ಬೆಂಗಳೂರು : ಖಾಸಗಿ ಅನುದಾನ ರಹಿತ ಶಾಲೆಗಳಿಗೆ 800 ಕೋಟಿ ರೂ.ಆರ್.ಟಿ,ಇ ಶುಲ್ಕ, ಮರುಪಾವತಿ ಬಾಕಿ. ಮಾನ್ಯತೆ ನವೀಕರಣ ಹೆಸರಿನಲ್ಲಿ 4,500ಕ್ಕೂ ಹೆಚ್ಚು ಶಾಲೆಗಳು ಸಂಕಷ್ಟದಲ್ಲಿ ಮೂಲ ಶಿಕ್ಷಣ ಕಾಯ್ದೆಯನ್ನು ಉಲ್ಲಂಘಿಸಿ ಆಡಳಿತಾತ್ಮಕ ಸುತ್ತಲೂಗಳನ್ನು ರಚಿಸಿ ವ್ಯಾಪಕ ಭ್ರಷ್ಟಾಚಾರಕ್ಕೆ, ದಾರಿ ಮಾಡಿಕೊಡಲಾಗಿದೆ ಎಂದು ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕೋಟೆ ಅವರು ಸರ್ಕಾರಕ್ಕೆ ಒತ್ತಾಯ ಮಾಡಿದರು. 
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಪತ್ರಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಕಳೆದ 6 ವರ್ಷಗಳಿಂದ ರಾಜ್ಯದ ಅನುದಾನ ರಹಿತ ಶಾಲೆಗಳು ಆರ್ ಟಿ ಇ ಅಡಿಯಲ್ಲಿ ದಾಖಲಾದ ಸಾವಿರಾರು ವಿದ್ಯಾರ್ಥಿಗಳಿಗೆ ಸರ್ಕಾರ ನೀಡುವ ಕನಿಷ್ಠ ಶುಲ್ಕ ಮರುಪಾವತಿ ನಂಬಿಕೊಂಡು ಶಿಕ್ಷಣ ನೀಡಲಾಗಿದೆ. ಇದರ ಬಾಕಿ 800 ಕೋಟಿ ರೂ ಇದೆ. ಕಳೆದ 6 ತಿಂಗಳಿಂದ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರು ಬಾಕಿ ಹಣವನ್ನು ನೀಡಲಾಗುತ್ತಿಲ್ಲ.
ಮೂಲ ಶಿಕ್ಷಣ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ಅಧಿಕಾರಿಗಳಿಗೆ ಭ್ರಷ್ಟಾಚಾರ ಮಾಡಲು ಅನುಕೂಲ ಆಗುವಂತೆ ಕೇವಲ ಕಾರ್ಯಾಂಗದ ಸುತ್ತೋಲೆಗಳನ್ನು ಹೊರಡಿಸಿ 2020 ರಿಂದ ಸುಮಾರು 4,500ಕ್ಕೂ ಹೆಚ್ಚು ಶಾಲೆಗಳಿಗೆ ಮಾನ್ಯತೆ ನವೀಕರಣ ನೀಡದೆ ಆ ಶಾಲೆಗಳನ್ನು ಆತಂಕದಲ್ಲಿರಿಸಿ ಅಧಿಕಾರಿಗಳಿಂದ ಕಿರುಕುಳ ನೀಡಲಾಗುತ್ತಿದೆ.
