LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಂಗಳೂರು ವಕೀಲರಿಂದ ಧರ್ಮದೀಪ ಗಣೇಶೋತ್ಸವ ವಿಸರ್ಜನೆ

ಬೆಂಗಳೂರು: ಬೆಂಗಳೂರು ವಕೀಲರ ಸಂಘ ಹಾಗೂ ಮ್ಯಾಜಿಸ್ಟ್ರೇಟ್ ವಕೀಲರ ಸಂಘದಿಂದ ಅದ್ದೂರಿಯಾಗಿ ಮೂರು ದಿನಗಳ ಕಾಲ ಗಣೇಶೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಳೆದ 25 ವರ್ಷಗಳಿಂದ ಯಾವುದೇ ರೀತಿಯಿಂದಲೂ ಸಹ ಕೋರ್ಟು ಆವರಣದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅವಕಾಶವನ್ನು ನೀಡಲಿಲ್ಲ ಹೈಕೋರ್ಟ್ ಆಗಿರಬಹುದು ಸಿಟಿ ಸಿವಿಲ್ ಕೋರ್ಟ್ ಆಗಿರಬಹುದು ಮ್ಯಾಜಿಸ್ಟ್ರೇಟ್ ಕೋರ್ಟ್ ಆಗಿರಬಹುದು ಯಾವುದರಲ್ಲಿ ಸಹ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿರಲಿಲ್ಲ. ಆದರೆ ಕಳೆದ ಎರಡು ಮೂರು ವರ್ಷಗಳಿಂದ ವಿಜೃಂಭಣೆಯಿಂದ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣದಲ್ಲಿ ವಿಶೇಷವಾಗಿ ಗಣೇಶ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.

ಪ್ರತಿ ವರ್ಷವೂ ಸಹ ಬೆಂಗಳೂರು ವಕೀಲರ ಸಂಘ ಹಾಗೂ ಮ್ಯಾಜಿಸ್ಟ್ರೇಟ್ ವಕೀಲರಿಂದ ವಿಭಿನ್ನವಾಗಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಕೇವಲ ಉತ್ಸವ ಒಂದು ದಿನಕ್ಕೆ ಮಾತ್ರ ಸೀಮಿತವಾಗಿತ್ತು, ಆದರೆ ಈ ಬಾರಿ ಮೂರು ದಿನ ಉತ್ಸವವನ್ನು ವಿಭಿನ್ನ ವಿಶೇಷವಾಗಿ ಆಚರಣೆ ಮಾಡಿ ಮೂರು ದಿನಗಳ ಕಾಲವು ಸಹ ಅನ್ನದಾನವನ್ನು ಸಾವಿರಾರು ಜನರಿಗೆ ನೀಡಲಾಯಿತು.

ಮೂರು ದಿನಗಳ ಕಾಲ ವಿಘ್ನ ನಿವಾರಕನಿಗೆ ವಿಶೇಷವಾದಂತ ಪೂಜಾ ಕೈ ಕರ್ಯಗಳು ಸಾಂಗವಾಗಿ ನಡೆದವು, ಮ್ಯಾಜಿಸ್ಟ್ರೇಟು ಸುತ್ತಮುತ್ತಲಿನಲ್ಲಿರುವ ಸರ್ಕಾರಿ ಕಚೇರಿ ನೌಕರ ವರ್ಗದವರು, ಸಾರ್ವಜನಿಕರು ವಕೀಲರು ಈ ಒಂದು ಅನ್ನದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕೊನೆಯ ದಿನದ ಕಾರ್ಯಕ್ರಮದಲ್ಲಿ ಮಹಿಳಾ ವಕೀಲರು ಹಾಗೂ ಪುರುಷರು ವಿಜೃಂಭಣೆಯಿಂದ ತಮಟೆ ಬಡಿತಕ್ಕೆ ಹೆಜ್ಜೆ ಹಾಕುವ ಮೂಲಕ ವಕೀಲ ವೃತ್ತಿಗೂ ಸೈ ಸಂಗೀತ ನೃತ್ಯ ಮಾಡುವುದಕ್ಕೂ ಸೈ ಎನ್ನುವುದನ್ನು ತೋರಿಸಿದರು,

ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಗೌಡ ಅವರು ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕಳೆದ 25 ವರ್ಷಗಳಿಂದ ಯಾವುದೇ ರೀತಿಯಾದಂತಹ ಕೋರ್ಟ್ ಆವರಣದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಅವಕಾಶ ನೀಡುತ್ತಿರಲಿಲ್ಲ, ಕಳೆದ ಎರಡು ಮೂರು ವರ್ಷಗಳಿಂದ ಗಣೇಶ ಮೂರ್ತಿಯನ್ನು ವಕೀಲರಿಂದ ಪ್ರತಿಷ್ಠಾಪಿಸಿ ವಿಷಯವಾದಂತಹ ಪೂಜೆಗಳನ್ನು ಮಾಡುತ್ತಾ ಯಾವುದೇ ರೀತಿಯಿಂದ ವಿಘ್ನಗಳು ಬಾರದಿರಲಿ ಎನ್ನುವ ನಿಟ್ಟಿನಲ್ಲಿ ಆರಾಧನೆಯನ್ನು ಮಾಡಲಾಗುತ್ತದೆ. ಮುಂದಿನ ವರ್ಷದಲ್ಲಿ ಸಹ ವಿಭಿನ್ನವಾಗಿ ಗಣೇಶೋತ್ಸವ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತದೆ ಎಂದು ಇದೇ ವೇಳೆ ಅವರು ತಿಳಿಸಿದರು.

