
ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿನ *ಸಮುದಾಯ ಶ್ವಾನಗಳನ್ನು ಪ್ರಾಣಿಪ್ರಿಯರು ದತ್ತು ಪಡೆದುಕೊಳ್ಳುವಂತೆ ಅಭಿಯಾನ ನಡೆಸುವಂತೆ ಕೇಂದ್ರ ನಗರ ಪಾಲಿಕೆಯ ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್ ರವರು* ಪಶುಸಂಗೋಪನೆ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ಎಬಿಸಿ ಹಾಗೂ ಎ.ಆರ್.ವಿ ಕುರಿತು ಪಶು ಸಂಗೋಪನೆ ವಿಭಾಗದ ಅಧಿಕಾರಿಗಳು ಹಾಗೂ ಸಮುದಾಯದ ಶ್ವಾನಗಳ ನಿರ್ವಹಣೆ
ಎನ್.ಜಿ.ಓ ಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು ಸಮುದಾಯ ಶ್ವಾನಗಳನ್ನು ಪ್ರಾಣಿಪ್ರಿಯರು ದತ್ತು ಪಡೆದುಕೊಳ್ಳುವಂತೆ ಅಭಿಯಾನ ನಡೆಸಲು ಹಾಗೂ ದತ್ತು ನೀಡುವಾಗ ಶ್ವಾನಗಳ ಆರೋಗ್ಯ ಪರಿಶೀಲನೆ ನಡೆಸಿ ಅಗತ್ಯ ಲಸಿಕೆಗಳನ್ನು ನೀಡುವುದರೊಂದಿಗೆ ನಾಯಿಗಳನ್ನು ದತ್ತು ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಾನ್ಯ ಭಾರತದ ಸರ್ವೋಚ್ಛ
ನ್ಯಾಯಾಲಯವು ನೀಡಿದ ಆದೇಶದಲ್ಲಿನ ಮಾರ್ಗಸೂಚಿಯಂತೆ ಸಮುದಾಯದ ನಾಯಿಗಳ ನಿರ್ವಹಣೆಗೆ ಹಾಗೂ ಲಸಿಕೆಗಳ ಹಾಕಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
*ಎಬಿಸಿ ಕೇಂದ್ರ ಸ್ವಚ್ಛತೆ ಕಾಪಾಡಿ*

ಕೇಂದ್ರ ನಗರ ಪಾಲಿಕೆಯ ಪಶು ಸಂಗೋಪನೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆವರಣದಲ್ಲಿನ ಎಬಿಸಿ ಕೇಂದ್ರದಲ್ಲಿ ಸ್ವಚ್ಛತೆ ಕಾಪಾಡುವಂತೆ ಸೂಚಿಸಿದರು.
ಸಭೆಯಲ್ಲಿ ಪಶುಸಂಗೋಪನೆ ಸಹಾಯಕ ನಿರ್ದೇಶಕರಾದ ಬಸವರಾಜೇಂದ್ರ ಬಿರಾದಾರ, ಹೆಚ್.ಓ.ಡಿ. ವೀಣಾ, ಡಾ. ರಾಜೇಂದ್ರ, ಡಾ. ಶಿವಕುಮಾರ್, SPCA ಪ್ರತಿನಿಧಿಗಳು ಭಾಗವಹಿಸಿದ್ದರು.