LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

3 ವರ್ಷದಲ್ಲಿ 1,24,10,668 ಮಹಿಳೆಯರಿಗೆ ತಲಾ 60,000 ರೂ. ಗೃಹಲಕ್ಷ್ಮಿ ಪಾವತಿ

ಗೃಹಲಕ್ಷ್ಮಿ ಯೋಜನೆಯ 30ನೇ ಕಂತು ಬಿಡುಗಡೆ, 3 ವರ್ಷದಲ್ಲಿ 1,24,10,668 ಮಹಿಳೆಯರಿಗೆ ತಲಾ 60,000 ರೂ. ಗೃಹಲಕ್ಷ್ಮಿ ಪಾವತಿ, ನುಡಿದಂತೆ ನಡೆಯುತ್ತಿರುವ ಸಿಎಂ, ಡಿಸಿಎಂ, ಫಲಾನುಭವಿಗಳ ಪರವಾಗಿ ಸರ್ಕಾರಕ್ಕೆ ದಿನೇಶ್ ಗೂಳಿಗೌಡ ಧನ್ಯವಾದ

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ “ಗೃಹಲಕ್ಷ್ಮಿ” ಯೋಜನೆಯ 30ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕ ರಾಜ್ಯದ 1,24,10,668 ಮಹಿಳೆಯರಿಗೆ ತಲಾ 60,000 ರೂ. ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಹಾಕುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಮನೆಯ ಯಜಮಾನಿಯರಿಗೆ ಪ್ರತಿ ತಿಂಗಳು 2000 ರೂ.ಗಳಂತೆ ಕಳೆದ ಮೂರು ವರ್ಷದಲ್ಲಿ 60,000 ರೂ.ಗಳನ್ನು ಯಾವುದೇ ಭ್ರಷ್ಟಾಚಾರ, ಕಮಿಷನ್ ಇಲ್ಲದೇ ಡಿಬಿಟಿ ಮೂಲಕ ನೇರವಾಗಿ ಫಲಾನುಭವಿಗಳಿಗೆ ತಲುಪಿಸುತ್ತಿದೆ. ರಾಜ್ಯ ಗೃಹಲಕ್ಷ್ಮಿಯರ ಪರವಾಗಿ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.news_1779114349_0_845.webp
ಗೃಹಲಕ್ಷ್ಮಿ ಹಣ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹೆಚ್ಚಿಸಲು ಸಹಕಾರಿಯಾಗಿದೆ. ಕುಟುಂಬದ ದಿನನಿತ್ಯದ ಖರ್ಚು, ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಆಹಾರ ವೆಚ್ಚಗಳಿಗೆ ನೆರವಾಗುತ್ತಿದೆ. ಗ್ರಾಮೀಣ ಹಾಗೂ ಬಡ ಕುಟುಂಬಗಳ ಜೀವನಮಟ್ಟ ಸುಧಾರಣೆಗೆ ಸಹಾಯವಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ, ಮೌಲ್ಯವರ್ಧನೆಗೆ ಒತ್ತು: ಸಚಿವ ಚಲುವರಾಯಸ್ವಾಮಿಕಾರ್ಪೊರೇಟ್ ಜಿಹಾದ್ : ಮಿಥ್ಯ ಮತ್ತು ವಾಸ್ತವ’ ಕುರಿತು ವಿಶೇಷ ಸಂವಾದ ಯಶಸ್ವಿ3 ವರ್ಷದಲ್ಲಿ 1,24,10,668 ಮಹಿಳೆಯರಿಗೆ ತಲಾ 60,000 ರೂ. ಗೃಹಲಕ್ಷ್ಮಿ ಪಾವತಿಕೇರಳಂ ಸಿಎಂ ಆಗಿ ವಿಡಿ ಸತೀಶನ ಪ್ರಮಾಣವಚನಕರ್ನಾಟಕ ರಾಜ್ಯ ಒಪ್ಪರ ಸಂಘದ ಕಾರ್ಯವೈಕರಿ ಬಗ್ಗೆ ಅಸಮಾಧಾನಮೇ 21ರಂದು ಕೇಂದ್ರ ಸರ್ಕಾರ ಆಡಳಿತ ವೈಫಲ್ಯ ಖಂಡಿಸಿ ಬೃಹತ್ ಪ್ರತಿಭಟನೆ, ರಾಜಭವನ ಚಲೋಬಿಡದಿ ರೈತರ ಪರ ನನ್ನ ಹೋರಾಟ  ಆರಂಭ; ಹೆಚ್.ಡಿ. ದೇವೇಗೌಡರ ಘೋಷಣೆ ಬೆಂ.ಮ.ಸಾ.ಸಂಸ್ಥೆ ನೌಕರರಿಗೆ ವೇತನ ಪರಿಷ್ಕರಣೆಯ ಹಿಂಬಾಕಿ ಮೊತ್ತ ಪಾವತಿಹಟ್ಟಿ ಚಿನ್ನದ ಗಡಿಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ನಿಹಾಳ ಲಾಭ ಹೆಚ್ಚಳ :ಸಿಎಂ ಅಭಿನಂದನೆಕನಕದಾಸರು ಸಾಮಾಜಿಕ ಅವ್ಯವಸ್ಥೆ ಸರಿಮಾಡಲು ಪ್ರಾಮಾಣಿಕ ಪ್ರಯತ್ನದಿಂದ ವಿಶ್ವಮಾನವರಾಗಿ ಕಾಣಬೇಕು: ಸಿಎಂ ಸಿದ್ದರಾಮಯ್ಯ