LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಹಿಳೆಯರಿಗೆ ಶೂನ್ಯ ಸ್ಥಾನ, ಭ್ರಷ್ಟರಿಗೆ ಸಚಿವ ಸ್ಥಾನ – ಇದೇ ಕಾಂಗ್ರೆಸ್‌ನ ನಿಜವಾದ ಮುಖ" – ಉಷಾ ಮೋಹನ್

ಬೆಂಗಳೂರು:  ನಿನ್ನೆಯ ಮಂತ್ರಿಮಂಡಲ ವಿಸ್ತರಣೆಯು ಕಾಂಗ್ರೆಸ್ ಪಕ್ಷದ ಮಹಿಳಾ ವಿರೋಧಿ ಮತ್ತು ಅಧಿಕಾರಕೇಂದ್ರಿತ ರಾಜಕಾರಣವನ್ನು ಮತ್ತೊಮ್ಮೆ ಬಯಲಿಗೆಳೆದಿದೆ. ರಾಜ್ಯದ ಜನಸಂಖ್ಯೆಯ ಅರ್ಧ ಭಾಗವಾಗಿರುವ ಮಹಿಳೆಯರಿಗೆ ಒಂದೇ ಒಂದು ಸಚಿವ ಸ್ಥಾನವನ್ನೂ ನೀಡದಿರುವುದು ಅತ್ಯಂತ ಖಂಡನೀಯ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ  ಕಾರ್ಯದರ್ಶಿ ಉಷಾ ಮೋಹನ್ ತೀಕ್ಷ್ಣವಾಗಿ ಟೀಕಿಸಿದ್ದಾರೆ. 

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ " ಮಹಿಳಾ ಸಬಲೀಕರಣದ ಬಗ್ಗೆ ವೇದಿಕೆಗಳಲ್ಲಿ ಭಾಷಣ ಮಾಡುವ ಕಾಂಗ್ರೆಸ್, ಅಧಿಕಾರ ಹಂಚಿಕೆಯ ಸಂದರ್ಭದಲ್ಲಿ ಮಹಿಳೆಯರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ನಾಚಿಕೆಗೇಡಿನ ಸಂಗತಿ.
ಅದರ ಜೊತೆಗೆ, ವಾಲ್ಮೀಕಿ ನಿಗಮ ಹಗರಣದ ಆರೋಪದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿ. ನಾಗೇಂದ್ರ ಅವರನ್ನು ಪುನಃ ಸಚಿವ ಸಂಪುಟಕ್ಕೆ ಸೇರಿಸಿರುವುದು ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ನೀಡುತ್ತಿರುವ ರಾಜಕೀಯ ಆಶ್ರಯದ ಸ್ಪಷ್ಟ ಉದಾಹರಣೆಯಾಗಿದೆ. ಜನರ ತೆರಿಗೆ ಹಣದ ದುರುಪಯೋಗದ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿರುವಾಗ ಇಂತಹ ನಿರ್ಧಾರ ಸರ್ಕಾರದ ನೈತಿಕ ದಿವಾಳಿತನವನ್ನು ತೋರಿಸುತ್ತದೆ  " ಎಂದು ತೀಕ್ಷ್ಣವಾಗಿ ಟೀಕಿಸಿದರು.

.ಇನ್ನೂ ಆತಂಕಕಾರಿ ಸಂಗತಿಯೆಂದರೆ, ರಾಜ್ಯದ ಅತ್ಯುನ್ನತ ಪ್ರಜಾಪ್ರಭುತ್ವ ಸಂಸ್ಥೆಗಳಾದ ವಿಧಾನಸಭೆ ಮತ್ತು ವಿಧಾನ ಪರಿಷತ್‌ಗಳ ಸಭಾಧ್ಯಕ್ಷ ಹಾಗೂ ಸಭಾಪತಿ ಹುದ್ದೆಗಳಿಗೂ ಚುನಾಯಿತ ಸದಸ್ಯರ ಅಭಿಪ್ರಾಯಕ್ಕಿಂತ ಹೈಕಮಾಂಡ್‌ನ ಆದೇಶವೇ ಅಂತಿಮವಾಗಿರುವುದು. ಇದು ಕರ್ನಾಟಕ ವಿಧಾನಮಂಡಲದ ಸ್ವಾಯತ್ತತೆ, ಘನತೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಮಾಡಿದ ಅಪಮಾನವಾಗಿದೆ .

