LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

₹1,000 ಕೋಟಿ ಹೂಡಿಕೆಯ ಪೊದ್ದಾರ್ ಪ್ಲಂಬಿಂಗ್ ಪೈಪ್ಸ್ ಉತ್ಪಾದನಾ ಸ್ಥಾವರಕ್ಕೆ ಸಚಿವ ಎಂ ಬಿ ಪಾಟೀಲ ಚಾಲನೆ

ವೇಮಗಲ್ (ಕೋಲಾರ ಜಿಲ್ಲೆ): ಇಲ್ಲಿನ ಕೈಗಾರಿಕಾ ಪ್ರದೇಶದ ಹಂತ-2ರಲ್ಲಿ ಪೊದ್ದಾರ್ ಪ್ಲಂಬಿಂಗ್ ಸಿಸ್ಟಮ್ಸ್ ಉದ್ಯಮ‌ ಸಮೂಹವು ₹1,000 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ನೂತನ ಪರಿಸರ ಸ್ನೇಹಿ ಕಾರ್ಖಾನೆಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಶನಿವಾರ ಉದ್ಘಾಟಿಸಿದರು.news_1792860774_2_103.webp

ಈ ಸಂದರ್ಭದಲ್ಲಿ ಮಾತನಾಡಿದ ಅವರು, "ನಮ್ಮ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ಪೊದ್ದಾರ್ ಕಂಪನಿ ಸಲ್ಲಿಸಿದ್ದ ಹೂಡಿಕೆ ಪ್ರಸ್ತಾವನೆಗೆ ಅನುಮೋದನೆ ನೀಡಿ, 2025ರ ಫೆಬ್ರವರಿ 24ರಂದು 33 ಎಕರೆ ವಿಸ್ತೀರ್ಣದ ಜಾಗ ಹಂಚಿಕೆ ಮಾಡಿದೆವು. ಅದೇ ವರ್ಷದ ಏಪ್ರಿಲ್ ನಲ್ಲಿ ನಿವೇಶನ ಹಸ್ತಾಂತರ, ಜುಲೈನಲ್ಲಿ ಶಂಕುಸ್ಥಾಪನೆ ಮಾಡಿದೆವು.

ಅತ್ಯಂತ ಕ್ಷಿಪ್ರ ಅವಧಿಯಲ್ಲಿ ಅಂದರೆ ಒಂದು ವರ್ಷದಲ್ಲೇ ಈ ಸಂಕೀರ್ಣ ಕಾರ್ಯಾರಂಭ ಮಾಡಿದೆ. ಇದು ನಮ್ಮ ಕೈಗಾರಿಕಾಸ್ನೇಹಿ ನೀತಿಗೆ ಉದಾಹರಣೆಯಾಗಿದ್ದು ಇಲ್ಲಿ ಮೂರು ಸಾವಿರ ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದಿದ್ದಾರೆ.

ಕಳೆದ ಒಂದೆರಡು ವರ್ಷಗಳಲ್ಲಿ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಕ್ರೋನ್ಸ್ ಬಾಟ್ಲಿಂಗ್ ಘಟಕ, ಎಚ್-125 ಮಾದರಿಯ ಹೆಲಿಕಾಪ್ಟರ್ ತಯಾರಿಸುವ ಏರ್ ಬಸ್ ಘಟಕ, ಪೋಲೆಂಡ್ ಮೂಲದ ಟಿಜೆಡ್ಎಂಒ ಉದ್ಯಮ, ಎಮ್ ಝೀರೋ ಕಂಪನಿ ಮುಂತಾದವು ತಮ್ಮ‌ ತಯಾರಿಕಾ ಚಟುವಟಿಕೆ ಆರಂಭಿಸಿವೆ. ಪೊದ್ದಾರ್ ಸಮೂಹದ ಸ್ಥಾವರದಲ್ಲಿ ತಯಾರಿಸುವಂತಹ ಪೈಪ್ವಗಳನ್ನು ಹೊರದೇಶಗಳಿಗೆ ರಫ್ತು ಮಾಡಲಾಗುವುದು. ಇದು ನಮ್ಮ ನೂತನ ಕೈಗಾರಿಕಾ ನೀತಿಗೆ ಪೂರಕವಾಗಿದೆ ಎಂದು ಅವರು ಹೇಳಿದ್ದಾರೆ.

