ಬೆಂಗಳೂರು: ಜೀ ಸಂಸ್ಥೆಯ ಸಂಸ್ಥಾಪಕರಾದ ಸುಭಾಷ್ ಚಂದ್ರ ರವರು ತನ್ನ ಹಣಕಾಸು ವಹಿವಾಟಿನ ವ್ಯವಹಾರದಲ್ಲಿ ಹಾಗೂ ಸಾಲದ ರೂಪದಲ್ಲಿ ಪಡೆದಿರುವ ಸುಮಾರು 22..006 ಸಾವಿರ ಕೋಟಿ ಸಾಲಕ್ಕೆ ಕೇವಲ 99.97 ℅ ರಷ್ಟು ಸಾಲ ಮನ್ನಾ ಮಾಡುವುದರ ಮೂಲಕ ಕೇಂದ್ರ ಹಾಗೂ ಹಣಕಾಸು ಇಲಾಖೆ, ದೇಶದ ನಾಗರಿಕರ ಹಣವನ್ನು ಲೂಟಿ ಮಾಡುತ್ತಿದೆ.
ದೇಶದಲ್ಲಿ ಈ ರೀತಿ ಸಾರ್ವಜನಿಕ ಹಣವನ್ನು ಲೂಟಿ ಮಾಡಲು ಪ್ರಧಾನಿ ಶ್ರೀ ನರೇಂದ್ರ ಮೋದಿ ರವರು ಖಾಸಗಿ ಸಂಸ್ಥೆಯ ಮಾಲೀಕರೊಂದಿಗೆ ಕೈಜೋಡಿಸಿ ಸಾರ್ವಜನಿಕರ ತೆರಿಗೆ ಹಣವನ್ನು ಖಾಸಗಿ ಕಂಪನಿಗಳ ಲೂಟಿಗೆ ರಹದಾರಿಯನ್ನು ಮಾಡಿಕೊಟ್ಟಿದ್ದಾರೆ, ದೇಶದ ಇತಿಹಾಸದಲ್ಲಿ ಶೇಕಡ 99.97 % ರಷ್ಟು ಸಾಲ ಮನ್ನಾ ಮಾಡಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ರವರಿಗೆ ಸಲ್ಲುತ್ತದೆ.
ಪ್ರಧಾನಿ ನರೇಂದ್ರ ಮೋದಿ ಖಾಸಗಿ ಕಂಪನಿಗಳ ಮಾಲೀಕರೊಂದಿಗೆ ಕೈಜೋಡಿಸಿ ಈ ರೀತಿ ಸಾಲ ಮನ್ನಾ ಮಾಡಿ ವಾಮ ಮಾರ್ಗದಲ್ಲಿ ಭ್ರಷ್ಟಾಚಾರದ ಹಣವನ್ನು ಪಡೆದು ರಾಜಕೀಯ ಚುನಾವಣೆಗೆ ಬಳಸಿಕೊಂಡು ಅಧಿಕಾರ ನಡೆಸುತ್ತಿದ್ದಾರೆ
ಈ ಕೂಡಲೇ ಕೇಂದ್ರ ಸರ್ಕಾರ ತನ್ನ ಆರ್ಥಿಕ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ದೇಶದ ಜನತೆಗೆ ಸ್ಪಷ್ಟಪಡಿಸಬೇಕು ಹಾಗೂ ಖಾಸಗಿ ಕಂಪನಿಗಳಿಗೆ ಸಾಲ ಮನ್ನಾ ಮಾಡುವ ದುರುದ್ದೇಶದಿಂದ ಕೇಂದ್ರ ಸರ್ಕಾರ ಜನರ ಹಣವನ್ನು ಲೂಟಿ ಮಾಡುತ್ತಿದೆ,
ದೇಶದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಹಾಗೂ ಆರ್ಥಿಕ ಇಲಾಖೆಯ ಸಚಿವರಾದ ಶ್ರೀಮತಿ. ನಿರ್ಮಲ ಸೀತಾರಾಮನ್ ಇಬ್ಬರು ಸೇರಿ ಸುಭಾಷ್ ಚಂದ್ರ ರವರಿಗೆ ಸಾಲ ಮನ್ನ ಮಾಡುವುದರ ಮೂಲಕ ಹಗಲು ದರೋಡೆ ನಡೆಸಿದ್ದಾರೆ,
ಈ ಪ್ರಕರಣದಲ್ಲಿ ಕೂಡಲೇ ನೈತಿಕಣೆ ಹೊತ್ತು ನರೇಂದ್ರ ಮೋದಿ ರವರು ದೇಶದ ಜನರ ಕ್ಷಮೆ ಕೋರಬೇಕು . ಭ್ರಷ್ಟಾಚಾರದ ಹಗರಣದಲ್ಲಿ ಪಡೆದಿರುವ ಹಣದ ಮಾಹಿತಿಯನ್ನು ಜನತೆಗೆ ತಿಳಿಸಬೇಕೆಂದು ಪ್ರತಿಭಟನೆ ಮೂಲಕ ಆಗ್ರಹ ಪಡಿಸಲಾಯಿತು.
ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ
ಎಸ್.ಮನೋಹರ್, ಸುಧಾಕರ್ರಾವ್, ಆದಿತ್ಯ, ಉಮೇಶ್, ಪುಟ್ಟರಾಜು, ಕುಶಾಲ್ ಗೌಡ, ಮಾಧವಹನೂರು, ಸಾಯಿನವೀನ್, ಕಿಶೋರ್, ಪ್ರವೀಣ್,ಶಾಹಿನ್ ಶರೀಪ್ ಭಾಗವಹಿಸಿದರು.