
ಕಳೆದ ಮೂರು ನಾಲ್ಕು ತಿಂಗಳಿಂದ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಜೀವನ ಮರಣ ಹೋರಾಟದಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆ ಉಸಿರೆಳೆಯುವ ಮೂಲಕ ಸಿನಿ ಪಯಣವನ್ನು ಬಿಟ್ಟು ಹೋಗಿದ್ದಾರೆ.
ನೂರಾರು ಕನ್ನಡ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳನ್ನು ಮಾಡುವ ಮೂಲಕ ಜನಾನುರಾಗಿದ್ದರು ಅಲ್ಲದೆ ಚಿಕ್ಕ ಮಕ್ಕಳಿಗಂತೂ ಪ್ರೀತಿಯ ಉಮೇಶಣ್ಣ ಆಗಿದ್ದರು. ಅವರ ಹಾಸ್ಯ ಪಾತ್ರಗಳು ಇಡೀ ಸಿನಿಮಾ ಗೆಲ್ಲಿಸುವಲ್ಲಿ ಹಾಗೂ ಹೆಸರು ಗಳಿಸುವಲ್ಲಿ ಅವರ ಪಾತ್ರಗೂ ಸಹ ಬಹಳ ಮುಖ್ಯವಾಗಿದ್ದು.
ಸ್ಯಾಂಡಲ್ವುಡ್ ನ ಹಲವು ಸಿನಿ ತಾರೆಯರು ಉಮೇಶ್ ಅಣ್ಣ ಅವರ ಸಾವಿನ ಸುದ್ದಿ ಕೇಳಿ ಶೋಕ ವ್ಯಕ್ತಪಡಿಸಿದರು. ಜೆಪಿ ನಗರದಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರಿಗೆ ಹಾಗೂ ಬಂಧು ಬಳಗದವರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು ತದನಂತರ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಲ್ಲಾ ಸಿನಿ ದಾರಿಯರು ಗಣ್ಯರು ಅಂತಿಮ ದರ್ಶನವನ್ನು ಪಡೆದು ದುಃಖ ತಪ್ತರಾಗಿದ್ದಾರೆ.
ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ
ಇನ್ನು ಖ್ಯಾತ ವಿಧಿ ಹುಷಾರಾಗಿರುವೆ ನೆಲೆ ಅವರ ಕುಟುಂಬದವರ ಸಂಪ್ರದಾಯದಂತೆ ಹಾಗೂ ಬ್ರಾಹ್ಮಣ ಸಮುದಾಯದ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ನಡೆಯಲಿದೆ.

ಇನ್ನೂ ಅಂತಿಮ ದರ್ಶನ ಪಡೆದ ಹಿರಿಯ ನಟ ರಾಕ್ ಲೈನ್ ವೆಂಕಟೇಶ್ ಗಿರಿಜಾ ಲೋಕೇಶ್ ಸೇರಿದಂತೆ ಅನೇಕ ಹಿರಿಯ ಕಲಾವಿದರು ನಾಯಕ ನಟರು ನಾಯಕರು ಹಾಗೂ ರಂಗಭೂಮಿ ಕಲಾವಿದರು ಅಂತಿಮ ದರ್ಶನ ಪಡೆದು ದುಃಖದತ್ತರಾದರು. ಇನ್ನೂ ಇದೆ ವೇಳೆ ಉಮೇಶ್ ಅಣ್ಣ ಅವರ ಜೀವನದ ಮೌಲ್ಯಗಳು ಸಿದ್ಧಾಂತಗಳು ಅವರು ಮಾಡಿರುವ ಕೆಲಸ ಕಾರ್ಯಗಳು ಹಾಗೂ ಸಿನಿಮಾದಲ್ಲಿ ನಡೆದುಕೊಂಡ ಬಂದ ಹಾದಿಯ ಬಗ್ಗೆ ಆತ್ಮೀಯರು ಸ್ನೇಹಿತರು ಬಂಧುಗಳು ಹಾಗೂ ಸಿನಿಮಾ ತಾರೆಯರು ಮಾಹಿತಿಗಳನ್ನು ಹಂಚಿಕೊಂಡರು.
ವಿಧಿ ಹುಷಾರ್ ಆಗಿರುವ ಉಮೇಶ್ ರವರ ಅಂತಿಮ ದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಾಕ್ ಲೈನ್ ವೆಂಕಟೇಶ್, ಸಾಧು ಕೋಕಿಲ ಬಿರಾದಾರ ಗಿರಿಜಾ ಲೋಕೇಶ್, ಸೇರಿದಂತೆ ಅನೇಕ ಸಿನಿಮಾ ತಾರೆಯರು ನಿರ್ದೇಶಕರು ನಿರ್ಮಾಪಕರು ರಂಗಭೂಮಿ ಕಲಾವಿದರು ಅಂತಿಮದರ್ಶನವನ್ನು ಪಡೆದು ಶ್ಲೋಕ ವ್ಯಕ್ತಪಡಿಸಿದ್ದರು.