LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಂಕಿ-ಅಂಶಗಳ ಬಜೆಟ್‌, ದಿಕ್ಕು ದಿಸೆಯಿಲ್ಲದ ಆಯವ್ಯಯ’: ಅರವಿಂದ ಬೆಲ್ಲದ

ಬೆಂಗಳೂರು: ರಾಜ್ಯದ ಪ್ರಸಕ್ತ ಆಯವ್ಯಯವು ಯೋಜನೆಗಳಿಲ್ಲದ, ದಿಸೆ ತೋರದ ಅಂಕಿ-ಅಂಶಗಳ ಸಮೂಹವಾಗಿದ್ದು, ಇದು ಕನ್ನಡಿಗರ ಭವಿಷ್ಯಕ್ಕೆ “ಆರ್ಥಿಕ ಮರಣ ಶಾಸನ”ವಾಗಲಿದೆ ಎಂದು ವಿಧಾನಸಭೆಯ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಕಿಡಿಕಾರಿದರು.

ವಿಧಾನಸಭೆಯಲ್ಲಿ ಬುಧವಾರ ಬಜೆಟ್‌ ಕುರಿತು ಮಾತನಾಡಿದ ಅವರು, “ರಾಜ್ಯದ ಆಯವ್ಯಯವು ಕೇವಲ ಅಂಕಿ-ಸಂಖ್ಯೆಗಳ ನಿರ್ಜೀವ ಪ್ರದರ್ಶನವಲ್ಲ; 7 ಕೋಟಿ ಜನರ ಬದುಕಿನ ಭರವಸೆಯ ದಿಕ್ಕು ತೋರಿಸಬೇಕು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 17ನೇ ಬಜೆಟ್‌ನಲ್ಲಿ ದಿಕ್ಕು ತೋರಿಸುವ ದೃಷ್ಟಿಕೋನವೇ ಕಾಣುತ್ತಿಲ್ಲ” ಎಂದು ಟೀಕಿಸಿದರು.
‘ಇದು ಬಜೆಟ್ ಅಲ್ಲ, ಸಾಲದ ಹೇಳಿಕೆ’
ವಸತಿ, ಶಿಕ್ಷಣ, ಕೃಷಿ, ನೀರಾವರಿ, ಕೈಗಾರಿಕೆ, ಆರೋಗ್ಯ ಸೇರಿದಂತೆ ಎಲ್ಲಾ ಕ್ಷೇತ್ರಗಳ ಕುರಿತು ಅಂಕಿ-ಅಂಶಗಳನ್ನು ನೀಡಿದರೂ, ಒಟ್ಟಾರೆ ಈ ಬಜೆಟ್‌ ಅಭಿವೃದ್ಧಿಗೆ ದಾರಿ ತೋರಿಸುವುದಿಲ್ಲ ಎಂದು ಹೇಳಿದರು.

“ಇದು ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆಯೇ, ಅಥವಾ ಸಾಲದ ಕೂಪಕ್ಕೆ ತಳ್ಳುತ್ತದೆಯೇ?” ಎಂದು ಪ್ರಶ್ನಿಸಿದರು.
“ಕಾಂಗ್ರೆಸ್ಸಿಗರ ಪಾಲಿಗೆ ಅಕ್ಷಯ ಪಾತ್ರೆಯಾದರೆ, ಜನರ ಪಾಲಿಗೆ ಖಾಲಿ ಚೊಂಬು” ಎಂದರು.
ವಸತಿ ಯೋಜನೆ: ಅಂಕಿ-ಅಂಶಗಳಲ್ಲಿ ವ್ಯತ್ಯಾಸ
ಪಿಎಂಎವೈ ಯೋಜನೆಯಡಿಯಲ್ಲಿ 7.03 ಲಕ್ಷ ಮನೆಗಳ ಗುರಿ ಇಟ್ಟಿದ್ದರೂ, 3.13 ಲಕ್ಷ ಮನೆಗಳಷ್ಟೇ ಮಂಜೂರಾಗಿದ್ದು, ಕೇವಲ 9,757 ಮನೆಗಳು ನಿರ್ಮಾಣವಾಗಿವೆ ಎಂದು ಆರೋಪಿಸಿದರು. 4.19 ಲಕ್ಷ ಮನೆಗಳಿಗೆ ₹13,500 ಕೋಟಿ ಅಗತ್ಯವಿದ್ದರೂ, ಬಜೆಟ್‌ನಲ್ಲಿ ಸಮರ್ಪಕ ಅನುದಾನ ಇಲ್ಲ ಎಂದು ಹೇಳಿದರು.

ಶಿಕ್ಷಣ: ಘೋಷಣೆಗಳಷ್ಟೇ, ಅನುಷ್ಠಾನ ಶೂನ್ಯ
ಕಳೆದ ಬಜೆಟ್‌ನಲ್ಲಿ 500 ಹೊಸ ಕೆಪಿಎಸ್‌ ಶಾಲೆಗಳ ಘೋಷಣೆ ಮಾಡಲಾಗಿದ್ದರೂ, ಒಂದೂ ಶಾಲೆ ಆರಂಭವಾಗಿಲ್ಲ ಎಂದು ಆರೋಪಿಸಿದರು. “ಗುಣಮಟ್ಟದ ಶಿಕ್ಷಣ, ಉದ್ಯೋಗಮುಖಿ ತರಬೇತಿಗೆ ಸ್ಪಷ್ಟ ಯೋಜನೆ ಕಾಣುತ್ತಿಲ್ಲ” ಎಂದು ಹೇಳಿದರು.

