ಬೆಂಗಳೂರು : ಮಕ್ಕಳಿಗೆ ಓದಿನ ಜೊತೆಗೆ ಆಟ ಪಾಠಗಳು ಬಹಳ ಮುಖ್ಯವಾಗಿದ್ದು ಅವರ ಮನೋವಿಕಾಸನ ಹಾಕುವುದರ ಜೊತೆಗೆ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಸಹಕಾರಿಯಾಗುತ್ತದೆ ಎಂದು ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಕೆ ಸಿ ವೀರಣ್ಣ ಅವರು ತಿಳಿಸಿದರು. 
ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ ಹಾಗೂ ಪಶುವೈದ್ಯಕೀಯ ಮಹಾವಿದ್ಯಾಲಯ ಬೆಂಗಳೂರು ವತಿಯಿಂದ 19 ನೇ ಅಂತರ ಮಹಾವಿದ್ಯಾಲಯಗಳ ಕ್ರೀಡಾಕೂಟ -2025 ರ ಉದ್ಘಾಟನೆಯನ್ನು ಮಾಡಿ ಮಾತನಾಡಿದ ಅವರು, ಪಶು ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೇವಲ ಪಶುಗಳಿಗೆ ಚಿಕಿತ್ಸೆ ನೀಡುವ ಹಾಗೆ ಅದರ ಬಗ್ಗೆ ಓದುವ ವಿಚಾರವನ್ನು ತಿಳಿಸಿ ಕೊಡುವುದು ಮಾತ್ರವಲ್ಲದೆ ಮಕ್ಕಳಿಗೆ ಆಟದಲ್ಲಿಯೂ ಸಹ ಪ್ರಾಮುಖ್ಯತೆ ಕೊಟ್ಟು ವಿದ್ಯಾರ್ಥಿಗಳ ಮನೋವಿಕಾಸನವನ್ನು ಹೆಚ್ಚಿಸುವ ಕೆಲಸವನ್ನು ಮಾಡಲಾಗುತ್ತದೆ ಪ್ರತಿ ವರ್ಷ.
ಪ್ರತಿವರ್ಷವು ಸಹ ಒಂದೊಂದು ಪಶು ವಿಶ್ವವಿದ್ಯಾನಿಲಯಗಳಲ್ಲಿ ಕ್ರೀಡಾಕೂಟವನ್ನು ಆಯೋಜನೆ ಮಾಡುತ್ತಾರೆ ಈ ಬಾರಿ ಬೆಂಗಳೂರಿನಲ್ಲಿ ಆಯೋಜನೆ ಮಾಡಿರುವುದು ಸುಮಾರು 600 ಕ್ಕಿಂತ ಹೆಚ್ಚು ಕ್ರೀಡಾ ಸ್ಪರ್ದಾಳುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ.
ಗುಂಪು ಕ್ರೀಡೆಗಳು ವೈಯಕ್ತಿಕ ಕ್ರೀಡೆಗಳು ಇಂಡೋರ್ ಕ್ರೀಡೆಗಳು ಕ್ರೀಡಾ ವಿಭಾಗಗಳಲ್ಲಿ ಎಷ್ಟು ಇದ್ದವು ಅವೆಲ್ಲವನ್ನು ಸಹ ಮಕ್ಕಳಿಗೆ ಸ್ಪರ್ಧೆ ರೂಪದಲ್ಲಿ ಹರಿಸಲಾಗುತ್ತಿದೆ ಈ ಒಂದು ಕ್ರೀಡಾಪಟುದಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಕಳಿಸಿಕೊಡುವ ಒಂದು ಯೋಜನೆಯನ್ನು ಸಹ ಪ್ರತಿವರ್ಷವೂ ಹಾಕಿಕೊಳ್ಳಲಾಗುತ್ತದೆ ಅದಕ್ಕೆ ಆಯಾ ವಿಶ್ವವಿದ್ಯಾನಿಲಯದ ಕುಲಪತಿಗಳು ಹೆಚ್ಚಿನ ಪ್ರಾಮುಖ್ಯತೆ ವಹಿಸಿ ಸೌಕರ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತದೆ ಎಂದರು.
ಹೈನುಗಾರಿಕಾ ಮಹಾವಿದ್ಯಾಲಯ ಮೈದಾನ, ಹೆಬ್ಬಾಳ ಆವರಣ, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಐದು ದಿನಗಳ ಕಾಲ ನಡೆಯುವ ಈ ಒಂದು ಕ್ರೀಡಾಕೂಟದಲ್ಲಿ ನಾಲ್ಕರಿಂದ ಐದು ಕಡೆ ಕ್ರೀಡಾಕೂಟಕ್ಕೆ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಆಯಾ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಕರು ಸಂಪೂರ್ಣವಾದಂತಹ ಜವಾಬ್ದಾರಿಯನ್ನು ಹೊತ್ತು ಕ್ರೀಡಾಕೂಟವನ್ನು ನಡೆಸಿ ಕೊಡುತ್ತಿದ್ದಾರೆ ಎಂದರು.
ಪ್ರೊ.ಕೆ.ಸಿ.ವೀರಣ್ಣ ಕುಲಪತಿಗಳು, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್, ಮುಖ್ಯ ಅತಿಥಿಗಳಾಗಿ ಡಾ.ಶ್ರೀನಿವಾಸು ಪಿನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಸರ್ಕಾರ,
ಡಾ.ಹೆಚ್.ಎಂ.ಜಯಪ್ರಕಾಶ್ವ್ಯ ವಸ್ಥಾಪಕ ಮಂಡಳಿ ಸದಸ್ಯರು, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್
ಬಸವರಾಜ ಪಿ. ಭತಮುರ್ಗೆವ್ಯವಸ್ಥಾಪಕ ಮಂಡಳಿ ಸದಸ್ಯರು, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ ,ಸುಶಾಂತ್ ರೈ ಬೆಳ್ಳಿಪ್ಪಾಡಿ ವ್ಯವಸ್ಥಾಪಕ ಮಂಡಳಿ ಸದಸ್ಯರು, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ 
ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾದಮಂಜೇಶ್ ಕುಮಾರ್ ಜಾಧವ್ಪ್ರ ದಾನ ವ್ಯವಸ್ಥಾಪಕರು, ವೆಂಕಟೇಶ್ವರ ಹ್ಯಾಚರೀಸ್ ಪ್ರೈ. ಲಿ., ಡಾ.ಹೆಚ್.ಸಿ.ಇಂದ್ರೇಶ್ಅಧ್ಯಕ್ಷರು, ಕರ್ನಾಟಕ ಪಶುವೈದ್ಯಕೀಯ ಪರಿಷತ್ತು ,ಡಾ.ಎ.ಟಿ.ರಾಮಚಂದ್ರ ನಾಯ್ಕ್ವಿ ದ್ಯಾರ್ಥಿ ಕಲ್ಯಾಣ ನಿರ್ದೇಶಕರು, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್, ಡಾ.ಎನ್.ಕೆ.ಶಿವಕುಮಾರ್ ಗೌಡ ಡೀನ್, ಪಶುವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು ಸೇರಿದಂತೆ ನೂರಾರು ಮಂದಿ ಕ್ರೀಡಾ ಸ್ಪರ್ದಾಳುಗಳು ಇದೆ ವೇಳೆ ಉಪಸ್ಥಿತರಿದ್ದರು.