ಬೆಂಗಳೂರು: ರಾಜ್ಯ ಜೂನಿಯರ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್ ಬಾಲಕ ಬಾಲಕೀಯರ ಪಂದ್ಯಾವಳಿ ಇತ್ತೀಚೆಗೆ ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಡಿವೈಇಎಸ್ ಸ್ಪೋರ್ಟ್ಸ್ ಹಾಸ್ಟೆಲ್ ಬಾಲಕಿಯರ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಅಂತಿನ ಆಟದಲ್ಲಿ ನಡೆದ ಹಣಾಹಣಿಯಲ್ಲಿ ಡಿವೈಇಎಸ್ ಸ್ಪೋರ್ಟ್ಸ್ ಹಾಸ್ಟೆಲ್ ಬಾಲಕಿಯರ ತಂಡ ಫೈನಲ್‌ನಲ್ಲಿ ಚಾಂಪಿಯನ್‌ಶಿಪ್ ಗೆದ್ದುಕೊಂಡಿತು. ಡಿವೈಇಎಸ್ ಸ್ಪೋರ್ಟ್ಸ್ ಹಾಸ್ಟೆಲ್ ತಂಡವು ಬೆಂಗಳೂರು ವ್ಯಾನ್‌ಗಾರ್ಡ್ಸ್ ತಂಡವನ್ನು 77-74 ಅಂಕಗಳಿಂದ ಸೋಲಿಸಿತು.
ಶ್ರೀ ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್‌ಬಾಲ್ ಕೋರ್ಟ್‌ಗಳಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ, ಎಂಎಲ್‌ಸಿ ಮತ್ತು ಎಫ್‌ಐಬಿಎ ಏಷ್ಯಾ ಮತ್ತು KOA ಅಧ್ಯಕ್ಷರಾದ ಡಾ.ಕೆ.ಗೋವಿಂದರಾಜ್ ಅವರು ಪಂದ್ಯದಲ್ಲಿ ವಿಜೇತರಿಗೆ ಬಹುಮಾನಗಳನ್ನು ನೀಡಿದರು.