LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಯುವಕರಲ್ಲಿ  ನಾಯಕತ್ವ ಗುಣ ಮತ್ತು ಸಂಘಟನೆ ಮಾಡಬೇಕು

ಬೆಂಗಳೂರು: ಯುವಕರಲ್ಲಿ ಮೊದಲು ನಾಯಕತ್ವ ಗುಣ ಬೆಳಸಬೇಕು ಮತ್ತು ಸಂಘಟನೆ ಮಾಡಬೇಕು ಆಗ ಮಾತ್ರ ಏನು ಬೇಕಾದರೂ ಮಾಡಬಹುದು ಎಂದು ಯುವ ಕಾಂಗ್ರೆಸ್ನ ಅಧ್ಯಕ್ಷರಾದ ಮಂಜುನಾಥ್ ಗೌಡ ಅವರು ತಿಳಿಸಿದರು.news_1791195607_0_263.webp

ರಾಣಿ ಅಬ್ಬಕ್ಕ ಆಟದ ಮೈದಾನದಲ್ಲಿ ರಾಜ್ಯ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಸಿ.ಎಂ.ಕಪ್-2026 ಅಂತಿಮ ದಿನದ  ಪಂದ್ಯದಲ್ಲಿ ಗೆದ್ದಿರುವ ಕ್ರೀಡಾಪಟುಗಳಿಗೆ ಟ್ರೋಪಿಯನ್ನು ಪ್ರಧಾನ ಮಾಡಿ ರಾಜ್ಯ ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷರಾದ ಹೆಚ್.ಎಸ್.ಮಂಜುನಾಥಗೌಡರವರು, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಎಸ್.ಕೇಶವಮೂರ್ತಿ ರವರು ಗೆದ್ದ ತಂಡಗಳಿಗೆ ಪ್ರಶಸ್ತಿ ವಿತರಣೆ ಮಾಡಿದರು.

ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಯುವಕರಲ್ಲಿ  ನಾಯಕತ್ವ ಗುಣ ಬೆಳಸಬೇಕು ಮತ್ತು ಸಂಘಟನೆ ಮಾಡಬೇಕು ಎಂಬ ಆದೇಶದಿಂದ ಸಿ.ಎಂ.ಕ್ರಿಕೆಟ್ ಅಂತರ ಕಾಲೇಜು ಪಂದ್ಯಾವಳಿ ಅಯೋಜಿಸಲಾಯಿತು.

 ಡಿ.ಕೆ.ಶಿವಕುಮಾರ್ ಅವರು ಕಾಲೇಜು ದಿನಗಳಿಂದಲೂ  ವಿದ್ಯಾರ್ಥಿ ನಾಯಕರಾಗಿ ಬೆಳೆದು ಇಂದು ಮುಖ್ಯಮಂತ್ರಿಯಾಗಿ ರಾಜ್ಯದ ಜನರ ಸೇವೆ ಮಾಡುತ್ತಿದ್ದಾರೆ. ಜನಸೇವೆ ಮಾಡಲು ರಾಜಕೀಯ ಉತ್ತಮ ಕ್ಷೇತ್ರವಾಗಿದೆ ಯುವಕ-ಯುವತಿಯರು ಮುಂದೆ ಬರಬೇಕು.

ಡೋನೇಷನ್ ಹಾವಳಿ, ರ್ಯಾಗಿಂಗ್ ಮತ್ತು ಮಾದಕವಸ್ತು ಮುಕ್ತ  ಮಾಡಲು ಯುವಕರ ಸಂಘಟಿತರಾಗಿ ಹೋರಾಟ ಮಾಡಬೇಕು. ಕಾಂಗ್ರೆಸ್ ಪಕ್ಷದ ಪ್ರತಿ ವಾರ್ಡ್ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾರತ್ ಜೋಡೋ ಸಂಘ ಪ್ರಾರಂಭ ಮಾಡುತ್ತಿದೆ 10ಸಹಾಯಧನ ನೀಡುತ್ತಿದೆ. ಯುವಕರು ಶಕ್ತಿ,  ದೇಶದ ಶಕ್ತಿ ಎಂದು ಹೇಳಿದರು.

       *ಗೆದ್ದ ತಂಡಗಳು*

1) ದಯಾನಂದಸಾಗರ್ ಕಾಲೇಜು ಪ್ರಥಮ ಸ್ಥಾನ 1ಲಕ್ಷ ನಗದು ಪಾರಿತೋಷಕ.

2) ಸಪ್ತಗಿರಿ ಕಾಲೇಜು 75ಸಾವಿರ ನಗದು ಪಾರಿತೋಷಕ.ದ್ವಿತೀಯ ಸ್ಥಾನ.

3) ಡಾನ್ ಬೋಸ್ಕ್ ಮೂರನೇಯ ಸ್ಥಾನ.50ಸಾವಿರ ನಗದು ಪುರಸ್ಕಾರ
4) ಬೆಂಗಳೂರು ಇನ್ಸಟ್ಯೂಟ್ ಆಫ್ ಟೆಕ್ನಾಲಜಿ ನಾಲ್ಕನೇಯ ಸ್ಥಾನ.

