LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಲೆಟರ್ ಹೆಡ್, ವಿಸಿಟಿಂಗ್ ಕಾರ್ಡ್ ಜಿಲ್ಲಾಧ್ಯಕ್ಷರುಗಳು ಬೇಕಾಗಿಲ್ಲ: ಹೆಚ್.ಡಿ. ಕುಮಾರಸ್ವಾಮಿ

ಜೆಡಿಎಸ್ ಪಕ್ಷದಲ್ಲಿ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡುವವರು ಬೇಕು ಲೆಟರ್ ಹೆಡ್, ವಿಸಿಟಿಂಗ್ ಕಾರ್ಡ್ ಗೆ ಬೆಲೆ ಕೊಡುವವರು ಪಕ್ಷದಲ್ಲಿ ಅವಕಾಶ ಇಲ್ಲ ಪಕ್ಷ ಸಂಘಟನೆ ಹೆಚ್ಚು ಹೊತ್ತು ನೀಡಬೇಕು ಕ್ಷೇತ್ರದಲ್ಲಿ ಕೆಲಸ ಕಾರ್ಯಗಳನ್ನು ಯಾವುದೇ ಲೋಪಗಳಿಲ್ಲದೆ ನಿಷ್ಠೆಯಿಂದ ಶ್ರದ್ಧೆಯಿಂದ ಮಾಡಬೇಕು: ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು: ನನಗೆ ಲೆಟರ್ ಹೆಡ್, ವಿಸಿಟಿಂಗ್ ಕಾರ್ಡ್ ಜಿಲ್ಲಾಧ್ಯಕ್ಷರುಗಳು ಬೇಕಾಗಿಲ್ಲ. ಸಕ್ರಿಯವಾಗಿ ಪಕ್ಷದ ಕೆಲಸವನ್ನು ನಿಷ್ಠೆಯಿಂದ ಮಾಡುವವರು ಬೇಕು. ಮುಂದಿನ ದಿನಗಳಲ್ಲಿ ಅಂಥವರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.news_1779204314_2_869.webp
ಪಕ್ಷದ ರಾಜ್ಯ ಕಚೇರಿ ಜೆ.ಪಿ. ಭವನದಲ್ಲಿ ಜಿಲ್ಲಾಧ್ಯಕ್ಷರುಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು;  ಕೋರ್ ಕಮಿಟಿ ಸಭೆಗೆ ಕಡ್ಡಾಯವಾಗಿ ಎಲ್ಲಾ ಸದಸ್ಯರು ಹಾಜರಾಗಬಹುದು. ಯಾರೇ ಆಗಲಿ ಎರಡು ಅಥವಾ ಮೂರು ಸಭೆಗಳಿಗೆ ಗೈರು ಹಾಜರಾದರೆ ಕಡ್ಡಾಯವಾಗಿ ಅವರನ್ನು ಬದಲಿಸಿ ಬೇರೊಬ್ಬರನ್ನು ನೇಮಿಸಲಾಗುವುದು  ಎಂದರು.
ಪಕ್ಷ ಸಂಘಟನೆಯನ್ನು ನಿಷ್ಠೆಯಿಂದ ಮಾಡಬೇಕು. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು. ಕೇವಲ ವಿಸಿಟಿಂಗ್ ಕಾರ್ಡ್ ಮತ್ತು ಲೆಟರ್ ಹೆಡ್ ಶೋಕಿ ಇರುವ ಜನ ನನಗೆ ಬೇಕಿಲ್ಲ. ಅಂಥವರಿಂದ ಪಕ್ಷಕ್ಕೆ ಯಾವುದೇ ಉಪಯೋಗ ಇಲ್ಲ ಎಂದು ತೀಕ್ಷ್ಣವಾಗಿ ನುಡಿದರು ಕೇಂದ್ರ ಸಚಿವರು.
