ಬೆಂಗಳೂರು : ಉತ್ತರ ಪ್ರದೇಶದಲ್ಲಿ ಯೋಗ್ಯ ಆದಿತ್ಯನಾಥ್ ಸಿಎಂ ಆಗಿರುವ ಹಾಗೆ ಕರ್ನಾಟಕ ರಾಜ್ಯದಲ್ಲೂ ಆದಿಚುಂಚನಗಿರಿ ಪೀಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ರಾಜಕೀಯಕ್ಕೆ ಕೂರಿಸುವ ವಿಚಾರ ಹಿನ್ನಡೆಯಾಗಿದೆ.
ರಾಜ್ಯದ ಬಿಜೆಪಿಯವರು ಇಂತಹ ಒಂದು ಪ್ರಯತ್ನವನ್ನು ಸ್ವಾಮೀಜಿಗಳ ಮುಂದೆ ಇಟ್ಟು ಹೇಳಿದರು, ಆದರೆ ಅದಕ್ಕೆ ಚುಂಚಶ್ರೀಗಳು ಪ್ರತಿಕ್ರಿಯೆ ನೀಡಿದ್ದು ಯೋಗಿ ಆದಿತ್ಯನಾಥ್ ಅವರ ಕುಟುಂಬ ರಾಜಕೀಯ ಹಿನ್ನೆಲೆ ಉಳ್ಳದ್ದು ಆದರೆ ನಮ್ಮ ಪರಂಪರೆ ಯಾವುದೇ ರಾಜಕೀಯ ಹಿನ್ನೆಲೆ ಉಳ್ಳವರಲ್ಲ ಹಿಂದೆಯೂ ರಜಕ್ಕೆ ಹೋಗಿಲ್ಲ ಮುಂದೆಯೂ ಹೋಗುವುದಿಲ್ಲ ಎಂದು ರಾಜಕೀಯಕ್ಕೆ ಬರುವುದರ ಬಗ್ಗೆ ಮೊದಲ ಬಾರಿ ಮೌನ ಮುರಿದ ಚುಂಚ ಶ್ರೀಗಳು.
ನಮ್ಮ ಮಠ ಪರಂಪರೆ ಇರುವುದು ಧಾರ್ಮಿಕ,ಸಾಂಸ್ಕೃತಿಕ ಸೇವೆಗೆ ಹೊರತು,
ಈ ಮಠದ ನೀತಿಯನ್ನ ಎಂದೂ ನಾನು ದಾಟಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ನಮ್ಮ ಮಠ ನಾಯಕರನ್ನ ಹುಟ್ಟಿಸುತ್ತದೆ ಹೊರತು ತಾನೇ ನಾಯಕನಾಗಲ್ಲ, ನಾನು ರಾಜಕೀಯ ಪ್ರವೇಶ ಮಾಡಲ್ಲ ಅಂತ ಧಾರ್ಮಿಕ ಕಾರ್ಯಕ್ರಮದಲ್ಲಿ ತಮ್ಮ ರಾಜಕೀಯ ಪ್ರವೇಶದ ವಿಚಾರವಾಗಿ ಸ್ಪಷ್ಟೀಕರಣ ನೀಡಿದ ಚುಂಚಶ್ರೀ.
ಮುಂಬರುವ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯಲ್ಲಿ ಶ್ರೀಗಳನ್ನ ಕಣಕ್ಕಿಳಿಸಲು BJP ಚಿಂತನೆ ನಡೆಸಲಾಗಿತ್ತು ಎಂಬ ಊಹಾಪೋಹಗಳಿಗೆ ಇತಿಶ್ರಿ ಹಾಡಿದ್ದಾರೆ.