LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕ್ರಿಶ್ಚಿಯನ್ ನಿಗಮದ ಅಧ್ಯಕ್ಷ ಉಪಾಧ್ಯಕ್ಷ ಎಂಡಿ ಮಜಾಗೊಳಿಸಲು ಆಗ್ರಹ

ಬೆಂಗಳೂರು: ಕ್ರಿಶ್ಚಿಯನ್ ಅಭಿವೃದ್ಧಿ ಅಧ್ಯಕ್ಷ ಉಪಾಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರನ್ನು ಉನ್ನತ ಹುದ್ದೆಯ ಸ್ಥಾನದಿಂದ ಕೈಬಿಡ ಬೇಕೆಂದು ಅಖಿಲ ಭಾರತ ಕ್ರೈಸ್ತ ಮಹಾಸವಾದ ಸಂಸ್ಥಾಪಕ ಅಧ್ಯಕ್ಷರಾದ ಪ್ರಜ್ವಲ್ ಸ್ವಾಮಿ ಅವರು ಆಗ್ರಾ ಮಾಡಿದರು.news_1785864941_1_892.webp

ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆಯನ್ನು ಮಾಡಿ ಸರ್ಕಾರದ ಗಮನ ಸೆಳೆದು ಮಾತನಾಡಿದ ಅವರು, ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕ್ರಿಶ್ಚಿಯನ್ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿ ಅಂದಾಜು 1.5 ವರ್ಷಗಳ ಗತಿಸಿದರೂ ಸಹ ಸಮುದಾಯದ ಅಭಿವೃದ್ಧಿಗೆ ಮೀಸಲಾಗಿರಿಸಿರುವ ರೂ250 ಕೋಟಿ ಅನುದಾನದಲ್ಲಿ ಇಲ್ಲಿಯವರೆಗೆ ಕೇವಲ ರೂ.85 ಕೋಟಿ ಅನುದಾನ ಮಾತ್ರ ಖರ್ಚು ಮಾಡಿರುತ್ತಾರೆ.

ಅದೂ ಸಹ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆ ಮಾಡದೇ ಹೆಚ್ಚಾಗಿ ಕೇವಲ ಲೋನ್‌ ಗಳಿಗೆ ಮಾತ್ರ ಬಿಡುಗಡೆ ಮಾಡಿರುತ್ತಾರೆ. ಇಂತಹ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರ ಅಸಮರ್ಪಕ ಬೇಜವಾಬ್ದಾರಿಯುತ ಹಾಗೂ ಸದರಿ ಪದವಿಗಳಿಗೆ ತರಲವಲ್ಲದ ರೀತಿಯ ಕಾರ್ಯನಿರ್ವಹಣೆಯಿಂದಾಗಿ ಸಕಾಲದಲ್ಲಿ ಅನುದಾನ ಬಳಕೆ ಮಾಡದೇ ಇರುವುದರಿಂದ ಕ್ರಿಶ್ಚಿಯನ್ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ.

ರಾಜ್ಯ ಕಾಂಗ್ರೆಸ್ ಸರಕಾರದಿಂದ ಕ್ರಿಶ್ಚಿಯನ್ ಸಮುದಾಯಕ್ಕೆ ಉತ್ತಮ ಅನುದಾನ ಮಂಜೂರು ಮಾಡಿದರೂ ಸಹ ನಿಗಮದಲ್ಲಿರುವ ಅಸಮಪರ್ಕ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರ ಕಾಲ-ಕಾಲಕ್ಕೆ ಹೊಸ ನೀತಿ ನಿಯಮಗಳನ್ನು ತರುತ್ತಿರುವುದರಿಂದ ಕ್ರೈಸ್ತ ಜನರು ಸರಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಹಾಗೂ ಇಲ್ಲಸಲ್ಲದ ದಾಖಲೆಗಳನ್ನು ಪಡೆಯಲು ಪರದಾಡುವ ಪರಿಸ್ಥಿತಿ ನಿರ್ಮಾಣ ಮಾಡಿ ಸರಕಾರಿ ಸೌಲಭ್ಯಗಳು ದೊರೆಯದಂತೆ ದಾರಿ ತಪ್ಪಿಸಿ ನಿಗಮದಿಂದ ಸೌಲತ್ತುಗಳು ಸಿಗದಂತ ಪರಿಸ್ಥಿತಿ ಉಂಟು ಮಾಡುತ್ತಿದ್ದಾರೆ ಎಂದು ಗರಂ ಆದರು.

