LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗ್ರಂಥಾಲಯಗಳ ಉನ್ನತೀಕರಣಕ್ಕೆ ಅಂತರಾಷ್ಟ್ರೀಯ ಸಮ್ಮೇಳನ : ಪ್ರೊ.ನಿರಂಜನಾ

ಬೆಂಗಳೂರು: ಪ್ರಸ್ತುತ ಗ್ರಂಥಾಲಯಗಳು ಸೊರಗಲು ಕಾರಣ ಗ್ರಂಥಾಲಯದ ಕಡೆ ಯಾರು ಮುಖ ಮಾಡದೆ ಇರುವುದು ಹಾಗೂ ಮಕ್ಕಳಿಗೆ ಓದುವ ಉತ್ಸಾಹ ಕಡಿಮೆಯಾಗಿದೆ ಎಂದು ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ ನ  ಉಪಾಧ್ಯಕ್ಷ ಪ್ರೊ.ಎಸ್ ಆರ್ ನಿರಂಜನ ಆತಂಕ ವ್ಯಕ್ತಪಡಿಸಿದರು.news_1784910422_8_446.webp

6ನೇ ಲಿಸಕಾನ್ 2026 ಅಂತರಾಷ್ಟ್ರೀಯ ಲೈಬ್ರೆರಿ ಕೇಂದ್ರದಲ್ಲಿನ ಅನುಭವದ ಉದ್ಘಾಟನೆ ಹಾಗೂ ಲಿಸ್ಕಾನ್ ವೆಬ್ ಸೈಟ್ ,ಬ್ರೋಷರ್ ಬಿಡುಗಡೆ ಮಾಡಿ ಮಾತನಾಡಿ, ಗ್ರಂಥಾಲಯಗಳು ವ್ಯಕ್ತಿಯ ವಿಕಸನ, ಜ್ಞಾನ, ಹೆಚ್ಚಳಕ್ಕೆ ವೇದಿಕೆಯಾಗಿ ಕೆಲಸ ಮಾಡುತ್ತಿವೆ. ಆದರೆ ವಿದ್ಯಾರ್ಥಿಗಳು ಬೇರೆ ಬೇರೆ ಕೆಲಸಗಳನ್ನು ಆಯ್ಕೆ ಮಾಡಲು ಮುಂದಾಗಿರುವುದು ಆತಂಕದ ವಿಚಾರವಾಗಿದೆ.

ಬ್ರಿಟಿಷ್, ನಳಂದ ಲೈಬ್ರೆರಿಗಳು ಎಷ್ಟರ ಮಟ್ಟಿಗೆ ಉನ್ನತಿಕರಿಸಲಾಗಿದೆ ಎಂಬುದನ್ನು ತಿಳಿಯಬೇಕು. ನಾವೆಲ್ಲ ಕೇವಲ ನಿರ್ಲಕ್ಷ್ಯ ಮಾಡಿ ಅವೆಲ್ಲಾ ಹಳೆಯದು ಎಂದು ಹೇಳಿಕೊಂಡು ಕಾಲ ತಳ್ಳುತ್ತಿದ್ದರೆ ಸಾಲದು, ಸರ್ಕಾರ ಶಿಕ್ಷಣಕ್ಕೆ ಮುಂದಾಗಿ ರಾಜ್ಯ,ರಾಷ್ಟ್ರ ಮಟ್ಟದಲ್ಲಿ ಅಭಿವೃದ್ದಿಪಡಿಸಲು ಮುಂದಾಗಬೇಕು. 

ಗ್ರಂಥಾಲಯಗಳ ಮಹತ್ವ ಬಹಳಷ್ಟು ಜನರಿಗೆ ತಿಳಿದಿಲ್ಲ. ಪುಸ್ತಕಗಳನ್ನು ಓದದೆ ಕೇವಲ ಕಟ್, ಪೇಸ್ಟ್ ಮಾಡುವ ಗೋಜಿಗೆ ಮುಗಿಬಿದ್ಸಿರುವುದು ದುರಂತದ ಸಂಗತಿಯಾಗಿದೆ ಎಂದರು. ಗ್ರಂಥಾಲಯಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ, ಎಲ್ಲಾ ತರಹದ ಪುಸ್ತಕಗಳು ದೊರಕಿದರೂ ಉಪಯೋಗಿಸುವ ಗೋಜಿಗೆ ಹೋಗದಿರುವುದು ವಿಪರ್ಯಾಸವಾಗಿದೆ. news_1784910421_7_120.webp

ನಾವೆಲ್ಲರೂ ಗ್ರಂಥಾಲಯಗಳನ್ಬು ಬಳಸಿಕೊಂಡು ಸಂಶೋಧನೆ ಮಾಡಬೇಕು, ಹಲವು ವರ್ಷಗಳ ಹಿಂದೆ ಗ್ರಂಥಾಲಯಗಳಲ್ಲಿನ  ಪುಸ್ತಕಗಳನ್ನು ವಿದ್ಯಾರ್ಥಿಗಳು ಶ್ರಮವಹಿಸಿ ಬಳಸಿಕೊಳ್ಳುತ್ತಿದ್ದರು. ಇದೀಗ ಡಿಜಿಟಲ್ ಲೈಬ್ರೆರಿ ಮೊರೆ ಹೋಗಿರುವುದು ವಿಪರ್ಯಾಸ. 

