LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಿಲ್ಟನ್ ಗಾರ್ಡನ್ ಇನ್ ಬೆಂಗಳೂರು ಎಂಬಸಿ ಟೆಕ್‌ವಿಲ್ಲಾದಿಂದ ದೇಸಿ ಕ್ವೋಶೆಂಟ್‌ಗೆ ಚಾಲನೆ

ಬೆಂಗಳೂರು: ಭಾರತದ ಕಥೆ”ಯನ್ನು ಪ್ರಸ್ತುತಪಡಿಸಲು ದೇಸಿ ಕ್ವೋಶೆಂಟ್ ಭಾರತದ ಸ್ವಾದಗಳಿಗೆ ಹಿಲ್ಟನ್ ಗಾರ್ಡನ್ ಇನ್ ಬೆಂಗಳೂರು ಎಂಬಸಿ ಟೆಕ್‌ವಿಲ್ಲಾ ವತಿಯಿಂದ ಹೊಸ ತಾಣವನ್ನು ಮಾರತಳ್ಳಿಯಲ್ಲಿ ನೂತನವಾಗಿ ಅನಾವರಣ ಮಾಡಲಾಗಿದೆ.news_1789225203_1_339.webp

ಹಿಲ್ಟನ್ ಗಾರ್ಡನ್ ಇನ್ ಬೆಂಗಳೂರು ಎಂಬಸಿ ಟೆಕ್‌ವಿಲ್ಲಾ (Hilton Garden Inn Bengaluru Embassy TechVillage) DQ – ದೇಸಿ ಕ್ವೋಶೆಂಟ್ (Desi Quotient) ಗೆ ಚಾಲನೆ ನೀಡಿದ್ದು, ಇದು ಬೆಂಗಳೂರಿನ ಔಟರ್ ರಿಂಗ್‌ ರೋಡ್‌ನ ಎಂಬಸಿ ಟೆಕ್‌ವಿಲ್ಲಾದಲ್ಲಿರುವ ಸಮಕಾಲೀನ ಭಾರತೀಯ ಆಹಾರ ತಾಣವಾಗಿದೆ.

ಸುತ್ತಮುತ್ತಲು ದೊಡ್ಡ ದೊಡ್ಡ ಟೆಕ್ ಐಟಿ ಅಬ್ಬು ಇರುವ ಮಧ್ಯದಲ್ಲಿಯೇ  ಹಿಲ್ಟನ್ ಗಾರ್ಡನ್ ಇನ್ ಬೆಂಗಳೂರು ಪಾಕಶಾಲೆಯ ಹೊಸ ಅನುಭವವನ್ನು ಬೆಂಗಳೂರಿಗರಿಗೆ ಗುಣ ಬಡಿಸಲು ಸರ್ವಸನ್ನತವಾಗಿ ಪ್ರಾರಂಭವಾಗಿದೆ .

