LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರೋಟರಿ ಬೆಂಗಳೂರು ಗ್ಲೋಬಲ್ ಯೋಗದಿಂದ  ಪ್ರಶಸ್ತಿ,ಶಿಕ್ಷಕರ ದಿನಾಚರಣೆ

ಬೆಂಗಳೂರು: ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಸಂಸ್ಥೆಯಿಂದ ರಾಷ್ಟ್ರೀಯ ಯೋಗ ಶಿಕ್ಷಕರ ಪ್ರಶಸ್ತಿ ಪ್ರದಾನ ಹಾಗೂ ಯೊಗ ಶಿಕ್ಷಕರ ದಿನಾಚರಣೆಯನ್ನು ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ  ಅದ್ದೂರಿಯಾಗಿ ಮಾಡಲಾಯಿತು.news_1793014863_1_889.webp

ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ಯೋಗಿ ದೇವರಾಜ್ ಅವರ ನೇತೃತ್ವದಲ್ಲಿ  ಕಾರ್ಯಕ್ರಮವು 2ನೇ ಆವೃತಿಯಾಗಿದೆ.

ಅದ್ದೂರಿಯಾಗಿ ರಾಜ್ಯದಲ್ಲಿ ಯೊಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರನ್ನು ಗುರುತಿಸಿ ರಾಜ್ಯ ಮಟ್ಟದಲ್ಲಿ  ಪ್ರಶಸ್ತಿ ಪ್ರದಾನ ಮಾಡಲಾಯಿತು. 

ರಾಜ್ಯದಲ್ಲಿ ಎಲೆಮರೆಕಾಯಿಯಂತೆ ಯೊಗದಲ್ಲಿ ಸಾಧನೆ ಮಾಡಿದವರನ್ನು  ಗುರುತಿಸಿ ನೂರಾರು ಯೋಗ ಸಾಧಕರನ್ನು ಸನ್ಮಾನಿಸಲಾಯಿತು. ಅದರಲ್ಲಿ ಯೋಗ ಶ್ರೀ, ಯೋಗ ರತ್ನ, ಹೀಗೆ ಹಲವು ಪ್ರಶಸ್ತಿಯನ್ನು ಕೊಡಮಾಡಲಾಯಿತು. 

ಇನ್ನು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್ ಎಂ ರೇವಣ್ಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯುಟಿ ಖಾದರ್,  ಮಹಾಮಂಡಲೇಶ್ವರದ ಶ್ರೀ ಡಾ.ಪ್ರಭಾಕರಾನಂದ ಸ್ವಾಮಿಜಿ, ರೋಟರಿ ಜಿಲ್ಲಾ ಪಾಲಕರಾದ ರವಿಶಂಕರ್ ಡಾಕೋಜು, ,ಸ್ಚಾಮಿಜಿಗಳು, ಯೋಗ ಗುರುಗಳು, ಗಣ್ಯರು ಯೋಗದ ಮಹತ್ವ, ತರಬೇತಿ, ಸರ್ಕಾರದಿಂದ ಸಿಗುವ  ಯೋಜನೆಗಳು, ಆರೊಗ್ಯ ಸುಧಾರಣೆ, ಯೋಗಕ್ಕೆ ರಾಷ್ಟ ಮಟ್ಟದಲ್ಲಿ ಮಾನ್ಯತೆ ದೊರೆತಿದ್ದು , ವಿಶ್ವ ಯೋಗ ದಿನಾಚರಣೆಯನ್ನಾಗಿಯೂ ಮಾಡಿರುವುದು ನಮಗೆ ಹೆಮ್ಮೆಯಾಗಿದೆ, ಹಲವು ಬಂಗಿಗಳಲ್ಲಿ ಯೊಗದಲ್ಲಿ ಸಾಧನೆ ಮಾಡಿದವರಿಗೆ ದೇಶ, ವಿದೇಶಗಳಿಂದ ಹಲವು ಪ್ರಶಸ್ತಿಗಳು ಬಂದಿವೆ ಎಂದು ಯೋಗದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ತಿಳಿಸದರು.news_1793014866_2_586.webp

ರಾಜ್ಯದ ವಿವಿದೆಡೆಯಿಂದ ನೂರಾರು ಜನ ಯೋಗದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡುವ ಮೂಲಕ ಅವರ ಸಾಧನೆಗೆ ಸಂಸ್ಥೆಯವರು ಮೆಟ್ಟಿಲುಗಳಾಗಿದ್ದಾರೆ ಎಂದರು.

