LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹೊಂಡಾ ಕಾರ್ಸ್ ಇಂಡಿಯಾದಿಂದ ಹೊಸ ಹೊಂಡಾ ಎಲಿವೇಟ್ ಬಿಡುಗಡೆ

ಬೆಂಗಳೂರು: ಭಾರತದ ಪ್ರಮುಖ ಪ್ರೀಮಿಯಂ ಕಾರು ತಯಾರಿಕಾ ಸಂಸ್ಥೆಯಾದ ಹೊಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್, ತನ್ನ ಜನಪ್ರಿಯ ಮಧ್ಯಮ ಗಾತ್ರದ ಎಸ್‌.ಯು.ವಿ ವಾಹನಕ್ಕೆ ಹೊಸ ಆಕರ್ಷಕ ರೂಪವನ್ನು ನೀಡಿ ದಿ ನ್ಯೂ ಹೋಂಡಾ ಎಲಿವೇಟ್ ಅನ್ನು ಇಂದು ಬಿಡುಗಡೆ ಮಾಡಿದ್ದು ರಸ್ತೆಯ ಉಪಸ್ಥಿತಿಯನ್ನು ಮತ್ತಷ್ಟು ಸದೃಢಗೊಳಿಸುವುದರ ಜೊತೆಗೆ, ಹೊಸ ತಲೆಮಾರಿನ ಸೌಲಭ್ಯಗಳು ಮತ್ತು ಹೆಚ್ಚಿನ ಚಾಲನಾ ಸುಲಭತೆಯೊಂದಿಗೆ ಪ್ರೀಮಿಯಂ ಸೌಕರ್ಯವನ್ನು ಒದಗಿಸುತ್ತದೆ. ಅದೇ ಸಮಯದಲ್ಲಿ ಹೊಂಡಾ ಸಂಸ್ಥೆಯ ನೆಚ್ಚಿನ ತಾಂತ್ರಿಕ ಸಾಮರ್ಥ್ಯವನ್ನೂ ಸಹ ಕಾಯ್ದುಕೊಂಡಿದೆ ಎಂದು ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್‌ನ ಅಧ್ಯಕ್ಷ ಮತ್ತು ಸಿಇಒ ತೋಷಿಯುಕಿ ಯಾನಾಗಿಸಾವಾ ತಿಳಿಸಿದರು.

ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಸಕ್ರಿಯ ಮತ್ತು ಉತ್ಸಾಹಭರಿತ ಜೀವನಶೈಲಿಯನ್ನು ಹೊಂದಿರುವ ಹೊಸ ಪೀಳಿಗೆಯ ಎಸ್‌.ಯು.ವಿ ಗ್ರಾಹಕರಿಗಾಗಿ ವಿನ್ಯಾಸಗೊಳಿಸಲಾದ ಈ ನ್ಯೂ ಎಲಿವೇಟ್, ಪ್ರತಿಯೊಂದು ಪ್ರಯಾಣವನ್ನು ಆರಾಮದಾಯಕ, ಸುಲಭ ಮತ್ತು ವಿಶ್ವಾಸಾರ್ಹಗೊಳಿಸುವ ಮೂಲಕ ಅವರನ್ನು ಹೊಸ ಹಾದಿಗಳನ್ನು ಅನ್ವೇಷಿಸಲು ಪ್ರೇರೇಪಿಸುತ್ತದೆ.

“ಹೋಂಡಾ ಎಲಿವೇಟ್ ತನ್ನ ಆತ್ಮವಿಶ್ವಾಸದ ವಿನ್ಯಾಸ, ಬಹುಮುಖತೆ ಮತ್ತು ಆನಂದದಾಯಕ ಚಾಲನಾ ಅನುಭವದ ಮೂಲಕ ಗ್ರಾಹಕರೊಂದಿಗೆ ಬಲವಾದ ಬಾಂಧವ್ಯವನ್ನು ಸ್ಥಾಪಿಸಿದೆ. ಹೊಸ ಎಲಿವೇಟ್‌ ನೊಂದಿಗೆ, ನಾವು ಈ ವಿನ್ಯಾಸ, ಸೌಕರ್ಯ, ತಂತ್ರಜ್ಞಾನ ಮತ್ತು ಸುಲಭತೆಯಲ್ಲಿ ಗಮನಾರ್ಹ ಸುಧಾರಣೆಗಳನ್ನು ಮಾಡುವ ಮೂಲಕ ಮತ್ತಷ್ಟು ಗಂಭೀರ ಹಾಗೂ ಆಕರ್ಷಕ ರೂಪವನ್ನು ನೀಡುತ್ತಿದ್ದೇವೆ. ಇದರ ಮಾರಾಟದ ಪ್ರಮುಖ ಮಾರುಕಟ್ಟೆಯಾಗಿರುವ ಭಾರತವು ಜಾಗತಿಕವಾಗಿ ನ್ಯೂ ಎಲಿವೇಟ್ ಅನ್ನು ಬಿಡುಗಡೆ ಮಾಡುತ್ತಿರುವ ಮೊದಲ ದೇಶವಾಗಿದೆ. ಇದರ ಹೆಚ್ಚು ಗಂಭೀರ, ಗಟ್ಟಿಮುಟ್ಟಾದ ಶೈಲಿ ಮತ್ತು ವರ್ಧಿತ ಪ್ರೀಮಿಯಂ ಸೌಕರ್ಯಗಳನ್ನು ಇಂದಿನ ಎಸ್‌.ಯು.ವಿ ಗ್ರಾಹಕರ ಬೆಳೆಯುತ್ತಿರುವ ಆಕಾಂಕ್ಷೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ” ಎಂದು ಹೇಳಿದರು.

