ಬೆಂಗಳೂರು: ಲಯನ್ಸ್ ಇಂಟರ್‌ನ್ಯಾಷನಲ್ ಜಿಲ್ಲಾ 317A ವತಿಯಿಂದ 2026–27ನೇ ಸಾಲಿನ 'ಸಿಂಹ ಪರ್ವ' ನೂತನ ಪದಾಧಿಕಾರಿಗಳು ಹಾಗೂ ಸದಸ್ಯರ ಪ್ರತಿಜ್ಞಾವಿಧಿ ಮತ್ತು ಪದಗ್ರಹಣ ಸಮಾರಂಭವು ನಗರದ ಹೊಸೂರು ಮುಖ್ಯ ರಸ್ತೆಯಲ್ಲಿರುವ ನಿಮಾನ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅದ್ಧೂರಿಯಾಗಿ ನಡೆಯಿತು.
ಜಿಲ್ಲಾ ಗವರ್ನರ್ ಲಯನ್ ಕೆ. ಈಶ್ವರನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ರೆಡ್ಡಿ ಉದ್ಘಾಟಿಸಿ ಮಾತನಾಡಿ, ಲಯನ್ಸ್ ಸಂಸ್ಥೆ ವಿಶ್ವದಾದ್ಯಂತ ಮಾನವೀಯ ಸೇವೆ ಮೂಲಕ ಸಮಾಜದಲ್ಲಿ ಆಶಾಕಿರಣವಾಗಿ ಕಾರ್ಯನಿರ್ವಹಿಸುತ್ತಿದ್ದು, ಆರೋಗ್ಯ, ಶಿಕ್ಷಣ, ಮಹಿಳಾ ಸಬಲೀಕರಣ ಹಾಗೂ ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸೇವೆ ಅನುಕರಣೀಯವಾಗಿದೆ ಎಂದು ಹೇಳಿದರು.
ತಾವು ಸಹ ಲಯನ್ಸ್ ಕುಟುಂಬದ ಸದಸ್ಯೆಯಾಗಿದ್ದು, ಬಾಲ್ಯದಿಂದಲೂ ಲಯನ್ಸ್ ಸಂಘಟನೆಯ ಸಮಾಜಮುಖಿ ಕಾರ್ಯಗಳನ್ನು ಹತ್ತಿರದಿಂದ ಕಂಡಿದ್ದೇನೆ. ನಮ್ಮ ತಾಯಿಯು ಸಹ ಲಯನ್ಸ್ ಅಲ್ಲಿ ಕೆಲಸ ಮಾಡುತ್ತಿದ್ದರು, ಉತ್ತಮ ಸಮಾಜ ಹಾಗೂ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಸರ್ಕಾರದೊಂದಿಗೆ ನಾಗರಿಕರು ಮತ್ತು ಲಯನ್ಸ್‌ನಂತಹ ಸೇವಾ ಸಂಸ್ಥೆಗಳು ಕೈಜೋಡಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಿಎಂಜೆಎಫ್ ಲಯನ್ ಪಂಕಜ್ ಮೆಹತಾ ಅವರು 2026–27ನೇ ಸಾಲಿನ ನೂತನ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿ ಅಧಿಕಾರ ಸ್ವೀಕಾರ ಮಾಡಿಸಿದರು.
ಕಾರ್ಯಕ್ರಮದ ಅಂಗವಾಗಿ ಜಿಲ್ಲಾ 317A ವತಿಯಿಂದ ಕಿದ್ವಾಯಿ ಸ್ಮಾರಕ ಅಂಕೋಲಜಿ ಸಂಸ್ಥೆಯ ಮಕ್ಕಳ ಕ್ಯಾನ್ಸರ್ ಚಿಕಿತ್ಸಾ ವಿಭಾಗಕ್ಕೆ ಕೀಮೋ ಔಷಧಿಗಳನ್ನು ವಿತರಿಸಲಾಯಿತು. ಅಲ್ಲದೆ ಮೂರು ಡಯಾಲಿಸಿಸ್ ಯಂತ್ರಗಳನ್ನು ಕೊಡುಗೆಯಾಗಿ ನೀಡಿ, ಗ್ರಾಮೀಣ ಸರ್ಕಾರಿ ಶಾಲೆಗಳಿಗೆ ಸೋಲಾರ್ ದೀಪಗಳ ವಿತರಣೆಗೆ ಚಾಲನೆ ನೀಡಲಾಯಿತು. ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಮತ್ತಷ್ಟು ವಿಸ್ತರಿಸುವ ಸಂಕಲ್ಪವನ್ನು ನೂತನ ಜಿಲ್ಲಾ ನಾಯಕತ್ವ ವ್ಯಕ್ತಪಡಿಸಿತು.
ಸಮಾರಂಭದಲ್ಲಿ ನೂತನ ಪದಾಧಿಕಾರಿಗಳು ಸಮಾಜಸೇವೆಗೆ ಹೆಚ್ಚಿನ ಆದ್ಯತೆ ನೀಡಿ, ಲಯನ್ಸ್ ಸಂಸ್ಥೆಯ ಸೇವಾ ಚಟುವಟಿಕೆಗಳನ್ನು ಜನಸಾಮಾನ್ಯರ ಮನೆಬಾಗಿಲಿಗೆ ತಲುಪಿಸುವ ಸಂಕಲ್ಪ ವ್ಯಕ್ತಪಡಿಸಿದರು.
