LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಂವಿಧಾನ ಬಳಗದಿಂದ ಮಧ್ಯರಾತ್ರಿ ಅಂಬೇಡ್ಕರ್ ಜಯಂತಿ ಆಚರಣೆ

 ಬೆಂಗಳೂರು: ಕರ್ನಾಟಕ ರಾಜ್ಯ ಸಂವಿಧಾನ ಬಳಗ ಹಾಗೂ ಗೋಲ್ಡನ್ ಅಂಬೇಡ್ಕರ್ ಫೌಂಡೇಶನ್ ಸಂಸ್ಥೆ ಹಾಗೂ  ದಲಿತ ಪರ ಸಂಘಟನೆಗಳ ಸಹಯೋಗದೊಂದಿಗೆ 135ನೇ ಡಾ. ಬಿಆರ್ ಅಂಬೇಡ್ಕರ್ ಜಯಂತಿಯನ್ನು ಅದ್ದೂರಿಯಾಗಿ ಹಾಗೂ ವಿಶೇಷವಾಗಿ ಆಚರಣೆ ಮಾಡಲಾಯಿತು.


ನಗರದ ಫ್ರೀಡಂ ಪಾರ್ಕಿನಲ್ಲಿ ಗೋಲ್ಡನ್ ಅಂಬೇಡ್ಕರ್ ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷರಾದ ಜಯಕಾಂತ್ ಚಾಲುಕ್ಯ ಅವರ ನೇತೃತ್ವದಲ್ಲಿ ಕಳೆದ ಎರಡು ವರ್ಷಗಳಿಂದ ಅಂಬೇಡ್ಕರ್ ಅವರ ಹುಟ್ಟಿದ ದಿನವನ್ನು ಸಂಭ್ರಮ ಸಡಗರ ಹಾಗೂ ಹಲವು ವಿಶೇಷತೆಗಳು ಕಾರ್ಯ ಚಟುವಟಿಕೆಗಳೊಂದಿಗೆ ಆಚರಣೆ ಮಾಡಿಕೊಂಡು ಬರಲಾಗುತ್ತದೆ. ಈ ಬಾರಿ ಭೀಮ ದಸರಾ ಎಂಬ ಘೋಷವಾಕ್ಯದೊಂದಿಗೆ ಏಪ್ರಿಲ್ 13ರಂದು ವಿಧಾನಸೌಧ ಮುಂಭಾಗದಲ್ಲಿರುವ ಅಂಬೇಡ್ಕರ್ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಫ್ರೀಡಂ ಪಾರ್ಕ್ ವರೆಗೆ ಆನೆಯ ಮೇಲೆ ಅಂಬಾರಿಯನ್ನು ಕೂರಿಸಿ ಅದರಲ್ಲಿ ಚಿನ್ನಲೇಪಿತ ಅಂಬೇಡ್ಕರ್ ಅವರ ಪುತ್ತಳಿಯನ್ನು ಮೆರವಣಿಗೆ ಮಾಡುವ ಮೂಲಕ ಹಲವು ವಿಶೇಷತೆಗಳನ್ನು ಮೆರೆದರೋ ಅಲ್ಲದೆ ಜಾನಪದ ಕಲಾತಂಡಗಳಿಂದ ರಸ್ತೆಯುದ್ಧಕ್ಕೂ ತರಹರಿ ನೃತ್ಯಗಳನ್ನು ಮಾಡುವ ಮೂಲಕ ಅಂಬೇಡ್ಕರ್ ಅವರ ಅಭಿಮಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.


 ಸ್ವಾತಂತ್ರ್ಯ ಉದ್ಯಾನವನದಲ್ಲಿ 2026ರ ಏಪ್ರಿಲ್ 15ರಂದು ಮಧ್ಯರಾತ್ರಿ 12 ಗಂಟೆಗೆ ಅಂಬೇಡ್ಕರ್ ಅವರ ಹುಟ್ಟಿದ ದಿನವನ್ನು ಕೇಕ್ ಕತ್ತರಿಸುವ ಮೂಲಕ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಇನ್ನೂ ಇದೆ ವೇಳೆ ಬೃಹತ್ ವೇದಿಕೆಯಲ್ಲಿ ಕಲಾತಂಡಗಳಿಂದ ಕ್ರಾಂತಿ ಗೀತೆಗಳು ಜೈಂಕಾರವೇ ಮೊಳಗಿತು.


