LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಭಿವೃದ್ಧಿ ಹೆಸರಲ್ಲಿ ಗಿಡ ತೆರವು ಬದಲು ಗಿಡ ನೆಡುವ ಕಾರ್ಯಕ್ರಮ ಮಾಡಿ : ಸೋಮಶೇಖರ್ ಗಾಂಧಿ ಕರೆ

ಬೆಂಗಳೂರು: ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ತೆರವು ಮಾಡುವ ಸಂದರ್ಭದಲ್ಲಿ ಅದಕ್ಕೆ ಸಮಾನಾಂತರವಾಗಿ ಗಿಡಗಳನ್ನು ನೆಟ್ಟು ಪರಿಸರವನ್ನು ಉಳಿಸಿ ಬೆಳೆಸಬೇಕಾದಂತಹ ಕರ್ತವ್ಯ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು  ಬೆಂಗಳೂರು ನಗರ ಕಾರ್ಯನಿರದ ಪತ್ರಕರ್ತರ ಸಂಘದ ಅಧ್ಯಕ್ಷ ಸೋಮಶೇಖರ ಗಾಂಧಿ ಅಭಿಪ್ರಾಯಪಟ್ಟರು.news_1781462643_0_470.webp

ಪರಿಸರ ಸ್ನೇಹಿ ಟ್ರಸ್ಟ್ ವತಿಯಿಂದ ನಗರದ ನಯನ ಸಭಾಂಗಣದಲ್ಲಿ ಪ್ರಥಮ ವಾರ್ಷಿಕೋತ್ಸವ, ವಿಶ್ವ ಪರಿಸರ ದಿನಾಚರಣೆ ಹಾಗೂ ಕರುನಾಡ ರತ್ನ-2026 ಪ್ರಶಸ್ತಿ ಪ್ರದಾನ ಸಮಾರಂಭದ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು, ಅಧ್ಯಕ್ಷತೆ ವಹಿಸಿ ಮಾತನಾಡಿದರು, ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿ ಅಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು ಎಂದು ತಿಳಿಸಿದರು. ಪರಿಸರ ಜಾಗೃತಿ ಮೂಡಿಸುವ ಜೊತೆಗೆ ಯೋಧರ ತ್ಯಾಗವನ್ನು ಗೌರವಿಸುವ ಕಾರ್ಯವನ್ನು ಪರಿಸರ ಸ್ನೇಹಿ ಟ್ರಸ್ಟ್ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ್ ತಗಡೂರು ಮಾತನಾಡಿ, ದಿನದಿಂದ ದಿನಕ್ಕೆ ಹಸಿರು ಹೊದಿಕೆ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚಲನಚಿತ್ರ ನಟ ಹಾಗೂ ನಿರ್ಮಾಪಕ ಗಣೇಶ್ ರಾವ್ ಕೇಸರ್ಕಾರ್ ಮಾತನಾಡಿ, ತಾವು ಸೈನಿಕ ಕುಟುಂಬದಿಂದ ಬಂದವರಾಗಿದ್ದು, ತಮ್ಮ ತಂದೆ ಭಾರತೀಯ ಸೈನ್ಯದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿರುವುದಾಗಿ ತಿಳಿಸಿದರು. ಕೇವಲ ಔಪಚಾರಿಕತೆಗಾಗಿ ಗಿಡಗಳನ್ನು ನೆಡುವುದಲ್ಲ, ಅವುಗಳನ್ನು ಪೋಷಿಸಿ ಮರಗಳಾಗಿ ಬೆಳೆಸುವ ಜವಾಬ್ದಾರಿಯನ್ನೂ ಹೊತ್ತುಕೊಳ್ಳಬೇಕು ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು.news_1781462643_2_838.webp

ಲಯನ್ ಎಸ್. ಮನೋಜ್ ಕುಮಾರ್ ಮಾತನಾಡಿ, ಪರಿಸರ ಸಂರಕ್ಷಣೆಯೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸುವುದು  ಅಗತ್ಯವಾಗಿದೆ. ಪರಿಸರ ಸ್ನೇಹಿ ಟ್ರಸ್ಟ್ ಸಮಾಜಮುಖಿ ಕಾರ್ಯಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಅಭಿನಂದನಾರ್ಹ ಎಂದರು.

