LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಎಸ್.ಬಿಂಗೀಪುರದಲ್ಲಿ ಪಾಲಿಕೆಯ ಪ್ರಾಣಿ ಚಿತಾಗಾರ ಸ್ಥಾಪನೆಗೆ ಯೋಜನೆ: ಆಯುಕ್ತ ಕೆ.ಎನ್. ರಮೇಶ್

*ಮಾಧ್ಯಮ ಪ್ರಕಟಣೆ*

*ಬೆಂಗಳೂರು ದಕ್ಷಿಣ ನಗರ ಪಾಲಿಕೆ*

*ಬೆಂಗಳೂರು, ಅಕ್ಟೋಬರ್ 07, 2026*

ಎಸ್.ಬಿಂಗೀಪುರದಲ್ಲಿ ಪಾಲಿಕೆಯ ಪ್ರಾಣಿ ಚಿತಾಗಾರ ಸ್ಥಾಪನೆಗೆ ಯೋಜನೆ: ಆಯುಕ್ತ ಕೆ.ಎನ್. ರಮೇಶ್

*ಸತ್ತ ಪ್ರಾಣಿಗಳ ಕಳೇಬರ ವೈಜ್ಞಾನಿಕ ವಿಲೇವಾರಿಗಾಗಿ ಕ್ರಮ: ಆಯುಕ್ತ ಕೆ.ಎನ್. ರಮೇಶ್*

ಬೆಂಗಳೂರು :ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸತ್ತ ಪ್ರಾಣಿಗಳ ಕಳೇಬರಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಸುಸಜ್ಜಿತ ಪ್ರಾಣಿ ಚಿತಾಗಾರವನ್ನು ಶೀಘ್ರವೇ ಸ್ಥಾಪಿಸಲು ತುರ್ತುಗಾಗಿ ಯೋಜನೆ ರೂಪಿಸಲಾಗುತ್ತಿದೆ ಎಂದು ಪಾಲಿಕೆ ಆಯುಕ್ತರಾದ ಶ್ರೀ ಕೆ.ಎನ್. ರಮೇಶ್ ರವರು ತಿಳಿಸಿದರು.

*ಪಾಲಿಕೆಗೊಂದು ಪ್ರಾಣಿ ಚಿತಾಗಾರ ನಿರ್ಮಾಣಕ್ಕೆ ಸಚಿವರ ನಿರ್ದೇಶನ*
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 05 ನಗರ ಪಾಲಿಕೆಗಳಲ್ಲಿ, ಪಾಲಿಕೆಗೊಂದರಂತೆ ಸತ್ತ ಪ್ರಾಣಿಗಳ ಕಳೇಬರವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಪ್ರಾಣಿಗಳ ಚಿತಾಗಾರಗಳನ್ನು ಸ್ಥಾಪಿಸುವಂತೆ ಗ್ರೇಟರ್ ಬೆಂಗಳೂರು ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ರವರು ನೀಡಿದ್ದ ಸೂಚನೆ ಮೇರೆಗೆ, ಪಾಲಿಕೆ ವ್ಯಾಪ್ತಿಯಲ್ಲಿ ನೂತನ ಚಿತಾಗಾರ ಸ್ಥಾಪನೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

*ತಜ್ಞರು ಹಾಗೂ ಅನುಭವಿ ಸಂಸ್ಥೆಗಳೊಂದಿಗೆ ಮಹತ್ವದ ಸಮಾಲೋಚನೆ*
ಯೋಜನೆಯ ಅನುಷ್ಠಾನದ ಕುರಿತು ಪಾಲಿಕೆ ಆಯುಕ್ತರ ಅಧ್ಯಕ್ಷತೆಯಲ್ಲಿ ಇಂದು ಸಭೆ ನಡೆದಿದ್ದು, ಈಗಾಗಲೇ ಪ್ರಾಣಿ ಚಿತಾಗಾರಗಳನ್ನು ಸ್ಥಾಪಿಸಿ ನಿರ್ವಹಿಸುತ್ತಿರುವ ಅನುಭವವುಳ್ಳ ಸಂಸ್ಥೆಗಳು ಹಾಗೂ ತಜ್ಞರೊಂದಿಗೆ ಚರ್ಚೆ ನಡೆಸಲಾಯಿತು. ಚಿತಾಗಾರಕ್ಕೆ ಬೇಕಾಗುವ ಜಾಗದ ವಿಸ್ತೀರ್ಣ, ನಕ್ಷೆ, ವಿದ್ಯುತ್, ಎಲ್‌ಪಿಜಿ, ಸಿಎನ್‌ಜಿ ಅಥವಾ ಹೈಬ್ರಿಡ್ ಇಂಧನ ವ್ಯವಸ್ಥೆ, ನಿರ್ಮಾಣದ ಅಂದಾಜು ವೆಚ್ಚ ಹಾಗೂ ಕಾಲಮಿತಿ, ಪ್ರತಿ ಕಳೇಬರದ ದಹನಕ್ಕೆ ತಗಲುವ ವೆಚ್ಚ, ದಿನವೊಂದಕ್ಕೆ ದಹನ ಮಾಡಬಹುದಾದ ಪ್ರಾಣಿಗಳ ಸಂಖ್ಯೆ ಮತ್ತು ಸಂಬಂಧಿತ ಇಲಾಖೆಗಳಿಂದ ಪಡೆಯಬೇಕಾದ ಶಾಸನಬದ್ಧ ಅನುಮೋದನೆಗಳ ಕುರಿತು ವಿಸ್ತೃತವಾಗಿ ಆಯುಕ್ತರು ಪರಿಶೀಲನೆ ನಡೆಸಿದರು. 

