ಬೆಂಗಳೂರು: ನಗರದ ದೊಡ್ಡ ಕಲ್ಲಸಂದ್ರದಲ್ಲಿ ಅದ್ದೂರಿಯಾಗಿ 70ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ವಿಶೇಷ ರೀತಿಯಲ್ಲಿ ಶ್ರೀ ಭುವನೇಶ್ವರಿ ಕನ್ನಡ ಸಂಘ ಹಾಗೂ ಮಹಾನಗರ ಆಟೋ ಫೋರಮ್ ವತಿಯಿಂದ ಆಚರಣೆ ಮಾಡಲಾಯಿತು.
ಇನ್ನು ಕಾರ್ಯಕ್ರಮಕ್ಕೆ ಜಯನಗರ ಜನಪ್ರಿಯ ಶಾಸಕರಾದ ಸಿ ಕೆ ರಾಮಮೂರ್ತಿ ಹಾಗೂ ನಟ ಸಮಾಜ ಸೇವಕರಾದ ಕಾರ್ತಿಕ್ ಗೌಡ ಜಿಕೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ದೊಡ್ಡ ಕಲ್ಲಸಂದ್ರದ ವೃತ್ತ ದಲ್ಲಿರುವ ನಾಡಪ್ರಭು ಕೆಂಪೇಗೌಡ ಪುತ್ತಳಿಗೆ ಪುಷ್ಪ ನಮನ ಸಲ್ಲಿಸಿ ಕನ್ನಡ ಧ್ವಜ ಹಾರಿಸಿದರು ತದನಂತರ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು ಈ ವೇಳೆ ಜಾನಪದ ಕಲಾತಂಡದಿಂದ ಪೂಜಾ ಕುಣಿತ ಮೇಲೆ ಸಿಟ್ಟು ಈ ವೇಳೆ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ ಪೆನ್ನು ವಿತರಣೆ ಮಾಡಲಾಯಿತು ಇನ್ನು ಇದೇ ವೇಳೆ ರಕ್ತದಾನ ಶಿಬಿರವನ್ನು ಸಹ ಆಯೋಜನೆ ಮಾಡಲಾಯಿತು.
ನಂತರ ಜಯನಗರ ಶಾಸಕ ಸಿ ಕೆ ರಾಮಮೂರ್ತಿ ಮಾತನಾಡಿ ಪ್ರತಿವರ್ಷದಂತೆ ಈ ವರ್ಷವೂ ಸಹ ಕನ್ನಡ ರಾಜ್ಯೋತ್ಸವ ಹಬ್ಬ ಅದ್ದೂರಿಯಾಗಿ ನಾಡು ದೇಶದಲ್ಲಿ ಆಚರಣೆ ಮಾಡುತ್ತ ಬರುತ್ತಿದ್ದಾರೆ ಅದೇ ರೀತಿ ದೊಡ್ಡಕಲಸಂದ್ರದಲ್ಲಿ ಆಟೋ ವಿಂಗಿನ ವಿಶೇಷವಾಗಿ ಸಂಭ್ರಮ ಸಡಗರದಿಂದ ಕನ್ನಡದ ಹಬ್ಬವನ್ನು ಆಚರಣೆ ಮಾಡಿದ್ದಾರೆ ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನಗೆ ಸಂತೋಷವನ್ನು ತಂದಿದೆ ಎಂದರು.
ನೋ ಆಟೋ ಚಾಲಕರಿಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ ಸರ್ಕಾರ ಇವರ ಸಮಸ್ಯೆಗಳಿಗೆ ಸ್ಪಂದನೆಯನ್ನು ವ್ಯಕ್ತಪಡಿಸಿ ಅವರ ಸಮಸ್ಯೆಗಳನ್ನು ಈಡೇರಿಸಬೇಕಾಗಿದೆ ರಾಪಿಡೋದಿಂದ ಆಟೋ ಚಾಲಕರಿಗೆ ಸಾಕಷ್ಟು ನಷ್ಟವಾಗುತ್ತಿದೆ ಹೀಗಾಗಿ ಅಂತಹ ಯಾಪ್ ಗಳಿಗೆ ಸರ್ಕಾರ ಮಾನ್ಯತೆ ಕೊಡಬಾರದು ಈ ಬಗ್ಗೆ ಗಮನಹರಿಸಿ ಆಟೋ ಮೀಟರ್ ಗೆ ಹಣವನ್ನು ಹೆಚ್ಚಳ ಮಾಡಬೇಕು ಎಂದರು.
ನಟ ಸಮಾಜಸೇವಕ ಕಾರ್ತಿಕ್ ಗೌಡ ಮಾತನಾಡಿ ಕನ್ನಡ ಹಬ್ಬ ಎಲ್ಲರಿಗೂ ವಿಶೇಷವಾದಂತಹ ಹಬ್ಬವಾಗಿದೆ ನಾವು ಎಲ್ಲೇ ಇದ್ದರೂ ಕನ್ನಡದ ಮಕ್ಕಳಾಗಿದ್ದೇವೆ ಎಲ್ಲಾ ಭಾಷೆಗಳು ಸಹ ಒಂದಾಗಿ ಜೀವನ ನಡೆಸಬೇಕು ಆದರೆ ಕನ್ನಡ ಭಾಷೆ ಬಗ್ಗೆ ಯಾವುದೇ ಜೊತೆ ಬಾರದ ಹಾಗೆ ನಾವು ಎಚ್ಚರದಿಂದ ನೋಡಿಕೊಳ್ಳಬೇಕಾಗಿದೆ ಎಂದು ಕನ್ನಡದ ಅಭಿಮಾನ ಹಾಗೂ ಭಾಷೆ ನೆಲ ಜಲ ಬಗ್ಗೆ ವಿಶೇಷ ಅಭಿಮಾನವನ್ನು ವ್ಯಕ್ತಪಡಿಸಿದರು.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ಆಟೋ ಫೋರಂ ನ ಅಧ್ಯಕ್ಷರಾದ ರಾಕೇಶ್ ಮಹಿಳಾ ಘಟಕದ ಮಮತಾ ಭುವನೇಶ್ವರಿ ಕನ್ನಡ ಸಂಘದ ರಾಜ್ಯಾಧ್ಯಕ್ಷ ನಂದ ಗೌಡ ಮಹಾನಗರ ಆಟೋ ಅಧ್ಯಕ್ಷರಾದ ಮಂಜುನಾಥ್ ಪಟೇಲ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಆಟೋ ಚಾಲಕರು ಮಹಿಳಾ ಪದಾಧಿಕಾರಿಗಳು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ನಂತರ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಅನ್ನದಾನವನ್ನು ಸಹ ಆಯೋಜನೆ ಮಾಡಲಾಗಿತ್ತು.