ವಿಟಿಯುನ ಮಾಜಿ ಕುಲಪತಿ ಕರಿಬಸಪ್ಪ ಮಾತನಾಡಿ, ವಿದ್ಯಾರ್ಥಿಗಳು ಓದಲು ಗ್ರಂಥಾಲಯಗಳ ವಾತವರ್ಣ ಚೆನ್ನಾಗಿರಬೇಕು, ಅಲ್ಲಿನ ಎಲ್ಲಾ ಪರಿಕರಗಳು ಮಾತನಾಡುತ್ತಾವೆ. ಪ್ರಸ್ತುತ ಲೈಬ್ರೆರಿಯಲ್ಲಿ ಡಿಜಿಟಲ್  ಅಳವಡಿಸಲಾಗಿದೆ. ಇಡೀ ವಿಶ್ವವೇ ನಿಮ್ಮ ಜೇಬಿನಲ್ಲಿದೆ ಅದನ್ನು ಸರಿಯಾಗಿ ಉಪಯೋಗಿಸಿ. ಕಾಲಹರಣ ಮಾಡುವುದನ್ನು ಬಿಟ್ಟು ವೇಳಾಪಟ್ಟಿ ಹಾಕಿಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಅಲ್ಲದೆ ಲೈಬ್ರೆರಿಯಲ್ಲಿ  ಓದುಗರಿಗೆ ತರಹೇವಾರಿ ಸ್ಪರ್ಧೆಗಳನ್ನು ಆಯೋಜನೆ ಮಾಡಬೇಕು. 

ದೇವರು ಕೊಟ್ಟಿರುವ ವರ ಎಲ್ಲರೂ ಮೆದುಳನ್ನು  ಸರಿಯಾಗಿ ಎಲ್ಲರೂ ಉಪಯೋಗಿಸಿಕೊಂಡು ಸರಿಯಾದ ದಾರಿಯಲ್ಲಿ ನಡೆಯಬೇಕಾಗುದೆ ಎಂದರು.

ಟಿಡಿ ಕೆಂಪರಾಜು ಮಾತನಾಡಿ, ಪ್ರತಿ ನಿತ್ಯ ದೇಶದಲ್ಲಿ ಎರಡು ವಿಚಾರದ ಬಗ್ಗೆ  ಚರ್ಚೆಗಕಲು ನಡೆಯುತ್ತಲೇ ಇರುತ್ತವೆ ಅದರಲ್ಲಿ ಶಿಕ್ಷಣ ಹಾಗು ಆರೋಗ್ಯ ಕ್ಷೇತ್ರದಲ್ಲಿ.  

news_1784910418_5_620.webp

ಇಡೀ ವಿಶ್ವವೇ ಭಾರತವನ್ನಿ ನೋಡುತ್ತಿದೆ, ಅದರಲ್ಲಿ ವಿಶೇಷತೆ ಏನಿದೆ. ಭಾರತದಲ್ಲಿ ಜನಸಂಖಗಯೆ ಅನುಗುಣವಾಗಿ ಶಿಕ್ಷಣ ನೀಡುವ ಕಸರತ್ತು ನಡೆಸುತ್ತಿದೆ.  ಬೇರೆ ದೇಶಗಳಿಗೆ ಶಿಕ್ಷಣ ಪಡೆಯಲು ಜನ ಮುಗಿ ಬಿದ್ದು ಹೋಗುತ್ತಿದ್ದಾರೆ. ನಮ್ಮದೇಶದಲ್ಲಿ ಸಂಪನ್ಮೂಲಗಳನ್ನು ಒದಗಿಸಿಕೊಡಬೇಕಾಗಿದೆ. ಯಾವ ಕಾರಣಕ್ಕೆ ಹೊರ ದೇಶಗಳಿಗೆ ವಿದ್ಯಾರ್ಥಿಗಳು ಹೋಗುತ್ತಿದ್ದಾರೆ ಎಂಬುದನ್ನು ತಿಳಿಯಬೇಕು. ಸರ್ಕಾರ ಈ ಸಂಬಂಧ ಹಲವು ಆಯೋಗಗಳು ಇದ್ದಾವೆ ಅದನ್ನು ಮನಗಂಡು  ಒಂ್ಉ ನಿರ್ದಾರಕ್ಕೆ ಬರಬೇಕಾಗಿದೆ. 

