ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿ ಸಾಕಷ್ಟು ಹೆಸರು ಪಡೆದಿರುವ ಸಂತೋಷ್ ಲಾಡ್ ಅವರು ಕಾರ್ಮಿಕರ ಸೇವರಾಗಿ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿದ್ದಾರೆ ಅದನ್ನು ಪರಿಗಣಿಸಿ ಪ್ರಸ್ತುತ ಸಂತೋಷ್ ಲಾಡ್ ಅವರಿಗೆ ನೂತನ ಸರಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡುವಂತೆ ಸಕಲ ಮರಾಠ ಸಮಾಜದ ವತಿಯಿಂದ ಆಗ್ರಹವನ್ನು ಮಾಡಲಾಯಿತು.
ಬೆಂಗಳೂರಿನ ಪುರಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಕಲ ಮರಾಠ ಸಮಾಜದ ಅಧ್ಯಕ್ಷ ರವಿಶಂಕರ್ ಮೆಹಡಿಕ್ , ಮರಾಠ ಸಮುದಾಯಕ್ಕೆ ಸೇರಿದ ಸಂತೋಷ್ ಲಾಡ್ ಅವರ ಜನಪ್ರಿಯತೆ ಸಾಕಷ್ಟು ಇದ್ದು ಕಾರ್ಯಕ್ರಮತೆ ದಕ್ಷತೆ ಪರಿಗಣಿಸಿ ಈ ಇಂದಿನ ಬಹುತೇಕ ಸರ್ಕಾರಗಳು ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವರನ್ನಾಗಿ ನೇಮಕ ಮಾಡಿ ಸಮಾಜದ ಸೇವೆಗಾಗಿ ನಿಯೋಜನೆ ಮಾಡಿರುತ್ತಾರೆ ರಾಜ್ಯಮಟ್ಟದ ನಾಯಕರಾಗಿದ್ದು ಮರಾಠ ಸಮುದಾಯ ಮಾತ್ರವಲ್ಲದೆ ಜಾತ್ಯಾತೀತ ನೇತರಾಗಿರುತ್ತಾರೆ. ಈ ಇಂದಿನ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿ ರಚಿತ ಎಲ್ಲಾ ಕಾರ್ಮಿಕರ ಸಮಸ್ಯೆಗಳಿಗೆ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ವಿಕಲಾಂಗರಿಗಾಗಿ ಅನುಕೂಲವಾಗುವಂತಹ ಹತ್ತು ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ.
ಪ್ರಸ್ತುತ ಇರುವ ಸರ್ಕಾರದಲ್ಲಿ ಇವರ ಸೇವೆಯು ರಾಜ್ಯಕ್ಕೆ ಮತ್ತಷ್ಟು ಪ್ರೀತಿಯಲ್ಲಿ ಸೇವೆ ದೊರಕುವ ದೃಷ್ಟಿಯಿಂದ ಸಂತೋಷ್ ಲಾಡ್ ಅವರಿಗೆ ನೂತನ ಸರಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡುವಂತೆ ಸಮುದಾಯದ ವತಿಯಿಂದ ಕಾಂಗ್ರೆಸ್ ಸರ್ಕಾರಕ್ಕೆ ಮನವಿ ಮಾಡಿದರು.
ಅಲ್ಲದೆ ಹಾನಗಲ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಶ್ರೀನಿವಾಸ್ ಮಾನವರು ಜಿಲ್ಲೆಯಲ್ಲಿ ಜನಪ್ರಿಯ ನಾಯಕರಾಗಿದ್ದು ಜಿಲ್ಲೆಯ ಅಭಿವೃದ್ಧಿಗಾಗಿ ನಿರಂತರವಾಗಿ ದಶಕಗಳ ಕಾಲ ಶ್ರಮಿಸುತ್ತಾ ಬಂದಿದ್ದಾರೆ ಆದ್ದರಿಂದ ಶ್ರೀನಿವಾಸ ಮನೆಯವರನ್ನು ನೂತನ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರನ್ನಾಗಿ ನೇಮಿಸ ಬೇಕು ಎಂದು ಮನವಿ ಮಾಡಿದರು ಇದರಿಂದ ರಾಜ್ಯಕ್ಕೆ ಇನ್ನೂ ಹೆಚ್ಚಿನ ಸೇವೆ ಮಾಡುವ ಅವಕಾಶ ಕಲ್ಪಿಸಿ ಕೊಡಬೇಕಾಗಿದೆ ಎಂದು ವಿನಂತಿ ಮಾಡಿಕೊಂಡರು.
ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಲಿರುವ ಡಿಕೆ ಶಿವಕುಮಾರ್ ಅವರಿಗೆ ಸಕಲ ಮರಾಠ ಸಮಾಜದ ವತಿಯಿಂದ ಆರ್ಥಿಕ ಶುಭಾಶಯಗಳು ತಿಳಿಸಿದರು. ಈ ಮೂಲಕ ಕಾಂಗ್ರೆಸ್ ಸರ್ಕಾರವು ಮುಂದಿನ ದಿನಮಾನಗಳಲ್ಲಿ ಸರ್ವತೋಮುಖವಾಗಿ ರಾಜ್ಯದ ಜನತೆಯನ್ನು ಹಾಗೂ ಅಭಿವೃದ್ಧಿಯತ್ತ ಕೊಂಡೊಯ್ಯಲಿ ಎಂದು ಶುಭಾಶಯ ಅರ್ಪಿಸಿದರು.
ಇನ್ನೂ ಪತ್ರಿಕಾಗೋಷ್ಠಿಯಲ್ಲಿ ಸಕಲ ಮರಾಠ ಸಮಾಜದ ಕಾರ್ಯದರ್ಶಿ ಪ್ರವೀಣ್ ಮನೆ ಮಹಿಳಾ ಘಟಕದ ಅಧ್ಯಕ್ಷರಾದ ಶಾಂತ ಲಕ್ಷ್ಮಿ ಕಾಂತ, ಮಾರುತಿ ರಾವ್ ಸೇರಿದಂತೆ ಸಮಾಜದ ಪದಾಧಿಕಾರಿಗಳು ಹಾಗೂ ಮುಖಂಡರುಗಳು ಇದೆ ವೇಳೆ ಉಪಸ್ಥಿತರಿದ್ದರು.