LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸತ್ಯ ಘಟನೆಯ ಆಧಾರಿತ ಚಿತ್ರ ಕಾಲಾಗ್ನಿ ಮುಹೂರ್ತ

ಮರ್ಡರ್ ಮಿಸ್ಟ್ರಿ ಚಿತ್ರ, ಸಿನಿಮಾರೂಪದಲ್ಲಿ ಕೋರಮಂಗಲದಲ್ಲಿ ನಡೆದ ಘಟನೆ, ಸೆಸ್ಪೆನ್ಸ್, ಥ್ರಿಲ್ಲರ್ ಕುರಿತಾದ ಚಿತ್ರ

ಚಂದನವನದಲ್ಲಿ

ನೈಜ ಘಟನೆಯ ಅಂಶಗಳನ್ನು ಬಳಸಿಕೊಂಡ ಚಿತ್ರಗಳು ಹೆಚ್ಚಿಗೆ ಬರುತ್ತಿವೆ. ಅದಕ್ಕೆತಕ್ಕಂತೆ ನೋಡುಗರು ಇಂತಹ ಸಿನಿಮಾಗಳನ್ನು ಇಷ್ಟಪಡುತ್ತಿದ್ದಾರೆ. ಆ ಸಾಲಿಗೆ *’ಕಾಲಾಗ್ನಿ’* ಸಿನಿಮಾ ಸೇರ್ಪಡೆಯಾಗುತ್ತದೆ. ’ನಿಮ್ಮ ಮೈ ನೆರಳು ಕೂಡ ನಿಮ್ಮನ್ನು ಬೆನ್ನಟ್ಟಿದಾಗ’ ಎಂಬ ಕ್ಯಾಚಿ ಅಡಿಬರಹ ಇರಲಿದೆ. ಗುರುವಾರದಂದು ಶ್ರೀ ಶ್ರೀನಿವಾಸ ದೇವಸ್ಥಾನದಲ್ಲಿ ಸರಳವಾಗಿ ಮುಹೂರ್ತ ನಡೆಯಿತು. ನಿರ್ಮಾಪಕರ ತಾಯಿ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಮಗನಿಗೆ ಶುಭ ಹಾರೈಸಿದರು.news_1795195676_1_716.webp

 ಎಸ್.ಎಲ್.ಆರ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಇಂಟಿರಿಯರ್ ಡೇಕೋರೇಟ್ ಉದ್ಯಮ ನಡೆಸುತ್ತಿರುವ ಬೆಂಗಳೂರಿನ *ಆರ್.ರಾಜು ಬಂಡವಾಳ* ಹೂಡುತ್ತಿರುವುದು ಹೊಸ ಅನುಭವ. ಇವರೊಂದಿಗೆ ಶಿವರುದ್ರಾಚಾರ್.ಎಂ.ಸಿ, ಬಾಲ್ಯಾ ನಾಯಕ್, ರಂಗೇಗೌಡರು, ವೆಂಕಟೇಶ್ ಮೂರ್ತಿ ಮತ್ತು ಹಣಮಂತರಾಯಪ್ಪ ಮುನ್ನಳ್ಳಿ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. *ಸಿ.ಮಲ್ಲಿಕಾರ್ಜುನ್ ಸಿನಿಮಾಕ್ಕೆ ರಚನೆ,ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ* ಮಾಡುತ್ತಿದ್ದಾರೆ.

      ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಮೈಸೂರಿನ ವೇದಶ್ರೀ, ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ಮೀಸೆ ಆಂಜನಪ್ಪ, ಉಗ್ರಂ ರವಿ, ಮಂಜುನಾಥ್ ಭಟ್, ಸತೀಶ್‌ಗೌಡ್ರು, ಪಟ್ರೆ ನಾಗಣ್ಣ, ಭವಾನಿ ಮುಂತಾದವರು ನಟಿಸುತ್ತಿದ್ದಾರೆ. ಸಂಗೀತ ಚಿರಂಜೀವಿ ಅಭಿರಾಮ್, ಛಾಯಾಗ್ರಹಣ ವೀನಸ್ ಮೂರ್ತಿ, ಸಾಹಸ ಸಾಗರ್, ಸಂಕಲನ  ಮಂಜುನಾಥ್ ಹೊಸಮನೆ ಅವರದಾಗಿದೆ.
 