ಕೃಷಿ ಮತ್ತು ನೀರಾವರಿ: ಅಲ್ಪ ಅನುದಾನ, ದೊಡ್ಡ ಸಮಸ್ಯೆ
ಅಡಿಕೆ ಬೆಳೆಗೆ ಬಂದಿರುವ ರೋಗಕ್ಕೆ ₹500 ಕೋಟಿ ವಿಶೇಷ ಪ್ಯಾಕೇಜ್‌ ಅಗತ್ಯವಿದ್ದರೂ, ಕೇವಲ ₹10 ಕೋಟಿ ಮೀಸಲು ಮಾಡಿರುವುದನ್ನು ತೀವ್ರವಾಗಿ ವಿರೋಧಿಸಿದರು.
ಕೃಷ್ಣಾ ಮೇಲ್ದಂಡೆ, ಮಹಾದಾಯಿ ಹಾಗೂ ಮೇಕೆದಾಟು ಯೋಜನೆಗಳಿಗೆ ತಕ್ಕ ಮಟ್ಟಿನ ಅನುದಾನ ನೀಡಿಲ್ಲ ಎಂದರು.

ಉದ್ಯೋಗ: ಬೆಂಗಳೂರು ಕೇಂದ್ರೀಕರಣ
ರಾಜ್ಯದಲ್ಲಿ 77 ಲಕ್ಷಕ್ಕೂ ಹೆಚ್ಚು ಇಪಿಎಫ್‌ ಖಾತೆದಾರರಲ್ಲಿ 78% ಮಂದಿ ಬೆಂಗಳೂರಿನವರೇ ಎಂದು ಹೇಳಿ, ಉತ್ತರ ಹಾಗೂ ಕಲ್ಯಾಣ ಕರ್ನಾಟಕದ ನಿರ್ಲಕ್ಷ್ಯವನ್ನು ಎತ್ತಿಹಿಡಿದರು.

ಯುವ ನಿಧಿ ಯೋಜನೆಗೂ ಸಮರ್ಪಕ ಹಣ ನೀಡಿಲ್ಲ ಎಂದು ಆರೋಪಿಸಿದರು.ಕೈಗಾರಿಕೆ: ಕಂಪನಿಗಳ ನಿರ್ಗಮನ

ಮೂಲಸೌಕರ್ಯಗಳ ಕೊರತೆಯಿಂದ 629 ಕಂಪನಿಗಳು ರಾಜ್ಯ ಬಿಟ್ಟಿದ್ದು, ಉದ್ಯೋಗ ಸೃಷ್ಟಿಯಲ್ಲೂ ಸರ್ಕಾರ ವಿಫಲವಾಗಿದೆ ಎಂದು ಹೇಳಿದರು.
56,000 ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಚನಗಳ ಮೂಲಕ ವ್ಯಂಗ್ಯ
“ಊರಿಲ್ಲದ ಊರಿಗೆ ಒಬ್ಬನೇ ಮುಖಂಡನಂತೆ,
ಹಣವಿಲ್ಲದ ಬಜೆಟ್ಟಿಗೆ ನೂರಾರು ಭರವಸೆಗಳಂತೆ;
ಅಭಿವೃದ್ಧಿಯ ಹಾದಿ ತಪ್ಪಿದ ಆಯವ್ಯಯ,
ಮೊಸರಿನಲ್ಲಿ ಕಲ್ಲು ಹುಡುಕಿದಂತಿದೆ…”
“ಕೈಲಾಗದವನಿಗೆ ಕಡವೇ ಸಾಕ್ಷಿ ಎಂಬಂತೆ,
ಗ್ಯಾರಂಟಿಗಳಿಗೆ ಸಾಲವೇ ಆಧಾರವಾದರೆ,
ಮುಂದಿನ ಪೀಳಿಗೆಯ ಭವಿಷ್ಯ ಮಣ್ಣಾಗುವುದೇ…”

ಬಜೆಟ್ ಸಾರಾಂಶ:
“ಬಜೆಟ್‌ ಗಾತ್ರ ಮಾತ್ರ ಹೆಚ್ಚಾಗಿದೆ, ಅಭಿವೃದ್ಧಿ ಕಾಣುತ್ತಿಲ್ಲ. ಭರವಸೆಗಳ ಬಣ್ಣದ ಮಾತುಗಳಿಂದ ಜನರನ್ನು ಮೋಸಗೊಳಿಸುವ ಬದಲು, ನೈಜ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಆದ್ಯತೆ ನೀಡಬೇಕು” ಎಂದು ಬೆಲ್ಲದ ಒತ್ತಾಯಿಸಿದರು.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