"ಮಹಿಳೆಯರನ್ನು ಕಡೆಗಣಿಸಿ, ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವವರಿಗೆ ಬಹುಮಾನ ನೀಡಿ, ವಿಧಾನಮಂಡಲವನ್ನೇ ಹೈಕಮಾಂಡ್‌ನ ಕೈಗೊಂಬೆಯನ್ನಾಗಿಸುವ ಕಾಂಗ್ರೆಸ್ ಸಂಸ್ಕೃತಿಯನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಕರ್ನಾಟಕದ ಜನರು ಈ ಅಹಂಕಾರ ಮತ್ತು ದ್ವಂದ್ವ ನೀತಿಗೆ ಪ್ರಜಾಪ್ರಭುತ್ವದ ಮೂಲಕವೇ ತಕ್ಕ ಉತ್ತರ ನೀಡಲಿದ್ದಾರೆ" ಎಂದು  ಉಷಾ ಮೋಹನ್  ಸರ್ಕಾರದ ನಡೆಯನ್ನು ಖಂಡಿಸಿದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಫ್ರೀಡಂ ಹಬ್ಬವು ಬೃಹತ್ ಸಾಂಸ್ಕೃತಿಕ ಸಂಭ್ರಮಾಚರಣೆಯ ಮೂಲಕ ಬೆಂಗಳೂರಿನ 'ವಿವಿಧತೆಯಲ್ಲಿ ಏಕತೆ'ಯನ್ನು ಪ್ರದರ್ಶಿಸುತ್ತದೆಪ್ರತಿದಿನ 20 ರಿಂದ 25 ಕಿ.ಮೀ. ಪುಟ್ ಪಾತ್ ಒತ್ತುವರಿ ತೆರವು ಮಾಡಿ : ಆಯುಕ್ತ ಕೆ. ಎನ್. ರಮೇಶ್ಸಂತೋಷ್‌ ಲಾಡ್‌ ರವರು ಕೈಗೊಂಡಿರುವ ಧಾರವಾಡ ಜಿಲ್ಲಾ ಪ್ರವಾಸಹೂಗುಚ್ಛ, ಶಾಲು, ಪೇಟಗಳಿಗೆ ಬ್ರೇಕ್, ಸರಳತೆಯ ಹಾದಿ ಹಿಡಿದ ಸಚಿವ ವಿಜಯಾನಂದ ಕಾಶಪ್ಪನವರ್ಕೈತಪ್ಪಿದ ಸಚಿವ ಸ್ಥಾನ, ಬೆಂಬಲಿಗರಿಂದ ಪ್ರತಿಭಟನೆ,ಮನವಲಿಸುವೆ ಎಂದ್ರು ಹರಿಪ್ರಸಾದ್ಹೂಡಿಕೆ ಆಕರ್ಷಣೆಗೆ ಮುಂಬೈನಲ್ಲಿ 2 ದಿನಗಳ ರೋಡ್ ಶೋಮಹಿಳೆಯರಿಗೆ ಶೂನ್ಯ ಸ್ಥಾನ, ಭ್ರಷ್ಟರಿಗೆ ಸಚಿವ ಸ್ಥಾನ – ಇದೇ ಕಾಂಗ್ರೆಸ್‌ನ ನಿಜವಾದ ಮುಖ" – ಉಷಾ ಮೋಹನ್ಕ್ರಿಶ್ಚಿಯನ್ ನಿಗಮದ ಅಧ್ಯಕ್ಷ ಉಪಾಧ್ಯಕ್ಷ ಎಂಡಿ ಮಜಾಗೊಳಿಸಲು ಆಗ್ರಹ ನೂತನ ಮಂತ್ರಿ ಕಾಶಪ್ಪನವರ್ ನೊಣವಿನಕೆರೆ ಮಟಕ್ಕೆ ಭೇಟಿಹ್ಯಾರಿಸ್ ಗೆ ಕೈ ತಪ್ಪಿದ ಸಚಿವ ಸ್ಥಾನ, ಕ್ಷೇತ್ರದ ಕಾರ್ಯಕರ್ತರ ಉರಿ ಉರಿ..!