ಬೆಂಗಳೂರು: ಮಕ್ಕಳು ಓದುವ ಜೊತೆಗೆ ಆಟ ಪಾಠಗಳಲ್ಲಿ ತೆಗೆದುಕೊಂಡು ಉತ್ತಮವಾದಂತಹ ಆರೋಗ್ಯ ಕಾಪಾಡಿಕೊಂಡು ಉತ್ತಮ ಕ್ರೀಡಾಪಟುಗಳ ಆಗಬೇಕೆಂದು ಸಿಎಆರ್ ದಕ್ಷಿಣ ವಿಭಾಗದ ಡಿಸಿಪಿ ಗೋಪಾಲ ರೆಡ್ಡಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈಜಿಪುರ-ವಿಲ್ಸನ್ ಗಾರ್ಡನ್ ಕ್ಲಸ್ಟರ್ ಮಟ್ಟದ 14 ವರ್ಷ ಒಳಗಿನ ಮಕ್ಕಳ 2026ರ ಕ್ರೀಡಾಕೂಟದಲ್ಲಿ ಗೆದ್ದ ಕ್ರೀಡಾ ಮಕ್ಕಳಿಗೆ MARP ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಹುಮಾನ ವಿತರಣೆ ಮಾಡಿ ಮಾತನಾಡಿದವರು, ಮಕ್ಕಳು ಕೇವಲ ಶಾಲೆಯಲ್ಲಿ ಓದುವುದಲ್ಲದೆ ಅದರ ಜೊತೆಗೆ ಆಟ ಪಾಠಗಳಲ್ಲಿ ತೊಡಗಿಕೊಂಡು ಉತ್ತಮ ಪ್ರಜೆಗಳಾಗಬೇಕು ಅದೇ ರೀತಿ ಕ್ರೀಡೆಯಿಂದ ಆರೋಗ್ಯ ವೃದ್ಧಿಸಿಕೊಳ್ಳಬೇಕಾಗಿದೆ.
ಮಕ್ಕಳು ಹೋಬಳಿ ಮಟ್ಟ ತಾಲೂಕು ಜಿಲ್ಲಾ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕ್ರೀಡಾ ವಿಭಾಗದಲ್ಲಿ ತರಬೇತಿಯನ್ನು ಪಡೆದು ಸ್ಪರ್ಧೆ ಮಾಡಿ ರಾಜ್ಯಕ್ಕೆ ದೇಶಕ್ಕೆ ಕೀರ್ತಿ ತರಬೇಕಾಗಿದೆ ಅಂತಹ ಶಕ್ತಿ ಯುವಕರಲ್ಲಿದೆ ಅದಕ್ಕೆ ಸರ್ಕಾರದ ವತಿಯಿಂದ ಸಾಕಷ್ಟು ಸೌಲಭ್ಯವನ್ನು ಸಹ ಪ್ರೋತ್ಸಾಹವನ್ನು ಸಹ ನೀಡಲಾಗುತ್ತಿದೆ ಅದನ್ನು ಯುವಕರು ಸದ್ಬಳಕೆ ಮಾಡಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇನ್ನು ಬೆಂಗಳೂರು ಕೇಂದ್ರದ ಬಿಇಓ ಸುಜಾತ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಮಕ್ಕಳು ಜ್ಞಾನಾರ್ಜನೆ ಪಡೆದುಕೊಳ್ಳುವುದರ ಜೊತೆ ದೈಹಿಕ ಕಸರತ್ತು ಸಹ ಇಂದಿನ ಕಾಲಘಟ್ಟದಲ್ಲಿ ಮಕ್ಕಳಿಗೆ ಬಹಳ ಪ್ರಯೋಜನಕಾರಿಯಾಗಿದೆ ಅದರ ಜೊತೆ ಬುದ್ದಿಮಟ್ಟ ಹೆಚ್ಚಳ ಹಾಗೂ ಕ್ರಿಯಾಶೀಲತೆಗೆ ಕ್ರೀಡೆ ಸಾಕಷ್ಟು ಸಹಕಾರಿಯಾಗಿದೆ ಬೆಂಗಳೂರು ಕೇಂದ್ರ ವಿಭಾಗದಲ್ಲಿ ಬರುವ ಎಲ್ಲಾ ಶಾಲೆಗಳಲ್ಲಿಯೂ ಸಹ ನಾನು ಶಾಲೆಯ ಮುಖ್ಯಸ್ಥರಿಗೆ ನಿರ್ದೇಶನವನ್ನು ನೀಡುವ ಮೂಲಕ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡಬೇಕಾಗಿದೆ ಅದಕ್ಕೆ ಸಂಬಂಧಿಸಿದಂತೆ ಸಕಲ ಪರಿಕರಗಳನ್ನು ಸಹ ಶಾಲೆಗೆ ನೀಡಲಾಗುತ್ತಿದೆ ಇದರಿಂದ ಮಕ್ಕಳ ಆರೋಗ್ಯ ಮತ್ತಷ್ಟು ಸದೃಢಗೊಳಿಸಲು ಸಹಕಾರಿಯಾಗುತ್ತದೆ ಇದಕ್ಕೆ ಸರ್ಕಾರದ ವತಿಯಿಂದ ಸಾಕಷ್ಟು ಕ್ರೀಡಾ ಮಕ್ಕಳಿಗೆ ಸಹಾಯಧನ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿಕೊಡಲಾಗಿದೆ ಅದರ ಉಪಯೋಗವನ್ನು ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾಸಕ್ತರಿಗೆ ಮನವಿ ಮಾಡಿದರು.