“ಈ ಹಣಕಾಸು ವರ್ಷದಲ್ಲಿ ನಾವು ಯೋಜಿಸಿರುವ ಆರು ಪ್ರಮುಖ ಬಿಡುಗಡೆಗಳಲ್ಲಿ ಇದು ಮೂರನೆಯದಾಗಿದೆ. ಪ್ರಸ್ತುತ ನಡೆಯುತ್ತಿರುವ ಹಬ್ಬದ ಋತುವಿನಲ್ಲಿ ನಮ್ಮ ಮಾರಾಟದ ವೇಗವನ್ನು ಹೆಚ್ಚಿಸಲು ಮತ್ತು ಗ್ರಾಹಕರಿಗೆ ಹೆಚ್ಚು ರೋಮಾಂಚನಕಾರಿ ಆಯ್ಕೆಗಳನ್ನು ನೀಡುವ ಮೂಲಕ ನಮ್ಮ ಉತ್ಪನ್ನಗಳ ಪಟ್ಟಿಯನ್ನು ಬಲಪಡಿಸಲು ಈ ಹೊಸ ಎಲಿವೇಟ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ”  ಎಂದು ಹೇಳಿದರು. news_1791481378_0_436.webp

ಉತ್ಪನ್ನದ ಪ್ರಮುಖಾಂಶಗಳು

•    ಹೊಸ ಹೋಂಡಾ ಎಲಿವೇಟ್ ಮತ್ತಷ್ಟು ಆತ್ಮವಿಶ್ವಾಸದ ಮತ್ತು ಸದೃಢ ಎಸ್‌.ಯು.ವಿ ಶೈಲಿಯನ್ನು ನೀಡಲು ವಿನ್ಯಾಸಗೊಳಿಸಲಾದ ನವೀಕೃತ ಹೊರರೂಪವನ್ನು ಹೊಂದಿದೆ. ಮರುವಿನ್ಯಾಸಗೊಳಿಸಲಾದ ಮುಂಬದಿ ಹೊಳೆಯುವ ಕಪ್ಪು ಮೇಲ್ಭಾಗದ ಪಟ್ಟಿಯೊಂದಿಗೆ ಸಂಪೂರ್ಣ ಹೊಸ ಬಲೆ ಮಾದರಿಯ ಗ್ರಿಲ್, ಕೆಳಗಿನ ಮುಂಭಾಗದ ಅಲಂಕಾರ ಮತ್ತು ಹೊಸ ಜಾಗದಲ್ಲಿ ಜೋಡಿಸಲಾದ ಹೋಂಡಾದ ಹೆಚ್ (H) ಲಾಂಛನವನ್ನು ಪರಿಚಯಿಸುತ್ತದೆ. ಹೊಸ ಮೂರು ಪಟ್ಟಿಗಳ ಸಿಗ್ನೇಚರ್ ಎಲ್‌ಇಡಿ ಲೈಟ್‌ ಗಳು ಪ್ರತ್ಯೇಕವಾದ ನೋಟವನ್ನು ನೀಡುತ್ತವೆ ಮತ್ತು ಮುಂಭಾಗದ ನೋಟದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ.
•    ಈ ಎಸ್‌.ಯು.ವಿ.ಯ ಸದೃಢ ಮತ್ತು ಆಕರ್ಷಕ ನೋಟವನ್ನು ಕೆಳಗಿನ ಮುಂಭಾಗದ ಗಾರ್ನಿಷ್, ಸೈಡ್ ಮತ್ತು ಫೆಂಡರ್ ಗಾರ್ನಿಷ್‌ ಗಳು ಹಾಗೂ ಹಿಂಭಾಗದ ಕೆಳಗಿನ ಬಂಪರ್ ಗಾರ್ನಿಷ್‌ ಮೇಲಿನ ಗ್ಲಾಸ್-ಬ್ಲ್ಯಾಕ್ ವಿನ್ಯಾಸವು ಮತ್ತಷ್ಟು ಹೆಚ್ಚಿಸುತ್ತದೆ. ನವೀಕರಿಸಿದ ರೂಫ್ ರೇಲ್ ಬಣ್ಣ ಮತ್ತು ಬರ್ಲಿನಾ ಬ್ಲ್ಯಾಕ್ ಹಾಗೂ ಡಾರ್ಕ್ ಕ್ಲಿಯರ್ ಫಿನಿಶ್‌ನಲ್ಲಿರುವ ಹೊಸ 17-ಇಂಚಿನ ಡ್ಯುಯಲ್-ಟೋನ್ ಮಿಲ್ಲಿಂಗ್ ಅಲಾಯ್ ವ್ಹೀಲ್‌ ಗಳು ಇದರ ಸ್ಪೋರ್ಟಿ ಮತ್ತು ಆಧುನಿಕ ನೋಟಕ್ಕೆ ಮೆರುಗು ನೀಡುತ್ತವೆ.