*ಎಸ್. ಬಿಂಗೀಪುರ ಬಳಿ ಸ್ಥಳ ಗುರುತು*
ಜಿಗಣಿ ಹೋಬಳಿಯ ಎಸ್. ಬಿಂಗಿಪುರದಲ್ಲಿನ ಬೇಗೂರು-ಕೊಪ್ಪ ಮುಖ್ಯರಸ್ತೆಯಲ್ಲಿ ಪಾಲಿಕೆಗೆ ಸೇರಿದ ಜಾಗದಲ್ಲಿ ನೂತನ ಪ್ರಾಣಿ ಚಿತಾಗಾರವನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಈ ಯೋಜನೆಗೆ ಸಂಬಂಧಿಸಿದಂತೆ 2026-27ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಅಗತ್ಯ ವೆಚ್ಚದ ಹಣವನ್ನು ಕಾಯ್ದಿರಿಸಲಾಗಿದೆ.

*ತ್ವರಿತವಾಗಿ ಟೆಂಡರ್ ಪ್ರಕ್ರಿಯೆಗೆ ಆಯುಕ್ತರ ಸೂಚನೆ*
ಸಾರ್ವಜನಿಕರಿಂದ ಹಾಗೂ ಪ್ರಾಣಿ ಪ್ರಿಯರಿಂದ ಈ ಭಾಗದಲ್ಲಿ ಪ್ರಾಣಿ ಚಿತಾಗಾರ ಸ್ಥಾಪನೆಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿರುವುದರಿಂದ, ಯಾವುದೇ ವಿಳಂಬವಿಲ್ಲದೆ ತ್ವರಿತಗತಿಯಲ್ಲಿ ಟೆಂಡರ್ ಕರೆದು ಕಾಮಗಾರಿ ಆರಂಭಿಸುವಂತೆ ಅಧಿಕಾರಿಗಳಿಗೆ ಆಯುಕ್ತರು ಸೂಚನೆ ನೀಡಿದರು.

ಈ ವೇಳೆ ಪಾಲಿಕೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ. ಡಿ. ಎನ್. ಶ್ರೀನಾಥ್, AEE  ಶ್ರೀ ರವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೃಹತ್ ‘ಸೇವಾ ಜ್ಯೋತಿ ಯಾತ್ರೆ’- ಬೈಕ್ ರಾಲಿಗೆ ಚಾಲನೆ – ‘ವಿಕಸಿತ ಭಾರತ – ಸಂಕಲ್ಪ ಸಭೆ’ ಯಶಸ್ವಿಸಾರ್ವಜನಿಕ ಸಾರಿಗೆಯಲ್ಲಿ ನಾವೀನ್ಯತೆ: ಬಿಎಂಟಿಸಿಗೆ ‘ಚೇಂಜ್ ಮೇಕರ್ ಅವಾರ್ಡ್ಹೊಂಡಾ ಕಾರ್ಸ್ ಇಂಡಿಯಾದಿಂದ ಹೊಸ ಹೊಂಡಾ ಎಲಿವೇಟ್ ಬಿಡುಗಡೆಸ್ಟಿಂಗ್ ಬಗ್ಗೆ ಯಾರಿಗೆ ಜ್ಞಾನ ಜಾಸ್ತಿ ಅನ್ನೋದು ಜಗತ್ತಿಗೆ ಗೊತ್ತಿದೆ - ನಿಖಿಲ್ ಕುಮಾರಸ್ವಾಮಿ ಟಾಂಗ್50 ವರ್ಷಗಳಿಂದ ದಲಿತರ ಸಮಸ್ಯೆ ಈಡೇರಿಲ್ಲ ನೀವಾದರೂ ಈಡೇರಿಸ್ತೀರಾ? ನವದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟದ ಪ್ರತಿಭಟನೆಯಲ್ಲಿ ದೆಹಲಿ ಪೊಲೀಸರಿಂದ ಗುಂಡಗಿರಿ?ಬ್ಲಾಕ್‌, ಮಂಡಲ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು; ‘ಮತ ಉಳಿಸಿ–ದೇಶ ಉಳಿಸಿ’ ಹೋರಾಟ ತೀವ್ರಗೊಳಿಸಲು ನಿರ್ಧಾರಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನ ಬಳಸಿ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳ ಸ್ಥಿತಿಗತಿ ಸಮೀಕ್ಷೆಎಸ್.ಬಿಂಗೀಪುರದಲ್ಲಿ ಪಾಲಿಕೆಯ ಪ್ರಾಣಿ ಚಿತಾಗಾರ ಸ್ಥಾಪನೆಗೆ ಯೋಜನೆ: ಆಯುಕ್ತ ಕೆ.ಎನ್. ರಮೇಶ್ಟಿ.ಡಿ.ಆರ್. ಸಂಬಂಧಿಸಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಾಹಿತಿ/ತಾಂತ್ರಿಕ ಕಾರ್ಯಾಗಾರ