ಬೆಂಗಳೂರು: ದಲಿತರ,ಹಿಂದುಳಿದ,ಶೊಷಿತ ವರ್ಗದವರ ಆಶಾಕಿರಣ ಪ್ರೊ.ಬಿ ಕೃಷ್ಣಪ್ಪ ಅವರ ಸ್ಮರಣೆಯನ್ನು ನಾಡಿನ ವಿವಿಧೆಡೆ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 142ನೇ ಜಯಂತೋತ್ಸವ, ಕೆಂಚಯ್ಯ ಅವರ 52ನೇ ಹುಟ್ಟುಹಬ್ಬದ ಆಚರಣೆ, ದಲಿತ ಚಳುವಳಿ ಡಾ.ಎಂ ನಾಗೇಶ್ ಅವರ 44ನೆ ಹುಟ್ಟುಹಬ್ಬದ ನಿಮಿತ್ತ ಸಮಾನತೆಯ ಸಮಾವೇಶವನ್ನು ನಗರದ ಟೌನ್ ಹಾಲ್ ನ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಅದ್ದೂರಿಯಾಗಿ ಮಾಡಲಾಯಿತು.
ದಲಿತ ಸಮುದಾಯಕ್ಕೆ ಆಗಿರುವ ಅನ್ಯಾಯಕ್ಕೆ ನ್ಯಾಯವನ್ನು ಒದಗಿಸುವ,ಸಂವಿಧಾನ ಬದ್ದ ಹಕ್ಕುಗಳನ್ನು ದಲಿತರು ಪಡೆಯುವ, ಕಾನೂನು ಅರಿವು,ಸಂವಿಧಾನ ಶಿಲ್ಫಿ ಡಾ.ಬಾಬಾ ಸಾಹೇಬ್ ಭೀಮ ರಾವ್ ಅಂಬೇಡ್ಕರ್ ವಿಚಾರದಾರೆಗಳನ್ನು ಸಮುದಾಯದ ಜನರಿಗೆ ತಿಳಿಸುವ ಕೆಲಸವನ್ನು ಜೀವನದ ಉದ್ದಕ್ಕೂ ಮಾಡಿಕೊಂಡು ಬಂದಿದ್ದಾರೆ.
ಕೃಷ್ಣಪ್ಪ ಅವರು ಬದುಕಿದ್ದಾಗ ದಲಿತರ ಒಳತಿಗೆ ಸಾಕಷ್ಟು ಹೋರಾಟಗಳನ್ನು ಮಾಡಿ ಸರ್ಕಾರದಿಂದ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಅನೇಕ ದಲಿತ ಪರ ಹೋರಾಟಗಾರರು ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ದಲಿತ ಸಂಘರ್ಷ ಸಮಿತಿ ಸ್ಥಾಪಿಸಿದ್ದು ಪ್ರೊ.ಬಿ ಕೃಷ್ಣಪ್ಪನವರು ಮೊದಲ ಭಾರಿಗೆ. ತದಂತರ ಇದೀಗ ನೂರಾರು ದಲಿತ ಪರ ಸಂಘಟನೆಗಳು ಹುಟ್ಟಿಕೊಂಡಿವೆ.
ಕಾರ್ಯಕ್ರಮಕ್ಕೆ ಶಾಸಕ ಎನ್ ಮಹೇಶ್, ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಕಳೆದ 30 ವರ್ಷಗಳಿಂದ ದಲಿತರ ಹಕ್ಕಿಗಳಿಗಾಗಿ ದಲಿತ ಸಮುದಾಯದವರು ಹೋರಾಡುತ್ತಾ ಬರುತ್ತಿದ್ದಾರೆ. ಆದರೆ ಸಾಮಾಜಿಕ ನ್ಯಾಯ ಮಾತ್ರ ಸಿಕ್ಕಿಲ್ಲ. ಕೇವಲ ಮತ ಬ್ಯಾಂಕ್ ಮಾಡಿಕೊಂಡು ಲಾಭ ಪಡೆಯುತ್ತಿದ್ದಾರೆ ರಾಜಕಾರಣಿಗಳು. 
ಎಲ್ಲಿಯ ತನಕ ಕೈಕಟ್ಟಿ ಕುಳಿರುತ್ತಿರೋ ಅಲ್ಲಿಯವರೆಗೆ ನ್ಯಾಯ ಸಿಗಲ್ಲ. ಹೋರಾಟದ ಮನೋಭಾವ ಎಲ್ಲರೂ ಬೆಳೆಸಿಕೊಳ್ಳಬೇಕು. ಒಳಮೀಸಲಾತಿ, ಮೀಸಲಾತಿಯಲ್ಲಿ ಸಾಕಷ್ಟು ಅನ್ಯಾಯವಾಗಿದೆ. ರಾಜಕೀಯವಾಗಿ ಕಡೆಗಣಿಸುತ್ತಿರುವುದು ದುರಂತದ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮವನ್ನು ಸಮತ ಸೈನಿಕ ದಳದ ಯುವ ರಾಜ್ಯಾಧ್ಯಕ್ಷ ಚಳುವಳಿ ನಾಗೇಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅಹಿಂಸಾ ಚೇತನ್ , ಡಾ.ಚೀನಾ ರಾಮು, ಸಮಾಜಸೇಚಕ ರಾಮಚಂದ್ರ ಹೂಡಿ, ಬೌದ್ಧ ಬಿಕ್ಕುಗಳು, ವೆಂಕಟ ರಮಣಪ್ಪ, ಗೋವಿಂದಯ್ಯ, ರಾಜ್ಯದ ವಿವಿಧ ಜಿಲ್ಲೆಗಳಿಂದ ಜಿಲ್ಲಾ ಅಧ್ಯಕ್ಷರು,ಪದಾಧಿಕಾರಿಗಳು, ಸಮುದಾಯದವರು ಇದೇ ವೇಳೆ ಉಪಸ್ಥಿತರಿದ್ದರು.