LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಂತೋಷ್‌ ಲಾಡ್‌ ರವರು ಕೈಗೊಂಡಿರುವ ಧಾರವಾಡ ಜಿಲ್ಲಾ ಪ್ರವಾಸ

ಬೆಂಗಳೂರು: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಶ್ರೀ ಸಂತೋಷ್‌ ಎಸ್‌ ಲಾಡ್‌ ರವರು ಬುಧುವಾರದಿಂದ ಸತತ ಮೂರು ದಿನಗಳ ಕಾಲ ಧಾರವಾಡ ಜಿಲ್ಲೆಯ  ವಿವಿಧ ಪ್ರದೇಶಗಳಿಗೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಬರ ಹಾಗೂ ಅತೀವೃಷ್ಟಿಯ ಪರಿಸ್ಥಿತಿ ಕುರಿತು ಅವಲೋಕನಾ ಸಭೆಗಳನ್ನು ನಡೆಸಲಿದ್ದಾರೆ. 

ಬುಧವಾರ ಬೆಳಗ್ಗೆ ಕಲಘಟಗಿಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಲಘಟಗಿ ತಾಲೂಕು ಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಹಾಗೂ ಅತಿವೃಷ್ಟಿ/ ಬರ ಪರಿಸ್ಥಿತಿಯ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ಕಲಘಟಗಿ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ.ಅದೇ ದಿನ ಮಧ್ಯಾಹ್ನ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಅತಿವೃಷ್ಟಿ/ ಬರ ಪರಿಸ್ಥಿತಿಯ ಕುರಿತು ಅಯೊಜಿಸಿರುವ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಗುರುವಾರ ಬೆಳಗ್ಗೆ ನವಲಗುಂದ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಬರ ಕುರಿತು ಚರ್ಚೆ ನಡೆಸಲಿದ್ದಾರೆ. ನಂತರ ವಿವಿಧ ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಬರ ಕುರಿತು ಚರ್ಚೆ ನಡೆಸಲಿದ್ದಾರೆ. ನಂತರ ವಿವಿಧ ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ.

ಶುಕ್ರವಾರ ಅಳ್ನಾವರ ತಾಲೂಕಿನ ಗ್ರಾಮಗಳಲ್ಲಿನ ಅತಿವೃಷ್ಟಿ/ ಬರ ಪರಿಸ್ಥಿತಿಯ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ನಂತರ ವಿವಿಧ ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ.

ಜಿಲ್ಲೆಯ ಹಲವು ಭಾಗಗಳಲ್ಲಿ ಹವಾಮಾನ ವೈಪರೀತ್ಯದಿಂದ ಒಂದೆಡೆ ಬರದ ಛಾಯೆ ಎದುರಾಗಿದ್ದರೆ, ಮತ್ತೊಂದೆಡೆ ಅತೀವೃಷ್ಟಿಯ ಕಾರಣಕ್ಕೆ ಕೃಷಿ, ರಸ್ತೆ, ಸೇತುವೆ, ಮನೆಗಳು ಹಾಗೂ ಸಾರ್ವಜನಿಕ ಮೂಲಸೌಕರ್ಯಕ್ಕೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಮುನ್ನೆಚ್ಚರಿಕಾ ಹಾಗೂ ಪರಿಹಾರ ಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕೈಗೊಳ್ಳಲು ಪೂರಕವಾಗಿ, ಸಚಿವರ ನೇತೃತ್ವದ ಪರಿವೀಕ್ಷಣೆಯ ನಿರ್ಧಾರ ತುಂಬಾ ಮಹತ್ವದ್ದಾಗಿದೆ.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಫ್ರೀಡಂ ಹಬ್ಬವು ಬೃಹತ್ ಸಾಂಸ್ಕೃತಿಕ ಸಂಭ್ರಮಾಚರಣೆಯ ಮೂಲಕ ಬೆಂಗಳೂರಿನ 'ವಿವಿಧತೆಯಲ್ಲಿ ಏಕತೆ'ಯನ್ನು ಪ್ರದರ್ಶಿಸುತ್ತದೆಪ್ರತಿದಿನ 20 ರಿಂದ 25 ಕಿ.ಮೀ. ಪುಟ್ ಪಾತ್ ಒತ್ತುವರಿ ತೆರವು ಮಾಡಿ : ಆಯುಕ್ತ ಕೆ. ಎನ್. ರಮೇಶ್ಸಂತೋಷ್‌ ಲಾಡ್‌ ರವರು ಕೈಗೊಂಡಿರುವ ಧಾರವಾಡ ಜಿಲ್ಲಾ ಪ್ರವಾಸಹೂಗುಚ್ಛ, ಶಾಲು, ಪೇಟಗಳಿಗೆ ಬ್ರೇಕ್, ಸರಳತೆಯ ಹಾದಿ ಹಿಡಿದ ಸಚಿವ ವಿಜಯಾನಂದ ಕಾಶಪ್ಪನವರ್ಕೈತಪ್ಪಿದ ಸಚಿವ ಸ್ಥಾನ, ಬೆಂಬಲಿಗರಿಂದ ಪ್ರತಿಭಟನೆ,ಮನವಲಿಸುವೆ ಎಂದ್ರು ಹರಿಪ್ರಸಾದ್ಹೂಡಿಕೆ ಆಕರ್ಷಣೆಗೆ ಮುಂಬೈನಲ್ಲಿ 2 ದಿನಗಳ ರೋಡ್ ಶೋಮಹಿಳೆಯರಿಗೆ ಶೂನ್ಯ ಸ್ಥಾನ, ಭ್ರಷ್ಟರಿಗೆ ಸಚಿವ ಸ್ಥಾನ – ಇದೇ ಕಾಂಗ್ರೆಸ್‌ನ ನಿಜವಾದ ಮುಖ" – ಉಷಾ ಮೋಹನ್ಕ್ರಿಶ್ಚಿಯನ್ ನಿಗಮದ ಅಧ್ಯಕ್ಷ ಉಪಾಧ್ಯಕ್ಷ ಎಂಡಿ ಮಜಾಗೊಳಿಸಲು ಆಗ್ರಹ ನೂತನ ಮಂತ್ರಿ ಕಾಶಪ್ಪನವರ್ ನೊಣವಿನಕೆರೆ ಮಟಕ್ಕೆ ಭೇಟಿಹ್ಯಾರಿಸ್ ಗೆ ಕೈ ತಪ್ಪಿದ ಸಚಿವ ಸ್ಥಾನ, ಕ್ಷೇತ್ರದ ಕಾರ್ಯಕರ್ತರ ಉರಿ ಉರಿ..!