ಸಕ್ರಿಯವಾಗಿ ಪಕ್ಷದ ಕೆಲಸ ಮಾಡಬೇಕು. ಜಿಲ್ಲಾಧ್ಯಕ್ಷ ಅಥವಾ ಕೋರ್ ಕಮಿಟಿ ಜವಾಬ್ದಾರಿ ಎನ್ನುವುದು ಕೇವಲ ಅಲಂಕಾರಕ್ಕೆ ಅಲ್ಲ. ಈಗ ಇರುವವರು ಉತ್ತಮವಾಗಿ ಕೆಲಸ ಮಾಡಿ. ನಿಮ್ಮಿಂದ ಆಗಲಿಲ್ಲ ಎಂದರೆ ಕೆಲಸ ಮಾಡುವವರಿಗೆ ಅವಕಾಶ ಬಿಟ್ಟುಕೊಡಿ. ಕಾರ್ಯಕರ್ತರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ, ಕೆಲ ಭಾಗದಲ್ಲಿ ಮುಖಂಡರ ವರ್ತನೆಯಿಂದ ಪಕ್ಷಕ್ಕೆ ಸಮಸ್ಯೆ ಆಗುತ್ತಿದೆ ಎಂದು ಸಚಿವರು ಕಟುವಾಗಿ ಹೇಳಿದರು. 
ಪ್ರತಿಷ್ಠೆಗಿಂತ ಪಕ್ಷನಿಷ್ಠೆ ಬಹಳ ಮುಖ್ಯ ಎಂದು ಕಠಿಣ ಸಂದೇಶ ನೀಡಿದ ಕುಮಾರಸ್ವಾಮಿ ಅವರು; ಯಾವುದೇ ಹುದ್ದೆ ಸಿಕ್ಕಿದೆ ಎಂದರೆ ಅದು ಅಜೀವ ಹುದ್ದೆ ಅಲ್ಲ. ಯಾವುದೇ ಜವಾಬ್ದಾರಿ ಸಿಕ್ಕಿದರೂ ಪಕ್ಷದ ಕೆಲಸ ಮಾಡುವುದಕ್ಕೆ ಸಿಕ್ಕಿದ ಅವಕಾಶ ಅಷ್ಟೇ. ಹೀಗಾಗಿ ಪ್ರತಿಯೊಬ್ಬರೂ ಪಕ್ಷದ ಕೆಲಸ ಮಾಡಬೇಕು. ಕನಿಷ್ಠ ದಿನಕ್ಕೆ ಒಂದು ಗಂಟೆಯಾದರೂ ಪಕ್ಷದ ಕೆಲಸ ಮಾಡಬೇಕು ಎಂದು ಸಚಿವರು ಕಟು ಶಬ್ದಗಳಲ್ಲಿ ಹೇಳಿದರು.news_1779204314_1_508.webp
ರಾಜ್ಯದಲ್ಲಿ ರೈತರು, ಕೃಷಿ ಕಾರ್ಮಿಕರು, ಕೂಲಿ ಕಾರ್ಮಿಕರು ಸೇರಿದಂತೆ ಎಲ್ಲ ವರ್ಗದ ಜನರು ತೊಂದರೆಗೆ ಸಿಕ್ಕಿದ್ದಾರೆ. ಈ ಸರ್ಕಾರ ಯಾವುದೇ ಒಳ್ಳೆಯ ಕೆಲಸ ಮಾಡುತ್ತಿಲ್ಲ. ಕೇವಲ ಗ್ಯಾರಂಟಿಗಳನ್ನು ಇಟ್ಕೊಂಡು ಪ್ರಚಾರ ಪಡೆಯುತ್ತಿದೆ. ಗ್ರಾಮ ಪಂಚಾಯಿತಿ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಜನಪರ ವಿಷಯಗಳನ್ನು ಇಟ್ಟುಕೊಂಡು ಹೋರಾಟ ನಡೆಸಿ. ಸರ್ಕಾರದ ವೈಫಲ್ಯಗಳನ್ನು ಜನತೆಗೆ ಮನಮುಟ್ಟುವಂತೆ ತಿಳಿಸಿ ಎಂದು ಸಚಿವ ಕುಮಾರಸ್ವಾಮಿ ಅವರು ಜಿಲ್ಲಾ ಘಟಕಗಳ ಅಧ್ಯಕ್ಷರುಗಳಿಗೆ ಸೂಚನೆ ನೀಡಿದರು. 
ಸಂಘಟನೆಯ ಜೊತೆಗೆ ಜನಸಂಪರ್ಕವು ಬಹಳ ಮುಖ್ಯವಾಗಿರುತ್ತದೆ. ಮುಂದಿನ ದಿನಗಳಲ್ಲಿ ಜನಪ್ರತಿನಿಧಿಯಾಗಿ ಆಯ್ಕೆಯಾಗಿ ಬರಬೇಕು ಎನ್ನುವ ಉದ್ದೇಶ ಹೊಂದಿರುವವರು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಶ್ರಮವಿಲ್ಲದೆ ಅಧಿಕಾರ ಅಥವಾ ಅವಕಾಶ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ ಎಂದು ಸಚಿವರು ಖಡಕ್ ಸೂಚನೆ ನೀಡಿದರು.
ಸಭೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಸಂಸದ ಮಲ್ಲೇಶ್ ಬಾಬು, ಶಾಸಕರಾದ ವೆಂಕಟಶಿವಾರೆಡ್ಡಿ, ಎ. ಮಂಜು, ಮಂಜುನಾಥ್, ಶರಣುಗೌಡ ಕಂದಕೂರ, ಟಿ.ಎ. ಶರವಣ, ಜವರಾಯಿ ಗೌಡ, ರಾಜುಗೌಡ, ಕರೆಮ್ಮ ನಾಯಕ್, ಸ್ವರೂಪ ಪ್ರಕಾಶ್, ನೇಮಿರಾಜ್ ನಾಯಕ, ಮಾಜಿ ಸಚಿವರಾದ ಡಿಸಿ ತಮ್ಮಣ್ಣ, ಬಂಡೆಪ್ಪ ಕಾಶೆಂಪೂರ, ವೆಂಕಟರಾವ ನಾಡಗೌಡ ಸೇರಿದಂತೆ ಪಕ್ಷದ ಎಲ್ಲಾ ಜಿಲ್ಲಾ ಅಧ್ಯಕ್ಷರುಗಳು ಮುಂತಾದವರು ಸಭೆಯಲ್ಲಿ ಭಾಗಿಯಾಗಿದ್ದರು.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೈತರ ಆತ್ಮಹತ್ಯೆ ಪ್ರಕರಣಗಳನ್ನು ಜಾಣ್ಮೆಯಿಂದ ಮುಚ್ಚಿಟ್ಟ ರಾಜ್ಯ ಕಾಂಗ್ರೆಸ್ ಸರಕಾರ!ಲೆಟರ್ ಹೆಡ್, ವಿಸಿಟಿಂಗ್ ಕಾರ್ಡ್ ಜಿಲ್ಲಾಧ್ಯಕ್ಷರುಗಳು ಬೇಕಾಗಿಲ್ಲ: ಹೆಚ್.ಡಿ. ಕುಮಾರಸ್ವಾಮಿಪೌರಕಾರ್ಮಿಕರಿಗೆ ಆರೋಗ್ಯ ಕಾಳಜಿ ತಿಳುವಳಿಕೆ, ಕೂಲಿಂಗ್ ಕಿಟ್ ವಿತರಣೆಮಳೆಗಾಲಕ್ಕೂ ಮುಂಜಾಗ್ರತವಾಗಿ ಅಧಿಕಾರಿಗಳಿಗೆ ಕಾಮಗಾರಿ ಮುಗಿಸಲು ಸೂಚನೆಕೆ.ಎಸ್.ಡಿ.ಎಲ್.ಗೆ ಪ್ರತಿಷ್ಠಿತ ಝೆಪ್ಟೋ ಉತ್ಕೃಷ್ಟತಾ ಪುರಸ್ಕಾರ: ಎಂ ಬಿ ಪಾಟೀಲಕೆನಡಾದ ಹೈ ಕಮೀಷನರ್ ಕ್ರಿಸ್ ಕೂಟರ್ ನಿಯೋಗ ಮುಖ್ಯಮಂತ್ರಿ ಭೇಟಿಉಳಿದ ಎರಡು ವರ್ಷಗಳಲ್ಲಿ ಬಾಕಿ ಭರವಸೆಗಳನ್ನೂ ಈಡೇರಿಸಲಾಗುವುದು: ಸಿಎಂ ಭರವಸೆದುಬಾರಿ ಆನೆ ಶಿಬಿರದಲ್ಲಿ ಗಾಯಗೊಂಡೊದ್ದ ಮಾರ್ತಾಂಡ ಆನೆ ಸಾವುಗೋಪಾಲನ್ ಗ್ರಾಂಡ್ ಮಾಲ್ ನಲ್ಲಿ ಲುಲು ಹೈಪರ್ಮಾರ್ಕೆಟ್ ಆರಂಭಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ? ಸಾರಿಗೆ ಇಲಾಖೆ ದಿವಾಳಿ, ಬೆಂಗಳೂರು ಗಾರ್ಬೇಜ್ ಸಿಟಿ ಆಗಿದೆ: ನಿಖಿಲ್ ವಾಗ್ದಾಳೆ