ಈ ವೇಳೆ ಮಾತನಾಡಿದ ಪರಿಸರ ಸ್ನೇಹಿ ಟ್ರಸ್ಟ್ ಅಧ್ಯಕ್ಷ ನಟರಾಜ್ ಬಿ.ಪಿ., ಸಮಾಜಕ್ಕೆ ಏನಾದರೂ ಮರಳಿಸಬೇಕು ಎಂಬ ಉದ್ದೇಶದಿಂದ ಟ್ರಸ್ಟ್ ಆರಂಭಿಸಲಾಯಿತು. ತಮ್ಮ ಸಂಸ್ಥೆಯಿಂದ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎನ್ನುವ ದೃಷ್ಟಿಯಿಂದ ಸ್ಥಾಪಿಸಲಾಗಿದ್ದು ಕಳೆದ ಒಂದು ವರ್ಷದಲ್ಲಿ ವಿವಿಧ ಶಾಲಾ-ಕಾಲೇಜುಗಳಲ್ಲಿ ಸಾವಿರಾರು ಗಿಡಗಳನ್ನು ವಿತರಿಸಿ ಪರಿಸರ ಜಾಗೃತಿ ಮೂಡಿಸಲಾಗಿದೆ. ಆರೋಗ್ಯ ತಪಾಸಣಾ , ನೇತ್ರ ತಪಾಸಣಾ, ರಕ್ತದಾನ ಶಿಬಿರಗಳು ಹಾಗೂ ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಮಹಿಳಾ ಸಬಲೀಕರಣ, ಕಲೆ ಮತ್ತು ಸಂಸ್ಕೃತಿಯ ಉತ್ತೇಜನಕ್ಕೂ ಟ್ರಸ್ಟ್ ಆದ್ಯತೆ ನೀಡಿದ್ದು, ಮಹಿಳಾ ದಿನಾಚರಣೆ, ಸಾಧಕ ಮಹಿಳೆಯರ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡುವ ಕೆಲಸಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.news_1781462643_1_858.webp

ಮುಂದಿನ ದಿನಗಳಲ್ಲಿ ಗೋಶಾಲೆ ಸ್ಥಾಪನೆ, ಪ್ರಾಣಿ ಸಂರಕ್ಷಣೆ, ವಿದ್ಯಾರ್ಥಿವೇತನ ಯೋಜನೆಗಳು, ಯುವಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿ, ಮಹಿಳಾ ಸ್ವಾವಲಂಬನಾ ಕಾರ್ಯಕ್ರಮಗಳು, ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳಿಗೆ ನೆರವು, ನೀರಿನ ಸಂರಕ್ಷಣೆ ಮತ್ತು ಸ್ವಚ್ಛತಾ ಅಭಿಯಾನಗಳನ್ನು ಮಾಡುವ ಗುರಿ ಹೊಂದಿರುವುದಾಗಿ ಎಂದು ಹೇಳಿದರು.

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರು, ಮಾಜಿ ಸೈನಿಕರು ಹಾಗೂ ವೀರನಾರಿಯರ ತ್ಯಾಗಕ್ಕೆ ಈ ಕಾರ್ಯಕ್ರಮವನ್ನು ಸಮರ್ಪಿಸುತ್ತಿರುವುದಾಗಿ ತಿಳಿಸಿದ ಅವರು, ಅವರ ಸೇವೆ ಮತ್ತು ದೇಶಭಕ್ತಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರು, ಸಮಾಜಸೇವಕರು, ಪತ್ರಕರ್ತರು, ನಿವೃತ್ತ ಯೋಧರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಸಮಾರಂಭದ ಅಂಗವಾಗಿ ಕರುನಾಡ ರತ್ನ-2026 ಪ್ರಶಸ್ತಿಗಳನ್ನು ಪ್ರದಾನ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರನ್ನು ಗೌರವಿಸಲಾಯಿತು.