•    ·ಹಿಂಬದಿಯಲ್ಲಿ, ಅಗಲವಾಗಿ ಹರಡಿರುವ ಹೊಸ ಕನೆಕ್ಟೆಡ್ ಸಿಗ್ನೇಚರ್ ಎಲ್‌ಇಡಿ ಟೇಲ್ ಲ್ಯಾಂಪ್‌ ಗಳು ಕಾರಿಗೆ ಮತ್ತಷ್ಟು ವಿಶಾಲವಾದ ಮತ್ತು ಆಧುನಿಕ ನೋಟವನ್ನು ನೀಡಲಿದ್ದು, ಹೊಸ ಎಲಿವೇಟ್‌ ನ ಗಂಭೀರ ಹಾಗೂ ಪ್ರತ್ಯೇಕವಾದ ಹೊರರೂಪದ ವಿನ್ಯಾಸಕ್ಕೆ ಪರಿಪೂರ್ಣತೆಯನ್ನು ತರುತ್ತವೆ.
•    ಹೊಸ ಹೋಂಡಾ ಎಲಿವೇಟ್ ತನ್ನ ಸೂಕ್ತವಾದ ಎಸ್‌ಯುವಿ ಅಳತೆಗಳನ್ನು ಕಾಯ್ದುಕೊಂಡಿದೆ; ಇದು ಕ್ರಮವಾಗಿ 4,312 ಮಿ.ಮೀ. ಉದ್ದ, 1,790 ಮಿ.ಮೀ. ಅಗಲ ಮತ್ತು 1,650 ಮಿ.ಮೀ. ಎತ್ತರವನ್ನು ಹೊಂದಿದೆ. 220 ಮಿ.ಮೀ. ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,650 ಮಿ.ಮೀ. ವ್ಹೀಲ್‌ ಬೇಸ್‌ ನೊಂದಿಗೆ, ಈ ಅಳತೆಗಳು ನವೀಕರಿಸಿದ ವಿನ್ಯಾಸದ ಅಂಶಗಳೊಂದಿಗೆ ಸೇರಿ ಕಾರಿನ ಆತ್ಮವಿಶ್ವಾಸದ ರಸ್ತೆಯ ಉಪಸ್ಥಿತಿ ಮತ್ತು ಗಟ್ಟಿಮುಟ್ಟಾದ ಎಸ್‌.ಯು.ವಿ ಶೈಲಿಯನ್ನು ಮತ್ತಷ್ಟು ಬಲಪಡಿಸುತ್ತವೆ.
ಅನನ್ಯ ಅಭಿವ್ಯಕ್ತಿಗೆ ಹೊಸ ಬಣ್ಣ 
•    ಹೊಸ ಹೋಂಡಾ ಎಲಿವೇಟ್ ಪ್ರಕೃತಿಯಿಂದ ಪ್ರೇರಿತವಾದ ನಾರ್ಡಿಕ್ ಫಾರೆಸ್ಟ್ ಪರ್ಲ್ (ಕ್ರಿಸ್ಟಲ್ ಬ್ಲ್ಯಾಕ್ ಪರ್ಲ್ ರೂಫ್ ನೊಂದಿಗೆ ಏಕವರ್ಣ ಮತ್ತು ದ್ವಿವರ್ಣದ ಆಯ್ಕೆ) ಎಂಬ ಪ್ರತ್ಯೇಕವಾದ ಹೊಸ ಬಣ್ಣವನ್ನು ಪರಿಚಯಿಸುತ್ತದೆ. ಇದು ಎಸ್‌.ಯು.ವಿ.ಯ ಗಂಭೀರ ಸ್ವಭಾವಕ್ಕೆ ಪೂರಕವಾಗಿದ್ದು, ಸಾಹಸಮಯ ಹಾಗೂ ಅತ್ಯಾಧುನಿಕ ಮೆರುಗನ್ನು ನೀಡುತ್ತದೆ.
•    ಎಲಿವೇಟ್ ಕಾರು 7 ಆಕರ್ಷಕ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರಲಿದೆ - ನಾರ್ಡಿಕ್ ಫಾರೆಸ್ಟ್ ಪರ್ಲ್ (ಹೊಸದು), ಅಬ್ಸಿಡಿಯನ್ ಬ್ಲೂ ಪರ್ಲ್, ರೇಡಿಯೆಂಟ್ ರೆಡ್ ಮೆಟಾಲಿಕ್ (ಏಕವರ್ಣ ಮತ್ತು ದ್ವಿವರ್ಣ ಆಯ್ಕೆಗಳಲ್ಲಿ), ಲೂನಾರ್ ಸಿಲ್ವರ್ ಮೆಟಾಲಿಕ್, ಪ್ಲಾಟಿನಮ್ ವೈಟ್ ಪರ್ಲ್ (ಏಕವರ್ಣ ಮತ್ತು ದ್ವಿವರ್ಣ ಆಯ್ಕೆಗಳಲ್ಲಿ), ಮೀಟಿಯೊರಾಯ್ಡ್ ಗ್ರೇ ಮೆಟಾಲಿಕ್ ಮತ್ತು ಕ್ರಿಸ್ಟಲ್ ಬ್ಲ್ಯಾಕ್ ಪರ್ಲ್.