ಆದ್ದುದರಿಂದ ಸದರಿ ವಿಷಯವನ್ನು ಗಂಭಿರವಾಗಿ ಪರಿಗಣಿಸಿ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರ ನ್ನು ಈ ಕೂಡಲೆ ವಜಾಗೊಳಿಸಿ ಕ್ರಿಶ್ಚಿಯನ್ ಸಮುದಾಯದ ಏಳಿಗೆಗೆ ದುಡಿಯುವ ಸೂಕ್ತ ಅಧಿಕಾರಿ/ಸಿಬ್ಬಂದಿ ಹಾಗೂ ಅಧ್ಯಕ್ಷರನ್ನು ನೇಮಕಗೊಳಿಸಿಕೊಡಬೇಕೆಂದು ನಮ್ಮ ಎಲ್ಲಾ ಕ್ರೈಸ್ತ ಸಂಘಟನೆಗಳ ವತಿಯಿಂದ ಕೋರುತ್ತೇವೆ. ಒಂದು ವೇಳೆ ಸದರಿಯವರನ್ನು ಸ್ಥಾನದಿಂದ ವಜಾಗೊಳಿಸದೇ ಇದ್ದಲ್ಲಿ ನಮ್ಮ ಕ್ರಿಶ್ಚಿಯನ್ ಸಮುದಾಯ ದಿಂದ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಸರ್ಕಾರಕ್ಕೆ ಎಚ್ಚರಿಕೆಯನ್ನು ಸಹ ನೀಡಿದರು.

ಭಜನೆ ಮೂಲಕ ಸರ್ಕಾರದ ಕವನನ ಸೆಳೆದರು:

ಕ್ರೈಸ್ತ ನಿಗಮ ಮಂಡಳಿಯಲ್ಲಿ ಇರುವ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರ  ದುಂಡಾ ವರ್ತನೆ ವಿರೋಧಿಸಿ ಫ್ರೀಡಂ ಪಾರ್ಕಿನಲ್ಲಿ ಕ್ರೈಸ್ತ ಮಹಾಸಭಾದಿಂದ  ವಿನೋತನವಾಗಿ ಪ್ರತಿಭಟನೆಯನ್ನು ಮಾಡಿದರು. ಪ್ರತಿಭಟನಾ ಸ್ಥಳದಲ್ಲಿ ಭಜನೆ ಮಾಡುವ ಮೂಲಕ ಸರ್ಕಾರಕ್ಕೆ ವಿಶೇಷ ಗಮನಸೆಳೆದರು.news_1785864941_2_204.webp

ಪ್ರತಿಭಟನಾ ಸ್ಥಳಕ್ಕೆ ಕಾರ್ಯದರ್ಶಿ ಭೇಟಿ: 

