LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಉಚಿತ ಪ್ಲಾಸ್ಟಿಕ್‌ ಸರ್ಜರಿ ಸೇವೆ ಆರಂಭ ಶ್ಲಾಘನೀಯ ಸೇವೆ: ಸಚಿವ ಕೆ.ಎಂ. ಶಿವಲಿಂಗೇಗೌಡ

ಮಂಡ್ಯ :  ಉಚಿತ ಪ್ಲಾಸ್ಟಿಕ್ ಸರ್ಜರಿ ಸೇವೆ ಎಂಬುದು ಕೇವಲ ವೈದ್ಯಕೀಯ ನೆರವಲ್ಲ, ಸಂಕಷ್ಟದಲ್ಲಿರುವವರ ಬದುಕಿನಲ್ಲಿ ಹೊಸ ಭರವಸೆ ಮೂಡಿಸುವ ಮಾನವೀಯ ಕಾರ್ಯವಾಗಿದೆ. ಅಪಘಾತ, ಸುಟ್ಟ ಗಾಯಗಳು, ಜನ್ಮಜಾತ ದೈಹಿಕ ದೋಷಗಳು ಹಾಗೂ ಇತರ ಕಾರಣಗಳಿಂದ ದೈಹಿಕ ವಿರೂಪತೆ ಎದುರಿಸುತ್ತಿರುವವರಿಗೆ ಈ ಸೇವೆ ಹೊಸ ಜೀವನದ ಆತ್ಮವಿಶ್ವಾಸವನ್ನು ನೀಡುತ್ತದೆ. ಇಂತಹ ಮಹತ್ವದ ಕಾರ್ಯಕ್ಕೆ ಮುಂದಾಗಿರುವ ಆದಿಚುಂಚನಗಿರಿ ಮಹಾಸಂಸ್ಥಾನದ ನಡೆ ಶ್ಲಾಘನೀಯ ಎಂದು ಅಬಕಾರಿ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಂ. ಶಿವಲಿಂಗೇಗೌಡ ಅವರು ಹೇಳಿದರು.news_1793030471_1_313.webp

ಆದಿ ಚುಂಚನಗಿರಿ ಮಹಾಸಂಸ್ಥಾನದ  ಬಿಜಿಎಸ್‌ ಸಭಾಂಗಣದಲ್ಲಿ ನಡೆದ ಉಚಿತ ಪ್ಲಾಸ್ಟಿಕ್‌ ಸರ್ಜರಿ ಕ್ಯಾಂಪ್‌ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು. ಆರ್ಥಿಕ ಸಂಕಷ್ಟದಿಂದಾಗಿ ದುಬಾರಿ ಶಸ್ತ್ರಚಿಕಿತ್ಸೆ ಪಡೆಯಲು ಸಾಧ್ಯವಾಗದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಉಚಿತವಾಗಿ ಚಿಕಿತ್ಸೆ ಒದಗಿಸುವುದು ನಿಜಕ್ಕೂ ಶ್ಲಾಘನೀಯ. ಇದು ವೈದ್ಯಕೀಯ ಸೇವೆಯ ಜೊತೆಗೆ ಮಾನವೀಯತೆ, ಕರುಣೆ ಮತ್ತು ಸಾಮಾಜಿಕ ಕಳಕಳಿಯ ಅತ್ಯುತ್ತಮ ಉದಾಹರಣೆಯಾಗಿದೆ ಎಂದರು.

ಇಂತಹ ಉಚಿತ ಪ್ಲಾಸ್ಟಿಕ್ ಸರ್ಜರಿ ಸೇವೆಗಳು ವ್ಯಕ್ತಿಗಳ ದೈಹಿಕ ಸ್ವರೂಪವನ್ನು ಸುಧಾರಿಸುವುದಷ್ಟೇ ಅಲ್ಲದೆ, ಅವರಲ್ಲಿ ಆತ್ಮವಿಶ್ವಾಸ ತುಂಬಿ ಸಮಾಜದಲ್ಲಿ ಗೌರವಯುತವಾಗಿ ಬದುಕಲು ನೆರವಾಗುತ್ತವೆ. ಹಣದ ಕೊರತೆಯಿಂದ ಯಾರೂ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆಯಿಂದ ವಂಚಿತರಾಗಬಾರದು ಎಂಬ ಆಶಯದೊಂದಿಗೆ ಸೇವೆ ಸಲ್ಲಿಸುತ್ತಿರುವ ವೈದ್ಯರು, ಆಸ್ಪತ್ರೆಗಳು ಮತ್ತು ಸಂಘ-ಸಂಸ್ಥೆಗಳ ಕಾರ್ಯ ಅಭಿನಂದನಾರ್ಹ. ಇಂತಹ ಮಾನವೀಯ ಸೇವೆಗಳಿಗೆ ಸಮಾಜದ ಎಲ್ಲ ವರ್ಗಗಳಿಂದ ಪ್ರೋತ್ಸಾಹ ಮತ್ತು ಸಹಕಾರ ದೊರೆಯಬೇಕು ಎಂದರು.news_1793030471_0_498.webp