ಭಾರತದ ಕಥೆ, ಒಂದು ಬಟ್ಟಲಿನಲ್ಲಿ” (The Story of Bharat, on a Plate) ಎಂಬುದು DQ ನ ಸಾರವಾಗಿದೆ. ಭಾರತೀಯ ಭೌಗೋಳಿಕ ಪರಿಸರದ ಎಲ್ಲ ಪ್ರದೇಶಗಳಿಂದ ಖಾದ್ಯಗಳನ್ನು ಆಯ್ದು ಮೆನುವನ್ನು ರೂಪಿಸಲಾಗಿದ್ದು, ಒಂದು ಸಾಂಪ್ರದಾಯಿಕ ಕ್ರಮವನ್ನು ಆಧರಿಸಿದ ಭೋಜನ ಶೈಲಿಯನ್ನು ಅನುಸರಿಸುವ ಬದಲು, ಅತಿಥಿಗಳಿಗೆ ವಿವಿಧ ಪ್ರದೇಶಗಳು, ಸಮುದಾಯಗಳು ಮತ್ತು ಅಡುಗೆ ಸಂಪ್ರದಾಯವನ್ನು ಊಟದ ಮೂಲಕ ಪರಿಚಯಿಸಿ, ವಿಶಿಷ್ಟ ಪ್ರವಾಸದ ಅನುಭವ ಒದಗಿಸಲಾಗುವುದು. ಈ ಖಾದ್ಯಗಳನ್ನು DQ ಪಾಕಶಾಲೆ ಮತ್ತು ಪಾನೀಯ ತಂಡದ ಸದಸ್ಯರು ನೀಡಿದ ಮನೆ ರೆಸಿಪಿಗಳು ಮತ್ತು ಸವಿ ನೆನಪುಗಳಿಂದ ರುಚಿಕಟ್ಟಾಗಿ ತಯಾರಿಸಲಾಗಿದ್ದು, ಈ ಮೆನುವಿಗೆ ಅದು ಪ್ರತಿನಿಧಿಸುವ ಸ್ಥಳಗಳ ಜೊತೆಗೆ ಆತ್ಮೀಯತೆಯನ್ನು, ಬಾಂಧವ್ಯವನ್ನು ಬೆಸೆಯುತ್ತದೆ. ಈ ಮೆನು ರೈಲ್ವೇ ಪ್ಲಾಟ್‌ಫಾರಂಗಳು ಮತ್ತು ಬೀದಿಗಳಲ್ಲಿರುವ ಆಹಾರದ ಬಂಡಿಗಳಿಂದ ಆರಂಭಿಸಿ ಕುಟುಂಬದ ಅಡುಗೆ ಮನೆಗಳು ಮತ್ತು ಪ್ರಾದೇಶಿಕ ವೈಶಿಷ್ಟ್ಯಗಳನ್ನು ಒಳಗೊಂಡು ವಿಶಾಲವಾಗಿದೆ. ಎಲ್ಲಾ ಪಾಕ ಶಾಲೆಯಲ್ಲಿಯೂ ಸಹ ಸಿಗುವುದನ್ನು ಒಂದೇ ಸೂರಿನಡಿಯಲ್ಲಿ ದೊರಕುವಂತೆ ಮುಖ್ಯವಾಗಿ ಅಜ್ಮೀರ್ ಸ್ಟೇಷನ್‌ ಬಳಿ ಸಿಗುವ ಕಢಿ ಕಚೋರಿ, ಚಂಪಾರಣ್ ಮಟನ್, ದೊನ್ನೆ ಚಿಕನ್ ಬಿರಿಯಾನಿ, ಮಂಗಳೂರಿನ ಚಿಕನ್ ಸುಕ್ಕ, ಚಾ ಗೋಷ್ಠಿ ವಿದ್ ಸಿದ್ದು, ಪಖಾಲ ಭಾತ್ ಮತ್ತು ಚನಾ ಪೋಡ ಮುಂತಾದ ಖಾದ್ಯಗಳು ಬಾಯಿಯಲ್ಲಿ ನೀರೂರಿಸುತ್ತವೆ. ಪಾನೀಯಗಳ ವಿಭಾಗವು ಈ ಪಯಣವನ್ನು ಪರಿಪೂರ್ಣಗೊಳಿಸುತ್ತದೆ. ನಿಂಬು ಪಾನಿ, ರಾಗಿ ಅಂಬಲಿ, ಪಾಚ ಮಾಂಗ ಸಾರು, ಗುಡ್ ನು ಶಿಖಂಜಿ, ನರಸು’ಸ್ ಕಾಫಿ ಮತ್ತು ಡಾಭಾ ಕಡಕ್ ಚಾಯ್ ಮುಂತಾದವುಗಳು ಇದರಲ್ಲಿ ಸೇರಿವೆ. 