ಇನ್ನು ಆಗಿಲ್ಲ ಭಾರತ ಕ್ರೈಸ್ತ ಮಹಾಸವಾದ ಪದಾಧಿಕಾರಿಗಳು ಜಿಲ್ಲಾ ಅಧ್ಯಕ್ಷರುಗಳ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ನಿಗಮದ ಕಾರ್ಯದರ್ಶಿಗಳು ಭೇಟಿ ನೀಡಿ ಪ್ರತಿಭಟನಾ ನಿರತರ ಸಮಸ್ಯೆ ಹಾವಲುಗಳನ್ನು ಸ್ವೀಕರಿಸಿ ಮಾತನಾಡಿದರು,  ನಿಮ್ಮ ಸಮಸ್ಯೆಗಳು ನನಗೆ ಅರ್ಥವಾಗುತ್ತವೆ ಇಲಾಖೆಯಲ್ಲಿ ಸಚಿವರು ಇಲ್ಲದ ಕಾರಣ ವಿಳಂಬವಾಗುತ್ತಿದೆ ಇನ್ನೆರಡು ಮೂರು ದಿನಗಳಲ್ಲಿ ಹೊಸ ಸಚಿವರು ಇಲಾಖೆಯ ಬರುತ್ತಿದ್ದಾರೆ ಹೀಗಾಗಿ ನಿಮ್ಮ ಸಮಸ್ಯೆಗಳನ್ನು ಚರ್ಚಿಸಲಾಗುತ್ತದೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಕಲ್ಯಾಣ ಕರ್ನಾಟಕದ ಅಧ್ಯಕ್ಷರಾದ ಇಸಾಕ್ ಕೆಮನೂರು ಸೇವಂತಿ ಉತ್ತರ ಕರ್ನಾಟಕದ ಕ್ರೈಸ್ತ ಸಮುದಾಯದ ಪದಾಧಿಕಾರಿಗಳು ಸಮುದಾಯದವರು ಹಾಗೂ ಬೆಂಗಳೂರಿನಲ್ಲಿರುವ ಕ್ರೈಸ್ತ ಸಮುದಾಯದವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕ್ರಿಶ್ಚಿಯನ್ ನಿಗಮದ ಅಧ್ಯಕ್ಷ ಉಪಾಧ್ಯಕ್ಷ ಎಂಡಿ ಮಜಾಗೊಳಿಸಲು ಆಗ್ರಹ ನೂತನ ಮಂತ್ರಿ ಕಾಶಪ್ಪನವರ್ ನೊಣವಿನಕೆರೆ ಮಟಕ್ಕೆ ಭೇಟಿಹ್ಯಾರಿಸ್ ಗೆ ಕೈ ತಪ್ಪಿದ ಸಚಿವ ಸ್ಥಾನ, ಕ್ಷೇತ್ರದ ಕಾರ್ಯಕರ್ತರ ಉರಿ ಉರಿ..!ಬಿಡದಿ ಟೌನ್‌ಶಿಪ್ ವಿರೋಧಿಸಿ ಆಗಸ್ಟ್ 9 ರಿಂದ 11ರ ವರೆಗೆ ಜೆಡಿಎಸ್ ನಿಂದ ಬೃಹತ್ ಪಾದಯಾತ್ರೆಸ್ವಚ್ಛ ಸರ್ವೇಕ್ಷಣ 2025-26 ರ  3ನೇ ಹಂತದ ವಿಶೇಷ ಸ್ವಚ್ಛತಾ ಅಭಿಯಾನದ 1ನೇ ದಿನ 36 ಬಸ್ ಶೆಲ್ಟರ್ ಗಳ ಸ್ವಚ್ಛತೆ: ಜಗದೀಶ್ ಜಿಪಾಲಿಕೆ ವ್ಯಾಪ್ತಿಯಲ್ಲಿ ಇದುವರೆಗೂ 115.56 ಕಿ.ಮೀ. ಪಾದಚಾರಿ ಮಾರ್ಗ ಒತ್ತುವರಿ ತೆರವುಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದಲ್ಲಿ ಅದ್ದೂರಿಯಾಗಿ ನೆರವೇರಿದ ಉಭಯ ಕಾರ್ಯಕ್ರಮಫೋರ್ಟಿಸ್ ಆಸ್ಪತ್ರೆಯಿಂದ ಭಾರತದ ಅತ್ಯಂತ ವೇಗದ 3,000 ಡಾ ವಿನ್ಸಿ ಎಕ್ಸ್ಐ ರೊಬೊಟಿಕ್ ಶಸ್ತ್ರಚಿಕಿತ್ಸೆಗಳ ನಿರ್ವಹಣೆಯ ಸಾಧನೆ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ಕಾನ್ಸುಲೇಟ್ ಜನರಲ್ ಕಚೇರಿ, ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಕಾರ್ಯಾರಂಭಸಮ್ಯಕ್ ಪ್ರತಿಷ್ಠಾನಮ್ ನಿಂದ ಗುರುವಂದನಾ, ಸಾಧಕರಿಗೆ ಸಂಸ್ಕೃತ ಶ್ರೀ: ಪ್ರಶಸ್ತಿ ಪ್ರದಾನ