ಈ ಘಟಕದಲ್ಲಿ ಕೌಶಲ್ಯ ತರಬೇತಿ ಕೇಂದ್ರವೂ ಇರಲಿದೆ. ಕಂಪನಿಯ ಮಾಲೀಕರು ಭೂಮಿ ಕಳೆದುಕೊಂಡ ಸಂತ್ರಸ್ತರ ಕುಟುಂಬಗಳ ಸದಸ್ಯರಿಗೆ ಆದ್ಯತೆಯ ಮೇಲೆ ಉದ್ಯೋಗ ಕೊಡಬೇಕು. ಒಟ್ಟಾರೆಯಾಗಿ ಕನಿಷ್ಠ ಶೇ.60ರಷ್ಟು ಸ್ಥಳೀಯರನ್ನು ನೇಮಕ ಮಾಡಿಕೊಳ್ಳಬೇಕು. ಇಲ್ಲಿ ಉದ್ಯೋಗಿಗಳಿಗೆ ಕಂಪನಿಯು 150 ಮನೆಗಳನ್ನು ನಿರ್ಮಿಸಲಿದೆ. ಇದರ ಜತೆಗೆ ಡಾರ್ಮೆಟರಿ ನಿರ್ಮಿಸಬೇಕು ಎಂದು ಹೇಳಿದ್ದೇನೆ. ಕೈಗಾರಿಕಾ ಪ್ರದೇಶಗಳಲ್ಲಿ ಉಗ್ರಾಣ ನಿರ್ಮಾಣಕ್ಕೆ ಜಾಗ ಕೊಡುತ್ತಿಲ್ಲ. ಬದಲಿಗೆ ನಿಜವಾದ ಔದ್ಯಮಿಕ ಮತ್ತು ಉದ್ಯೋಗಿ-ಕೇಂದ್ರಿತ ಕೈಗಾರಿಕೆಗಳ ಸ್ಥಾಪನೆಗೆ ಜಾಗ ಕೊಡಲು ಆದ್ಯತೆ ನೀಡುತ್ತಿರುವುದಾಗಿ ಹೇಳಿದರು.news_1792860773_1_467.webp

ಪೊದ್ದಾರ್ ಕಂಪನಿಯು ಪ್ಲಂಬಿಂಗ್ ಮತ್ತಿತರ ಚಟುವಟಿಕೆಗಳಿಗೆ ಬೇಕಾದ ಗುಣಮಟ್ಟದ ಪೈಪುಗಳನ್ನು ತಯಾರಿಸಲಿದೆ.  ಪೊದ್ದಾರ್ ಕುಟುಂಬಸ್ಥರು ಆಶೀರ್ವಾದ್ ಪೈಪ್ ಸ್ಥಾಪಕರು ಕೂಡ. ಸದ್ಯ ಆಶೀರ್ವಾದ್ ನಿಂದ ಹೊರ ಬಂದಿರುವ ಅವರು ಎಂಟು ವರ್ಷಗಳ ಬಳಿಕ ತಮ್ಮ ಕುಟುಂಬವಾಗಿರುವ ಪೊದ್ದಾರ್ ಹೆಸರಿನಲ್ಲೇ ಹೊಸ ಬ್ರ್ಯಾಂಡ್ ಆರಂಭಿಸಿದ್ದು, ಕರ್ನಾಟಕದಲ್ಲಿರುವ ಅತ್ಯುತ್ತಮ ಕೈಗಾರಿಕಾ ಕಾರ್ಯ ಪರಿಸರವನ್ನು ಪರಿಗಣಿಸಿ ವೇಮಗಲ್ ನಲ್ಲಿ ಬಂಡವಾಳ ಹೂಡಿಕೆ ಮಾಡಿದೆ ಎಂದು ಅವರು ನುಡಿದಿದ್ದಾರೆ.

