ಬೆಂಗಳೂರು: ಹಿರಿಯ ಚಿಂತಕ ಮತ್ತು ಭಾಷಾಶಾಸ್ತ್ರಜ್ಞ ಡಾ.ಕೆ ವಿ ನಾರಾಯಣ ಅವರ ನಿಧನಕ್ಕೆ ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕೆ ವಿ ನಾರಾಯಣ ಅವರು ಸಾಹಿತ್ಯ ವಿಮರ್ಶೆ ಮತ್ತು ಭಾಷಾ ಚಿಂತನೆಗೆ ಕನ್ನಡ ಸಾಹಿತ್ಯ ಪರಿಸರದಲ್ಲಿ ಹೊಸ ದಿಕ್ಕು ತೋರಿದ್ದರು. ನೋಮ್ ಚಾಮ್ಸ್ಕಿ ಅವರಿಂದ ಪ್ರಭಾವಿತರಾಗಿದ್ದ ಅವರು, ಆ ಬಗೆಯ ಚಿಂತನೆಯನ್ನು ಕನ್ನಡದ ಭಾಷಿಕ ಮೂಲಗಳಿಂದ ಕಟ್ಟಿಕೊಟ್ಟ ವಿದ್ವಾಂಸರಾಗಿದ್ದರು ಎಂದು ಅವರು ಕೆವಿಎನ್ ಅವರ ವ್ಯಕ್ತಿತ್ವವನ್ನು ನೆನಪಿಸಿಕೊಂಡಿದ್ದಾರೆ.
ಹಂಪೆಯ ಕನ್ನಡ ವಿಶ್ವವಿದ್ಯಾಲಯ ಕಟ್ಟುವಲ್ಲಿ ಅವರ ಯೋಗದಾನ ಮೌಲಿಕವಾಗಿತ್ತು. ಅದರ ನಡುವೆಯೂ ಕನ್ನಡ ಕಾವ್ಯ ಮತ್ತು ಭಾಷಾಶಾಸ್ತ್ರದ ನಿರಂತರ ಅಧ್ಯಯನಗಳಲ್ಲಿ ನಿರತರಾಗಿ, ಕನ್ನಡಕ್ಕೆ ಹೊಸತನ ತಂದುಕೊಟ್ಟವರಾಗಿದ್ದರು. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಅವರು ಪ್ರಾರ್ಥಿಸಿದ್ದಾರೆ.