ಹಿಲ್ಟನ್ ಅಂಡ್ ಹಿಲ್ಟನ್ ಗಾರ್ಡನ್ ಇನ್ ಬೆಂಗಳೂರು ಎಂಬಸಿ ಟೆಕ್‌ವಿಲ್ಲಾ ಔಟರ್ ರಿಂಗ್ ರೋಡ್‌ನ ಕ್ಲಸ್ಟರ್ ಜನರಲ್ ಮ್ಯಾನೇಜರ್ ಅಭಿರಾಮ್ ಮೆನನ್ ಅವರು ಮಾತನಾಡಿ, “DQ – ದೇಸಿ ಕ್ವೋಶೆಂಟ್ ಮೂಲಕ, ರೆಸ್ಟೋರೆಂಟ್ ಅನ್ನು ಮೀರಿದ ಒಂದು ಅನುಭವವನ್ನು ರೂಪಿಸಲು ನಾವು ಬಯಸಿದ್ದೆವು. ಆಹಾರ, ಕರಕೌಶಲ್ಯ, ಸಂಗೀತ ಮತ್ತು ಯಶೋಗಾಥೆಗಳನ್ನು ಬೆಂಗಳೂರಿಗೆ ಸಮಕಾಲೀನ ಮತ್ತು ಪ್ರಸ್ತುತವೆನಿಸುವ ರೀತಿಯಲ್ಲಿ ಪ್ರಸ್ತುತಪಡಿಸುವ ಮೂಲಕ ಭಾರತದ ಶ್ರೀಮಂತಿಕೆ ಮತ್ತ ವೈವಿಧ್ಯವನ್ನು ಸಂಭ್ರಮಿಸುವ ತಾಣ ಇದಾಗಿದೆ. ಭಾರತದ ಸ್ವಾದಗಳು ಮತ್ತು ಸಂಸ್ಕೃತಿಗಳಲ್ಲಿ ಬೇರೂರಿರುವ ವಿಶಿಷ್ಟ ಸಾಮಾಜಿಕ ಭೋಜನದ ಅನುಭವವನ್ನು ನಮ್ಮ ಅತಿಥಿಗಳಿಗೆ, ಅದರೊಂದಿಗೆ ಇಡೀ ಬೆಂಗಳೂರಿಗೆ DQ ನೀಡುವುದೆಂದು ನಾವು ಭಾವಿಸುತ್ತೇವೆ” ಎಂದರು.news_1789225203_0_295.webp

ಹಿಲ್ಟನ್ ಅಂಡ್ ಹಿಲ್ಟನ್ ಗಾರ್ಡನ್ ಇನ್ ಬೆಂಗಳೂರು ಎಂಬಸಿ ಟೆಕ್‌ವಿಲ್ಲಾದ ಕ್ಲಸ್ಟರ್ ಡೈರೆಕ್ಟರ್ ಆಫ್ ಕಲಿನರಿ ಆಗಿರುವ ಗೌರವ್ ಆನಂದ್ ಅವರು ಪ್ರತಿಕ್ರಿಯಿಸಿ, “DQ ಯಲ್ಲಿರುವ ಮೆನು ತುಂಬ ವಿಶೇಷವಾಗಿದೆ. , ಇದರಲ್ಲಿರುವ ಹಲವಾರು ಖಾದ್ಯಗಳು ನಮ್ಮದೇ ತಂಡವು ಹಂಚಿಕೊಂಡಿರುವ ರೆಸಿಪಿಗಳು, ಸವಿ ನೆನಪುಗಳು ಮತ್ತು ಆಹಾರ ಸಂಪ್ರದಾಯಗಳನ್ನು ಒಳಗೊಂಡಿವೆ. ಸಾಂಪ್ರದಾಯಿಕ ಮೆನು ಸ್ವರೂಪದ ಮೂಲಕ ಭಾರತೀಯ ಪಾಕ ಪದ್ಧತಿಯನ್ನು ಅನುಸರಿಸುವ ಬದಲು, ಪ್ರತಿಯೊಂದು ಬಟ್ಟಲಿನಲ್ಲೂ ಅತಿಥಿಗಳು — ರೈಲ್ವೇ ನಿಲ್ದಾಣಗಳು, ಬೀದಿ ಬದಿಯ ಇಷ್ಟದ ತಿನಿಸುಗಳು, ಕುಟುಂಬಗಳ ಅಡುಗೆ ಮನೆಗಳು ಮತ್ತು ಪ್ರಾದೇಶಿಕ ಸಂಭ್ರಮಾಚರಣೆಗಳನ್ನು ಅನ್ವೇಷಿಸುತ್ತ ದೇಶಾದ್ಯಂತ ಪ್ರವಾಸ ಮಾಡಿದ ಅನುಭವ ಪಡೆಯಬೇಕೆಂದು ನಾವು ಬಯಸಿದೆವು. ಪರಿಚಿತ, ಅಧಿಕೃತ ಮತ್ತು ವೈಶಿಷ್ಟ್ಯಗಳಿಂದ ಸಮೃದ್ಧವಾಗಿರುವ ಆಹಾರದ ಮೂಲಕ ಭಾರತದ ಕಥೆಯನ್ನು ನಾವು ಹೇಳುವ ವಿಧಾನ ಇದಾಗಿರುತ್ತದೆ” ಎಂದು ವಿವರಿಸಿದರು.