ಇನ್ನು ಮ್ಯಾಜಿಸ್ಟ್ರೇಟ್ ವಕೀಲರ ವಿಭಾಗದ ಮಹಿಳಾ ಘಟಕದ ಅಧ್ಯಕ್ಷರಾದ ಅಂದಲಿ ಮಾತನಾಡಿ, ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮೆಜೆಸ್ಟಿಕ್ ವಿಭಾಗದಲ್ಲಿ ಮಹಿಳಾ ಘಟಕದಲ್ಲಿ ಪ್ರಪ್ರಥಮವಾಗಿ ಅಧ್ಯಕ್ಷರಾಗಿದ್ದೇನೆ ಈ ಮೂಲಕ ಈ ಬಾರಿ ನಾನು ಗಣೇಶನಲ್ಲೇ ಪ್ರಾರ್ಥನೆಯನ್ನು ಮಾಡಿಕೊಂಡಿದ್ದೆ ನಾನು ಈ ಬಾರಿಯ ಚುನಾವಣೆಯಲ್ಲಿ ಗೆದ್ದಿದ್ದೆ ಆದರೆ ಗಣೇಶ್ ಉತ್ಸವದ ಸಂಪೂರ್ಣ ವೆಚ್ಚ ಹಾಗೂ ಅದ್ದೂರಿಯಾಗಿ ಉತ್ಸವವನ್ನು ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದೆ ಹೀಗಾಗಿ ವಿಘ್ನ ನಿವಾರಕ ನನ್ನ ಕೈಬಿಡದೆ ಚುನಾವಣೆಯಲ್ಲಿ 1,500 ಮತಗಳ ಅಂತರದಿಂದ ಜಯಶೀಲರಾಗಿದ್ದೇನೆ, ಹೀಗಾಗಿ ನನ್ನ ಎಲ್ಲಾ ವಕೀಲ ಮಿತ್ರರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ ಎಂದರು.

ಈ ಬಾರಿ ಮೂರು ದಿನಗಳ ಕಾಲ ಧರ್ಮ ದೀಪ ಗಣೇಶೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಮೂರು ದಿನಗಳು ವಿಶೇಷವಾದಂತಹ ಪೂಜೆಗಳು ಸಂಗವಾಗಿ ನಡೆದವು ಅಲ್ಲದೆ ಮೂರು ದಿನಗಳ ಅನ್ನದಾನವು ಸಹ ಏರ್ಪಾಡು ಮಾಡಲಾಯಿತು. ಈ ಒಂದು ಕಾರ್ಯಕ್ರಮದಲ್ಲಿ ನ್ಯಾಯಾಧೀಶರು ಹಿರಿಯ ವಕೀಲರು ಸಾರ್ವಜನಿಕರು ಹಾಗೂ ಅಕ್ಕಪಕ್ಕದ ಸರ್ಕಾರಿ ಕಚೇರಿ ಸಿಬ್ಬಂದಿ ವರ್ಗದವರು ಈ ಒಂದು ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿ ಗಣೇಶ ಉತ್ಸವದಲ್ಲಿ ಪಾಲ್ಗೊಂಡಿದರು. ಮುಂಬರುವ ವರ್ಷದಲ್ಲಿ ಸಹ  ವಿಶೇಷವಾಗಿ ಗಣೇಶೋತ್ಸವ ಕಾರ್ಯಕ್ರಮವನ್ನು ಮಾಡಲಾಗುತ್ತದೆ ಎಂದು ಇದೇ ವೇಳೆ ತಿಳಿಸಿದರು.



ಇನ್ನೂ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಮ್ಯಾಜಿಸ್ಟ್ರೇಟ್ ವಿಭಾಗದ ವಕೀಲರು ಹಾಗೂ ಪದಾಧಿಕಾರಿಗಳು ಗಣೇಶ ಉತ್ಸವದ ವಿಚಾರದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಹಂಚಿಕೊಂಡರು, ಧರ್ಮಾದೀಪ ಗಣೇಶ ಉತ್ಸವವನ್ನು ಹೇಗೆ ಮಾಡಿದ್ದೇವೆ ಅದರ ಸಾಧಕ ಪಾದಕಗಳು ಹಾಗೂ ಉತ್ಸವದ ವಿಚಾರವಾಗಿ ಏನೆಲ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂಬುದರ ಬಗ್ಗೆ ಕೂಲಂಕುಶವಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು ಮುಂಬರುವ ವರ್ಷದಲ್ಲಿ ಯಾಬೆಲ್ಲ ರೀತಿ ತಯಾರಿಗಳನ್ನು ಮಾಡಿಕೊಂಡಿದ್ದೇವೆ ಎಂಬುದರ ಬಗ್ಗೆ ಸಹ ಮಾಹಿತಿಯನ್ನು ನೀಡಿದರು.

ಗಣೇಶೋತ್ಸವ ಕಾರ್ಯಕ್ರಮದಲ್ಲಿ ಬೆಂಗಳೂರು ವಕೀಲ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಉಪಾಧ್ಯಕ್ಷ ಗಿರೀಶ್ ಗೌಡ, ಖಜಾಂಚಿ ಶ್ವೇತಾ ರವಿಶಂಕರ್, ಸಂಘದ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು, ಮ್ಯಾಜಿಸ್ಟ್ರೇಟ್ ವಿಭಾಗದ ಅಧ್ಯಕ್ಷರು ಉಪಾಧ್ಯಕ್ಷರು ವಕೀಲರು ಹಾಗೂ ಪದಾಧಿಕಾರಿಗಳು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