ಇನ್ನು ಜೈಕಾಂತ್ ಚಾಲುಕ್ಯವರು ಮಾತನಾಡಿ, ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಜನ್ಮದಿನವನ್ನು ಕರ್ನಾಟಕ ಸಂವಿಧಾನ ಬಳಗದಿಂದ ಪ್ರತಿ ವರ್ಷವೂ ಹಲವು ವಿಶೇಷಗಳಿಂದ ಆಚರಣೆ ಮಾಡಿಕೊಂಡು ಬರಲಾಗುತ್ತದೆ ಈ ಬಾರಿಯೂ ಭೀಮ ದಸರಾ ಎಂಬ ಘೋಷವಾಗಿರೊಂದಿಗೆ ಆಚರಣೆ ಮಾಡಲಾಯಿತು ಇದಕ್ಕೆ ಸಾಕಷ್ಟು ಹಲವು ದಲಿತ ಪರ ಸಂಘಟನೆಗಳು ಸಹಕಾರವನ್ನು ನೀಡಿದ್ದಾರೆ. ನನಗೆ ಜೀವನದಲ್ಲಿ ಒಂದು ಆಸೆ ಇದೆ ಅದು ಏನೆಂದರೆ ಪ್ರತಿಯೊಬ್ಬ ದಲಿತರಿಂದ ಕೇವಲ ಒಂದು ರೂಪಾಯಿಯನ್ನು ಬೇನಿಗೆ ಪಡೆಯುವ ಮೂಲಕ ಅಂಬೇಡ್ಕರ್ ಅವರ ಚಿನ್ನದ ಪುತ್ತಳಿಯನ್ನು ಮಾಡುವುದಾಗಿ ಸಂಕಲ್ಪ ಮಾಡಲಾಗಿದ್ದು ಈಗಾಗಲೇ ಸಾಕಷ್ಟು ಹಣವು ಸಹ ಸಂಗ್ರಹವಾಗಿದೆ ಇದನ್ನು ಯಾವುದೇ ಉದ್ದೇಶಗಳಿಗೆ ಬಳಸಿ ಕೊಡಲಾಗುವುದಿಲ್ಲ.


ಪುತ್ತಳಿ ನಿರ್ಮಾಣ ಮಾಡುವ ವಿಚಾರದಲ್ಲಿ ಗೊಂದಲಗಳನ್ನು ಮಾಡಿಕೊಳ್ಳದೆ ಪ್ರತಿಯೊಬ್ಬ ದಲಿತರು ಕ್ಯೂಆರ್ ಕೋಡ್ ಮೂಲಕ ಹಣವನ್ನು ಠೇಣಗಾಗಿ ನೀಡಬೇಕಾಗುತ್ತದೆ ಯಾವುದೇ ನಗದು ರೂಪದಲ್ಲಿ ಕೊಟ್ಟರೆ ಸರಿ ಹೊಂದುವುದಿಲ್ಲ ಎಂಬ ಕಾರಣಕ್ಕೆ ಆನ್ಲೈನ್ ನಲ್ಲಿ ದೇಣಿಗೆ ಸಂಗ್ರಹವಾಗುತ್ತಿದ್ದು ಅದಕ್ಕೆ ಪ್ರತ್ಯೇಕವಾದ ಅಂತಹ ಖಾತೆಯನ್ನು ಸಹ ತೆರೆಯಲಾಗಿದೆ ಎಲ್ಲಾ ಸಾರ್ವಜನಿಕ ಸಮಕ್ಷಮದಲ್ಲಿ ಖಾತೆಯ ವಿವರವನ್ನು ಸಹ ನೀಡಲಾಯಿತು ಅದರಿಂದ ಒಂದು ರೂಪಾಯಿ ಹಣವನ್ನು ಸಹ ಫೋಲ್ ಮಾಡುವುದಿಲ್ಲ ಸಂಪೂರ್ಣವಾಗಿ ದಣಿಗೆ ಸಂಗ್ರಹವನ್ನು ಪುತ್ತಳಿಯ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತದೆ. ವೇದಿಕೆಯಲ್ಲಿ ಸಾಕಷ್ಟು ದಲಿತ ಸಮುದಾಯದವರು ನಗದು ರೂಪದಲ್ಲಿ ಹಣವನ್ನು ನೀಡಿ ಎಲ್ಲರ ಉಮ್ಮಸ್ಸಿಗೆ ಪ್ರೇರಣೆಯಾಗಿದ್ದಾರೆ.


ಇನ್ನು ಕಾರ್ಯಕ್ರಮದಲ್ಲಿ ದಲಿತರ ಹಿರಿಯ ನಾಯಕ ಹಾಗೂ ಮುಖಂಡರಾದ ವೆಂಕಟಸ್ವಾಮಿ ಲಯನ್ ಬಾಲಕೃಷ್ಣ, ರಣದೀಪ ಸೇರಿದಂತೆ ಹಲವು ಜಿಲ್ಲೆಗಳಿಂದ ಅನೇಕ ದಲಿತಪರ ಸಂಘಟನೆಗಳ ಮುಖಂಡರು ಕಾರ್ಯಕರ್ತರು ದಲಿತ ವರ್ಗದವರು ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿದ್ದಾರೆ ಎಂದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