LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕರ್ನಾಟಕ ವಿಧಾನ ಪರಿಷತ್ ಚುನಾವಣಾ ಗೆಲುವು ಮುಂದಿನ ಚುನಾವಣಾ ದಿಕ್ಸೂಚಿ: ಸುರ್ಜೆವಾಲ

2028ಕ್ಕೂ ಕಾಂಗ್ರೆಸ್ ಗ್ಯಾರಂಟಿ ಅಲೆ; ಕರ್ನಾಟಕ ವಿಧಾನ ಪರಿಷತ್ ಚುನಾವಣಾ ಗೆಲುವು ಮುಂದಿನ ಚುನಾವಣಾ ದಿಕ್ಸೂಚಿ, ಜನರನಾಡಿ ಮಿಡಿತ ಅರಿತ ರಾಜ್ಯದ ಜನಪ್ರತಿನಿಧಿಗಳು ತಮ್ಮ ಪಕ್ಷದ ಗಡಿ ಮೀರಿ ಕಾಂಗ್ರೆಸ್ ನೀತಿಗಳಿಗೆ ಜೈಕಾರ, ಇದು ಗ್ಯಾರಂಟಿ ಯೋಜನೆಗಳ ಪರವಾದ ಮತ, ಜನರ ಪರವಾದ ಮತ.

ಬೆಂಗಳೂರು :ಕರ್ನಾಟಕ ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಐತಿಹಾಸಿಕವಾಗಿದ್ದು, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಪಾದಿಸಿರುವ ಜನ ಕಲ್ಯಾಣ ಮತ್ತು ನ್ಯಾಯ (NYAY) ರಾಜಕೀಯಕ್ಕೆ ನಿಸ್ಸಂಶಯ ಜಯ ಸಿಕ್ಕಿದ ಸಂದೇಶವನ್ನು ಸಾರಿವೆ ಎಂದು ಏಕೆ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅಭಿಪ್ರಾಯಪಟ್ಟರು.

ಭಾರತೀಯ ರಾಷ್ಡ್ರೀಯ ಕಾಂಗ್ರೆಸ್ 135 ಶಾಸಕರನ್ನು ಹೊಂದಿದೆ ಮತ್ತು ಇನ್ನೂ 3 ಎಸ್‌ಕೆಪಿ + ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಒಟ್ಟು 138 ಶಾಸಕರ ಬಲ ಹೊಂದಿದೆ. ಹೀಗಿದ್ದರೂ, ಕಾಂಗ್ರೆಸ್ ಅಭ್ಯರ್ಥಿಗಳಿಗೆ 151 ಪ್ರಥಮ ಪ್ರಾಶಸ್ತ್ಯದ ಮತಗಳು ಲಭಿಸಿವೆ.news_1781796333_2_224.webp

*ಇದಕ್ಕೆ ಕಾರಣವೇನು?*

ಕರ್ನಾಟಕದ ರಾಜಕೀಯ ಇಂದು ಎರಡು ಧ್ರುವಗಳ ಸುತ್ತ ಸುತ್ತುತ್ತಿದೆ. ಒಂದು ಧ್ರುವವೆಂದರೆ ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿ ಯೋಜನೆಗಳು. ಈ ಯೋಜನೆಗಳ ಮೂಲಕ ವರ್ಷಕ್ಕೆ ₹56,000 ಕೋಟಿಗೂ ಅಧಿಕ ಹಣವನ್ನು ಕನ್ನಡಿಗರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗಿದೆ.

ಇನ್ನೊಂದು ಧ್ರುವವೆಂದರೆ ಬಿಜೆಪಿ-ಜೆಡಿಎಸ್ ಮೈತ್ರಿ. ಕಾಂಗ್ರೆಸ್‌ನ 5 ಗ್ಯಾರಂಟಿಗಳಿಗೆ ಕಟು ವಿರೋಧ ವ್ಯಕ್ತಪಡಿಸುತ್ತಿರುವ ಅವರು, ಅವುಗಳನ್ನು ರದ್ದುಪಡಿಸಲು ಬಯಸುತ್ತಾರೆ. ಅವರ ರಾಜಕೀಯ ಜಾತಿ ವಿಭಜನೆ ಮತ್ತು ಧಾರ್ಮಿಕ ಧ್ರುವೀಕರಣದ ಸುತ್ತ ಕೇಂದ್ರೀಕೃತವಾಗಿದೆ.