ಇನ್ನು ಸಂಸ್ಥೆಯ ಮಹತ್ವದ ಕಾರ್ಯಕ್ಕೆ ಬೆಂಗಳೂರಿನಲ್ಲಿರುವ ರೋಟರಿ ವಿಭಾದವರ ಸಹಕಾರ ನೀಡಿದ್ದಾರೆ ಎಂದರು. ಇನ್ನೂ ಯೋಗದಲ್ಲಿ ಸಾಧನೆ ಮಾಡಿದವರು ಯೋಗ ಅಭ್ಯಾಸದ ಮಹತ್ವ ಅನುಕೂಲಗಳು ಸರ್ಕಾರದ ಮಹತ್ವಗಳು ಹೀಗೆ ಯೋಗದಿಂದ ಆಗುವ ಅನುಕೂಲಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಿದರು.

ಬದಲಾದ ಜೀವನ ಕ್ರಮ ಹಾಗೂ ಆಹಾರ ಪದ್ಧತಿಯಲ್ಲಿನ ವೈಪರಿತ್ಯಗಳ ಹಿನ್ನೆಲೆ ಸಾಕಷ್ಟು ಜನ ಯೋಗದ ಮೊರೆ ಹೋಗುತ್ತಿರುವುದು ಬೆಳೆಯುತ್ತಿದೆ.  ಮುಂದಿನ ದಿನಗಳಲ್ಲಿ ಮನೆಮನೆಯಲ್ಲಿಯೂ ಮಕ್ಕಳಿಗೆ ಯೋಗ ಬಗ್ಗೆ ಪಾಠ ಪ್ರವಚನ ಹಾಗೂ ಜೀವನದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಮಾಹಿತಿಯನ್ನು ಸಹ ಇದೇ ವೇಳೆ ವಿನಿಮಯ ಮಾಡಿಕೊಂಡರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರಧಾನಿ ತಂದೆಯನ್ನು ನಿಂದಿಸಿದ ಸೀನಿಯರ್ ಖರ್ಗೆಗೆ ಹೆಚ್.ಡಿ. ಕುಮಾರಸ್ವಾಮಿ ತರಾಟೆಹಾಸನಾಂಬ ಉತ್ಸವ: ಸಚಿವ ಯು. ಟಿ. ಖಾದರ್‌ ಅವರಿಗೆ ಆಹ್ವಾನಉಚಿತ ಪ್ಲಾಸ್ಟಿಕ್‌ ಸರ್ಜರಿ ಸೇವೆ ಆರಂಭ ಶ್ಲಾಘನೀಯ ಸೇವೆ: ಸಚಿವ ಕೆ.ಎಂ. ಶಿವಲಿಂಗೇಗೌಡಮೋದಿ ಆಡಳಿತದಿಂದ ಯುವಜನರು ಬೇಸತ್ತು ವಿರೋಧಿಸುತ್ತಿದ್ದಾರೆ: ಸಚಿವ ಮಧು ಬಂಗಾರಪ್ಪಮಾಜಿ ಸಿಎಂ ಎಸ್ ಬಂಗಾರಪ್ಪ ಜನ್ಮ ದಿನೋತ್ಸವ, ನಾಲ್ವರು ಸಾಧಕರಿಗೆ ಪ್ರತಿಷ್ಠಿತ ಬಂಗಾರ ಪ್ರಶಸ್ತಿ ಪ್ರದಾನಬೆಂಗಳೂರಿನಲ್ಲಿ AK ಗೋಲ್ಡ್ & ಡೈಮಂಡ್ಸ್ನ ಜ್ಯುವೆಲರಿ ಮಳಿಗೆ ಭವ್ಯ ಶುಭಾರಂಭ!ಪೌರಕಾರ್ಮಿಕರಿಗಾಗಿ ಅಪೋಲೊ ಆಸ್ಪತ್ರೆಯಿಂದ ಸ್ತನ ಆರೋಗ್ಯ ತಪಾಸಣಾ ಶಿಬಿರರೋಟರಿ ಬೆಂಗಳೂರು ಗ್ಲೋಬಲ್ ಯೋಗದಿಂದ  ಪ್ರಶಸ್ತಿ,ಶಿಕ್ಷಕರ ದಿನಾಚರಣೆಶಿವಮೊಗ್ಗದಲ್ಲಿ ಸೈದ್ಧಾಂತಿಕ ಸಂಘಟನೆ ಬಲವರ್ಧನೆಯೇ ನಮ್ಮ ಸಂಕಲ್ಪ: ಬಿ ಕೆ ಹರಿಪ್ರಸಾದ್ಬೆಮ.ಸಾ.ಸಂಸ್ಥೆ ಸಿಬ್ಬಂದಿಯ ಅಪಘಾತ ವಿಮಾ ಪರಿಹಾರ ರೂ. 1.00 ಕೋಟಿಗೆ ಹೆಚ್ಚಳ