ಸಮಾಜದಲ್ಲಿರುವ ಹೊಸಕ್ಷತೆಯಿಂದ ಕೂಡಿರುವ ಜನರಿಗೆ ಸೇವೆಯನ್ನು ಉದಯಿಸುವ ನಿಟ್ಟಿನಲ್ಲಿ ಲೈನ್ಸ್ ಕ್ಲಬ್ ಸಂಪೂರ್ಣವಾಗಿ ಕೆಲಸ ಕಾರ್ಯಗಳನ್ನು ಹಾಗೂ ಸಮಾಜಕ್ಕೆ ಕೆಲಸಗಳನ್ನು ಮಾಡಿಕೊಂಡು ಬರುತ್ತದೆ ಅದೇ ರೀತಿ ಮುಂದಿನ ದಿನಗಳಲ್ಲಿ ಮಹಿಳೆಯರ ಸಬಲೀಕರಣಕ್ಕೆ ಹಿಟ್ಟಿನ ಉತ್ತೇಜನವನ್ನು ನೀಡಲಾಗುತ್ತದೆ ಎಂದರು.
ಈ ಇಂದಿನ ಕೌರವರ ಕಾಲಾವಧಿಯಲ್ಲಿ ಸುಮಾರು 22 ಲಕ್ಷದ ಚಟುವಟಿಕೆ ಕಾರ್ಯಕ್ರಮಗಳು ಲಯನ್ಸ್ ಕ್ಲಬ್ ವತಿಯಿಂದ ನಡೆದಿರುವ ಬಗ್ಗೆ ಸಂಕ್ಷಿಪ್ತವಾಗಿ ವಿವರಗಳನ್ನು ತಿಳಿಸಿದರು. ಸಮಾಜದಲ್ಲಿರುವ ಬಡ ದಲಿತ ಹಾಗೂ ಅಶಕ್ತವಾಗಿರುವ ಕುಟುಂಬಗಳಿಗೆ ನೆರವನ್ನು ನೀಡಲಾಗುತ್ತಿದ್ದು ಫಲಾನುಭವಿಗಳು ಅದರ ಪ್ರಯೋಜನವನ್ನು ಪಡೆದು ಕೊಂಡು ಸಮಾಜದಲ್ಲಿ ಒಬ್ಬ ಸದೃಢ ನಾಗರೀಕನಾಗಿ ಬೆಳೆಯಬೇಕಾಗಿದೆ.
ಅಲ್ಲದೆ 2026 ಹಾಗೂ 27 ನೇ ಸಾಲಿನ ಲಯನ್ಸ್ ಕ್ಲಬ್ ನ ಕಾರ್ಯ ಚಟುವಟಿಕೆಗಳ ಬಗ್ಗೆ ಸಮಾಜಮುಖಿ ಕೆಲಸ ಕಾರ್ಯಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು.
ಬಹಳ ಪ್ರಮುಖವಾಗಿ ಯುವ ಲಯನ್ಸ್ ಕ್ಲಬ್ ಸದಸ್ಯರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಾಗೂ ಅವರ ಕೆಲಸ ಕಾರ್ಯಗಳನ್ನು ಸಮಾಜಮುಖಿ ಕೆಲಸಗಳನ್ನು ಬಾಲ್ಯದಿಂದಲೇ ಬೆಳೆಸಿಕೊಳ್ಳುವ ಬಗ್ಗೆ ಸೂಚನೆಯನ್ನು ಸಹ ನೀಡಿದರು.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಲಯನ್ಸ್ ಸದಸ್ಯರ ಸಮ್ಮುಖದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಈ ವೇಳೆ ಲಯನ್ ಟಿ.ಜೆ. ರಾಮಮೂರ್ತಿ, ಲಯನ್ ಕೆ.ಎಸ್. ದ್ವಾರಕನಾಥ್, ಲಯನ್ ವೀರಭದ್ರ ಬ್ಯಾಡಗಿ, ಲಯನ್ ಡಾ. ಎಂ.ಎನ್. ಸತ್ಯನಾರಾಯಣ, ಲಯನ್ ಸೋಮಶೇಖರ್, ಲಯನ್ ಮನೋಜ್ ಕುಮಾರ್, ಲಯನ್ ಮಂಗಳಗೌರಿ ಅರಸು, ಡಾ. ಜಿ. ಮೋಹನ್, ಆರ್.ವಿ. ಗಣೇಶ್ ಸೇರಿದಂತೆ ಜಿಲ್ಲಾ ಹಾಗೂ ವಲಯ ಮಟ್ಟದ ಪದಾಧಿಕಾರಿಗಳು, ವಿವಿಧ ಲಯನ್ಸ್ ಕ್ಲಬ್‌ಗಳ ಅಧ್ಯಕ್ಷರು, ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.