ದಯಾನಂದ ಸಾಗರ್ ಕಾಲೇಜ್ ಮತ್ತು ಸಪ್ತಗಿರಿ ಕಾಲೇಜ್ ಅಂತಿಮ ಫೈನಲ್ ಪಂದ್ಯ ಜರುಗಿತು. ಮೊದಲ ಬ್ಯಾಟಿಂಗ್ ಮಾಡಿದ ಸಪ್ತಗಿರಿ ಕಾಲೇಜ್ ಆರಂಭದಲ್ಲಿ  14ರನ್ ಗೆ 5 ಪ್ರಮುಖ ಆಟಗಾರರು ವಿಕೆಟ್ ಪತನದಿಂದ ರನ್ ಮಾಡಲು ಹೆಣಗಾಡಿತು. 24ರನ್ 7ವಿಕಟ್ ಪತನವಾಯಿತು ನಂತರ ಬ್ಯಾಟಿಂಗ್ ಮಾಡಿದ ದಯಾನಂದಸಾಗರ್ ಕಾಲೇಜ್ ತಂಡ ಎರಡು ವಿಕೆಟ್ ನಷ್ಟಕ್ಕೆ 29ರನ್ ಬಾರಿಸಿತು

ಮೂರನೇಯ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಡಾನ್ ಬಾಸ್ಕೋ ಮತ್ತು ಬೆಂಗಳೂರು ಇನ್ಸಟ್ಯೂಟ್ ಆಫ್ ಟೆಕ್ನಾಲಜಿ ನಡುವೆ ಮೂರನೇಯ ಸ್ಥಾನಕ್ಕೆ ನಡುವಿನ ಪಂದ್ಯದಲ್ಲಿ ಡಾನ್ ಬಾಸ್ಕೋ ತಂಡ ಮೊದಲ ಬ್ಯಾಟಿಂಗ್ ನಲ್ಲಿ  ಎರಡು ವಿಕೆಟ್ ನಷ್ಟಕ್ಕೆ  56 ರನ್ ಗಳಿಸಿತು. ಬೆಂಗಳೂರು ಇನ್ಸಟ್ಯೂಟ್ ಆಫ್  ಟೆಕ್ನಾಲಜಿ  8 ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿ 21ರನ್ ಗಳಿಂದ ಸೋಲು ಅನುಭವಿಸಿತು ನಾಲ್ಕನೇಯ ಸ್ಥಾನಕ್ಕೆ  ತೃಪಿಪಟ್ಟರು.

ಬೆಸ್ಟ್ ಆಟಗಾರ ಪ್ರಶಸ್ತಿ ಪ್ರದಾನ

*ಬೆಸ್ಟ್ ಬ್ಯಾಟ್ ಮ್ಯಾನ್- ಸಂಜು ಸೈಕಿ ಡಾನ್ ಬಾಸ್ಕೋ* 

*ಬೆಸ್ಟ್ ಬೌಲರ್- ಪುನೀತ್ ಸಪ್ತಗಿರಿ ಕಾಲೇಜ್* 

ಬೆಸ್ಟ್ ಅಲ್ ರೌಂಡರ್- ಕಾರ್ತಿಕ್ ದಯಾನಂದಸಾಗರ್

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ರವಿಕುಮಾರ್, ಶಿವಕುಮಾರ್, ನಟರಾಜ್ , ಶ್ರೀಧರ್ ದೀಪಕ್ ಗೌಡರವರು ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ಥಳೀಯ ಸಮಸ್ಯೆಗಳಿಗೆ ಸಚಿವ ಶಿವಲಿಂಗೇಗೌಡ ಅವರಿಂದ ಸ್ಥಳದಲ್ಲೇ ಪರಿಹಾರದ ಭರವಸೆಕೇಂದ್ರ ಸರ್ಕಾರ ಆದಷ್ಟು ಶೀಘ್ರವಾಗಿ ಬರ ಪರಿಹಾರ ಬಿಡುಗಡೆ ಮಾಡಲಿ: ಸಚಿವ ಕೆ. ಎಂ. ಶಿವಲಿಂಗೇಗೌಡ ಆಗ್ರಹಗ್ರಾಮೀಣ ಸೊಗಡು ಹಾಗೂ ಸಂಸ್ಕೃತಿಯ ಪುನರುಜ್ಜೀವನಕ್ಕೆ ಸಚಿವ ಕೆ. ಎಂ. ಶಿವಲಿಂಗೇಗೌಡ ಕರೆ₹2 ಕೋಟಿ ಅನುದಾನಲ್ಲಿ ತಾಳಗುಪ್ಪ ಭಾಗದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಮಧು ಬಂಗಾರಪ್ಪ ಶಂಕುಸ್ಥಾಪನೆಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲು ಪ್ರಜಾಸೇವೆ ಆಂದೋಲನ: ಸಚಿವ ಮಧು ಬಂಗಾರಪ್ಪರೈತನ ಕಣ್ಣೀರ ಶಾಪ ಸರ್ಕಾರಕ್ಕೆ ತಟ್ಟುತ್ತೆ; ರೈತನನ್ನು ಎದುರು ಹಾಕಿಕೊಂಡ ಯಾವ ಸರ್ಕಾರವೂ ಉಳಿದಿಲ್ಲಯುವಕರಲ್ಲಿ  ನಾಯಕತ್ವ ಗುಣ ಮತ್ತು ಸಂಘಟನೆ ಮಾಡಬೇಕುಶ್ರಮ ಇಲ್ಲದೇ ಸಾಧನೆ ಮಾಡಲು ಸಾಧ್ಯವಿಲ್ಲ.ಸಿಂಗಪುರದಲ್ಲಿ  ನಾರ್ಡಿಕ್, ತಕ್ರಾಲ್, ಜಾಪ್ಫಾ ಸಹಿತ ಹಲವು ಕಂಪನಿ ಜತೆ ಮಾತುಕತೆಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳ: ಬಬಲೇಶ್ವರ ತಾ.ನ ನಾಲ್ಕು ಗ್ರಾಮಗಳಿಗೆ ತುರ್ತು ಪರಿಹಾರಕ್ಕೆ ಪತ್ರ