ಕಾರ್ಯಕ್ರಮವನ್ನು ಖ್ಯಾತ ಚಲನಚಿತ್ರ ನಟ ಹಾಗೂ ನಿರ್ಮಾಪಕ ಗಣೇಶ್ ರಾವ್ ಕೇಸರ್ಕಾರ್, ಲಯನ್ಸ್ ರಕ್ತ ನಿಧಿ ವಿಜಯನಗರದ ಅಧ್ಯಕ್ಷ ಲಯನ್ ಎಸ್. ಮನೋಜ್ ಕುಮಾರ್, ಬಿಯುಡಬ್ಲ್ಯೂಜೆ ಅಧ್ಯಕ್ಷ  ಸೋಮಶೇಖರ ಗಾಂಧಿ, ಸ್ವಾಮಿ ವಿವೇಕಾನಂದ ರಕ್ತ ನಿಧಿಯ ಕಾರ್ಯದರ್ಶಿ ಮಂಜುನಾಥ್ ರೆಡ್ಡಿ, ಪರಿಸರ ಸ್ನೇಹಿ ಟ್ರಸ್ಟ್ ಅಧ್ಯಕ್ಷ ನಟರಾಜ್ ಬಿ.ಪಿ., ವ್ಯವಸ್ಥಾಪಕ ಟ್ರಸ್ಟಿಗಳಾದ ಬಿ.ಎ ಮಹೇಂದ್ರ  ಸುಷ್ಮಾ ಎ., ನಿವೃತ್ತ ಯೋಧ ಬಿ.ಕೆ. ಕುಮಾರಸ್ವಾಮಿ, ಕರ್ನಾಟಕ ಬಹುಜನ ಫೆಡರೇಷನ್ ಸಂಸ್ಥಾಪಕ ಅಧ್ಯಕ್ಷ ಡಾ. ಜಿ.ಎಚ್. ಶಂಕರ್ ಹಾಗೂ ಯೋಗ ಶಿಕ್ಷಕ ಶಂಕರ್  ಸೇರಿದಂತೆ ಅನೇಕರು ಈ ಒಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ಕಾನ್ಸುಲೇಟ್ ಜನರಲ್ ಕಚೇರಿ, ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಕಾರ್ಯಾರಂಭಸಮ್ಯಕ್ ಪ್ರತಿಷ್ಠಾನಮ್ ನಿಂದ ಗುರುವಂದನಾ, ಸಾಧಕರಿಗೆ ಸಂಸ್ಕೃತ ಶ್ರೀ: ಪ್ರಶಸ್ತಿ ಪ್ರದಾನತಮಿಳುನಾಡಿಗೆ ಬಿಡುವಷ್ಟು  ಕಾವೇರಿ‌ ನೀರಿಲ್ಲ: ಎಂ ಬಿ ಪಾಟೀಲಪರಿಸರ ಸಂಬಂಧಿ ಅನುಮತಿ ಸಿಕ್ಕರೆ 3 ತಿಂಗಳಲ್ಲಿ ವಿಜಯಪುರ ಏರ್‌ಪೋರ್ಟ್ ಕಾರ್ಯಾರಂಭ: ಎಂ ಬಿ ಪಾಟೀಲಬೆಳ್ಳಂದೂರು ಎಸ್‌ಟಿಪಿಯ ಸಮಗ್ರ ತನಿಖೆ ಮುಂದುವರಿಕೆ; ಕಾರ್ಮಿಕರ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮ: ಜಲಮಂಡಳಿ ಅಧ್ಯಕ್ಷೆ ಡಾ. ಎನ್. ಮಂಜುಳಾಮೇಕೆದಾಟು ಯೋಜನೆಯನ್ನು ತಕ್ಷಣ ಆರಂಭಿಸಿ  2 ವರ್ಷಗಳೊಳಗೆ ಪೂರ್ಣಗೊಳಿಸಿ: ಮುಖ್ಯಮಂತ್ರಿ ಚಂದ್ರು ಆಗ್ರಹ ಸರ್ಕಾರಿ ಶಿಕ್ಷಣ ಸಂಸ್ಥೆಯ ಜಾಗ ಕಬಳಿಸಲು ಕೇಂದ್ರ ಸಚಿವರ ಉನ್ನಾರಕಾಮನ್ವೆಲ್ತ್ ಗೇಮ್ ನಲ್ಲಿ ಭಾರತಕ್ಕೆ ಕಂಚಿನ ಮುಕುಟಮಾಲೂರು ನ್ಯಾಯಾಧೀಶೆಯ ಬೀದಿಜಗಳ? ನೊಂದವರ ಕಣ್ಣೀರು! ವಕೀಲರ ಸಂಘದಿಂದ ಹೈ ಮೆಟ್ಟಿಲುಆ.5ಕ್ಕೆ ಮುಜರಾಯಿ ದೇವಾಲಯಗಳ ಅರ್ಚಕರ,ಆಗಮಿಕರ ನೌಕರರ ಸಂಘದಿಂದ ಸಮಾವೇಶ ಅಭಿನಂದನ ಸಮಾರಂಭ