LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

UPI ಡಿಜಿಟಲ್  ಮೇಲಿನ ಹೆಚ್ಚುವರಿ ಶುಲ್ಕದ ಪ್ರಸ್ತಾವನೆಯನ್ನು ಹಿಂಪಡೆಯಬೇಕು: ಮನೋಹರ್

ಬೆಂಗಳೂರು: UPI ಡಿಜಿಟಲ್  ಮೇಲಿನ ಹೆಚ್ಚುವರಿ ಶುಲ್ಕದ ಪ್ರಸ್ತಾವನೆಯನ್ನು ಹಿಂಪಡೆಯಬೇಕು ಹಾಗೂ ದೇಶದ ಜನರ ಹಣ ಲೂಟಿ ಮಾಡುವುದನ್ನು ಕೂಡಲೇ  ಪ್ರಧಾನಿ ಶ್ರೀ ನರೇಂದ್ರ ಮೋದಿಗಳೇ, ಕೈ ಬಿಡಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್ ಮನೋಹರ್ ತಿಳಿಸಿದರು.news_1789755675_0_190.webp

ಬೆಂಗಳೂರಿನ ಕಾಂಗ್ರೆಸ್ ಭವನದ ಮುಂದೆ ಕೇಂದ್ರದ ವಿರುದ್ದ ಪ್ರತಿಭಟನೆ ಮಾಡಿ ಮಾತನಾಡಿದ ಅವರು, ಅಕ್ಟೋಬರ್ 15ರಿಂದ ₹2,000ಕ್ಕಿಂತ ಹೆಚ್ಚಿನ UPI ವಹಿವಾಟುಗಳ ಮೇಲೆ 0.4% MDR ಶುಲ್ಕ ವಿಧಿಸುವ ಪ್ರಸ್ತಾವನೆ ಕುರಿತು ಸಾರ್ವಜನಿಕರಲ್ಲಿ ಆತಂಕ ಮೂಡಿದೆ. UPI ಇಂದು ಸಾಮಾನ್ಯ ಜನರು, ಸಣ್ಣ ವ್ಯಾಪಾರಿಗಳು, ಉದ್ಯೋಗಿಗಳು ಹಾಗೂ ಮಧ್ಯಮ ವರ್ಗದವರು ವ್ಯಾಪಕವಾಗಿ ಬಳಸುತ್ತಿರುವ ಡಿಜಿಟಲ್ ಪಾವತಿ ಹಣದ  ವ್ಯವಸ್ಥೆಯಾಗಿದೆ.

ಈಗಾಗಲೇ ಡಿಜಿಟಲ್ ಪಾವತಿಗಳು ಜನರ ದೈನಂದಿನ ಜೀವನದ ಅವಿಭಾಜ್ಯ ಭಾಗವಾಗಿರುವ ಸಂದರ್ಭದಲ್ಲಿ, ಅದರ ಮೇಲೆ ಹೆಚ್ಚುವರಿ ಶುಲ್ಕ ವಿಧಿಸುವ ಯಾವುದೇ ಕ್ರಮವು ಸಾಮಾನ್ಯ ಜನರು ಮತ್ತು ಸಣ್ಣ ವ್ಯಾಪಾರಿಗಳ ಮೇಲೆ ಮತ್ತೊಂದು ಇದು ಆರ್ಥಿಕ ಹೊರೆಯಾಗಲಿದೆ ಹಾಗೂ 
ಕೇಂದ್ರ ಸರ್ಕಾರ ನಡೆಸುತ್ತಿರುವ ದಬ್ಬಾಳಿಕೆಯು ಆಗಿದೆ,

