LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶಿವಮೊಗ್ಗದಲ್ಲಿ ಸೈದ್ಧಾಂತಿಕ ಸಂಘಟನೆ ಬಲವರ್ಧನೆಯೇ ನಮ್ಮ ಸಂಕಲ್ಪ: ಬಿ ಕೆ ಹರಿಪ್ರಸಾದ್

ಶಿವಮೊಗ್ಗ : ಕ್ರಾಂತಿಕಾರಿ ಪರಂಪರೆಯ ಶಿವಮೊಗ್ಗದಲ್ಲಿ ಸೈದ್ಧಾಂತಿಕ ಸಂಘಟನೆ ಬಲವರ್ಧನೆಯೇ ನಮ್ಮ ಸಂಕಲ್ಪ" ಎಂದು ಕೆಪಿಸಿಸಿ ಅಧ್ಯಕ್ಷರಾದ ಬಿ ಕೆ ಹರಿಪ್ರಸಾದ್ ಅವರು ಸ್ಪಷ್ಟಪಡಿಸಿದರು.news_1792863532_2_561.webp

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಶನಿವಾರ ಭೇಟಿ ನೀಡಿದ ಹರಿಪ್ರಸಾದ್ ಅವರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

"ಸ್ವಾತಂತ್ರ್ಯ ಹೋರಾಟದ ಉಜ್ವಲ ಪರಂಪರೆ ಹೊಂದಿರುವ ಶಿವಮೊಗ್ಗ ಜಿಲ್ಲೆ ಕ್ರಾಂತಿಕಾರಿ ಹೋರಾಟಗಳು ಹಾಗೂ ಸಮಾಜವಾದಿ ಚಿಂತನೆಗಳಿಗೆ ಹೆಸರಾದ ನೆಲ. ಆದರೆ, ಸಮಾಜವಾದಿ ವಿಚಾರಧಾರೆಗೆ ಭದ್ರ ನೆಲೆಯಾಗಿದ್ದ ಜಿಲ್ಲೆ ಇಂದು ಕೋಮುವಾದದತ್ತ ವಾಲುತ್ತಿರುವುದು ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ವಿಚಾರವಾಗಿದೆ" ಎಂದು ಅಭಿಪ್ರಾಯಪಟ್ಟರು.

"ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸಂಘಟನಾತ್ಮಕವಾಗಿ ಬಲಿಷ್ಠವಾಗಿದೆ. ಈ ಶಕ್ತಿಯನ್ನು ತಳಮಟ್ಟದಲ್ಲಿ ಸೈದ್ಧಾಂತಿಕವಾಗಿ ಮತ್ತಷ್ಟು ಗಟ್ಟಿಗೊಳಿಸುವ ಮೂಲಕ ಕೋಮುವಾದಿ ರಾಜಕಾರಣವನ್ನು ಎದುರಿಸಬೇಕಿದೆ. ಶಿಕಾರಿಪುರದಲ್ಲಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಸ್ಮರಣಾರ್ಥ ನಡೆದ ಜನತಾ ಜೋಡೋ ಕಾರ್ಯಕ್ರಮದ ಯಶಸ್ಸೇ ಜಿಲ್ಲೆಯ ಕಾಂಗ್ರೆಸ್ ಸಂಘಟನಾ ಶಕ್ತಿಗೆ ಸಾಕ್ಷಿಯಾಗಿದೆ" ಎಂದು ತಿಳಿಸಿದರು.news_1792863533_3_636.webp

"ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ತೀರ್ಮಾನದಂತೆ ‘ಮತ ಉಳಿಸಿ – ದೇಶ ಉಳಿಸಿ’ ಅಭಿಯಾನವನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಬೇಕಿದೆ. ಮತದಾನದ ಹಕ್ಕು, ಸಂವಿಧಾನದ ಆಶಯಗಳು ಹಾಗೂ ಪ್ರಜಾಪ್ರಭುತ್ವದ ರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರ ಮೇಲಿದೆ" ಎಂದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿವಮೊಗ್ಗದಲ್ಲಿ ಸೈದ್ಧಾಂತಿಕ ಸಂಘಟನೆ ಬಲವರ್ಧನೆಯೇ ನಮ್ಮ ಸಂಕಲ್ಪ: ಬಿ ಕೆ ಹರಿಪ್ರಸಾದ್ಬೆಮ.ಸಾ.ಸಂಸ್ಥೆ ಸಿಬ್ಬಂದಿಯ ಅಪಘಾತ ವಿಮಾ ಪರಿಹಾರ ರೂ. 1.00 ಕೋಟಿಗೆ ಹೆಚ್ಚಳ ನಾರಾಯಣ ಗುರುಗಳ ಆಶಯದಂತೆ ಸಮಾಜ ಸಂಘಟನೆಯಾಗುತ್ತಿರುವುದು ಹೆಮ್ಮೆ ಸಂಗತಿಸಾರ್ವಜನಿಕ ಸ್ಥಳಗಳ ಸ್ವಚ್ಛತೆಗೆ ಆದ್ಯತೆ ನೀಡಿ-ಡಿ ಎಸ್‌ ರಮೇಶ್15 ದಿನಗಳಿಗೊಮ್ಮೆ ಪ್ರಗತಿ ಪರಿಶೀಲನೆ, ಪ್ರತ್ಯೇಕ ತಂಡ ರಚನೆಗೆ ಸೂಚನೆ, 24x7 ಮಾದರಿಯಲ್ಲಿ ಕೆಲಸ₹1,000 ಕೋಟಿ ಹೂಡಿಕೆಯ ಪೊದ್ದಾರ್ ಪ್ಲಂಬಿಂಗ್ ಪೈಪ್ಸ್ ಉತ್ಪಾದನಾ ಸ್ಥಾವರಕ್ಕೆ ಸಚಿವ ಎಂ ಬಿ ಪಾಟೀಲ ಚಾಲನೆಮಹಿಳೆಯರು ಸಮಾಜಮುಖಿಯಾಗಿ ಮುನ್ನೆಲೆಗೆ ಬರಲು ಸಿದ್ದರಾಮಯ್ಯನವರ ಕೊಡುಗೆ ಕಾರಣ: ಕೆ. ಎಂ. ಶಿವಲಿಂಗೇಗೌಡಹಾಸನದಲ್ಲಿ ಮೈಸೂರು ದಸರಾ ಮಾದರಿ ಕ್ರೀಡೋತ್ಸವ: ಸಚಿವ ಕೆ. ಎಂ. ಶಿವಲಿಂಗೇಗೌಡಆಕಾಶದಲ್ಲಿ ಕಾಮನಬಿಲ್ಲು ಕಾಣುವುದು ಒಂದು ಬೆಳಕಿನ ಆಟ.ಆರು ಜೀವ ಆಯುರ್ವೇದ ಆಸ್ಪತ್ರೆಗೆ ಆಯುಷ್ಯ ಸಚಿವಾಲಯದಿಂದ ಆಯುಷ್ ಕ್ವಾಲಿಟಿ ಮಾರ್ಕು ಗರಿ