ಹಿಲ್ಟನ್ ನಲ್ಲಿರುವ ವಿಶೇಷತೆಗಳು:

DQ ನ ಒಳಾಂಗಣಗಳಲ್ಲಿ ಲಿಪ್ಪನ್ ಕಲೆ, ಹೃದ್ಯವಾದ ಕಾಷ್ಟ ಶಿಲ್ಪಗಳು, ಇಟ್ಟಿಗೆಗಳು, ನೇಯ್ಗೆಯ ರತ್ನಕಂಬಳಿಗಳು, ಕುಸುರಿಯುಳ್ಳ ಕಂಚಿನ ಪೆಂಡೆಂಟ್‌ಗಳು ಮತ್ತು ಕೇರಳದ ಸಾಂಪ್ರದಾಯಿಕ ದೋಣಿ ಸಮಕಾಲೀನ ದೃಷ್ಟಿಯಲ್ಲಿ ಭಾರತದ ಕರಕೌಶಲ್ಯವನ್ನು ಮರು ವ್ಯಾಖ್ಯಾನಿಸುತ್ತದೆ. ರೆಸ್ಟೋರೆಂಟ್‌ನ ಸಂಗೀತವೂ ಇದೇ ತತ್ವವನ್ನು ಅನುಸರಿಸುತ್ತದೆ. ದೇಸಿ ಹೌಸ್ ಮತ್ತು ಭಾರತೀಯ ಫ್ಯೂಜನ್ ಅನ್ನು ತಬಲಾ, ಢೋಲ್, ಸಾರಂಗಿ ಮತ್ತು ಬಾನ್ಸುರಿಯಂತಹ ಭಾರತದ ಸಾಂಪ್ರದಾಯಿಕ ವಾದ್ಯಗಳೊಂದಿಗೆ ಸಮ್ಮಿಶ್ರಗೊಳಿಸಿ, ಸಂಜೆಯ ಮಾಧುರ್ಯವನ್ನು ಹೆಚ್ಚಿಸಲಾಗುತ್ತಿದೆ.

ಸುಮಾರು 84-ಎಕರೆಗಳಷ್ಟು ವಿಸ್ತಾರವಾಗಿ ಹರಡಿಯುವ ಎಂಬಸಿ ಟೆಕ್‌ವಿಲ್ಲಾದಲ್ಲಿರುವ ಹಿಲ್ಟನ್ ಗಾರ್ಡನ್ ಇನ್ ಬೆಂಗಳೂರು ಎಂಬಸಿ ಟೆಕ್ ವಿಲೇಜ್ “The Smarter Stay on ORR” ಆಗಿ ತನ್ನನ್ನು ಪ್ರತಿಷ್ಠಾಪಿಸಿಕೊಂಡಿದೆ. ಹೋಟೆಲ್‌ನ 211 ಕೊಠಡಿಗಳು ತಡೆರಹಿತ ಹಾಗೂ ಫಲಪ್ರದ ವಾಸ್ತವ್ಯಗಳನ್ನು ಬೆಂಬಲಿಸುವ ಚಿಂತನಶೀಲ ಸೌಕರ್ಯಗಳು, ಹಿಲ್ಟನ್ ಆನರ್ಸ್ (Hilton Honors) ಪ್ರಯೋಜನಗಳು ಮತ್ತು ಸುಲಭವಾಗಿ ಸಿಗುವ ಸೇವೆಗಳನ್ನು ಒಳಗೊಂಡಿವೆ. ಇದು 529-ಕೀ ದ್ವಿ-ಬ್ರ್ಯಾಂಡ್‌ನ ಅಭಿವೃದ್ಧಿಯ ಭಾಗವಾಗಿದ್ದು, 211-ಕೀ ಹಿಲ್ಟನ್ ಗಾರ್ಡನ್ ಇನ್ ಅನ್ನು ಒಳಗೊಂಡಿದೆ ಮತ್ತು ಸದ್ಯದಲ್ಲೇ 318-ಕೀ ಹಿಲ್ಟನ್ ಹೋಟೆಲ್ಸ್ ಅಂಡ್ ರೆಸಾರ್ಟ್ಸ್ ಪ್ರಾಪರ್ಟಿಯನ್ನೂ ಸೇರಿಸಿಕೊಳ್ಳಲಿದೆ. 