₹2,000ಕ್ಕಿಂತ ಹೆಚ್ಚಿನ ಪ್ರತಿಯೊಂದು ವಹಿವಾಟಿಗೂ ಶುಲ್ಕ ವಿಧಿಸುವ ಪ್ರಸ್ತಾವನೆಯಿಂದ ದಿನನಿತ್ಯದ ವ್ಯವಹಾರಗಳಲ್ಲಿ ಹೆಚ್ಚುವರಿ ವೆಚ್ಚ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಕೇಂದ್ರ ಸರ್ಕಾರವು ಈ ಪ್ರಸ್ತಾವನೆ ಕುರಿತು ಸ್ಪಷ್ಟನೆ ನೀಡಬೇಕು ಮತ್ತು ಜನಸಾಮಾನ್ಯರ ಮೇಲೆ ಹೆಚ್ಚುವರಿ ಹೊರೆ ಬೀಳದಂತೆ ಕ್ರಮ ಕೈಗೊಳ್ಳಬೇಕು.news_1789755904_0_681.webp

ಬೆಲೆ ಏರಿಕೆಯಿಂದ ಈಗಾಗಲೇ ಜನಸಾಮಾನ್ಯರ ಬದುಕು ದುಸ್ತರ ಆಗಿದೆ  ನರೇಂದ್ರ ಮೋದಿ ರವರ ಆಡಳಿತದಲ್ಲಿ ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ,

ಒಂದೆಡೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ  ಆಹಾರ, ಸಾರಿಗೆ ಮತ್ತು ಕುಟುಂಬದ ಖರ್ಚುಗಳನ್ನು ನಿರ್ವಹಿಸುವುದು ಸಾಮಾನ್ಯ ಕುಟುಂಬಗಳಿಗೆ ಸವಾಲಾಗಿರುವ ಸಂದರ್ಭದಲ್ಲಿ, ಮತ್ತೊಂದೆಡೆ ಡಿಜಿಟಲ್ ಪಾವತಿಗಳ ಮೇಲೂ ಹೆಚ್ಚುವರಿ ಶುಲ್ಕ ವಿಧಿಸುವ ಪ್ರಸ್ತಾವನೆ ಜನರ ಮೇಲಿನ ಆರ್ಥಿಕ ಒತ್ತಡವನ್ನು ಮತ್ತಷ್ಟು ಹೆಚ್ಚಿಸುವ ಆತಂಕ ಮೂಡಿಸಿದೆ.
ಸಾಮಾನ್ಯ ಜನರ ಆದಾಯಕ್ಕೆ ಅನುಗುಣವಾಗಿ ಖರ್ಚು ನಿರ್ವಹಿಸುವುದು ದಿನದಿಂದ ದಿನಕ್ಕೆ ಕಷ್ಟವಾಗುತ್ತಿರುವ ಸಂದರ್ಭದಲ್ಲಿ, ಕೇಂದ್ರ ಬಿಜೆಪಿ ಸರ್ಕಾರದ ನೀತಿಗಳು ಜನರ ಮೇಲಿನ ಹೊರೆಯನ್ನು ಕಡಿಮೆ ಮಾಡುವ ಬದಲು ಹೆಚ್ಚು ಮಾಡುತ್ತಿದೆ 
 ಹೊಸ ಹೊಸ ಶುಲ್ಕಗಳ ಮೂಲಕ ಹೆಚ್ಚುವರಿ ಹೊರೆ 
ಜನಸಾಮಾನ್ಯರ ಮೇಲೆ ತೆರಿಗೆಗಳನ್ನು ವಿಧಿಸುತ್ತಿದೆ,
 ಅಮೆರಿಕ ಅಧ್ಯಕ್ಷ ಟ್ರಂಪ್ ಒತ್ತಡಕ್ಕೆ ಭಯಪಡುವ ನರೇಂದ್ರ ಮೋದಿ ದೇಶದ ಜನರ ಹಿತ ಕಾಪಾಡದೇ ವಿದೇಶದ ನೀತಿಗಳಿಗೆ ಮಣಿಯುತ್ತಿದೆ ಕೂಡಲೆ ಈ ನಿಮ್ಮ ನಿರ್ಧಾರವನ್ನ  ಹಿಂಪಡೆಯಬೇಕು,
ದೇಶದ ಜನರ ಆರ್ಥಿಕ ಹೊರೆಯನ್ನು ಇಳಿಸಬೇಕೆಂದು ಈ ಪ್ರತಿಭಟನೆಯ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರವಿತ್ತ ಸಚಿವರಾದ ಶ್ರೀಮತಿ ನಿರ್ಮಲ ಸೀತಾರಾಮನ್ ರವರನ್ನು ಆಗ್ರಹ  ಪಡಿಸಲಾಯಿತು,
 ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್ ಮನೋಹರ್ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಎ. ಆನಂದ್, ಜಿ ಪ್ರಕಾಶ್, ಲಕ್ಷ್ಮಿನಾರಾಯಣ್, ಉಮೇಶ್, ಆನಂದ್ , ಪುಟ್ಟರಾಜು , ಚಂದ್ರಶೇಖರ್, ಕುಶಾಲ್ ಹರವೇಗೌಡ, ರಂಜೀತ್ ಕುಮಾರ್ ಮಾಧವಹನೂರು, ಪ್ರವೀಣ್ ರಾವ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದರು‌.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷರಾಗಿ ಶಿವಮೊಗ್ಗದ ಶಾಂತವೀರ ನಾಯ್ಕ ನೇಮಕUPI ಡಿಜಿಟಲ್  ಮೇಲಿನ ಹೆಚ್ಚುವರಿ ಶುಲ್ಕದ ಪ್ರಸ್ತಾವನೆಯನ್ನು ಹಿಂಪಡೆಯಬೇಕು: ಮನೋಹರ್ಶೀಘ್ರದಲ್ಲೇ ಅರಸೀಕೆರೆ ಮಂದಿ ಎತ್ತಿನಹೊಳೆ ನೀರು ನೋಡಲಿದ್ದಾರೆ: ಕೆ.ಎಂ. ಶಿವಲಿಂಗೇಗೌಡ ಆಶಾಭಾವಕುಡಿಯುವ ನೀರಿಗೆ ಸಂಬಂಧಿಸಿದ ಕಾಮಗಾರಿಗಳು ಸಮರೋಪಾದಿಯಲ್ಲಿ ಪೂರ್ಣಗೊಳಿಸಬೇಕು: ಕೆ. ಎಂ. ಶಿವಲಿಂಗೇಗೌಡನಿಗದಿತ ವೇಳೆಗಿಂತ ಮೊದಲೇ ತೆರೆಯುತ್ತಿರುವ ಮದ್ಯದಂಗಡಿಗಳ ವಿರುದ್ಧ ಕಠಿಣ ಕ್ರಮ ವಹಿಸಿ: ಕೆ. ಎಂ. ಶಿವಲಿಂಗೇಗೌಡಸ್ಯಾಮ್ಸಂಗ್, ಎರಿಕ್ಸನ್ ಸೇರಿ ಹಲವು ಕಂಪನಿಗಳೊಂದಿಗೆ ಹೂಡಿಕೆ ಮಾತುಕತೆರಾಜ್ಯದಲ್ಲಿ ಹೆಚ್ಚಿನ ಹೂಡಿಕೆ, ಉತ್ಪಾದನಾ ಚಟುವಟಿಕೆ ಆರಂಭ ಕೇಂದ್ರೀಕರಿಸಿ ವಿಚಾರ ವಿನಿಮಯIIPM ಬೆಂಗಳೂರಿನ 21ನೇ ಘಟಿಕೋತ್ಸವ: 343 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ಪ್ರದಾನಹಿರಿಯ ನಟ ಅನಂತನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ: ಸಚಿವ  ವಿಜಯಾನಂದ ಕಾಶಪ್ಪನವರ್ ಅಭಿನಂದನೆದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದ ಅನಂತ್ ನಾಗ್ ಅವರನ್ನು ಅಭಿನಂದಿಸಿದ ಹೆಚ್.ಡಿ. ಕುಮಾರಸ್ವಾಮಿ