ಇತ್ತೀಚೆಗೆ ಲೈಬ್ರೇಗಳ ವಿನ್ಯಾಸವೇ ಬದಲಾಗುತ್ತಿದೆ, ಗ್ರಂಥಾಲಯಗಳು ಅನುಭವ ಕೇಂದ್ರಗಳಾಬೇಕು.  ಸಾಕಷ್ಟು ತಂತ್ರಜ್ಞಾನಗಳು ಇದ್ದಾವೆ. ಅದನ್ನು ಬಳಸಿಕೊಂಡು ಯಾವ ರೀತಿ ಉನ್ನತಿಕತಿಸಬೇಕು ಎಂಬುದನ್ನು  ತೋರಿಸಬೇಕಾಗಿದೆ. ಸರ್ಕಾರಿ ಗ್ರಂಥಾಲಯಗಳು ಮಾತ್ರವಲ್ಲದೆ ಖಾಸಗಿಯಾಗಿ ಇದ್ದಾವೆ, ಅವುಗಳನ್ನು ಉಪಯೋಗಿದಿಕೊಂಡಿದ್ದೇ ಆದಲ್ಲಿ ಸಾಮಾಜಿಕ, ಶಿಕ್ಷಣ,ಸಿಬ್ಬಂದಿ, ಬದಲಾವಣೆ ಆಗಬೇಕಾಗಿದೆ. ಲೈಬ್ರೇರಿ ವಿಚಾರದಲ್ಲಿ ಶಿಕ್ಷಣ ಸಂಸ್ಥೆಗಳು, ಸರ್ಕಾರದ ಮೇಲೆ ಜವಾಬ್ದಾರಿಗಳು ಇದೆ. 

ಉಪನ್ಯಾಸ ಕಾರ್ಯಕ್ರಮದಲ್ಲಿ ಖಾಸಗಿ ಹಾಗೂ ಸರ್ಕಾರಿ ಗ್ರಂಥಾಲಯದಲ್ಲಿನ ಗ್ರಂಥಪಾಲಕರು ಹಾಗೂ ಗ್ರಂಥಾಲಯದ ಶಿಕ್ಷಕರು ಉಪಾಧ್ಯಾಯರು ಪ್ರೊಫೆಸರ್ ಗಳು ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿವಾಜಿನಗರ ಬಸ್ ನಿಲ್ದಾಣದ ಹತ್ತಿರದ ಪಾದಚಾರಿ ಮಾರ್ಗಕ್ಕೆ ಹೊಸ ಮೆರುಗು: ಜಗದೀಶ್ ಜಿಗ್ರಂಥಾಲಯಗಳ ಉನ್ನತೀಕರಣಕ್ಕೆ ಅಂತರಾಷ್ಟ್ರೀಯ ಸಮ್ಮೇಳನ : ಪ್ರೊ.ನಿರಂಜನಾಡಿಸೆಂಬರ್ ಹೊತ್ತಿಗೆ ಕ್ವಿನ್ ಸಿಟಿಯಲ್ಲಿ 200 ಎಕರೆ ಸೆಮಿಕಂಡಕ್ಟರ್ ಪಾರ್ಕ್ ಆರಂಭ: ಎಂ ಬಿ ಪಾಟೀಲನಾಳೆ ಬೆಂಗಳೂರು  ಜಲಮಂಡಳಿ:ನೇರ ಫೋನ್ ಇನ್ ಕಾರ್ಯಕ್ರಮಎಐ ಆಧಾರಿತ ಉತ್ಪನ್ನ ರಾಷ್ಟ್ರ ನಿರ್ಮಾಣ' ಗುರಿಯೊಂದಿಗೆ ಎರಡು ದಿನಗಳ ಶೃಂಗಸಭೆ:ಡಾ. ಸೆಲ್ವಕುಮಾರ್ನೀಟ್ ಪರೀಕ್ಷೆಯಲ್ಲಿ ಅಕ್ರಮ ಪ್ರಶ್ನೆ ಪತ್ರಿಕೆ ಸೋರಿಕೆ; ಯೂಥ್ ಕಾಂಗ್ರೆಸ್ ನಿಂದ ಧರಣಿಕರಾಮುವಿಯ 2026-27ನೇ ಸಾಲಿನ ಜುಲೈ ಆವೃತ್ತಿ ಪ್ರವೇಶಾತಿ ಆರಂಭ : ಪ್ರೊ.ಎ.ಪಿ.ಜ್ಞಾನಪ್ರಕಾಶ್ಆಗಸ್ಟ್ 15 ರಿಂದ ಸೆಪ್ಟೆಂಬರ್ 15 ರವರೆಗೆ "ಬೆಂಗಳೂರು ಹಸಿರೂರು ಅಭಿಯಾನಫಿಫಾ ವಿಶ್ವ ಕಪ್: ಅರ್ಜೆಂಟೇನ ಮಣಿಸಿದ ಸ್ಟೇನ್ಚೆನ್ನಮ್ಮ ಮಾತೃಶಕ್ತಿಯ ಸಂಕೇತವಾಗಿದ್ದರು: ಎಂ ಬಿ ಪಾಟೀಲ ಕಂಬನಿ