ಹೋಟೆಲ್‌ನ ದಿನಪೂರ್ತಿ ಡೈನಿಂಗ್ ರೆಸ್ಟೋರೆಂಟ್ ಆಗಿರುವ ಮೆರಿಗೋ (Merigo) ಜೊತೆಗೆ, ಈ ಪ್ರಾಪರ್ಟಿಗೆ ವಿಶಿಷ್ಟವಾದ ಭಾರತೀಯ ಸಾಮಾಜಿಕ ಭೋಜನ ಅನುಭವವನ್ನೂ DQ ಸೇರಿಸುತ್ತಿದೆ—ಇದರೊಂದಿಗೆ ಪ್ರಾದೇಶಿಕ ಆಹಾರ, ವೈಯಕ್ತಿಕ ಕಥೆಗಳು, ಭಾರತೀಯ ಕರಕೌಶಲ್ಯ ಮತ್ತು ಸಮಕಾಲೀನ ಉತ್ಸಾಹವನ್ನು ಒಂದೇ ಸೂರಿನಡಿ ತರುತ್ತಿದೆ.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹಿಲ್ಟನ್ ಗಾರ್ಡನ್ ಇನ್ ಬೆಂಗಳೂರು ಎಂಬಸಿ ಟೆಕ್‌ವಿಲ್ಲಾದಿಂದ ದೇಸಿ ಕ್ವೋಶೆಂಟ್‌ಗೆ ಚಾಲನೆಏಸರ್‌ನಿಂದ CSR ನ ಅಡಿಯಲ್ಲಿ  ನೇತ್ರದೀಪ್ ಕಣ್ಣಿನ ಆರೈಕೆ ಕೇಂದ್ರ ಆರಂಭಕಲೀಲಾ ಚಿತ್ರದ ಮುಹೂರ್ತ ಪಂಚಮುಖಿ ಗಣೇಶ ದೇವಾಲಯದಲ್ಲಿ ಚಾಲನೆವಿದ್ಯಾರ್ಥಿಗಳು ವೃತ್ತಿ ಜೊತೆಗೆ ಪ್ರವೃತ್ತಿಯಲ್ಲೂ ಹೆಚ್ಚು ಗಮನ ಹರಿಸಬೇಕು: ಡಾ. ಚಂದ್ರ ಮೌಳಿ ಗಡ್ಡ ಮನಗೂನಗರದ ರಸ್ತೆ ಸಮಸ್ಯೆಗಳ ಪತ್ತೆಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನ ಬಳಕೆ : ಆಯುಕ್ತ ಕೆ. ಎನ್. ರಮೇಶ್ಪ್ರತಿ 10 ಭಾರತೀಯ ಮಕ್ಕಳಲ್ಲಿ ಕೇವಲ ಮೂವರಿಗೆ ಮಾತ್ರ ಹೊಂದಾಣಿಕೆಯಾಗುವ ಮೂಳೆ ಮಜ್ಜೆ ದಾನಿ ಲಭ್ಯಕುಮಾರಣ್ಣ ಬಾಂಬು ಹಾಕುವ ಟೈಮು ಬಂದೇಬಿಡ್ತಾ?ಶಿಕ್ಷಕರಿಂದಾಗಿಯೇ ರಾಜ್ಯದ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ: ಸಚಿವ ಮಧು ಬಂಗಾರಪ್ಪ ಬಣ್ಣನೆಕಳಂಕಿತ ಪಶುವೈದ್ಯಾಧಿಕಾರಿ ಮೇಲೆ ಕ್ರಮ ಕೈಕೊಂಡು,ಅಕಳಂಕಿತರಿಗೆ ನ್ಯಾಯ ನೀಡಿ: ಡಾ.ಹನುಮಂತಪ್ಪಗೊಲ್ಲ ಸಮುದಾಯ ಸಂಘಟಿತರಾಗಲು ಶ್ರೀನಿವಾಸ್ ಕರೆ