ಜನರನಾಡಿ ಮಿಡಿತ ಅರಿತ ಕರ್ನಾಟಕದ ಶಾಸಕರು ಇಂದು ತಮ್ಮ ಪಕ್ಷದ ಗಡಿಗಳನ್ನು ಮೀರಿ ಕಾಂಗ್ರೆಸ್ ಸರ್ಕಾರದ ನೀತಿಗಳು ಮತ್ತು ಕಾಂಗ್ರೆಸ್ ಗ್ಯಾರಂಟಿಗಳಿಗೆ ಮತ ಚಲಾಯಿಸುವ ಮೂಲಕ ತಮ್ಮ ಮುದ್ರೆ ಒತ್ತಿದ್ದಾರೆ. ಇದು 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಗ್ಯಾರಂಟಿ ಅಲೆಯ ದಿಕ್ಸೂಚಿ.

ಇದು ಸಕಾರಾತ್ಮಕತೆಗೆ ನೀಡಿದ ಮತ,
ಇದು ಕಲ್ಯಾಣ ರಾಜ್ಯದ ಪರವಾದ ಮತ,
ಇದು ಒಗ್ಗಟ್ಟಿನ ಮತ್ತು ಒಳಗೊಳ್ಳುವಿಕೆಯ ರಾಜಕಾರಣಕ್ಕಾಗಿ ಬಿದ್ದ ಮತ,
ಇದು ಗ್ಯಾರಂಟಿ ಯೋಜನೆಗಳ ಪರವಾದ ಮತ, ಇದು ಜನರ ಪರವಾದ ಮತ.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಂದಾಯ ಅಧಿಕಾರಿಗಳ ದೀರ್ಘಕಾಲದ ಕಾಯುವಿಕೆಗೆ ಅಂತ್ಯ: ಪರಮೇಶ್ವರಇರುವ ವ್ಯವಸ್ಥೆಯಲ್ಲೇ ಪರಿಣಾಮಕಾರಿಯಾಗಿ ಕೆಲಸ ಮಾಡಿ ಕಸದ ಸಮಸ್ಯೆ ನಿವಾರಿಸಿ: ಕೃಷ್ಣ ಬೈರೇಗೌಡವಾರ್ಡ್ ರಸ್ತೆ ಅಭಿವೃದ್ಧಿಗಾಗಿ 2000 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ : ಕೃಷ್ಣ ಬೈರೇಗೌಡಬಿಡಬ್ಲ್ಯೂಎಸ್‌ ಎಸ್ ಬಿಯ ಮಾಜಿ ಅಧ್ಯಕ್ಷರಿಗೆ ಬೀಳ್ಕೊಡುಗೆ ರಾಜ್ಯದ ಮಾವು ಬೆಳೆಗಾರರ ಸಂಕಷ್ಟ; ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದ ಹೆಚ್‍.ಡಿ.ಕುಮಾರಸ್ವಾಮಿ ₹33,562 ಕೋಟಿ ರಿಯಲ್ ಎಸ್ಟೇಟ್ ಲೂಟಿ ಸಂಚು: 'Green over Greed' ಕರ್ನಾಟಕಕ್ಕೆ ಅನ್ವಯಿಸಲ್ವಾ? ಎಲೆಕ್ಟ್ರಿಕ್ ವಾಹನೋದ್ಯಮದ ಪೂರಕ ಕೈಗಾರಿಕೆಗಳಿಗೆ ಉತ್ತೇಜನ; ಹೆಚ್.ಡಿ. ಕುಮಾರಸ್ವಾಮಿ ಮಹತ್ವದ ಸಭೆಕರ್ನಾಟಕ ವಿಧಾನ ಪರಿಷತ್ ಚುನಾವಣಾ ಗೆಲುವು ಮುಂದಿನ ಚುನಾವಣಾ ದಿಕ್ಸೂಚಿ: ಸುರ್ಜೆವಾಲರಂಗೇರುತ್ತಿರುವ ವಿಧಾನ ಪರಿಷತ್ ಚುನಾವಣೆ: ಜನಪ್ರತಿನಿಧಿಗಳಿಂದ ಮತದಾನಶಿವಕುಮಾರ್ ಸಿಎಂ ಆಗಿರುವುದನ್ನು ಸಹಿಸಲಾಗದೇ ಬಿಡದಿ ಟೌನ್ ಶಿಪ್ ಯೋಜನೆಗೆ ಜೆಡಿಎಸ್, ಬಿಜೆಪಿ ವಿರೋಧ: ಶಾಸಕ ಬಾಲಕೃಷ್ಣ