LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಟಿ.ಡಿ.ಆರ್. ಸಂಬಂಧಿಸಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಾಹಿತಿ/ತಾಂತ್ರಿಕ ಕಾರ್ಯಾಗಾರ

ಬೆಂಗಳೂರು : ಪಶ್ಚಿಮ ನಗರ ಪಾಲಿಕೆ ವತಿಯಿಂದ, ಪಾಲಿಕೆ ವ್ಯಾಪ್ತಿಯ ರಸ್ತೆ ಅಗಲೀಕರಣ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಭೂಸ್ವಾಧೀನಕ್ಕೆ ಒಳಪಡುವ ಸ್ವತ್ತುಗಳಿಗೆ ಟಿ.ಡಿ.ಆರ್. ನೀಡುವ ಸಂಬಂಧವಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಇಂದು ಮಾಹಿತಿ/ತಾಂತ್ರಿಕ ಕಾರ್ಯಾಗಾರ ಆಯೋಜಿಸಲಾಯಿತು.news_1791445670_0_422.webp

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಗಾಯತ್ರಿ ನಾಯಕ್, ಕೆ.ಎ.ಎಸ್., ಉಪ ಆಯುಕ್ತರು (ಭೂಸ್ವಾಧೀನ /ಟಿ.ಡಿ.ಆರ್.), ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಶ್ರೀ ಉಮಾಶಂಕರ್, ಸಹಾಯಕ ಕಾರ್ಯಪಾಲಕ ಅಭಿಯಂತರರು, ಜಂಟಿ ನಿರ್ದೇಶಕರ ಕಛೇರಿ (ನಗರ ಯೋಜನೆ), ಬೆಂಗಳೂರು ಕೇಂದ್ರ ನಗರ ಪಾಲಿಕೆ, ಶ್ರೀ ಚಂದ್ರಶೇಖರ್ ನಾಯಕ್, ಸಹಾಯಕ ಅಭಿಯಂತರರು (ಟಿಡಿಆರ್ ಶಾಖೆ), ಬೆಂಗಳೂರು ಪೂರ್ವ ನಗರ ಪಾಲಿಕೆ ಇವರು ಕಾರ್ಯಾಗಾರ ನಡೆಸಿಕೊಟ್ಟರು.

 ಗಾಯತ್ರಿ ನಾಯಕ್‌ರವರು ಮಾತನಾಡಿ, ಸಾರ್ವಜನಿಕ ಪ್ರಾಧಿಕಾರಗಳಿಗೆ ರಸ್ತೆ ನಿರ್ಮಾಣ, ವಿಸ್ತರಣೆಯಂತಹ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಸಂದರ್ಭದಲ್ಲಿ ಭೂಮಿಯ ಆವಶ್ಯಕತೆ ಉಂಟಾದಾಗ ಭೂಸ್ವಾಧೀನ ಅಗತ್ಯವಾಗುತ್ತದೆ. ಭೂಸ್ವಾಧೀನ ಪ್ರಕ್ರಿಯೆ (ಡಿಆರ್‌ಸಿ/ ಟಿಡಿಆರ್) ಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಆಡಳಿತಾತ್ಮಕ ಅನುಮೋದನೆ ಪಡೆದು, ನೋಟಿಫಿಕೇಶನ್‌, ಸಾರ್ವಜನಿಕ ಆಕ್ಷೇಪಣೆ ಆಹ್ವಾನ, ಭೂಮಾಲೀಕರಿಂದ ಸಮ್ಮತಿ ಇತ್ಯಾದಿ ಎಲ್ಲ ಹಂತಗಳನ್ನು ಸಮರ್ಪಕ ರೀತಿಯಲ್ಲಿ ಪೂರೈಸಿ, ಯಾವುದೇ ಲೋಪದೋಷಗಳಿಗೆ ಅವಕಾಶ ಉಂಟಾಗದ ರೀತಿಯಲ್ಲಿ ಜಾಗರೂಕತೆಯಿಂದ ಕೆಲಸ ನಿರ್ವಹಿಸುವುದು ಅಗತ್ಯವಾಗುತ್ತದೆ ಎಂದು ತಿಳಿಸಿದರು. 

ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭೂಮಾಲೀಕರಿಂದ ಕನ್ಸೆಂಟ್‌ ಫಾರ್ಮ್‌, ರಿಲಿಂಕ್ವಿಷ್‌ಮೆಂಟ್ ಡೀಡ್‌ ಪಡೆದುಕೊಳ್ಳುವುದು ಮೊದಲಾದ ಸಂಗತಿಗಳ ಮಹತ್ವದ ಬಗ್ಗೆ ವಿವರಿಸಿ, ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. news_1791445671_3_449.webp

ಈ ಸಂದರ್ಭದಲ್ಲಿ, ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಅಪರ ಆಯುಕ್ತರು (ಅಭಿವೃದ್ಧಿ) ಶ್ರೀಮತಿ ಕವಿತಾ ರಾಜಾರಾಂ, ಉಪ ಆಯುಕ್ತರು (ಆಡಳಿತ ಮತ್ತು ಟಿಡಿಆರ್) ಸೈಯದಾ ಆಫ್ರೀನ್‌ ಬಾನು ಎಸ್. ಬಳ್ಳಾರಿ, ಪಾಲಿಕೆಯ ಎಲ್ಲಾ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಅಭಿಯಂತರರು, ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳು, ಸಹಾಯಕ ನಿರ್ದೇಶಕರು (ಭೂದಾಖಲೆಗಳು), ಭೂಮಾಪಕರುಗಳು ಹಾಜರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೃಹತ್ ‘ಸೇವಾ ಜ್ಯೋತಿ ಯಾತ್ರೆ’- ಬೈಕ್ ರಾಲಿಗೆ ಚಾಲನೆ – ‘ವಿಕಸಿತ ಭಾರತ – ಸಂಕಲ್ಪ ಸಭೆ’ ಯಶಸ್ವಿಸಾರ್ವಜನಿಕ ಸಾರಿಗೆಯಲ್ಲಿ ನಾವೀನ್ಯತೆ: ಬಿಎಂಟಿಸಿಗೆ ‘ಚೇಂಜ್ ಮೇಕರ್ ಅವಾರ್ಡ್ಹೊಂಡಾ ಕಾರ್ಸ್ ಇಂಡಿಯಾದಿಂದ ಹೊಸ ಹೊಂಡಾ ಎಲಿವೇಟ್ ಬಿಡುಗಡೆಸ್ಟಿಂಗ್ ಬಗ್ಗೆ ಯಾರಿಗೆ ಜ್ಞಾನ ಜಾಸ್ತಿ ಅನ್ನೋದು ಜಗತ್ತಿಗೆ ಗೊತ್ತಿದೆ - ನಿಖಿಲ್ ಕುಮಾರಸ್ವಾಮಿ ಟಾಂಗ್50 ವರ್ಷಗಳಿಂದ ದಲಿತರ ಸಮಸ್ಯೆ ಈಡೇರಿಲ್ಲ ನೀವಾದರೂ ಈಡೇರಿಸ್ತೀರಾ? ನವದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟದ ಪ್ರತಿಭಟನೆಯಲ್ಲಿ ದೆಹಲಿ ಪೊಲೀಸರಿಂದ ಗುಂಡಗಿರಿ?ಬ್ಲಾಕ್‌, ಮಂಡಲ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು; ‘ಮತ ಉಳಿಸಿ–ದೇಶ ಉಳಿಸಿ’ ಹೋರಾಟ ತೀವ್ರಗೊಳಿಸಲು ನಿರ್ಧಾರಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನ ಬಳಸಿ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳ ಸ್ಥಿತಿಗತಿ ಸಮೀಕ್ಷೆಎಸ್.ಬಿಂಗೀಪುರದಲ್ಲಿ ಪಾಲಿಕೆಯ ಪ್ರಾಣಿ ಚಿತಾಗಾರ ಸ್ಥಾಪನೆಗೆ ಯೋಜನೆ: ಆಯುಕ್ತ ಕೆ.ಎನ್. ರಮೇಶ್ಟಿ.ಡಿ.ಆರ್. ಸಂಬಂಧಿಸಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಾಹಿತಿ/ತಾಂತ್ರಿಕ ಕಾರ್ಯಾಗಾರ