ಉನ್ನತೀಕರಿಸಿದ ಪ್ರೀಮಿಯಂ ಮತ್ತು ಸಕ್ರಿಯ ಕ್ಯಾಬಿನ್ 
•    ಹೊಸ ಎಲಿವೇಟ್ ತನ್ನ ಮೂಲ ಮಾದರಿಯಲ್ಲಿ ಇದ್ದ ವಿಶಾಲ, ಆರಾಮದಾಯಕ ಮತ್ತು ಅನುಕೂಲಕರ ಒಳಾಂಗಣವನ್ನು ಮತ್ತಷ್ಟು ವಿಸ್ತರಿಸಿ, ಸುಧಾರಿತ ಅರ್ಬನ್ ಆಕ್ಟಿವ್ ಮತ್ತು ಪ್ರೀಮಿಯಂ ಕ್ಯಾಬಿನ್ ಅನ್ನು ಪರಿಚಯಿಸುತ್ತದೆ. ಹೆಚ್ಚು ಪ್ರೀಮಿಯಂ ಮತ್ತು ಆಧುನಿಕ ವಾತಾವರಣವನ್ನು ಒದಗಿಸಲು ವಿನ್ಯಾಸಗೊಳಿಸಲಾದ ಈ ನವೀಕೃತ ಕ್ಯಾಬಿನ್, ಕ್ರಿಯಾಶೀಲ ಹಾಗೂ ಆಧುನಿಕ ಶೈಲಿಯನ್ನು ಹೆಚ್ಚಿನ ಸೌಕರ್ಯ ಮತ್ತು ಸುಧಾರಿತ ಮೆರುಗಿನೊಂದಿಗೆ ಸಂಯೋಜಿಸುತ್ತದೆ.
•    ಅತ್ಯಂತ ಮೃದುವಾದ ಸ್ಪರ್ಶ ಹೊಂದಿರುವ ಪ್ರೀಮಿಯಂ ಡ್ಯುಯಲ್-ಟೋನ್ ಐವರಿ-ಬ್ಲ್ಯಾಕ್ ಕ್ಯಾಬಿನ್ ಹೆಚ್ಚು ವಿಶಾಲ ಮತ್ತು ಆಕರ್ಷಕ ವಾತಾವರಣ ಸೃಷ್ಟಿಸುತ್ತದೆ. ಆಕ್ಟಿವ್ ಆರೆಂಜ್ ಬಣ್ಣದ ರ‍್ಯಾಪ್ -ಅರೌಂಡ್ ಆಂಬಿಯೆಂಟ್ ಲೈಟಿಂಗ್, ಹೊಸ ಒಳಾಂಗಣ ಅಲಂಕಾರಿಕ ವಿನ್ಯಾಸಗಳು ಮತ್ತು ಪಿಯಾನೋ ಬ್ಲ್ಯಾಕ್ ಏರ್ ಔಟ್‌ಲೆಟ್ ಟ್ರಿಮ್‌ ಗಳು ಮತ್ತಷ್ಟು ಅತ್ಯಾಧುನಿಕ ಹಾಗೂ ಪ್ರೀಮಿಯಂ ಅನುಭವವನ್ನು ನೀಡುತ್ತವೆ. ಪ್ರೀಮಿಯಂ ಟಚ್ ಕ್ಯಾಬಿನ್ ಲೈಟ್‌ ಗಳು ಮತ್ತು ಪ್ರಯಾಣಿಕರ ಕಡೆಯ ವ್ಯಾನಿಟಿ ಮಿರರ್ ಒಳಾಂಗಣಕ್ಕೆ ಆಧುನಿಕ ಮೆರುಗನ್ನು ನೀಡುವ ಮೂಲಕ ಕ್ಯಾಬಿನ್ ಅನ್ನು ಮತ್ತಷ್ಟು ಸುಂದರಗೊಳಿಸುತ್ತವೆ.
•    ·ಹೊಸ ಎಲಿವೇಟ್ ಮುಂಭಾಗ ಮತ್ತು ಹಿಂಭಾಗದಲ್ಲಿ ವೆಂಟಿಲೇಟೆಡ್ ಸೀಟ್‌ ಗಳು, ಪ್ರೀಮಿಯಂ ಲೆದರ್ ಸೀಟ್‌ ಗಳು, 8-ವೇ ಡ್ರೈವರ್ ಮತ್ತು 4-ವೇ ಮುಂಭಾಗದ ಪ್ರಯಾಣಿಕರ ಪವರ್-ಅಡ್ಜಸ್ಟಬಲ್ ಸೀಟ್‌ ಗಳು ಹಾಗೂ ಒನ್-ಟಚ್ ಎಲೆಕ್ಟ್ರಿಕ್ ಸನ್‌ ರೂಫ್‌ನೊಂದಿಗೆ ಅತ್ಯುತ್ತಮ ಸೀಟಿಂಗ್ ಸೌಕರ್ಯವನ್ನು ಪರಿಚಯಿಸುತ್ತದೆ. ಈ ಎಲ್ಲಾ ಸುಧಾರಣೆಗಳು ಎಲಿವೇಟ್‌ನ ಆಕರ್ಷಣೆಯ ಪ್ರಮುಖ ಭಾಗವಾಗಿರುವ ವಿಶಾಲತೆ, ಅನುಕೂಲತೆ ಮತ್ತು ದೈನಂದಿನ ಬಳಕೆಯ ಸುಲಭತೆಯನ್ನು ಕಾಯ್ದುಕೊಳ್ಳುವುದರ ಜೊತೆಗೆ, ಕಾರಿನ ಸಂಪೂರ್ಣ ಕ್ಯಾಬಿನ್ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸುತ್ತವೆ.

ಪ್ರತಿನಿತ್ಯದ ಅನುಕೂಲಕ್ಕೆ ಸ್ಮಾರ್ಟ್ ತಂತ್ರಜ್ಞಾನ 
•    ·

*ಹೊಸ ಎಲಿವೇಟ್ ದಿನನಿತ್ಯದ ಚಾಲನೆಯನ್ನು ಮತ್ತಷ್ಟು ಸುಲಭ, ಸಂಪರ್ಕಿತ ಮತ್ತು ಅನುಕೂಲಕರವಾಗಿಸಲು ವಿನ್ಯಾಸಗೊಳಿಸಲಾದ ತಂತ್ರಜ್ಞಾನದ ವಿಶೇಷತೆಗಳ ಸಮಗ್ರ ಶ್ರೇಣಿಯನ್ನು ತರುತ್ತದೆ. 360° ಸರೌಂಡ್ ವಿಷನ್ ಕ್ಯಾಮರಾ(ಮಲ್ಟಿ-ವ್ಯೂ) ವಾಹನದ ಸುತ್ತಲಿನ ಸಂಪೂರ್ಣ ನೋಟವನ್ನು ಒದಗಿಸುತ್ತದೆ. ಹಾಗೆಯೇ, ಮುಂಭಾಗದ ಪಾರ್ಕಿಂಗ್ ಸೆನ್ಸರ್‌ ಗಳು, ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ ಗಳು ಮತ್ತು ಕ್ಯಾಮೆರಾ ವ್ಯವಸ್ಥೆಯೊಂದಿಗೆ ಸೇರಿ ವಾಹನವನ್ನು ತಿರುಗಿಸುವಾಗ ಹಾಗೂ ಪಾರ್ಕ್ ಮಾಡುವಾಗ ಹೆಚ್ಚಿನ ಆತ್ಮವಿಶ್ವಾಸವನ್ನು ನೀಡುತ್ತವೆ. ಚಾಲಕನಿಗೆ ಬೆಂಬಲವಾಗಿ 17.78 ಸೆಂ.ಮೀ (7-ಇಂಚು) ಎಚ್‌.ಡಿ ಪೂರ್ಣ-ಬಣ್ಣದ ಟಿ.ಎಫ್‌.ಟಿ ಮಲ್ಟಿ-ಇನ್ಫರ್ಮೇಷನ್ ಡಿಸ್ಪ್ಲೇ ಹೊಂದಿರುವ ಡಿಜಿಟಲ್-ಅನಲಾಗ್ ಸಮಗ್ರ ಮೀಟರ್ ಇರಲಿದ್ದು, ಇದು ಪ್ರೀಮಿಯಂ ಬಿಳಿ ಮತ್ತು ಕಪ್ಪು ಬಣ್ಣದ ಗ್ರಾಫಿಕ್ಸ್‌ನಲ್ಲಿ ಇಂಧನ ಬಳಕೆ, ಟ್ರಿಪ್ ಮೀಟರ್, ಹೊರಗಿನ ತಾಪಮಾನ, ಜಿ-ಮೀಟರ್ ಮತ್ತು ಗಡಿಯಾರದಂತಹ ಪ್ರಮುಖ ಮಾಹಿತಿಯನ್ನು ಹಾಗೂ ಅಗತ್ಯಕ್ಕೆ ತಕ್ಕಂತೆ ಬದಲಾಯಿಸಬಹುದಾದ ವಾಹನದ ಮತ್ತು ಹೊಂಡಾ ಸೆನ್ಸಿಂಗ್ ಸೆಟ್ಟಿಂಗ್‌ ಗಳನ್ನು ಪ್ರದರ್ಶಿಸುತ್ತದೆ.
•    ·ಕ್ಯಾಬಿನ್‌ ನ ಮಧ್ಯಭಾಗದಲ್ಲಿ 26.03 ಸೆಂ.ಮೀ ಗಾತ್ರದ ಫ್ಲೋಟಿಂಗ್ ಐಪಿಎಸ್ ಎಚ್‌.ಡಿ ಟಚ್ ಸ್ಕ್ರೀನ್ ಡಿಸ್ಪ್ಲೇ ಆಡಿಯೊ ಹೊಂದಿದ್ದು, ಇದು ವೈರ್‌ಲೆಸ್ ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ, ವೆಬ್‌ಲಿಂಕ್, ಬ್ಲೂಟೂತ್ ಮತ್ತು ಯು.ಎಸ್‌.ಬಿ ಸಂಪರ್ಕ ಸೌಲಭ್ಯಗಳನ್ನು ಒದಗಿಸುತ್ತದೆ. ಜೊತೆಗೆ, 360° ಸರೌಂಡ್ ವಿಷನ್ ಕ್ಯಾಮರಾ, ಗೈಡ್‌ಲೈನ್‌ ಗಳನ್ನೊಳಗೊಂಡ ಮಲ್ಟಿ-ಆಂಗಲ್ ರಿಯರ್ ವ್ಯೂ, ಲೇನ್‌ವಾಚ್ ವ್ಯೂ, ಗಡಿಯಾರ, ಕ್ಯಾಲೆಂಡರ್, ದಿಕ್ಸೂಚಿ, ಅಗತ್ಯಕ್ಕೆ ತಕ್ಕಂತೆ ರೂಪಿಸಬಲ್ಲ ಚಿತ್ರ ಹಾಗೂ ಇನ್ಫೋಟೈನ್‌ಮೆಂಟ್ ಶಾರ್ಟ್‌ಕಟ್‌ ಗಳಂತಹ ಅನುಕೂಲಕರ ವಿಶೇಷತೆಗಳನ್ನು ಹೊಂದಿದೆ.