ಅಧಿಕಾರಿಗಳ ಜೇಬು ತುಂಬಿಸಲೆಂದೇರೂಪಿತ ಆಗಿರುವ ಮಾನ್ಯತೆ ನವೀಕರಣ ಸುತ್ತೋಲೆಯನ್ನು ಹೊರಡಿಸಿ ಸುಮಾರು 30 ಕ್ಕೂ ಹೆಚ್ಚು ಕಠಿಣ ನಿಯಮಗಳನ್ನ ಪಾಲಿಸಲು ಹೇಳಲಾಗಿದೆ. ಅವುಗಳಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ಪ್ರತಿ ವರ್ಷಕ್ಕೊಮ್ಮೆ ಕಟ್ಟಡ ದಕ್ಷತೆ ಪ್ರಮಾಣ ಪತ್ರ. ಪೊಲೀಸ್ ವೆರಿಫಿಕೇಶನ್, ನಿವೇಶನ ಹಾಗೂ ಕಟ್ಟಡದ ತೆರಿಗೆ, ಈ ಕಾತಾ ಸರ್ಟಿಫಿಕೇಟ್, ಮುಂತಾದ ಅವೈಜ್ಞಾನಿಕ ನಿಯಮಗಳನ್ನು ಆಲಿಸಲು ಶರತ್ತನ್ನು ಹಾಕಿ ಹಲವು ಇಲಾಖೆಗಳ ಅಧಿಕಾರಿಗಳಿಗೆ ಭ್ರಷ್ಟಾಚಾರ ಮಾಡಲು ಅನುಕೂಲ ಮಾಡಿಕೊಡಲಾಗಿದೆ.
ರಾಜ್ಯದ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡದೆ ಇರುವ ವಿಚಾರ, ಅನುದಾನಿತ ಶಾಲಾ ಕಾಲೇಜುಗಳಿಗೆ ಕಳೆದ 11 ವರ್ಷದಿಂದ ಶಿಕ್ಷಕರ ನೇಮಕಾತಿ ಮಾಡಲು ಅವಕಾಶ ನೀಡದೇ ಇರುವ ವಿಚಾರ, ಅನುದಾನಿತ ಶಾಲಾ ಕಾಲೇಜು ನೌಕರರಿಗೆ ಪಿಂಚಣಿ ನೀಡದೆ ಇರುವ ವಿಚಾರ, ರಾಜ್ಯದ ಅನುದಾನಿತ ಶಾಲಾ ಕಾಲೇಜುಗಳಿಗೆ ಕನಿಷ್ಠ ಸಂಖ್ಯೆಯ ವಿದ್ಯಾರ್ಥಿಗಳ ಮಿತಿಗೆ ಒಳಪಡಿಸಿ ಸಾವಿರಾರು ಶಾಲಾ-ಕಾಲೇಜುಗಳನ್ನು ಮುಚ್ಚುತ್ತಿರುವ ವಿಚಾರ, ಮುಂತಾದ ಪ್ರಮುಖ 7 ಬೇಡಿಕೆಗಳ ಕುರಿತು ಬಸವರಾಜ್ ವರಟ್ಟಿ ಅವರ ನೇತೃತ್ವದಲ್ಲಿ ಧಾರವಾಡದಲ್ಲಿ ಅನಿರ್ದಿಷ್ಟಾವಧಿ ಬೃಹತ್ ಪ್ರತಿಭಟನೆಗೆ ನಮ್ಮ ಸಂಪೂರ್ಣ ಬೆಂಬಲವನ್ನ ನೀಡಲಾಗುವುದು.
ಈ ಮೇಲಿನ ನಮ್ಮ ಅನುದಾನ ರಹಿತ ಶಾಲಾ ಕಾಲೇಜುಗಳು ಹಲವು ಸಮಸ್ಯೆಗಳಿಂದ ಬಳಲುತ್ತಿವೆ ಈ ಗಂಭೀರ ಸಮಸ್ಯೆಗಳ ಕುರಿತು ತಮ್ಮ ಮಾಧ್ಯಮಗಳಲ್ಲಿ ಪ್ರಕಟಿಸುವ ಮೂಲಕ ಸಾರ್ವಜನಿಕ ಗಮನವನ್ನು ಸೆಳೆಯಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.
ಪತ್ರಿಕಾಗೋಷ್ಟಿಯಲ್ಲಿ ಕೃಪಾದ ಉಪಾಧ್ಯಕ್ಷರು, ಕಾರ್ಯದರ್ಶಿ ಸೇರಿದಂತೆ ಪಾದಾಧಿಕಾರಿಗಳು ಉಪಸ್ಥಿರಿದ್ದರು.