ಕಾರ್ಯಕ್ರಮದಲ್ಲಿ ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್, ಮಾಜಿ ಸಭಾಪತಿ ವಿ ಆರ್ ಸುದರ್ಶನ್ ಮಾತನಾಡಿದರು.news_1792860772_0_793.webp

ಪೊದ್ದಾರ್ ಸಮೂಹದ ಮಾಲೀಕರಾಗಿರುವ ಅಧ್ಯಕ್ಷ ದೀಪಕ್ ಪೊದ್ದಾರ್ ಸ್ವಾಗತಿಸಿದರು. ವ್ಯವಸ್ಥಾಪಕ ನಿರ್ದೇಶಕ ವರುಣ್ ಪೊದ್ದಾರ್ ಮತ್ತು ತಯಾರಿಕೆ ವಿಭಾಗದ ಮುಖ್ಯಸ್ಥ ಶಿವಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕಾರ್ಯಚಟುವಟಿಕೆ ಬಗ್ಗೆ ವಿವರಿಸಿದರು. ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಅನುಷಾ ಹಾಜರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿವಮೊಗ್ಗದಲ್ಲಿ ಸೈದ್ಧಾಂತಿಕ ಸಂಘಟನೆ ಬಲವರ್ಧನೆಯೇ ನಮ್ಮ ಸಂಕಲ್ಪ: ಬಿ ಕೆ ಹರಿಪ್ರಸಾದ್ಬೆಮ.ಸಾ.ಸಂಸ್ಥೆ ಸಿಬ್ಬಂದಿಯ ಅಪಘಾತ ವಿಮಾ ಪರಿಹಾರ ರೂ. 1.00 ಕೋಟಿಗೆ ಹೆಚ್ಚಳ ನಾರಾಯಣ ಗುರುಗಳ ಆಶಯದಂತೆ ಸಮಾಜ ಸಂಘಟನೆಯಾಗುತ್ತಿರುವುದು ಹೆಮ್ಮೆ ಸಂಗತಿಸಾರ್ವಜನಿಕ ಸ್ಥಳಗಳ ಸ್ವಚ್ಛತೆಗೆ ಆದ್ಯತೆ ನೀಡಿ-ಡಿ ಎಸ್‌ ರಮೇಶ್15 ದಿನಗಳಿಗೊಮ್ಮೆ ಪ್ರಗತಿ ಪರಿಶೀಲನೆ, ಪ್ರತ್ಯೇಕ ತಂಡ ರಚನೆಗೆ ಸೂಚನೆ, 24x7 ಮಾದರಿಯಲ್ಲಿ ಕೆಲಸ₹1,000 ಕೋಟಿ ಹೂಡಿಕೆಯ ಪೊದ್ದಾರ್ ಪ್ಲಂಬಿಂಗ್ ಪೈಪ್ಸ್ ಉತ್ಪಾದನಾ ಸ್ಥಾವರಕ್ಕೆ ಸಚಿವ ಎಂ ಬಿ ಪಾಟೀಲ ಚಾಲನೆಮಹಿಳೆಯರು ಸಮಾಜಮುಖಿಯಾಗಿ ಮುನ್ನೆಲೆಗೆ ಬರಲು ಸಿದ್ದರಾಮಯ್ಯನವರ ಕೊಡುಗೆ ಕಾರಣ: ಕೆ. ಎಂ. ಶಿವಲಿಂಗೇಗೌಡಹಾಸನದಲ್ಲಿ ಮೈಸೂರು ದಸರಾ ಮಾದರಿ ಕ್ರೀಡೋತ್ಸವ: ಸಚಿವ ಕೆ. ಎಂ. ಶಿವಲಿಂಗೇಗೌಡಆಕಾಶದಲ್ಲಿ ಕಾಮನಬಿಲ್ಲು ಕಾಣುವುದು ಒಂದು ಬೆಳಕಿನ ಆಟ.ಆರು ಜೀವ ಆಯುರ್ವೇದ ಆಸ್ಪತ್ರೆಗೆ ಆಯುಷ್ಯ ಸಚಿವಾಲಯದಿಂದ ಆಯುಷ್ ಕ್ವಾಲಿಟಿ ಮಾರ್ಕು ಗರಿ