•    ·ಈ ತಂತ್ರಜ್ಞಾನದ ಪ್ಯಾಕೇಜ್ ಮುಂಭಾಗ ಮತ್ತು ಹಿಂಭಾಗದ ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ ಗಳು, ಆಟೋ ಕ್ಲೀನ್ ಏರ್ ಕಾರ್ಯಕ್ಷಮತೆಯೊಂದಿಗೆ ಪಿಎಮ್ 2.5 ಏರ್ ಕ್ವಾಲಿಟಿ ಡಿಸ್ಪ್ಲೇ, ಎಲೆಕ್ಟ್ರೋಸ್ಟಾಟಿಕ್ ಟಚ್ ನಿಯಂತ್ರಣಗಳು ಮತ್ತು ನಾಲ್ಕು ಸ್ಪೀಕರ್‌ ಗಳು ಹಾಗೂ ನಾಲ್ಕು ಟ್ವೀಟರ್‌ ಗಳನ್ನು ಒಳಗೊಂಡ 8-ಸ್ಪೀಕರ್ ಪ್ರೀಮಿಯಂ ಸರೌಂಡ್ ಸಿಸ್ಟಮ್‌ನೊಂದಿಗೆ ಮತ್ತಷ್ಟು ಪರಿಪೂರ್ಣಗೊಂಡಿದ್ದು, ಅನುಕೂಲತೆ, ಸಂಪರ್ಕ ಸಾಧನೆ ಮತ್ತು ಕಾರಿನೊಳಗಿನ ಸಂಪೂರ್ಣ ಅನುಭವವನ್ನು ಹೆಚ್ಚಿಸುತ್ತದೆ.

ಪೂರ್ವಸಿದ್ಧ ಹೊಂಡಾ ಕಾರ್ಯಕ್ಷಮತೆ 

•    ಹೊಸ ಹೊಂಡಾ ಎಲಿವೇಟ್ ಕಾರು ಹೊಂಡಾದ ಪೂರ್ವಸಿದ್ಧ 1.5-ಲೀಟರ್ ಐ-ವಿಟೆಕ್ ಡಿ.ಒ.ಹೆಚ್‌.ಸಿ ಪೆಟ್ರೋಲ್ ಎಂಜಿನ್‌ನೊಂದಿಗೆ ಮುಂದುವರಿಯುತ್ತದೆ. ಇದು 6-ಸ್ಪೀಡ್ ಮ್ಯಾನುಯಲ್ ಟ್ರಾನ್ಸ್‌ಮಿಷನ್ ಅಥವಾ ಸ್ಪೋರ್ಟಿ 7 ಸ್ಪೀಡ್ ಪ್ಯಾಡಲ್ ಶಿಫ್ಟ್ ಹೊಂದಿರುವ ಸಿವಿಟಿಯೊಂದಿಗೆ ಜೋಡಿಸಲ್ಪಟ್ಟಿದ್ದು, ಕ್ರೀಡಾತ್ಮಕ ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆಯ ನಡುವೆ ಉತ್ತಮ ಸಮತೋಲನವನ್ನು ನೀಡುತ್ತದೆ. ಈ ಎಂಜಿನ್ 6,600 ಆರ್‌.ಪಿ.ಎಂ.ನಲ್ಲಿ 89 ಕಿಲೋವ್ಯಾಟ್ (121 ಪಿಎಸ್) ಪವರ್ ಮತ್ತು 4,300 ಆರ್‌ಪಿಎಮ್‌ನಲ್ಲಿ 145 ಎನ್‌ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಎಂಟಿಯಲ್ಲಿ ಲೀಟರ್‌ಗೆ 15.31 ಕಿ.ಮೀ ಮತ್ತು ಸಿವಿಟಿ ಮಾದರಿಯಲ್ಲಿ ಲೀಟರ್‌ಗೆ 16.61 ಕಿ.ಮೀ ಇಂಧನ ಕ್ಷಮತೆ ನೀಡುತ್ತದೆ.

ಉನ್ನತೀಕರಿಸಿದ ಸುರಕ್ಷತೆ ಮತ್ತು ಚಾಲನಾ ನೆರವು

•    ಹೊಸ ಹೊಂಡಾ ಎಲಿವೇಟ್ ಪ್ರಯಾಣಿಕರಿಗೆ ಸುರಕ್ಷತೆ ಮತ್ತು ನಂಬಿಕೆಯನ್ನು ಒದಗಿಸಲು ವಿನ್ಯಾಸಗೊಳಿಸಲಾದ ಸಕ್ರಿಯ ಮತ್ತು ಸ್ವಯಂಚಾಲಿತ ಸುರಕ್ಷತಾ ತಂತ್ರಜ್ಞಾನಗಳ ಸಮಗ್ರ ವ್ಯವಸ್ಥೆಯೊಂದಿಗೆ ಹೊಂಡಾದ ಜಾಗತಿಕ ಸುರಕ್ಷತಾ ಮಾನದಂಡಗಳನ್ನು ಒಳಗೊಂಡಿದೆ. ಈ ಸುರಕ್ಷತಾ ಸೌಲಭ್ಯಗಳಲ್ಲಿ ಆರು ಏರ್‌ಬ್ಯಾಗ್‌ ಗಳು, ಎಲ್ಲಾ ಚಕ್ರಗಳ ಡಿಸ್ಕ್ ಬ್ರೇಕ್‌ಗಳು (ಸಿವಿಟಿಯಲ್ಲಿ), ಇಬಿಡಿ ಮತ್ತು ಬ್ರೇಕ್ ಅಸಿಸ್ಟ್ ಹೊಂದಿರುವ ಎಬಿಎಸ್, ಎಜಿಲ್ ಹ್ಯಾಂಡ್ಲಿಂಗ್ ಅಸಿಸ್ಟ್‌ನೊಂದಿಗೆ ವೆಹಿಕಲ್ ಸ್ಟೆಬಿಲಿಟಿ ಅಸಿಸ್ಟ್, ಹಿಲ್ ಸ್ಟಾರ್ಟ್ ಅಸಿಸ್ಟ್, ಆಟೋ ಬ್ರೇಕ್ ಹೋಲ್ಡ್ ಹೊಂದಿರುವ ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಮಲ್ಟಿ-ಆಂಗಲ್ ರಿಯರ್ ಕ್ಯಾಮೆರಾ, 360° ವ್ಯೂ ಕ್ಯಾಮೆರಾ, ಫಾಲೋ ಮಿ ಹೋಮ್ ಮತ್ತು ಲೀಡ್ ಮಿ ಟು ಕಾರ್ ವೈಶಿಷ್ಟ್ಯಗಳಿರುವ ಆಟೋ ಹೆಡ್‌ಲ್ಯಾಂಪ್‌ಗಳು, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್, ಕೆಳಗಿನ ಆಂಕರೇಜ್‌ಗಳು ಮತ್ತು ಟಾಪ್ ಟೆಥರ್ ಹೊಂದಿರುವ ಐಸೋಫಿಕ್ಸ್-ಹೊಂದಾಣಿಕೆಯ ಹಿಂಭಾಗದ ಸೀಟ್‌ ಗಳು ಹಾಗೂ ಆಂಟಿ-ಥೆಫ್ಟ್ ಅಲಾರಂ ಹೊಂದಿರುವ ಇಮ್ಮೊಬಿಲೈಸರ್ ಸೇರಿವೆ. ವಾಹನವು ಹೋಂಡಾದ ಸುಧಾರಿತ ಅಡ್ವಾನ್ಸ್ಡ್ ಕಂಪ್ಯಾಟಿಬಿಲಿಟಿ ಎಂಜಿನಿಯರಿಂಗ್™️ (ಏಸ್™️) ಬಾಡಿ ರಚನೆಯನ್ನು ಹೊಂದಿದ್ದು, ಇದು ಅಪಘಾತದ ಸಂದರ್ಭದಲ್ಲಿ ಇತರೆ ವಾಹನಗಳಿಗೆ ಆಗುವ ಹಾನಿಯನ್ನು ಕಡಿಮೆ ಮಾಡಲು ನೆರವಾಗುವುದರ ಜೊತೆಗೆ ಒಳಗಿರುವ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ.
•    ಹೊಸ ಎಲಿವೇಟ್ ಹೊಂಡಾದ ಸುಧಾರಿತ ಚಾಲನಾ-ಸಹಾಯ ಸುರಕ್ಷತಾ ತಂತ್ರಜ್ಞಾನವಾದ ಹೊಂಡಾ ಸೆನ್ಸಿಂಗ್ ವ್ಯವಸ್ಥೆಯನ್ನು ಹೊಂದಿದೆ. ಇದು ಮುಂದಿನ ರಸ್ತೆಯನ್ನು ಗಮನಿಸಲು, ಚಾಲಕನನ್ನು ಸಂಭಾವ್ಯ ಅಪಾಯಗಳ ಬಗ್ಗೆ ಎಚ್ಚರಿಸಲು ಮತ್ತು ಅಗತ್ಯವಿದ್ದಲ್ಲಿ ಅಪಘಾತದ ತೀವ್ರತೆಯನ್ನು ತಡೆಯಲು ಅಥವಾ ಕಡಿಮೆ ಮಾಡಲು ಅಗಲವಾದ ಹಾಗೂ ದೂರದ ವ್ಯಾಪ್ತಿಯನ್ನು ಪತ್ತೆಹಚ್ಚುವ ಉನ್ನತ ಕಾರ್ಯಕ್ಷಮತೆಯ ಮುಂಭಾಗದ ಕ್ಯಾಮೆರಾವನ್ನು ಬಳಸುತ್ತದೆ. 'ಹೋಂಡಾ ಸೆನ್ಸಿಂಗ್' ವ್ಯವಸ್ಥೆಯು ಅಪಘಾತ ತಡೆಯುವ ಬ್ರೇಕಿಂಗ್ ವ್ಯವಸ್ಥೆ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ರಸ್ತೆ ನಿರ್ಗಮನ ತಡೆ ವ್ಯವಸ್ಥೆ, ಲೇನ್‌ನಲ್ಲಿ ವಾಹನ ಕಾಯ್ದುಕೊಳ್ಳುವ ಸಹಾಯ ವ್ಯವಸ್ಥೆ (ಎಲ್.ಕೆ.ಎ.ಎಸ್.), ಮುಂದಿನ ವಾಹನದ ಚಲನೆ ತಿಳಿಸುವ ವ್ಯವಸ್ಥೆ ಮತ್ತು ಆಟೋ ಹೈ-ಬೀಮ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸಿವಿಟಿ ಮಾದರಿಗಳಲ್ಲಿ  ಕಡಿಮೆ ವೇಗದ ಟ್ರಾಫಿಕ್ ಪರಿಸ್ಥಿತಿಗಳಲ್ಲಿ ಚಾಲನೆಯ ಸುಲಭತೆಯನ್ನು ಹೆಚ್ಚಿಸಲು ಲೋ ಸ್ಪೀಡ್ ಫಾಲೋ (ಎಲ್.ಎಸ್.ಎಫ್.) ಸೌಲಭ್ಯವೂ ಇದೆ.
ಗ್ರೇಡ್ ಗಳು ಮತ್ತು ಟ್ರಾನ್ಸ್ ಮಿಷನ್ ಆಯ್ಕೆಗಳು
•    ಹೊಸ ಹೊಂಡಾ ಎಲಿವೇಟ್ ಮ್ಯಾನುಯಲ್ ಟ್ರಾನ್ಸ್‌ಮಿಷನ್‌ ನಲ್ಲಿ ಐದು ಆವೃತ್ತಿಗಳಲ್ಲಿ – ಎಸ್'ವಿ, ವಿ, ವಿ'ಎಕ್ಸ್, ಝಡ್'ಎಕ್ಸ್ ಮತ್ತು ಝಡ್'ಎಕ್ಸ್+; ಹಾಗೂ ಸಿವಿಟಿ ಟ್ರಾನ್ಸ್‌ಮಿಷನ್‌ನಲ್ಲಿ ನಾಲ್ಕು ಆವೃತ್ತಿಗಳಲ್ಲಿ – ವಿ, ವಿ'ಎಕ್ಸ್, ಝಡ್'ಎಕ್ಸ್ ಮತ್ತು ಝಡ್'ಎಕ್ಸ್+ಲಭ್ಯವಿರಲಿದೆ.
ವಾರೆಂಟಿ ಮತ್ತು ಮನಃಶಾಂತಿ
•    ಹೊಸ ಹೋಂಡಾ ಎಲಿವೇಟ್ ಕಾರು ಖರೀದಿಸಿದ ದಿನಾಂಕದಿಂದ 3 ವರ್ಷ/ಅನಿಯಮಿತ ಕಿಲೋಮೀಟರ್‌ ಗಳ ಪ್ರಮಾಣಿತ ವಾರಂಟಿಯೊಂದಿಗೆ ಬರಲಿದೆ. ಗ್ರಾಹಕರು 7 ವರ್ಷ/ಅನಿಯಮಿತ ಕಿಲೋಮೀಟರ್‌ ಗಳವರೆಗೆ ವಿಸ್ತೃತ ವಾರಂಟಿ ಮತ್ತು 10 ವರ್ಷ/1,20,000 ಕಿಲೋಮೀಟರ್‌ ಗಳವರೆಗೆ ಎನಿಟೈಮ್ ವಾರಂಟಿ  ಆಯ್ಕೆಯನ್ನು ಸಹ ಪಡೆದುಕೊಳ್ಳಬಹುದು, ಇದು ವಾಹನದ ಮಾಲೀಕತ್ವದ ಉದ್ದಕ್ಕೂ ಹೆಚ್ಚಿನ ನೆಮ್ಮದಿಯನ್ನು ನೀಡುತ್ತದೆ.
ಬೆಲೆ ರೂ.ಗಳಲ್ಲಿ (ಎಕ್ಸ್-ಶೋರೂಂ, ದೆಹಲಿ) 

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೃಹತ್ ‘ಸೇವಾ ಜ್ಯೋತಿ ಯಾತ್ರೆ’- ಬೈಕ್ ರಾಲಿಗೆ ಚಾಲನೆ – ‘ವಿಕಸಿತ ಭಾರತ – ಸಂಕಲ್ಪ ಸಭೆ’ ಯಶಸ್ವಿಸಾರ್ವಜನಿಕ ಸಾರಿಗೆಯಲ್ಲಿ ನಾವೀನ್ಯತೆ: ಬಿಎಂಟಿಸಿಗೆ ‘ಚೇಂಜ್ ಮೇಕರ್ ಅವಾರ್ಡ್ಹೊಂಡಾ ಕಾರ್ಸ್ ಇಂಡಿಯಾದಿಂದ ಹೊಸ ಹೊಂಡಾ ಎಲಿವೇಟ್ ಬಿಡುಗಡೆಸ್ಟಿಂಗ್ ಬಗ್ಗೆ ಯಾರಿಗೆ ಜ್ಞಾನ ಜಾಸ್ತಿ ಅನ್ನೋದು ಜಗತ್ತಿಗೆ ಗೊತ್ತಿದೆ - ನಿಖಿಲ್ ಕುಮಾರಸ್ವಾಮಿ ಟಾಂಗ್50 ವರ್ಷಗಳಿಂದ ದಲಿತರ ಸಮಸ್ಯೆ ಈಡೇರಿಲ್ಲ ನೀವಾದರೂ ಈಡೇರಿಸ್ತೀರಾ? ನವದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟದ ಪ್ರತಿಭಟನೆಯಲ್ಲಿ ದೆಹಲಿ ಪೊಲೀಸರಿಂದ ಗುಂಡಗಿರಿ?ಬ್ಲಾಕ್‌, ಮಂಡಲ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು; ‘ಮತ ಉಳಿಸಿ–ದೇಶ ಉಳಿಸಿ’ ಹೋರಾಟ ತೀವ್ರಗೊಳಿಸಲು ನಿರ್ಧಾರಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನ ಬಳಸಿ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳ ಸ್ಥಿತಿಗತಿ ಸಮೀಕ್ಷೆಎಸ್.ಬಿಂಗೀಪುರದಲ್ಲಿ ಪಾಲಿಕೆಯ ಪ್ರಾಣಿ ಚಿತಾಗಾರ ಸ್ಥಾಪನೆಗೆ ಯೋಜನೆ: ಆಯುಕ್ತ ಕೆ.ಎನ್. ರಮೇಶ್ಟಿ.ಡಿ.ಆರ್. ಸಂಬಂಧಿಸಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಾಹಿತಿ/ತಾಂತ್ರಿಕ ಕಾರ್ಯಾಗಾರ