ಆದಿಚುಂಚನಗಿರಿ ಮಹಾಸಂಸ್ಥಾನವು ಶಿಕ್ಷಣಕ್ಷೇತ್ರ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಮಹೋನ್ನತ ಸೇವೆ ನೀಡುತ್ತಿದೆ. ವಿದ್ಯಾದಾನ, ಉಚಿತ ಆರೋಗ್ಯ ಸೇವೆ ಮೂಲಕ ಬಡವರಿಗೆ ಬದುಕನ್ನು ಕಟ್ಟಿಕೊಡುತ್ತಿರುವುದು ಶ್ಲಾಘನೀಯ. ಬಾಲಗಂಗಾಧರನಾಥ ಸ್ವಾಮೀಜಿ ಅವರು ಹಾಕಿಕೊಟ್ಟ ತಳಹದಿಯಲ್ಲಿ ಪೀಠಾಧಿಪತಿಗಳಾದ ನಿರ್ಮಲಾನಂದನಾಥ ಸ್ವಾಮೀಜಿ ಅವರು ಅನುಪಮ ಸೇವೆಯನ್ನು ಮುಂದುವರಿಸಿರುವುದು ಶ್ಲಾಘನೀಯ ಎಂದರು.

ಈ ವೇಳೆ ಆದಿಚುಂಚನಗಿರಿ ಪೀಠಾಧಿಪತಿಗಳಾದ ನಿರ್ಮಲಾನಂದನಾಥ ಸ್ವಾಮೀಜಿ, ಆರೋಗ್ಯ ಸಚಿವರಾದ ಯು. ಟಿ. ಖಾದರ್, ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ‌ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರಧಾನಿ ತಂದೆಯನ್ನು ನಿಂದಿಸಿದ ಸೀನಿಯರ್ ಖರ್ಗೆಗೆ ಹೆಚ್.ಡಿ. ಕುಮಾರಸ್ವಾಮಿ ತರಾಟೆಹಾಸನಾಂಬ ಉತ್ಸವ: ಸಚಿವ ಯು. ಟಿ. ಖಾದರ್‌ ಅವರಿಗೆ ಆಹ್ವಾನಉಚಿತ ಪ್ಲಾಸ್ಟಿಕ್‌ ಸರ್ಜರಿ ಸೇವೆ ಆರಂಭ ಶ್ಲಾಘನೀಯ ಸೇವೆ: ಸಚಿವ ಕೆ.ಎಂ. ಶಿವಲಿಂಗೇಗೌಡಮೋದಿ ಆಡಳಿತದಿಂದ ಯುವಜನರು ಬೇಸತ್ತು ವಿರೋಧಿಸುತ್ತಿದ್ದಾರೆ: ಸಚಿವ ಮಧು ಬಂಗಾರಪ್ಪಮಾಜಿ ಸಿಎಂ ಎಸ್ ಬಂಗಾರಪ್ಪ ಜನ್ಮ ದಿನೋತ್ಸವ, ನಾಲ್ವರು ಸಾಧಕರಿಗೆ ಪ್ರತಿಷ್ಠಿತ ಬಂಗಾರ ಪ್ರಶಸ್ತಿ ಪ್ರದಾನಬೆಂಗಳೂರಿನಲ್ಲಿ AK ಗೋಲ್ಡ್ & ಡೈಮಂಡ್ಸ್ನ ಜ್ಯುವೆಲರಿ ಮಳಿಗೆ ಭವ್ಯ ಶುಭಾರಂಭ!ಪೌರಕಾರ್ಮಿಕರಿಗಾಗಿ ಅಪೋಲೊ ಆಸ್ಪತ್ರೆಯಿಂದ ಸ್ತನ ಆರೋಗ್ಯ ತಪಾಸಣಾ ಶಿಬಿರರೋಟರಿ ಬೆಂಗಳೂರು ಗ್ಲೋಬಲ್ ಯೋಗದಿಂದ  ಪ್ರಶಸ್ತಿ,ಶಿಕ್ಷಕರ ದಿನಾಚರಣೆಶಿವಮೊಗ್ಗದಲ್ಲಿ ಸೈದ್ಧಾಂತಿಕ ಸಂಘಟನೆ ಬಲವರ್ಧನೆಯೇ ನಮ್ಮ ಸಂಕಲ್ಪ: ಬಿ ಕೆ ಹರಿಪ್ರಸಾದ್ಬೆಮ.ಸಾ.ಸಂಸ್ಥೆ ಸಿಬ್ಬಂದಿಯ ಅಪಘಾತ ವಿಮಾ ಪರಿಹಾರ ರೂ. 1.00 ಕೋಟಿಗೆ ಹೆಚ್ಚಳ