LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

 ಮಹಿಳಾ ದಿನಾಚರಣೆ ಪ್ರಯುಕ್ತ ಮಾಜಿ ಪ್ರಧಾನಿ ಸ್ಮರಣೆಯಲ್ಲಿ ಇಂದಿರಾ ಕ್ರೀಡೋತ್ಸವ-2026

ಬೆಂಗಳೂರು: ಶಂಕರಮಠ ಮತ್ತು ಶಕ್ತಿಗಣಪತಿನಗರ ವಾರ್ಡ್ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಇಂದಿರಾ ಕ್ರೀಡೋತ್ಸವ-2026ಆಯೋಜಿಸಿದ್ದರು.

ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಜಿ.ಪದ್ಮಾವತಿರವರು, ಮಾಜಿ ಮಹಾಪೌರರಾದ ಜೆ.ಹುಚ್ಚಪ್ಪ, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಎಸ್.ಕೇಶವಮೂರ್ತಿರವರು, ಆಡಳಿತ ಪಕ್ಷದ ಮಾಜಿ ನಾಯಕರಾದ ಎಮ್.ಶಿವರಾಜುರವರು, ಮಾಜಿ ಪಾಲಿಕೆ ಸದಸ್ಯರಾದ ಮಹದೇವಮ್ಮ, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಹೆಚ್.ಎಸ್.ಮಂಜುನಾಥ್ ಗೌಡರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

ಮ್ಯೂಸಿಕಲ್ ಚೇರ್, ಲೇಮನ್ ಸ್ಪೂನ್ ರೇಸ್, ಬಾಳೆಹಣ್ಣು ತಿನ್ನುವ ಸ್ಪರ್ಧೆ, ರನ್ನಿಂಗ್, ಹಗ್ಗ-ಜಗ್ಗಾಟ, ಥ್ರೋಬಾಲ್, ನೀರು ತುಂಬುವ ಸ್ಪರ್ಧೆ, ಬಕೆಟ್ ನಲ್ಲಿ ಬಾಲ್ ಹಾಕುವ ಸ್ಪರ್ಧೆಯನ್ನು ಮಹಿಳೆಯರಿಗೆ ಏರ್ಪಡಿಸಲಾಗಿತ್ತು.

*ಜಿ.ಪದ್ಮಾವತಿರವರು* ಮಾತನಾಡಿ ಮಹಿಳೆಯರು ಕ್ರೀಡೆಯಲ್ಲಿ ಭಾಗವಹಿಸಬೇಕು, ಸೋಲು-ಗೆಲುವು ಮುಖ್ಯವಲ್ಲ. ವಿಶ್ವಾದ್ಯಂತ ಮಹಿಳೆಯರು ದಿನಾಚರಣೆ ಮಾಡುತ್ತಿದ್ದಾರೆ.

ಮನೆ ಕೆಲಸ ಮಾಡಿಕೊಂಡು ಇರಬೇಕು, ಶಿಕ್ಷಣ ಕೊಡಬಾರದು ಎಂಬುದು ನಿಯಮವನ್ನು ಹಾಕಿಕೊಂಡಿದ್ದರು. ಶ್ರೀಮತಿ ಸಾವಿತ್ರಿ ಬಾಪುಲೆ ಹೋರಾಟದ ಫಲ ಇಂದು ಮಹಿಳೆಯರು ಶಿಕ್ಷಣ ಪಡೆಯಲು ಸಾಧ್ಯವಾಗಿದೆ.

ಇಂದಿರಾಗಾಂಧಿರವರು 16ವರ್ಷಕ್ಕಿಂತ ಹೆಚ್ಚು ಕಾಲ ಪ್ರಧಾನಿಯಾಗಿ ಆಡಳಿತ ನಡೆಸಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಕಿತ್ತೂರುರಾಣಿ ಚೆನ್ನಮ್ಮ, ಓನಕೆ ಒಬ್ಬವ್ವ ರವರ ಸಾಧನೆಗಳು ಇಂದಿನ ಮಹಿಳೆಯರು ಅರಿತುಕೊಳ್ಳಬೇಕು.