       ನಂತರ ಮಾತನಾಡಿದ ನಿರ್ದೇಶಕರು, ಕಥೆಗೆ ಸೂಕ್ತ ನಾಯಕನನ್ನು ತಲಾಷ್ ಮಾಡಲಾಗುತ್ತಿದೆ. ಸದ್ಯದಲ್ಲೆ ಆಯ್ಕೆ ಪ್ರಕ್ರಿಯೆ ಮುಗಿಯಲಿದೆ. 1998, ಕೋರಮಂಗಲದಲ್ಲಿ ನಡೆದ ಘಟನೆಯನ್ನು ಚಿತ್ರಕ್ಕೆ ಅಳವಡಿಸಿಕೊಳ್ಳಲಾಗಿದೆ. ಅಣ್ಣ ತಮ್ಮನಿಗಾಗಿ ತ್ಯಾಗ ಮಾಡುವ, ಮುಂದೆ ಆತನ ಬದುಕಲ್ಲಿ ಘೋರ ಘಟನೆ ನಡೆದಾಗ ಯಾವ ರೀತಿ ಹೊರಳುದಾರಿಗೆ ಹೋಗುತ್ತಾನೆ ಎಂಬುದನ್ನು ಸೆಸ್ಪೆನ್ಸ್, ಥ್ರಿಲ್ಲರ್ ಕ್ರೈಂನೊಂದಿಗೆ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಗುರುವಾರ ಶುಭದಿನವಾಗಿದ್ದರಿಂದ ಇಂದಿನಿಂದಲೇ ಚಿತ್ರೀಕರಣ ಶುರು ಮಾಡಲಾಗುವುದು. ಮಾಧ್ಯಮದ ಸಹಕಾರ ಬೇಕೆಂದು ಸಿ.ಮಲ್ಲಿಕಾರ್ಜುನ್ ಕೋರಿದರು.

      ಬೆಂಗಳೂರು, ಚಿಕ್ಕಮಗಳೂರು, ಮಂಗಳೂರು, ಕಳಸ, ಸಕಲೇಶಪುರ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಘಟನೆಯ ಆಧಾರಿತ ಚಿತ್ರ ಕಾಲಾಗ್ನಿ ಮುಹೂರ್ತಕಾಡಾನೆಗಳ ಸ್ಥಳಾಂತರದ ವಿಚಾರವಾಗಿ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ರೈತರಿಗೆ ಆತಂಕ ಬೇಡಹಸುಗೂಸುಗಳೊಂದಿಗೆ ಚಳಿಯಲ್ಲಿ ಮಲಗಿರುವ ತಾಯಂದಿರ ಕಣ್ಣೀರು ಸಿಎಂಗೆ ಕಾಣುತ್ತಿಲ್ಲವೇ? - ನಿಖಿಲ್ ಕುಮಾರಸ್ವಾಮಿ ಆಕ್ರೋಶಖಾಸಗಿ ಅನುದಾನ ರಹಿತ ಶಾಲೆಗಳಿಗೆ 800 ಕೋಟಿ ರೂ.ಬಾಕಿಹಣ ನೀಡಲು ಸರ್ಕಾರಕ್ಕೆ ಒತ್ತಾಯಭೋವಿ ಅಭಿವೃದ್ಧಿ ನಿಗಮದಲ್ಲಿ ನೂರಾರು ಕೋಟಿ ಹಗರಣ ಪ್ರಕರಣ ಸಿಪಿಐಗೆ ನೀಡುವಂತೆ ಸಮಿತಿ ಹಾಗೂ ಸಂಘದಿಂದ ಒತ್ತಾಯಬೆಂಗಳೂರಿನ 10ರಲ್ಲಿ 4 ಮಂದಿಗೆ ಕರುಳು, ಗುದದ್ವಾರ ಸಮಸ್ಯೆ: ಜಾಗೃತಿಗೆ ಚಿರಾಗ್ ಆಸ್ಪತ್ರೆ ಕರೆಮಾರಿಗೆ ದಾರಿ ಸಿನಿಮಾ ಸೆಟ್ಟೇರಿದ್ದು ಬಿಡುಗಡೆಗೆ ಮಾತ್ರ ದಿನಗಣನೆ ಬಾಕಿಮಿನ್ಸಾರಾ' ಅನ್ನು ಪರಿಚಯಿಸಿದ ಆಲ್ಟಿಗ್ರೀನ್: ಬಹು-ಉಪಯೋಗಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಬೆಂಗಳೂರು  ಜಲಮಂಡಳಿ:ನೇರ ಫೋನ್ ಇನ್ ಕಾರ್ಯಕ್ರಮ ನವೆಂಬರ್ 13ರಂದುಸರ್ಕಾರಿ ಶಾಲೆಗಳನ್ನು ಖಾಸಗಿ ಶಿಕ್ಷಣ ಮಾಫಿಯಾಗಳಿಗೆ ಒಪ್ಪಿಸುವ ಹುನ್ನಾರಕ್ಕೆ CM  ಮುಂದಾಗಿರುವುದು ಖಂಡನೀಯ:  ಮುಖ್ಯಮಂತ್ರಿ ಚಂದ್ರು