರೆ ಮಂದಿ ಎತ್ತಿನಹೊಳೆ ನೀರು ನೋಡಲಿದ್ದಾರೆ: ಕೆ.ಎಂ. ಶಿವಲಿಂಗೇಗೌಡ ಆಶಾಭಾವ

ಹಾಸನ :  ನೂರು ದಿನದಲ್ಲಿ ತುಮಕೂರಿಗೆ ಎತ್ತಿನಹೊಳೆ ನೀರು ಹರಿಸುವ ಗುರಿಯಿದೆ. ಹಾಗಾಗಿ ಶೀಘ್ರದಲ್ಲೇ ತಾಲ್ಲೂಕಿನ ಜನತೆ ನದಿ ನೀರನ್ನು ನೋಡುವ ದಿನಗಳು ಬರಲಿವೆ. ಕುಡಿಯುವ ನೀರು ಸಿಗಲಿದೆ, ಕೆರೆಗಳು ತುಂಬಲಿವೆ, ಅಂತರ್ಜಲ ವೃದ್ಧಿಸಿ ಕೊಳವೆಬಾವಿಗಳಲ್ಲಿ ನೀರು ಸಿಗಲಿದೆ ಎಂದು ಅಬಕಾರಿ ಸಚಿವರು, ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಸೀಕೆರೆ ಶಾಸಕರಾದ ಕೆ. ಎಂ. ಶಿವಲಿಂಗೇಗೌಡ ಅವರು ಆಶಾಭಾವ ವ್ಯಕ್ತಪಡಿಸಿದರು.news_1789754962_1_612.webp

ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ತಳಲುತೊರೆಯಲ್ಲಿ ನಿರ್ಮಾಣವಾಗುತ್ತಿರುವ ಎತ್ತಿನಹೊಳೆ ಯೋಜನೆ ಗುರುತ್ವ ಕಾಲುವೆ ಪ್ಯಾಕೇಜ್-8ರ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು. ಯಾವುದೇ ಕಾರಣಕ್ಕೂ ಕಾಮಗಾರಿ ವಿಳಂಬವಾಗಬಾರದು. ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ನದಿ ನೀರಿನ ಹರಿವಿಗೆ ಅವಕಾಶ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಳಿಕ ಗ್ರಾಮದ ಶ್ರೀರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ತಳಲುತೊರೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. news_1789754961_0_527.webp

ಜಲಸಂಪನ್ಮೂಲ ಸಚಿವರಾದ ಎನ್. ಚಲುವರಾಯಸ್ವಾಮಿ, ಜಿಲ್ಲಾಧಿಕಾರಿ ಗೀತಾಕುಮಾರಿ, ಮಾಜಿ ಎಂಎಲ್ಸಿ ಗೋಪಾಲಕೃಷ್ಣ, ಸ್ಥಳೀಯ ಮುಖಂಡರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷರಾಗಿ ಶಿವಮೊಗ್ಗದ ಶಾಂತವೀರ ನಾಯ್ಕ ನೇಮಕUPI ಡಿಜಿಟಲ್  ಮೇಲಿನ ಹೆಚ್ಚುವರಿ ಶುಲ್ಕದ ಪ್ರಸ್ತಾವನೆಯನ್ನು ಹಿಂಪಡೆಯಬೇಕು: ಮನೋಹರ್ಶೀಘ್ರದಲ್ಲೇ ಅರಸೀಕೆರೆ ಮಂದಿ ಎತ್ತಿನಹೊಳೆ ನೀರು ನೋಡಲಿದ್ದಾರೆ: ಕೆ.ಎಂ. ಶಿವಲಿಂಗೇಗೌಡ ಆಶಾಭಾವಕುಡಿಯುವ ನೀರಿಗೆ ಸಂಬಂಧಿಸಿದ ಕಾಮಗಾರಿಗಳು ಸಮರೋಪಾದಿಯಲ್ಲಿ ಪೂರ್ಣಗೊಳಿಸಬೇಕು: ಕೆ. ಎಂ. ಶಿವಲಿಂಗೇಗೌಡನಿಗದಿತ ವೇಳೆಗಿಂತ ಮೊದಲೇ ತೆರೆಯುತ್ತಿರುವ ಮದ್ಯದಂಗಡಿಗಳ ವಿರುದ್ಧ ಕಠಿಣ ಕ್ರಮ ವಹಿಸಿ: ಕೆ. ಎಂ. ಶಿವಲಿಂಗೇಗೌಡಸ್ಯಾಮ್ಸಂಗ್, ಎರಿಕ್ಸನ್ ಸೇರಿ ಹಲವು ಕಂಪನಿಗಳೊಂದಿಗೆ ಹೂಡಿಕೆ ಮಾತುಕತೆರಾಜ್ಯದಲ್ಲಿ ಹೆಚ್ಚಿನ ಹೂಡಿಕೆ, ಉತ್ಪಾದನಾ ಚಟುವಟಿಕೆ ಆರಂಭ ಕೇಂದ್ರೀಕರಿಸಿ ವಿಚಾರ ವಿನಿಮಯIIPM ಬೆಂಗಳೂರಿನ 21ನೇ ಘಟಿಕೋತ್ಸವ: 343 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ಪ್ರದಾನಹಿರಿಯ ನಟ ಅನಂತನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ: ಸಚಿವ  ವಿಜಯಾನಂದ ಕಾಶಪ್ಪನವರ್ ಅಭಿನಂದನೆದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದ ಅನಂತ್ ನಾಗ್ ಅವರನ್ನು ಅಭಿನಂದಿಸಿದ ಹೆಚ್.ಡಿ. ಕುಮಾರಸ್ವಾಮಿ