ಮಹಿಳೆಯರು ಸ್ವಾಭಿಮಾನಿ, ಸ್ವಾವಲಂಭಿ ಬದುಕು ಸಾಗಿಸಲು ನಮ್ಮ ಸರ್ಕಾರ 5 ಗ್ಯಾರಂಟಿ ಯೋಜನೆಗಳು ನೀಡಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಹಿಳೆಯರಿಗೆ ಶೇಕಡ 50ರಷ್ಟು ಮೀಸಲಾತಿ ನಮ್ಮ ಕಾಂಗ್ರೆಸ್ ಸರ್ಕಾರ ಕೊಟ್ಟಿದೆ.
ಮಹಿಳೆಯರು ಸಬಲೆಯರು ಕುಟುಂಬದ ಜೊತೆಯಲ್ಲಿ ಸಮಾಜದ ಅಭಿವೃದ್ದಿಗೆ ಶ್ರಮಿಸುವಳು ಎಂದು ಹೇಳಿದರು.

*ಜೆ.ಹುಚ್ಚಪ್ಪರವರು* ಮಾತನಾಡಿ ಪ್ರತಿಯೊಬ್ಬ ಪುರುಷನ ಯಶ್ವಸಿ ಹಿಂದೆ ಮಹಿಳೆಯರ ಪಾತ್ರ ಇರುತ್ತದೆ. ರಾಜಕೀಯ, ಕ್ರೀಡೆ, ಶಿಕ್ಷಣ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಿನ ಸಾಧನೆ ಮಾಡಿದ್ದಾರೆ.

ಅತಿ ಕಿರಿಯ ವಯಸ್ಸಿನ ಸಂಸದರಾದ ಪ್ರಿಯಾಂಕ್ ಗಾಂಧಿರವರು ಲೋಕಸಭೆಯಲ್ಲಿ ಅತ್ಯಂತ ದಿಟ್ಟತನದಿಂದ ಮಾತನಾಡುತ್ತಾರೆ.
ಪುರುಷ ಮತ್ತು ಮಹಿಳೆಯರು ಸರಿಸಮಾನ ಎಲ್ಲರು ಒಂದೇ. ಮಹಿಳೆಯರಿಗೆ ಕಾಂಗ್ರೆಸ್ ಪಕ್ಷ ಹೆಚ್ಚಿನ ಆದ್ಯತೆ ನೀಡುತ್ತಿದೆ.

*ಎಮ್.ಶಿವರಾಜು* ಮಾತನಾಡಿ ಮಾಜಿ ಪ್ರಧಾನಿ ಇಂದಿರಾಗಾಂಧಿರವರ ಸ್ಮರಣೆಯಲ್ಲಿ ಇಂದಿರಾ ಕ್ರೀಡೋತ್ಸವ ಅಚರಣೆ ಮಾಡಲಾಗುತ್ತಿದೆ. ಮಹಿಳೆಯರಿಗೆ ಕಾಂಗ್ರೆಸ್ ಪಕ್ಷದ ಸರ್ಕಾರ ಆದ್ಯತೆ, ಉತ್ತೇಜನ ನೀಡುತ್ತಿದೆ.
ಮಹಿಳೆ ತಾಯಿ, ತಂಗಿ, ಅಕ್ಕನಾಗಿ ಇಡಿ ಕುಟುಂಬಕ್ಕೆ ಆಸರೆಯಾಗಿ ನಿಲ್ಲುತ್ತಾಳೆ ಎಂದು ಹೇಳಿದರು.

ಪಶ್ಚಿಮ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಪಲ್ಲವಿಪ್ರಭು, ಕಾಂಗ್ರೆಸ್ ಪಕ್ಷದ ಮುಖಂಡರಾದ ನರಸಿಂಹಮೂರ್ತಿ,ಕೃಷ್ಣಪ್ಪ, ಶಿವಕುಮಾರ್,ಸುಧೀಂದ್ರ
ಜನಾರ್ಧನ್, ಹೇಮಲತಾ ಜನಾರ್ಧನ್, ಪರಿಸರ ರಾಮಕೃಷ್ಣ, ಶ್ರೀಮತಿ ಸಾವಿತ್ರಿ ರಾಮಕೃಷ್ಣ, ಮಹಿಳಾ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಶ್ರೀಮತಿ ವಿಶಾಲಾಕ್ಷೀ ಶಿವರಾಜು, ಶ್ರೀಮತಿ ಮಲ್ಲಿಕಾ, ಶ್ರೀಮತಿ ಸುಶೀಲಾ, ಶ್ರೀಮತಿ ಭವ್ಯ, ಶ್ರೀಮತಿ ನಂದಿನಿರವರು ಉಪಸ್ಥಿತರಿದ್ದರು.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