ಪಾಲಿಕೆಯ ಮಾಜಿ ಸದಸ್ಯರಾದ ಬಿ ಮೋಹನ್ ಮಾತನಾಡಿ, ಏಷ್ಯನ್ ಗೇಮ್ಸ್ ನಲ್ಲಿ ಭಾರತದಿಂದ ಪ್ರತಿನಿಧಿಸಿರುವ ಕ್ರೀಡಾಪಟುಗಳು ಸಾಕಷ್ಟು ಬಾರಿತೋಷಕಗಳನ್ನು ಗೆಲ್ಲದಿದ್ದಾರೆ ಅದೇ ರೀತಿ ನಮ್ಮ ಮಕ್ಕಳು ಸಹ ಗೆಲುವಿನ ಹೆಜ್ಜೆಯನ್ನು ಮುಂದಿನ ದಿನಗಳಲ್ಲಿ ರಾಜ್ಯ ರಾಷ್ಟ್ರಮಟ್ಟದಲ್ಲಿ ಹಾಕೋ ಮೂಲಕ ರಾಜ್ಯಕ್ಕೆ ದೇಶಕ್ಕೆ ಕೀರ್ತಿ ತರಬೇಕಾಗಿದೆ ಅದರ ಜೊತೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಗುಣಮಟ್ಟದ ಶಿಕ್ಷಣ ಪಡೆಯುವ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸ ಬೇಕಾಗಿದೆ ಎಂದು ಮಕ್ಕಳಲ್ಲಿ ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷದ ನಾಯಕಿ ಇಂದಿರಾಗಾಂಧಿಯವರು 1985ರಲ್ಲಿ ಏಷ್ಯನ್ ಗೇಮ್ ಅನ್ನು ಭಾರತದಲ್ಲಿ ಆ ಯೋಜನೆ ಮಾಡಿಸಿ ಭಾರತದ ಕ್ರೀಡಾಪಟುಗಳು ಸಾಕಷ್ಟು ಬಾರಿತೋಷಗಳನ್ನು ತಂದುಕೊಡುವಲ್ಲಿ ಇವರ ಸಹಕಾರವು ಸಹ ಅಂದಿನ ದಿನಗಳಲ್ಲಿ ಇತ್ತು ಎಂಬುದನ್ನು ನೆನಪಿಸಿಕೊಳ್ಳಬೇಕಾಗಿದೆ ಎಂದರು.
ಸಣ್ಣ ವಯಸ್ಸಿನಲ್ಲಿ ಕ್ರೀಡೆಯಲ್ಲಿ ಹೆಚ್ಚು ಹೆಚ್ಚು ಭಾಗವಹಿಸಿ ಮಕ್ಕಳಿಗೆ ಶಾಲೆಯಲ್ಲಿ ದೈಹಿಕ ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡಬೇಕಾಗಿದೆ.
ಇನ್ನು ಕ್ರೀಡಾಕೂಟದಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಸಿಆರ್ಪಿ ಆದಂತಹ ರೀಟಾ ಎಮ್ಮೆ ಆರ್ ಪಿ ಶಾಲೆಯ ಮುಖ್ಯೋಪಾಧ್ಯಾಯರಾದ ಮೂಕಾಂಬಿಕೆ ಕೃಷ್ಣಮೂರ್ತಿ, ದೈಹಿಕ ಶಿಕ್ಷಕರಾದ ಗಜಾನಂದ, ಮಹೇಶ್ವರಿ, ಈಜಿಪುರ ಹಾಗೂ ವಿಲ್ಸನ್ ಕುಲ ಗಾರ್ಡನ್ ಕ್ಲಸ್ಟರ್ ಮಠದ ಸುಮಾರು ಐದಕ್ಕಿಂತ ಹೆಚ್ಚು ಶಾಲೆಗಳ ನೂರಕ್ಕಿಂತ ಹೆಚ್ಚು ಮಕ್ಕಳು ಈ ಒಂದು ಕ್ರೀಡಾಕೂಟದಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದುಕೊಂಡರು.